
ಬೆಂಗಳೂರು, ಮಾ.6: ಇಂದು (ಮಾ.6) ಮಂಡನೆಯಾದ 2026-27ನೇ ಸಾಲಿನ ರಾಜ್ಯ ಬಜೆಟ್ನ ಒಟ್ಟು ಗಾತ್ರ ಸರಿಸುಮಾರು 4.48 ಲಕ್ಷ ಕೋಟಿ ರೂ. ಇದರಲ್ಲಿ ಹಲವು ಇಲಾಖೆಗಳಿಗೆ ಹಂಚಿಕೆಗಳನ್ನು ಮಾಡಲಾಗಿದೆ. ಅದರಲ್ಲಿ ಗ್ಯಾರಂಟಿ ಯೋಜನೆಗಳು ಮತ್ತು ಅಭಿವೃದ್ಧಿ ಕಾರ್ಯಗಳ ನಡುವೆ ಸಮತೋಲನ ಕಾಯ್ದುಕೊಳ್ಳಲು ಸರ್ಕಾರವು ವಿವಿಧ ಇಲಾಖೆಗಳಿಗೆ ಹಣವನ್ನು ನೀಡಿದೆ. ಯಾವೆಲ್ಲ ಇಲಾಖೆಗಳಿಗೆ ಎಷ್ಟು ಅನುದಾನವನ್ನು ನೀಡಿದೆ ಎಂಬುದನ್ನು ಇಲ್ಲಿ ಹೇಳಲಾಗಿದೆ.
ಇನ್ನು ಈ ಬಜೆಟ್ನಲ್ಲಿ ಶಿಕ್ಷಣಕ್ಕೆ ಪ್ರಥಮ ಆದ್ಯತೆ ನೀಡಿಲಾಗಿದೆ. ರಾಜ್ಯದ ಇತಿಹಾಸದಲ್ಲೇ ಶಿಕ್ಷಣ ಕ್ಷೇತ್ರಕ್ಕೆ ಈ ಬಾರಿ ಗರಿಷ್ಠ ಮೊತ್ತವನ್ನು ಮೀಸಲಿಡಲಾಗಿದೆ. 800 ಕೆಪಿಎಸ್ (KPS) ಶಾಲೆಗಳ ಸ್ಥಾಪನೆ ಮತ್ತು 15,000 ಶಿಕ್ಷಕರ ನೇಮಕಾತಿಗೆ ಒತ್ತು ನೀಡಲಾಗಿದೆ. ಇದರ ಜತೆಗೆ ಗ್ಯಾರಂಟಿಗೂ ಬಲ ನೀಡಲಾಗಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ನೀಡಲಾದ ದೊಡ್ಡ ಮೊತ್ತವು ‘ಗೃಹಲಕ್ಷ್ಮಿ’ ಅಂತಹ ಗ್ಯಾರಂಟಿ ಯೋಜನೆಗಳ ಮುಂದುವರಿಕೆಯನ್ನು ಖಚಿತಪಡಿಸಿದೆ.
ನೀರಾವರಿ ಮತ್ತು ಗ್ರಾಮೀಣಾಭಿವೃದ್ಧಿಗೂ ಹೆಚ್ಚು ಅನುದಾನಗಳನ್ನು ನೀಡಲಾಗಿದೆ. ಕೃಷಿ ಮತ್ತು ಗ್ರಾಮೀಣ ಭಾಗದ ಮೂಲಸೌಕರ್ಯಕ್ಕೆ ಸರಿಸುಮಾರು 50,000 ಕೋಟಿಗೂ ಅಧಿಕ ಹಣವನ್ನು ವಿವಿಧ ಇಲಾಖೆಗಳ ಮೂಲಕ ಹಂಚಲಾಗಿದೆ.
ಇಲಾಖಾವಾರು ಅನುದಾನ:
| ಇಲಾಖೆಯ ಹೆಸರು | ಹಂಚಿಕೆಯಾದ ಅನುದಾನ (ಕೋಟಿ ರೂ.ಗಳಲ್ಲಿ) |
| ಶಿಕ್ಷಣ ಇಲಾಖೆ | 47,224 |
| ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ | 34,929 |
| ಇಂಧನ ಇಲಾಖೆ | 29,947 |
| ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ | 26,559 |
| ಒಳಾಡಳಿತ ಮತ್ತು ಸಾರಿಗೆ ಇಲಾಖೆ | 23,100 |
| ಜಲಸಂಪನ್ಮೂಲ (ನೀರಾವರಿ) | 22,436 |
| ನಗರಾಭಿವೃದ್ಧಿ ಮತ್ತು ವಸತಿ ಇಲಾಖೆ | 22,203 |
| ಕಂದಾಯ ಇಲಾಖೆ | 19,843 |
| ಸಮಾಜ ಕಲ್ಯಾಣ ಇಲಾಖೆ | 18,612 |
| ಆರೋಗ್ಯ ಮತ್ತು ಕುಟುಂಬ ಕಲ್ಯಾಣ | 17,817 |
| ಲೋಕೋಪಯೋಗಿ ಇಲಾಖೆ (PWD) | 11,424 |
| ಕೃಷಿ ಇಲಾಖೆ | 8,373 |
| ಆಹಾರ ಮತ್ತು ನಾಗರಿಕ ಸರಬರಾಜು | 7,942 |
| ಪಶುಸಂಗೋಪನೆ ಮತ್ತು ಮೀನುಗಾರಿಕೆ | 4,084 |
| ಇತರ ಇಲಾಖೆಗಳು | 1,72,757 |
ಬೆಂಗಳೂರು ನಗರಕ್ಕೆ ಬಂಪರ್ ಕೊಡುಗೆ
ಇದರ ಜತೆಗೆ ಬೆಂಗಳೂರನ್ನು ಅಂತರಾಷ್ಟ್ರೀಯ ಮಟ್ಟದ ನಗರವನ್ನಾಗಿ ರೂಪಿಸಲು ‘ನಮ್ಮ ಬೆಂಗಳೂರು’ ಮತ್ತು ‘ಬ್ರ್ಯಾಂಡ್ ಬೆಂಗಳೂರು’ ಯೋಜನೆಗಳ ಅಡಿಯಲ್ಲಿ ಸಾವಿರಾರು ಕೋಟಿ ರೂಪಾಯಿಗಳನ್ನು ಮೀಸಲಿಡಲಾಗಿದೆ. ಬೆಂಗಳೂರಿನ ಪ್ರಮುಖ ಟ್ರಾಫಿಕ್ ಪಾಯಿಂಟ್ಗಳಲ್ಲಿ ಸಂಚಾರ ದಟ್ಟಣೆ ಕಡಿಮೆ ಮಾಡಲು ಟನಲ್ ರಸ್ತೆ (Tunnel Roads) ನಿರ್ಮಾಣಕ್ಕೆ ಹೆಚ್ಚಿನ ಅನುದಾನ ಮೀಸಲಿಡಲಾಗಿದೆ. ಮೊದಲ ಹಂತದಲ್ಲಿ ಹೆಬ್ಬಾಳದಿಂದ ಸಿಲ್ಕ್ ಬೋರ್ಡ್ವರೆಗಿನ ಯೋಜನೆಯ ವೇಗಕ್ಕೆ ಒತ್ತು ನೀಡಲಾಗಿದೆ.
ಮೆಟ್ರೋ 3ನೇ ಹಂತದ ಕಾಮಗಾರಿಗಳಿಗೆ ಮತ್ತು ಹೊಸ ಮಾರ್ಗಗಳ ಸಮೀಕ್ಷೆಗಾಗಿ ಸುಮಾರು 5,000 ಕೋಟಿ ರೂ. ಗೂ ಅಧಿಕ ಹಣವನ್ನು ಮೀಸಲಿಡಲಾಗಿದೆ. ವಿಮಾನ ನಿಲ್ದಾಣದ ಮಾರ್ಗವನ್ನು ಶೀಘ್ರವಾಗಿ ಪೂರ್ಣಗೊಳಿಸಲು ಗಡುವು ನೀಡಲಾಗಿದೆ. ರಸ್ತೆ ಗುಂಡಿ ಮುಚ್ಚುವುದು, ಬಿಳಿ ರಸ್ತೆ ನಿರ್ಮಾಣ ಮತ್ತು ಮಳೆನೀರು ಕಾಲುವೆಗಳ ಅಭಿವೃದ್ಧಿಗೆ ಸುಮಾರು 3,000 ಕೋಟಿ ರೂ. ಅನುದಾನ ನೀಡಲಾಗಿದೆ. ಬಹುಕಾಲದ ಬೇಡಿಕೆಯಾದ ಪೆರಿಫೆರಲ್ ರಿಂಗ್ ರೋಡ್ (PRR) ಭೂಸ್ವಾಧೀನ ಪ್ರಕ್ರಿಯೆ ಚುರುಕುಗೊಳಿಸಲು ಹಣಕಾಸಿನ ನೆರವು ಘೋಷಿಸಲಾಗಿದೆ. ಬೆಂಗಳೂರಿನ 110 ಹಳ್ಳಿಗಳಿಗೆ ಕಾವೇರಿ ನೀರು ಪೂರೈಸುವ ಯೋಜನೆಯ ಅಂತಿಮ ಹಂತದ ಕಾಮಗಾರಿಗಳಿಗೆ ಅಗತ್ಯ ಅನುದಾನ ಒದಗಿಸಲಾಗಿದೆ.
ಇದನ್ನೂ ಓದಿ: ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆ ಹೆಸರು ಬದಲಾವಣೆ ಮಾಡಿ ಸಿಎಂ ಘೋಷಣೆ
ಯಾವೆಲ್ಲ ಮೂಲಗಳಿಂದ ತೆರಿಗೆ ಬಂದಿದೆ:
ರಾಜ್ಯ ತೆರಿಗೆ ಆದಾಯ: 49 ಶೇಕಾಡ
ಬಂಡವಾಳ ಜಮೆ ಮತ್ತು ಸಾಲಗಳು: 29 ಶೇಕಾಡ
ಕೇಂದ್ರ ತೆರಿಗೆ ಪಾಲು: 14 ಶೇಕಾಡ
ಕೇಂದ್ರ ಸರ್ಕಾರದ ಸಹಾಯಾನುದಾನ: 4 ಶೇಕಾಡ
ರಾಜ್ಯ ತೆರಿಗೆಯೇತರ ರಾಜಸ್ವ: 4 ಶೇಕಾಡ
ರಾಜ್ಯದ ಸ್ವಂತ ತೆರಿಗೆ ರಾಜಸ್ವಗಳ ವಿವರ
ವಾಣಿಜ್ಯ ತೆರಿಗೆಗಳು: ರೂ. 1,25,000 (57%).
ರಾಜ್ಯ ಅಬಕಾರಿ: ರೂ. 45,000 (20%).
ನೋಂದಣಿ ಮತ್ತು ಮುದ್ರಾಂಕ: ರೂ. 29,000 (13%).
ಮೋಟಾರು ವಾಹನ ತೆರಿಗೆ: ರೂ. 15,500 (7%).
ಇತರೆ: ರೂ. 5,500 (3%).
ಬಜೆಟ್ ವೆಚ್ಚದ ಹಂಚಿಕೆ
ಸಾಲ ಮರುಪಾವತಿ: 20 ಶೇಕಾಡ
ಇತರ ಸಾಮಾನ್ಯ ಸೇವೆಗಳು: 18 ಶೇಕಾಡ
ಸಮಾಜ ಕಲ್ಯಾಣ: 15 ಶೇಕಾಡ
ಇತರ ಆರ್ಥಿಕ ಸೇವೆಗಳು: 14 ಶೇಕಾಡ
ಕೃಷಿ, ನೀರಾವರಿ ಮತ್ತು ಗ್ರಾಮೀಣಾಭಿವೃದ್ಧಿ: 13 ಶೇಕಾಡ
ಶಿಕ್ಷಣ: 10 ಶೇಕಾಡ
ಆರೋಗ್ಯ: 4 ಶೇಕಾಡ
ನೀರು ಪೂರೈಕೆ ಮತ್ತು ನೈರ್ಮಲ್ಯ: 3 ಶೇಕಾಡ
ಇತರ ಸಾಮಾಜಿಕ ಸೇವೆಗಳು: 3 ಶೇಕಾಡ
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ