
ಜನ್ಮಸಂಖ್ಯೆ 4, 5, 6ರ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆ ಆಧಾರದಲ್ಲಿ ಮಾರ್ಚ್ 24ರ ಮಂಗಳವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.
ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4)
ಹಳೇ ಘಟನೆ, ಸನ್ನಿವೇಶಗಳನ್ನು ಈಗ ಎತ್ತಾಡಿ, ಇನ್ನಷ್ಟು ಸಂಬಂಧವನ್ನು ಹಾಳು ಮಾಡಿಕೊಳ್ಳುವುದಕ್ಕೆ ಹೋಗಬೇಡಿ. ಸ್ವಂತ ಉದ್ಯಮ, ವ್ಯವಹಾರ ನಡೆಸುತ್ತಿರುವವರಿಗೆ ಕೆಲವರು ಪಾರ್ಟನರ್ ಷಿಪ್ ಮಾಡುವುದಕ್ಕೆ ಆಹ್ವಾನ ನೀಡುವ ಸಾಧ್ಯತೆಗಳಿವೆ. ಹೆಚ್ಚಿನ ಲಾಭದ ಪ್ರಸ್ತಾವ ಸಹ ಮುಂದಿಡಬಹುದು. ಆದರೆ ಆ ವ್ಯಕ್ತಿಯ ಹಿನ್ನೆಲೆ ಹಾಗೂ ಸದ್ಯದ ಪರಿಸ್ಥಿತಿಯನ್ನು ಸರಿಯಾಗಿ ಅವಲೋಕನ ಮಾಡಿದ ನಂತರವೇ ಅಭಿಪ್ರಾಯವನ್ನು ತಿಳಿಸಿ.
ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5)
ಶ್ರಮ ಹಾಕಿದ ನಂತರವೂ ಅಂದುಕೊಂಡಂತೆಯೇ ಎಲ್ಲ ಸಂದರ್ಭಗಳಲ್ಲಿಯೂ ಫಲಿತಾಂಶ ಬರಬಹುದು ಎಂದುಕೊಳ್ಳಲು ಸಾಧ್ಯವಿಲ್ಲ. ಕೆಲವು ಜವಾಬ್ದಾರಿಗಳನ್ನು ಅತ್ಯಂತ ವಿಶ್ವಾಸದಿಂದ ತೆಗೆದುಕೊಂಡರೂ ನಿಮ್ಮ ನಿರ್ಧಾರ, ತೀರ್ಮಾನಗಳು ಸರಿಯಾಗಿವೆಯೇ ಅಥವಾ ಇಲ್ಲವೇ ಎಂಬ ಬಗ್ಗೆ ಗೊಂದಲ ಏರ್ಪಡುವ ಸಾಧ್ಯತೆಗಳಿವೆ. ಉದ್ಯೋಗ ಸ್ಥಳದಲ್ಲಿ ನಿಮ್ಮ ನಾಯಕತ್ವ ಇದ್ದರೆ ಆ ಬಗ್ಗೆ ಕೆಲವರು ಭಿನ್ನ ಧ್ವನಿಯನ್ನು ಎತ್ತುವ ಸಾಧ್ಯತೆ ಇದೆ.
ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6)
ಸ್ತ್ರೀಯರ ವಿಚಾರದಲ್ಲಿ ತಮಾಷೆಯಾದರೂ ಹಗುರವಾದ ಅಭಿಪ್ರಾಯವನ್ನು ವ್ಯಕ್ತಪಡಿಸಬೇಡಿ. ಅದರಲ್ಲೂ ಸೋಷಿಯಲ್ ಮೀಡಿಯಾಗಳಲ್ಲಿ ಏನಾದರೂ ಪೋಸ್ಟ್ ಮಾಡುತ್ತಿದ್ದೀರಿ ಅಂತಾದಲ್ಲಿ ಪರಿಣಾಮಗಳನ್ನು ಸರಿಯಾಗಿ ಆಲೋಚನೆ ಮಾಡುವುದು ಮುಖ್ಯ. ನಿಮಗೆ ಬರಬೇಕಾದ ಹಣ ಇದ್ದಲ್ಲಿ ಅಥವಾ ಈ ದಿನ ಹಿಂತಿರುಗಿಸುವುದಾಗಿ ಹೇಳಿದ್ದಲ್ಲಿ ಅದು ಬಾರದೇ ಇರುವ, ಅಂದರೆ ಈ ದಿನ ನಿಮ್ಮ ಕೈ ಸೇರದಿರುವ ಸಾಧ್ಯತೆಗಳು ಹೆಚ್ಚಿವೆ.