Headlines

ಹಸೆಮಣೆ ಏರಬೇಕಿದ್ದ ದಿನವೇ ಇಬ್ಬರು ಸಹೋದರಿಯರು ವಿಷ ಸೇವಿಸಿ ಆತ್ಮಹತ್ಯೆ – Kannada News | Two Sisters in Jodhpur die on the day of marriage after consuming poison

ನವದೆಹಲಿ, ಫೆಬ್ರುವರಿ 22: ಇಬ್ಬರು ಹೆಣ್ಮಕ್ಕಳ ಮದುವೆ ಸಂಭ್ರಮದಲ್ಲಿದ್ದ ಮನೆಗೆ ದಿಢೀರನೇ ಸೂತಕದ ಛಾಯೆ ಒತ್ತರಿಸಿಬಂತು. ರಾಜಸ್ಥಾನದ ಗ್ರಾಮವೊಂದರಲ್ಲಿ ಒಂದೇ ದಿನದಂದು ಮದುವೆಯಾಗಬೇಕಿದ್ದ ಇಬ್ಬರು ಸಹೋದರಿಯರು ಮಸಣಕ್ಕೆ ಸೇರಬೇಕಾದ ಘಟನೆ ನಡೆದಿದೆ. ಜೋಧಪುರದ ಮನಾಯ್ ಎನ್ನುವ ಗ್ರಾಮದಲ್ಲಿ ಸಹೋದರಿಯರಾದ ಶೋಭಾ (25) ಮತ್ತು ವಿಮಲಾ (23) ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಎನ್​ಡಿಟಿವಿ ವಾಹಿನಿಯಲ್ಲಿ ವರದಿಯಾಗಿದೆ. ಈ ಇಬ್ಬರು ಅಕ್ಕ ತಂಗಿಯರು ವಿಷ ಸೇವಿಸಿ ಸಾವನ್ನಪ್ಪಿದ್ದಾರೆ ಎಂದು ಪ್ರಾಥಮಿಕ ಮಾಹಿತಿ ತಿಳಿದುಬಂದಿದೆ. ಶನಿವಾರ (ಫೆ. 21) ಇಬ್ಬರದ್ದೂ ಮದುವೆ…

Read More

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 4, 5, 6ರ ಜನವರಿ 13ರ ದಿನಭವಿಷ್ಯ – Kannada News | Numerology Daily Horoscope: January 13, 2024 Predictions for 4, 5, 6

ಜನ್ಮಸಂಖ್ಯೆಗೆ 4, 5, 6ರ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆ ಆಧಾರದಲ್ಲಿ ಜನವರಿ 13ರ ಮಂಗಳವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ. ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4) ವಿದೇಶಕ್ಕೆ ಸಂಬಂಧಿಸಿ ವ್ಯವಹಾರಗಳಲ್ಲಿ ತೊಡಗಿರುವವರಿಗೆ ಈ ದಿನ ಶುಭ ಸುದ್ದಿ ಸಿಗಲಿದೆ. ಆಸ್ತಿ ವಿವಾದಗಳು ಸುದೀರ್ಘ ಕಾಲದಿಂದ ನಡೆಯುತ್ತಿದ್ದರೆ ಮಧ್ಯಸ್ಥಿಕೆಯ ಮೂಲಕ ಬಗೆಹರಿಸಿಕೊಳ್ಳಲು ಪ್ರಯತ್ನಿಸಿ. ಉದ್ಯೋಗ ಕ್ಷೇತ್ರದಲ್ಲಿ ಬದಲಾವಣೆ ಬಯಸುವವರಿಗೆ ಒಳ್ಳೆಯ ಅವಕಾಶಗಳು ಲಭ್ಯವಾಗಬಹುದು. ವಾಹನ…

Read More

ನವೀಕರಿಸಬಹುದಾದ ಇಂಧನ: 300 ಬಿಲಿಯನ್ ಯುಎಸ್ ಡಾಲರ್ ಹೂಡಿಕೆ ಅಗತ್ಯ; ಪ್ರಲ್ಹಾದ್​ ಜೋಶಿ – Kannada News | Renewable energy: India needs 300 billion US dollars investment; Pralhad Joshi

ಬೆಂಗಳೂರು, ಜನವರಿ 11: ಭಾರತ (India) ನವೀಕರಿಸಬಹುದಾದ ಇಂಧನ ಸಾಮರ್ಥ್ಯ 266 ಗಿಗಾವ್ಯಾಟ್ ದಾಟಿದ್ದಲ್ಲದೆ, ದೇಶವನ್ನು ಜಾಗತಿಕ ನಾಯಕ ಸ್ಥಾನದಲ್ಲಿರಿಸಿದೆ. ಜಾಗತಿಕ ಇಂಧನ ಪರಿವರ್ತನೆಗೆ ಅಭೂತಪೂರ್ವ ಹೂಡಿಕೆ ಮತ್ತು ಸಹಕಾರದ ಅಗತ್ಯವಿದೆ ಎಂದು ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ್ ಜೋಶಿ (Pralhad Joshi) ಹೇಳಿದರು. ಯುಎಇಯ ಅಬುಧಾಬಿಯಲ್ಲಿ ನಡೆದ 16ನೇ ಐಆರ್​ಇಎನ್​ಎ ಅಸೆಂಬ್ಲಿಯ ಪೂರ್ಣ ಅಧಿವೇಶನ ಉದ್ದೇಶಿಸಿ ಮಾತನಾಡಿದ ಸಚಿವರು, ಭಾರತಕ್ಕೆ 2030ರ ವೇಳೆಗೆ ಸುಮಾರು 300 ಬಿಲಿಯನ್ ಯುಎಸ್ ಡಾಲರ್ ಹೂಡಿಕೆಯ…

Read More

ಚಾಮರಾಜನಗರದಲ್ಲಿ ಭೀಕರ ಅಪಘಾತ: ಸಾರಿಗೆ ಬಸ್ ಪಲ್ಟಿಯಾಗಿ ಇಬ್ಬರು ಸಾವು; 67 ಪ್ರಯಾಣಿಕರಿಗೆ ಗಾಯ – Kannada News | KSRTC Bus Accident: Tire Burst Causes Bus to Overturn, 2 Dead and 67 Injured

ಚಾಮರಾಜನಗರ, ಜೂನ್​​ 29: ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಮಧುವನಹಳ್ಳಿಯಲ್ಲಿ ಭೀಕರ ರಸ್ತೆ ಅಪಘಾತವೊಂದು ಸಂಭವಿಸಿದೆ. ಮಲೆ ಮಹದೇಶ್ವರ ಬೆಟ್ಟದಿಂದ ಮೈಸೂರಿಗೆ ತೆರಳುತ್ತಿದ್ದ ಸಾರಿಗೆ ಬಸ್‌ನ (bus accident) ಟೈರ್ ಏಕಾಏಕಿ ಸ್ಫೋಟಗೊಂಡು ಪಲ್ಟಿಯಾಗಿದೆ. ಘಟನೆಯಲ್ಲಿ ಇಬ್ಬರು ಸ್ಥಳದಲ್ಲೇ ದುರ್ಮರಣಕ್ಕೀಡಾಗಿದ್ದು (death), ಬರೋಬ್ಬರಿ 67 ಪ್ರಯಾಣಿಕರು ಗಾಯಗೊಂಡಿದ್ದಾರೆ. ಕೊಳ್ಳೇಗಾಲದ ಪುಟ್ಟನಂಜಮ್ಮ(60) ಮತ್ತು ಕುದೇರು ನಿವಾಸಿ ಮಹೇಶ್(50) ಮೃತರು. ಸದ್ಯ ಸ್ಥಳಕ್ಕೆ ಕೊಳ್ಳೇಗಾಲ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದರು. ನಡೆದಿದ್ದೇನು? ಇಂದು ಸೋಮವಾರ ಹಾಗೂ ಹುಣ್ಣಿಮೆಯ ವಿಶೇಷ…

Read More

ಒಗ್ಗಟ್ಟಿನಿಂದ ನಿಲ್ಲುತ್ತೇವೆ; ಕ್ಷೇತ್ರ ಪುನರ್ ವಿಂಗಡಣೆ ವಿರುದ್ಧ ಒಂದಾದ ದಕ್ಷಿಣ ಭಾರತ – Kannada News | We Will stand together speak with one voice South India expresses concern over delimitation

ನವದೆಹಲಿ, ಏಪ್ರಿಲ್ 15: ಕ್ಷೇತ್ರ ಪುನರ್ ವಿಂಗಡಣೆ (delimitation) ನಿಯಮಗಳಿಗೆ ಪ್ರಮುಖ ಬದಲಾವಣೆಗಳೊಂದಿಗೆ ಲೋಕಸಭಾ ಸದಸ್ಯರ ಸಂಖ್ಯೆಯನ್ನು 543ರಿಂದ 850ಕ್ಕೆ ಹೆಚ್ಚಿಸುವ ಪ್ರಸ್ತಾವನೆಗೆ ದಕ್ಷಿಣ ಭಾರತದ ರಾಜ್ಯಗಳಲ್ಲಿ ಒಗ್ಗಟ್ಟಿನ ವಿರೋಧ ವ್ಯಕ್ತವಾಗಿದೆ. ತೆಲಂಗಾಣ, ತಮಿಳುನಾಡು ಮತ್ತು ಕರ್ನಾಟಕದಂತಹ ರಾಜ್ಯಗಳ ರಾಜಕೀಯ ನಾಯಕರು ಮತ್ತು ಪಕ್ಷಗಳು ಈ ಸೀಮಾ ನಿರ್ಣಯವನ್ನು ವಿರೋಧಿಸಿವೆ. ತೆಲಂಗಾಣದ ವಿರೋಧ ತೆಲಂಗಾಣ ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ ಕೇಂದ್ರ ಸರ್ಕಾರದ ಪ್ರಕ್ರಿಯೆಯ ವಿರುದ್ಧ ರಾಜಕೀಯ ಪ್ರತಿಭಟನೆಗೆ ಕರೆ ನೀಡಿದ್ದಾರೆ. ರೇವಂತ್ ರೆಡ್ಡಿ ಪ್ರಧಾನಿ ನರೇಂದ್ರ…

Read More

ಬಿಎಂಟಿಸಿ ಪ್ರಯಾಣಿಕರಿಗೆ ಬೆಲೆ ಏರಿಕೆ ಬರೆ: ದೀರ್ಘ ಪ್ರಯಾಣದ ಬಸ್ ಪಾಸ್ ದರ ಇಂದಿನಿಂದ ದುಬಾರಿ – Kannada News | BMTC Bus pass price Hike: Introduces Extended Area Pass For Rs 1500, Clarifies No Hike In Regular Monthly Bus Pass

ಬಿಎಂಟಿಸಿ ಬಸ್​ಗಳು (ಸಾಂದರ್ಭಿಕ ಚಿತ್ರ)Image Credit source: tv9 ಬೆಂಗಳೂರು, ಜೂನ್ 23: ಬಿಎಂಟಿಸಿ ಬಸ್​ಗಳ (BMTC Buses) ಕಾರ್ಯವ್ಯಾಪ್ತಿ ವಿಸ್ತರಿಸಲ್ಪಟ್ಟಿರುವುದರಿಂದ ದೀರ್ಘ ಪ್ರಯಾಣದ ಬಸ್ ಪಾಸ್ ದರವನ್ನು 1200 ರೂ.ನಿಂದ 1500 ರೂ.ಗೆ ಹೆಚ್ಚಳ ಮಾಡಲಾಗಿದೆ. ಪರಿಷ್ಕೃತ ದರ ಇಂದಿನಿಂದಲೇ (ಜೂನ್ 23) ಜಾರಿಗೆ ಬರುತ್ತಿದೆ. ಆದರೆ, ಸಾಮಾನ್ಯ ಮಾಸಿಕ ಬಸ್ ಪಾಸಿನ ದರ 1200 ರೂ. ಮುಂದುವರಿಯಲಿದೆ. ಬೆಂಗಳೂರಿನ ಹೊರವಲಯದ ಜಿಲ್ಲೆ ಹಾಗೂ ತಾಲೂಕುಗಳಿಗೆ ಪ್ರಯಾಣಿಸುವವರಿಗಾಗಿ ‘ವಿಸ್ತಾರ ಮಾಸಿಕ ಪಾಸ್ (Extended Area Pass)’…

Read More

‘ನನ್ನ ಬಳಿ ಡಿಎಲ್ ಇದೆಯಪ್ಪ’: ಸ್ನೇಹಿತನ ಹೊಸ ಕಾರು ಓಡಿಸಿದ ಸಚಿವ ಪರಮೇಶ್ವರ್! – Kannada News | Home Minister G Parameshwar drives friends new car in Sadashiva Nagar

ಬೆಂಗಳೂರು, ಏಪ್ರಿಲ್ 22: ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಇತ್ತೀಚೆಗೆ ತಮ್ಮ ಸ್ನೇಹಿತನ ಹೊಸ ಕಾರನ್ನು ಚಲಾಯಿಸುವ ಮೂಲಕ ಗಮನ ಸೆಳೆದಿದ್ದಾರೆ. ಸದಾಶಿವ ನಗರದಲ್ಲಿ ಸ್ನೇಹಿತರೊಬ್ಬರು ಹೊಸ ಕಾರನ್ನು ಸಚಿವರಿಗೆ ತೋರಿಸಲು ತಂದಿದ್ದರು. ಈ ಸಂದರ್ಭದಲ್ಲಿ ಡಾ. ಪರಮೇಶ್ವರ್ ಅವರು ಕಾರಿನ ಚಾಲಕನ ಸೀಟಿನಲ್ಲಿ ಕುಳಿತು, ನಗರದಲ್ಲಿ ಒಂದು ರೌಂಡ್ ಓಡಿಸಿದ್ದಾರೆ. ಕಾರು ಚಲಾಯಿಸುವಾಗ ಅವರು ತಮಾಷೆಯಾಗಿ ನನ್ನ ಬಳಿ ಡಿಎಲ್ ಇದೆಯಪ್ಪ ಎಂದು ಹೇಳಿ ನಗೆ ಚಟಾಕಿ ಹಾರಿಸಿದ್ದಾರೆ. ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು…

Read More

“ಅಣ್ಣನ ಮದುವೆ ಸಂಭ್ರಮದ ನಡುವೆ ಘೋರ ದುರಂತ!”: ಲಿಫ್ಟ್ ಕೇಬಲ್ ತುಂಡಾಗಿ ತಮ್ಮನಿಗೆ ಗಂಭೀರ ಗಾಯ, ಸಿಸಿಟಿವಿಯಲ್ಲಿ ದೃಶ್ಯ ಸೆರೆ

ಕಾನ್ಪುರ, ಏ. 8: ಉತ್ತರ ಪ್ರದೇಶದ ಕಾನ್ಪುರದ ಮುಬಾರಿಕಾ ಕಲ್ಯಾಣ ಮಂಟಪದಲ್ಲಿ ನಡೆದ ಆಘಾತಕಾರಿ ಘಟನೆಯಲ್ಲಿ ಲಿಫ್ಟ್ ಕೇಬಲ್ ತುಂಡಾಗಿ ಬಿದ್ದ ಪರಿಣಾಮ ವರನ ಸಹೋದರ ಗಂಭೀರವಾಗಿ ಗಾಯಗೊಂಡಿದ್ದಾರೆ. ಗ್ಯಾಸ್ ಕೊರತೆಯಿಂದಾಗಿ ಅಡುಗೆಗೆ ಕಟ್ಟಿಗೆ ತರಲು ಹೋದಾಗ ಈ ಅನಾಹುತ ಸಂಭವಿಸಿದೆ. ಮದುವೆ ಸಮಾರಂಭದ ವೇಳೆ ಅಡುಗೆಗೆ ಗ್ಯಾಸ್ ಸಿಲಿಂಡರ್ ಕೊರತೆ ಉಂಟಾಗಿತ್ತು. ಈ ಕಾರಣದಿಂದಾಗಿ ವರನ ಸಹೋದರ ಕೆಳಮಹಡಿಯಿಂದ ಕಟ್ಟಿಗೆಯನ್ನು ಲಿಫ್ಟ್ ಮೂಲಕ ಮೇಲೆ ತರಲು ಪ್ರಯತ್ನಿಸುತ್ತಿದ್ದರು. ಲಿಫ್ಟ್‌ನಲ್ಲಿ ಕಟ್ಟಿಗೆಯನ್ನು ತುಂಬಿಸಿ ಕೆಳಕ್ಕೆ ಹೋಗುತ್ತಿದ್ದಾಗ ಇದ್ದಕ್ಕಿದ್ದಂತೆ…

Read More

ದಿನ ಭವಿಷ್ಯ: ಇಂದು ಈ ರಾಶಿಯವರ ಬೆಂಬಲಕ್ಕೆ ನಿಲ್ಲುವವರು ಕಡಿಮೆಯಾಬಹುದು

ಮೇಷ ರಾಶಿ: ಯಾವುದಾದರೂ ದುರ್ವ್ಯಸನಕ್ಕೆ ತುತ್ತಾಗಿ ಹಣವನ್ನೂ ಆರೋಗ್ಯವನ್ನೂ ಉಳಿಸಿಕೊಳ್ಳುವ ಸಾಧ್ಯತೆ ಇದೆ. ಮಾಡದೇ ಉಳಿದ ಕೆಲಸ ಕಾರ್ಯಗಳತ್ತ ಗಮನಹರಿಸಿ. ವ್ಯಾಪರದಲ್ಲಿ ಲಾಭವಾಗಲಿದೆ. ವಿದ್ಯಾರ್ಥಿಗಳು ಪರಿಶ್ರಮದ ಓದಿಗೆ ಫಲಸಿಗಬಹುದು. ನಿಮ್ಮ ಅಧಿಕಾರದ ಆಸೆಗೆ ನೀರೆರೆಯಬಹುದು. ದೌರ್ಬಲ್ಯವನ್ನು ಹೇಳಿಕೊಂಡು ಪರಿಹಾರ ಕಂಡುಕೊಳ್ಳುವುದು ಉತ್ತಮ.ಯಾರನ್ನೂ ಸರಿಯಾಗಿ ಊಹಿಸಲಾರಿರಿ. ವಿಳಂಬವಾಗಿ ಬರುತ್ತದೆ ಎಂದುಕೊಂಡ ಹಣವು ಬೇಗ ನಿಮಗೆ ಬೇಗ ಸಿಗಬಹುದು. ವೃಷಭ ರಾಶಿ: ಇಂದು ನಿಮಗೆ ಹಣಕಾಸಿನ ಹರಿವು ಹೆಚ್ಚಾಗುವುದರ ಜೊತೆಗೆ ಆತಂಕವೂ ಇರುವುದು. ಅತಿಯಾದ ಖರ್ಚುಗಳಿಂದ ಚಿಂತೆಯಿದ್ದು, ಬಹುಕಾಲದಿಂದ ಸಿಕ್ಕಿಹಾಕಿಕೊಂಡಿದ್ದ…

Read More

ಒಲಿಂಪಿಕ್ಸ್ 2028: ಅರ್ಹತಾ ಮಾನದಂಡಗಳನ್ನು ಪ್ರಕಟಿಸುವಂತೆ ಕ್ರೀಡಾ ಸಚಿವಾಲಯ ನಿರ್ದೇಶನ – Kannada News | Indian Sports Ministry Directs NSFs to Publish 2028 Olympic Qualification Pathways

2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್ (2028 Los Angeles Olympics) ಜುಲೈ 14 ರಿಂದ ಜುಲೈ 30 ರವರೆಗೆ ನಡೆಯಲಿದೆ. ಈ ಕ್ರೀಡಾಕೂಟಕ್ಕೆ ತಯಾರಿಯ ಭಾಗವಾಗಿ ಈ ಕ್ರೀಡಾಕೂಟಕ್ಕೆ ಕ್ರೀಡಾಪಟುಗಳ ಆಯ್ಕೆಗೆ ಅಳವಡಿಸಿಕೊಳ್ಳಬೇಕಾದ ಮಾನದಂಡಗಳು ಮತ್ತು ಪ್ರಕ್ರಿಯೆ ಸೇರಿದಂತೆ ಒಲಿಂಪಿಕ್ ಅರ್ಹತೆ ಮತ್ತು ಆಯ್ಕೆ ಮಾರ್ಗವನ್ನು ಪ್ರಕಟಿಸುವಂತೆ ಕೇಂದ್ರ ಯುವಜನ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯವು ಎಲ್ಲಾ ಮಾನ್ಯತೆ ಪಡೆದ ರಾಷ್ಟ್ರೀಯ ಕ್ರೀಡಾ ಒಕ್ಕೂಟಗಳಿಗೆ (ಎನ್.ಎಸ್.ಎಫ್.) ನಿರ್ದೇಶಿಸಿದೆ. ಅರ್ಹತಾ ಮಾನದಂಡ ಪ್ರಕಟಿಸಿ ಒಲಿಂಪಿಕ್ಸ್, ಪ್ಯಾರಾಲಿಂಪಿಕ್ಸ್, ಏಷ್ಯನ್ ಕ್ರೀಡಾಕೂಟಗಳು,…

Read More