Headlines

NIC Recruitment 2026: GATE ಉತ್ತೀರ್ಣರಿಗೆ ಕೇಂದ್ರದಿಂದ ಉದ್ಯೋಗವಕಾಶ; ತಿಂಗಳಿಗೆ 1,12,400 ರೂ. ಸಂಬಳ – Kannada News | NIC Recruitment 2026: 376 Scientific and Technical Assistant Posts, GATE Required!

ಕೇಂದ್ರ ಸರ್ಕಾರದ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುವ ರಾಷ್ಟ್ರೀಯ ಮಾಹಿತಿ ಕೇಂದ್ರ (NIC) ವಿವಿಧ ಸರ್ಕಾರಿ ಇಲಾಖೆಗಳಲ್ಲಿ ಖಾಲಿ ಇರುವ ವೈಜ್ಞಾನಿಕ ಮತ್ತು ತಾಂತ್ರಿಕ ಸಹಾಯಕ ‘ಎ’ (Scientific & Technical Assistant ‘A’) ಹುದ್ದೆಗಳ ಭರ್ತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಗುಂಪು–ಬಿ, ನಾನ್-ಗೆಜೆಟೆಡ್ ಎಸ್ ಮತ್ತು ಟಿ ವರ್ಗಕ್ಕೆ ಸೇರಿದ ಈ ಹುದ್ದೆಗಳು ತಾಂತ್ರಿಕ ಹಾಗೂ ಐಟಿ ಕ್ಷೇತ್ರದಲ್ಲಿ ಸರ್ಕಾರಿ ಸೇವೆಗೆ ಸೇರಲು ಬಯಸುವವರಿಗೆ ಉತ್ತಮ ಅವಕಾಶವಾಗಿದೆ. ಒಟ್ಟು 376 ಹುದ್ದೆಗಳು ಭರ್ತಿಯಾಗಲಿದ್ದು, ಎಂಎಸ್ಸಿ, ಎಂಎಸ್, ಎಂಸಿಎ, ಬಿಇ ಅಥವಾ ಬಿಟೆಕ್ ಪದವಿ ಹೊಂದಿರುವವರು ಅರ್ಜಿ ಸಲ್ಲಿಸಬಹುದು. ಆದರೆ GATE ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವುದು ಕಡ್ಡಾಯವಾಗಿದೆ.

ವರ್ಗವಾರು ಹುದ್ದೆಗಳ ಹಂಚಿಕೆಯಲ್ಲಿ ಮೀಸಲಾತಿ ಇಲ್ಲದ (UR) ವಿಭಾಗಕ್ಕೆ 154 ಹುದ್ದೆಗಳು, ಎಸ್‌ಸಿ ವಿಭಾಗಕ್ಕೆ 56, ಎಸ್‌ಟಿ ವಿಭಾಗಕ್ಕೆ 28, ಒಬಿಸಿ ವಿಭಾಗಕ್ಕೆ 101 ಹಾಗೂ ಇಡಬ್ಲ್ಯೂಎಸ್ ವಿಭಾಗಕ್ಕೆ 37 ಹುದ್ದೆಗಳು ಮೀಸಲಾಗಿದೆ. ಅರ್ಜಿದಾರರು ಸಂಬಂಧಿತ ವಿಷಯದಲ್ಲಿ ಪದವಿ ಅಥವಾ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿರುವುದರ ಜೊತೆಗೆ 2024, 2025 ಅಥವಾ 2026ರಲ್ಲಿ ಪಡೆದ ಮಾನ್ಯ GATE ಅಂಕಗಳನ್ನು ಹೊಂದಿರಬೇಕು.

ಅರ್ಜಿ ಪ್ರಕ್ರಿಯೆ ಸಂಪೂರ್ಣವಾಗಿ ಆನ್‌ಲೈನ್ ಮೂಲಕ ನಡೆಯಲಿದೆ. GATE 2026 ಫಲಿತಾಂಶ ಪ್ರಕಟವಾದ ದಿನಾಂಕದಿಂದ 10 ದಿನಗಳ ಒಳಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗುತ್ತದೆ. ಈ ಕುರಿತು ಕಿರು ಅಧಿಸೂಚನೆ ಈಗಾಗಲೇ NIC ಅಧಿಕೃತ ವೆಬ್‌ಸೈಟ್‌ನಲ್ಲಿ ಲಭ್ಯವಿದ್ದು, ಶೀಘ್ರದಲ್ಲೇ ವಿವರವಾದ ಅಧಿಸೂಚನೆ ಬಿಡುಗಡೆಯಾಗಲಿದೆ. ಅಭ್ಯರ್ಥಿಗಳು ನಿಯಮಿತವಾಗಿ ವೆಬ್‌ಸೈಟ್ ಪರಿಶೀಲಿಸುವುದು ಒಳಿತು.

ಇದನ್ನೂ ಓದಿ: ಎಕ್ಸಿಮ್ ಬ್ಯಾಂಕ್​ನಲ್ಲಿ 40 ಮ್ಯಾನೇಜ್ಮೆಂಟ್ ಟ್ರೈನಿ ಹುದ್ದೆಗೆ ನೇಮಕಾತಿ; ತಿಂಗಳಿಗೆ 65,000ರೂ. ಸ್ಟೈಫಂಡ್

ವೇತನದ ವಿಷಯದಲ್ಲಿ, ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 35,400 ರಿಂದ 1,12,400 ರೂ. ರವರೆಗೆ (ಪೇ ಲೆವೆಲ್-6) ಸಂಬಳ ಹಾಗೂ ಇತರ ಸರ್ಕಾರಿ ಭತ್ಯೆಗಳು ದೊರೆಯುತ್ತವೆ. ಉದ್ಯೋಗ ಭದ್ರತೆ, ಉತ್ತಮ ವೇತನ ಮತ್ತು ಕೇಂದ್ರ ಸರ್ಕಾರಿ ಸೌಲಭ್ಯಗಳನ್ನು ಬಯಸುವ ತಾಂತ್ರಿಕ ವಿದ್ಯಾರ್ಥಿಗಳಿಗೆ ಇದು ಅತ್ಯುತ್ತಮ ವೃತ್ತಿ ಅವಕಾಶವಾಗಿದೆ. ಈ ವರ್ಷದ GATE ಫಲಿತಾಂಶಗಳನ್ನು ಮಾರ್ಚ್ 11 ರಂದು ಪ್ರಕಟಿಸಲಾಗುವುದರಿಂದ ಆಸಕ್ತರು ಈಗಲೇ ತಯಾರಿ ಆರಂಭಿಸುವುದು ಸೂಕ್ತ.

ಮತ್ತಷ್ಟು ಉದ್ಯೋಗಕ್ಕೆ ಸಂಬಂಧಿಸಿದ  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *