Headlines

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 1, 2, 3ರ ಫೆಬ್ರವರಿ 24ರ ದಿನಭವಿಷ್ಯ – Kannada News | Sphatika Mala Benefits: Boost Focus, Reduce Stress and Attract Prosperity

ಜನ್ಮಸಂಖ್ಯೆಗೆ 1, 2, 3ರ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆ ಆಧಾರದಲ್ಲಿ ಫೆಬ್ರವರಿ 24ರ ಮಂಗಳವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.

ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1)

ನಿಮ್ಮಲ್ಲಿ ಕೆಲವರಿಗೆ ಹಳೇ ಗೆಳೆಯ ಅಥವಾ ಗೆಳತಿಯ ನೆನಪು ವಿಪರೀತ ಕಾಡುವಂಥ ದಿನ ಇದಾಗಿರಲಿದೆ. ಅಥವಾ ಅಚಾನಕ್ ಆಗಿ ಭೇಟಿ ಆಗುವುದೋ ಅಥವಾ ಕಾಲ್ ಮಾಡುವುದೋ ಇಂಥದ್ದು ಕೂಡ ಆಗಬಹುದು. ಹೀಗೆ ಆಗುವುದರಿಂದ ನಿಮ್ಮ ಏಕಾಗ್ರತೆ ಕಳೆದುಕೊಳ್ಳುವಂತೆ ಆಗಲಿದೆ. ಹೊಸ ವಾಹನ ಖರೀದಿ ಮಾಡಿದ್ದೀರಿ ಅಂತಾದಲ್ಲಿ ಚಾಲನೆ ವೇಳೆ ಮುಂಜಾಗ್ರತೆ ವಹಿಸಿ.

ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2)

ಕ್ರೀಡಾಪಟುಗಳಿಗೆ ಬಹಳ ಉತ್ತಮವಾದ ದಿನ ಇದಾಗಿರಲಿದೆ. ಹೆಚ್ಚಿನ ತರಬೇತಿಗಾಗಿ ವಿದೇಶಗಳಿಗೆ ಅಥವಾ ನೀವು ಇರುವ ಸ್ಥಳದಲ್ಲಿಯೇ ಅತ್ಯುತ್ತಮ ತರಬೇತಿ ಸಂಸ್ಥೆಗಳಿಗೆ ತೆರಳುವ ಅವಕಾಶ ಸೃಷ್ಟಿ ಆಗಲಿದೆ. ನಿಮ್ಮಲ್ಲಿ ಯಾರಿಗೆ ಸೋದರ- ಸೋದರಿಯರು ಇದ್ದಾರೋ ಅವರ ಆರೋಗ್ಯದ ಬಗ್ಗೆ ಹೆಚ್ಚಿನ ನಿಗಾ ಮಾಡುವುದು ಒಳ್ಳೆಯದು. ಈ ದಿನ ಅವರಿಗೆ ನಿಮ್ಮ ನೆರವಿನ ಅಗತ್ಯ ಕಂಡುಬರಲಿದೆ.

ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3)

ನೀವು ಯಾವುದನ್ನು ಕನಿಷ್ಠ ಪ್ರಮಾಣದ ಶಿಸ್ತು ಎಂದು ಭಾವಿಸಿರುತ್ತೀರೋ ಇತರರಿಗೆ ಅದು ಕಿರಿಕಿರಿಯಾಗಿ ಪರಿಣಮಿಸಲಿದೆ. ಅದರಲ್ಲೂ ನೀವು ಸ್ವಂತ ವ್ಯವಹಾರ- ವ್ಯಾಪಾರ ಮಾಡುವಂಥವರು ಆಗಿದ್ದಲ್ಲಿ ಸನ್ನಿವೇಶಕ್ಕೆ ತಕ್ಕಂತೆ ಹೊಂದಾಣಿಕೆ ಮಾಡಿಕೊಳ್ಳಲೇ ಬೇಕು. ನಿಮಗೆ ಹಿರಿಯರಿಂದ ಬಂದಂಥ ಒಡವೆ, ಆಸ್ತಿ ಇಂಥವುಗಳನ್ನು ಮಾರಾಟ ಮಾಡುವ ಆಲೋಚನೆ ಮಾಡಲಿದ್ದೀರಿ.

ಲೇಖನ- ಸ್ವಾತಿ ಎನ್.ಕೆ.

Source link

Leave a Reply

Your email address will not be published. Required fields are marked *