SSLC ಪರೀಕ್ಷೆ: ಸರ್ಕಾರ ಅಂಕಕ್ಕೆ ಕೋಕ್ ನೀಡಲು ಹೊರಟಿದ್ದ ತೃತೀಯ ಭಾಷೆಯಲ್ಲಿ ಶೇ. 98.55 ಫಲಿತಾಂಶ – Kannada News | Karnataka SSLC Exam Result 2026: 98.55 percent Student Pass in Third Language
ಬೆಂಗಳೂರು, ಏಪ್ರಿಲ್ 23: ವಿದ್ಯಾರ್ಥಿಗಳ ಮೇಲಿನ ಹೊರೆ ತಗ್ಗಿಸುವ ನಿಟ್ಟಿನಲ್ಲಿ SSLC ಪರೀಕ್ಷೆಯ ತೃತೀಯ ಭಾಷೆಗೆ ಅಂಕಗಳ ಬದಲು ಗ್ರೇಡ್ ನೀಡಲು ರಾಜ್ಯ ಸರ್ಕಾರ ಮುಂದಾಗಿತ್ತು. ಒಟ್ಟು 625 ಅಂಕಗಳ ಬದಲಿಗೆ 525 ಅಂಕಗಳಿಗೆ ಪರೀಕ್ಷಾ ಮೌಲ್ಯಮಾಪನವನ್ನು ಸೀಮಿತಗೊಳಿಸುವ ಬಗ್ಗೆ ನಿರ್ಧರಿಸಲಾಗಿತ್ತು. ತ್ರಿಭಾಷಾ ಸೂತ್ರದ ಅಡಿಯಲ್ಲಿ ತೃತೀಯ ಭಾಷೆಯನ್ನು ಕೇವಲ ಅರ್ಹತಾ ವಿಷಯವನ್ನಾಗಿ ಪರಿಗಣಿಸಿ, ಗ್ರೇಡ್ ನೀಡುವ ಮೂಲಕ ಒಟ್ಟು ಶೇಕಡಾವಾರು ಅಂಕಗಳ ಲೆಕ್ಕಾಚಾರದಿಂದ ಇದನ್ನು ಹೊರಗಿಡಲು ಉದ್ದೇಶಿಸಿತ್ತು. ಆದರೆ ಅಂತಿಮವಾಗಿ ಕೋರ್ಟ್ ಆದೇಶದಂತೆ ತೃತೀಯ ಭಾಷೆಗೂ…