Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 7, 8, 9ರ ಮಾರ್ಚ್ 24ರ ದಿನಭವಿಷ್ಯ

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 7, 8, 9ರ ಮಾರ್ಚ್ 24ರ ದಿನಭವಿಷ್ಯ

ಜನ್ಮಸಂಖ್ಯೆ 7, 8, 9ರ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆ ಆಧಾರದಲ್ಲಿ ಮಾರ್ಚ್ 24ರ ಮಂಗಳವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.

ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7)

ಬಹು ಪ್ರಮಾಣದಲ್ಲಿ ನಂಬಿಕೆ ನಿಮಗೆ ಇದ್ದರೂ ಕೆಲವು ಬಾಹ್ಯ ಕಾರಣಗಳಿಂದಾಗಿ ಈ ದಿನ ನಿಮಗೆ ಯಾವುದೇ ವಿಚಾರದಲ್ಲಿ ಅಥವಾ ಕೆಲಸದಲ್ಲಿ ಪೂರ್ಣ ವಿಶ್ವಾಸ ಮೂಡದಿದ್ದರೆ ಅದನ್ನು ಮಾಡದಿರುವುದು ಕ್ಷೇಮ. ಏಕೆಂದರೆ ನಿಮ್ಮದಲ್ಲದ ತಪ್ಪಿಗೆ ದಂಡ ಕಟ್ಟುವಂಥ ಸನ್ನಿವೇಶ ಎದುರಾಗಲಿದೆ. ಎಂಥ ಅನಿವಾರ್ಯ ಸ್ಥಿತಿಯೇ ಇದ್ದರೂ ಇತರರ ವಾಹನಗಳು ಅಥವಾ ವಸ್ರುಗಳನ್ನು ಬಳಸುವುದಕ್ಕೆ ಹೋಗಬೇಡಿ.

ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8)

ಯಾರು ರಾಜಕೀಯ ಕ್ಷೇತ್ರದಲ್ಲಿ ಇದ್ದಾರೋ ಅಂಥವರಿಗೆ ನಿರೀಕ್ಷೆ ಕೂಡ ಮಾಡಿರದಂಥ ಅವಕಾಶವೊಂದು ದೊರೆಯವ ಸಾಧ್ಯತೆಗಳಿವೆ. ಇದನ್ನು ನೀವು ನಂಬುವುದಕ್ಕೆ ಸಹ ಸಾಧ್ಯವಾಗುವುದಿಲ್ಲ. ಆದರೆ ಅದನ್ನು ಸದುಪಯೋಗ ಮಾಡಿಕೊಳ್ಳುವ ಬಗ್ಗೆ ಆಲೋಚಿಸಿದರೆ ಒಳ್ಳೆಯದು. ಕೋರ್ಟ್- ಕಚೇರಿ ವ್ಯಾಜ್ಯಗಳಲ್ಲಿ ಇದ್ದಲ್ಲಿ ಅದನ್ನು ಬಗೆಹರಿಸಿಕೊಳ್ಳುವುದಕ್ಕೆ ಕೆಲವರು ಸಹಾಯ ಮಾಡುವುದಾಗಿ ಹೇಳಲಿದ್ದಾರೆ.

ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9)

ಮಾನಸಿಕವಾಗಿ ಸ್ವಲ್ಪ ಗೊಂದಲವಿರಬಹುದು. ಕುಟುಂಬದ ಸದಸ್ಯರೊಂದಿಗೆ ಸಮಯ ಕಳೆಯುವುದು ಉತ್ತಮ. ಆರ್ಥಿಕ ವಿಷಯಗಳಲ್ಲಿ ಎಚ್ಚರಿಕೆ ಅಗತ್ಯ, ಯಾರಿಗೂ ಸಾಲ ನೀಡಬೇಡಿ. ವಿದ್ಯಾರ್ಥಿಗಳಿಗೆ ಮತ್ತು ಸೃಜನಶೀಲ ಕೆಲಸದಲ್ಲಿರುವವರಿಗೆ ಇಂದು ಅತ್ಯುತ್ತಮ ದಿನ. ನಿಮ್ಮ ಜ್ಞಾನಕ್ಕೆ ಮನ್ನಣೆ ಸಿಗಲಿದೆ. ದೂರದ ಪ್ರಯಾಣದ ಯೋಗವಿದೆ.

ಲೇಖನ- ಸ್ವಾತಿ ಎನ್.ಕೆ.

Source link

Leave a Reply

Your email address will not be published. Required fields are marked *