Headlines

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 7, 8, 9ರ ಫೆಬ್ರವರಿ 10ರ ದಿನಭವಿಷ್ಯ – Kannada News | Numerology: Feb 10 Horoscope for Birth 7, 8, 9 – Financial & Health Insights

ಜನ್ಮಸಂಖ್ಯೆ 7, 8, 9ರ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆ ಆಧಾರದಲ್ಲಿ ಫೆಬ್ರವರಿ 10ರ ಮಂಗಳವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.

ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7)

ಯಾರಿಗೆ ಅಂತ ಸಮಾಜಾಯಿಷಿ ಹೇಳುವುದು ಎಂಬ ಚಿಂತೆ ಅಥವಾ ಆತಂಕ ನಿಮ್ಮನ್ನು ಕಾಡುವುದಕ್ಕೆ ಆರಂಭವಾಗಲಿದೆ. ಈ ಹಿಂದೆ ನಿಮಗೆ ನಿಧಾನವಾಗಿ ನೀಡಿದರೂ ಪರವಾಗಿಲ್ಲ ಎಂದು ಹೇಳಿ ಸಾಲ ನೀಡಿದ್ದ ಕೆಲವರು ತಮಗೆ ತುರ್ತಾಗಿ ಬೇಕಿದೆ ಎಂದೂ ಹಾಗೂ ಹಣವನ್ನು ಈಗಲೇ ಹಿಂತಿರುಗಿಸುವಂತೆ ಒಂದೇ ಸಮಯಕ್ಕೆ ಈ ದಿನ ಕೇಳಲಿದ್ದಾರೆ.

ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8)

ನಿಮ್ಮಲ್ಲಿ ಕೆಲವರು ಬ್ಯಾಂಕ್ ನಲ್ಲಿ ಸಾಲ ಮಾಡಬೇಕಾಬಹುದು ಅಥವಾ ಚಿನ್ನವನ್ನು ಅಡಮಾನ ಮಾಡಿ, ಹಣವನ್ನು ಪಡೆದುಕೊಳ್ಳಬಹುದು. ಅಥವಾ ಹೆಚ್ಚಿನ ಬಡ್ಡಿ ನೀಡುವುದಾಗಿ ಹೊರಗೆ ಹಣವನ್ನು ಸಾಲ ಮಾಡಲಿದ್ದೀರಿ. ರಕ್ತದೊತ್ತಡದ ಸಮಸ್ಯೆ ಇರುವವರಿಗೆ ಸಮಸ್ಯೆ ಉಲ್ಬಣ ಆಗಬಹುದು. ಸ್ವಯಂ ವೈದ್ಯ ಮಾಡಿಕೊಳ್ಳುವುದರ ಬದಲು ಸೂಕ್ತ ವೈದ್ಯೋಪಚಾರ ಮಾಡಿಕೊಳ್ಳುವ ಬಗ್ಗೆ ಲಕ್ಷ್ಯ ನೀಡಿ.

ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9)

ಆತುರ ಅಥವಾ ಒತ್ತಡಕ್ಕೆ ಸಿಲುಕಿಕೊಂಡು ನಿಮ್ಮಿಂದ ಯಾವುದೇ ತಪ್ಪುಗಳಾಗದಂತೆ ನೋಡಿಕೊಳ್ಳುವುದು ಮುಖ್ಯವಾಗುತ್ತದೆ. ಮಾಲ್ ಗಳಲ್ಲಿ, ಚಿತ್ರಮಂದಿರಗಳಲ್ಲಿ, ಪಿಜ್ಜಾ ಮಳಿಗೆಗಳಲ್ಲಿ ಕಾರ್ಯ ನಿರ್ವಹಿಸುವವರು ವಾಹನ ಚಲಾಯಿಸುವಾಗ ತುಂಬ ಎಚ್ಚರಿಕೆಯಿಂದ ಇರಬೇಕು. ಚೀಟಿಯಲ್ಲಿ ಹಣ ಹಾಕಿರುವವರು ಅದನ್ನು ಸರಿಯಾದ ಸಮಯಕ್ಕೆ ತೆಗೆದುಕೊಳ್ಳುವುದಕ್ಕೆ ಏನು ಮಾಡಬೇಕೋ ಅದನ್ನು ಮಾಡುವುದಕ್ಕೆ ನಿರ್ಧರಿಸಲಿದ್ದೀರಿ.

ಲೇಖನ- ಸ್ವಾತಿ ಎನ್.ಕೆ.

Source link

Leave a Reply

Your email address will not be published. Required fields are marked *