ಕುಂತ್ರೂ ನಿಂತ್ರೂ ಯಾರೋ ಎದುರುಗಡೆ ಬಂದ ಅನುಭವ: ವಿಚಿತ್ರವಾಗಿ ವರ್ತಿಸಿ ಮಹಿಳೆ ಸಾವು
ಚಿಕ್ಕಬಳ್ಳಾಪುರ, ಮಾರ್ಚ್ 26: ಗಂಡು ದೆವ್ವವೊಂದು ಕೊಡಬಾರದ ಕಾಟ ಕೊಡುತ್ತಿದೆ ಅಂತ ಭಯಗೊಂಡಿದ್ದ ಓರ್ವ ಮಹಿಳೆ ಕೊನೆಗೂ ವಿಚಿತ್ರವಾಗಿ ವರ್ತಿಸಿ ಮೃತಪಟ್ಟಿರುವಂತಹ (death) ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ತೌಡನಹಳ್ಳಿ ಗ್ರಾಮದಲ್ಲಿ ನಡೆದಿದೆ. ಮಂಜುಳಾ(36) ಮೃತ ಮಹಿಳೆ. ಮನೆಯಲ್ಲಿ ಕುಸಿದು ಬಿದ್ದು ಅಸ್ವಸ್ಥರಾಗಿದ್ದ ಮಂಜುಳಾರನ್ನು ಕುಟುಂಬಸ್ಥರು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ನಂದಿಗಿರಿಧಾಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಡೆದಿದ್ದೇನು? ಮಂಜುಳಾ ಅವರು ದೊಡ್ಡಬಳ್ಳಾಪುರ ತಾಲೂಕಿನ ಸೋತೇನಹಳ್ಳಿ ಗ್ರಾಮದವರು. ಚಿಕ್ಕಬಳ್ಳಾಪುರ ತಾಲೂಕಿನ ತೌಡನಹಳ್ಳಿ ಗ್ರಾಮದ ರಮೇಶ್…