Headlines

Video: ಮಹಿಳೆಯ ಹಿಂಬಾಲಿಸಿಕೊಂಡು ಬಂದು ಆಕೆಯ ಮನೆಯೊಳಗೆ ನುಗ್ಗಲು ವ್ಯಕ್ತಿ ಯತ್ನ, ಆಮೇಲೇನಾಯ್ತು ನೋಡಿ – Kannada News | Doorstep Surprise: Husband’s Presence Halts Alleged Stalker

ನಗರದ ಬೀದಿ ದೀಪಗಳು ಮಂದವಾಗಿದ್ದವು. ಸಂಜೆ ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದ ಮಹಿಳೆಗೆ ತನ್ನ ಹಿಂದೆ ಯಾರೋ ಬರುತ್ತಿದ್ದಾರೆ ಎಂಬ ಸಂಶಯ ಕಾಡಿತ್ತು. ಅವಳು ಹೆಜ್ಜೆ ಜೋರು ಮಾಡಿದಷ್ಟೂ, ಆ ಅಪರಿಚಿತ ವ್ಯಕ್ತಿಯ ಚಪ್ಪಲಿಯ ಸದ್ದು ಹತ್ತಿರವಾಗುತ್ತಿತ್ತು. ಅಪಾರ್ಟ್​ಮೆಂಟ್ ತಲುಪಿದರೆ ಸಾಕೆಂದು ಓಡಿ ಬಂದರೆ ಆತ ಅಲ್ಲಿಗೂ ಬಂದಿದ್ದ. ಆಕೆ ಮನೆಯ ಬಾಗಿಲು ಇನ್ನೇನು ತೆಗೀಬೇಕು ಅನ್ನುವಷ್ಟರಲ್ಲಿ ಆತ ಕೂಡ ಆಕೆಯ ಹಿಂದೆಯೇ ನಿಂತಿದ್ದ. ಆಕೆ ಬಾಗಿಲು ತೆರೆದು ಒಳಗೆ ಹೋಗಿದ್ದಾಳೆ. ಆತನೂ ಆಕೆಯ ಹಿಂದೆ ಹೋಗಬೇಕು…

Read More

World Intellectual Property Day 2026: ಬೌದ್ಧಿಕ ಆಸ್ತಿಗೆ ಬೆಲೆ ಕಟ್ಟಲು ಸಾಧ್ಯವೇ ಇಲ್ಲ – Kannada News | World Intellectual Property Day 2026: Why celebrate World Intellectual Property Day?

ವಿಶ್ವ ಬೌದ್ಧಿಕ ಆಸ್ತಿ ದಿನImage Credit source: Freepik ಬೌದ್ಧಿಕ ಆಸ್ತಿ (Intellectual Property) ಎಂಬುದು ಮಾನವನ ಬುದ್ಧಿಶಕ್ತಿಯ ಅಮೂರ್ತ ಸೃಷ್ಟಿಯನ್ನು ಒಳಗೊಂಡಿರುವ ಆಸ್ತಿಯ ವರ್ಗವಾಗಿದ್ದು, ಇದು ಬೆಲೆ ಕಟ್ಟಲಾಗದಷ್ಟು ಅಮೂಲ್ಯವಾಗಿದೆ. ಪೇಟೆಂಟ್‌ಗಳು, ಹಕ್ಕುಸ್ವಾಮ್ಯಗಳು, ಟ್ರೇಡ್‌ಮಾರ್ಕ್‌ಗಳು ಮತ್ತು ವಿನ್ಯಾಸಗಳು, ಕೃತಿಸ್ವಾಮ್ಯ ಇವೆಲ್ಲವೂ ಬೌದ್ಧಿಕ ಆಸ್ತಿಗಳಾಗಿದ್ದು, ಲೇಖಕ, ಕಥೆಗಾರ, ವಿಜ್ಞಾನಿ ಹೀಗೆ ಹಲವಾರು ಕ್ಷೇತ್ರಗಳಲ್ಲಿ ತಮ್ಮ ಬುದ್ಧಿ ಶಕ್ತಿ ಹಾಗೂ ಸೃಜನಶೀಲತೆಯಿಂದ  ಹೊರ ತರುವ ಕಥೆ, ಸಂಗೀತ, ಪುಸ್ತಕ, ವಿನ್ಯಾಸಗಳನ್ನು ಬೇರೆ ಯಾರು ಕದಿಯದಂತೆ ಈ ಅಮೂಲ್ಯ ಬೌದ್ಧಿಕ…

Read More

ಬೆಂಗಳೂರು: 4 ಲಕ್ಷ ರೂ ಲಂಚ ಸ್ವೀಕರಿಸುವಾಗ ಲೋಕಾ ಬಲೆಗೆ ಬಿದ್ದ ಇನ್ಸ್‌ಪೆಕ್ಟರ್‌ – Kannada News | Bengaluru: KP Agrahara Inspector Caught by Lokayukta while accepting a bribe of Rs 4 lakh

ಇನ್ಸ್‌ಪೆಕ್ಟರ್ ಗೋವಿಂದರಾಜುImage Credit source: tv9 kannada ಬೆಂಗಳೂರು, ಜನವರಿ 29: 4 ಲಕ್ಷ ರೂ. ಲಂಚ (bribe) ಸ್ವೀಕರಿಸುವಾಗ ಇನ್ಸ್‌ಪೆಕ್ಟರ್‌ ಲೋಕಾಯುಕ್ತ (Lokayukta) ಬಲೆಗೆ ಬಿದ್ದಿರುವಂತಹ ಘಟನೆ ನಗರದಲ್ಲಿ ನಡೆದಿದೆ. ಬೆಂಗಳೂರಿನ ಕೆ.ಪಿ.ಅಗ್ರಹಾರ ಠಾಣೆ ಇನ್ಸ್‌ಪೆಕ್ಟರ್ ಗೋವಿಂದರಾಜು ಲೋಕಾಯುಕ್ತ ಬಲೆಗೆ ಬಿದ್ದ ಇನ್ಸ್‌ಪೆಕ್ಟರ್‌. ಲೋಕಾಯುಕ್ತ ಎಸ್​ಪಿ ಶಿವಪ್ರಕಾಶ್ ನೇತೃತ್ವದಲ್ಲಿ ಕಾರ್ಯಾಚರಣೆ ಮಾಡಲಾಗಿದ್ದು, ಸದ್ಯ ಇನ್ಸ್‌ಪೆಕ್ಟರ್​​ನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಕೇಸ್‌ನಲ್ಲಿ ಸೇರಿಸುವುದಾಗಿ ಬೆದರಿಸಿ ಲಂಚಕ್ಕೆ ಬೇಡಿಕೆ ಚೀಟಿ ವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ವ್ಯಕ್ತಿಯನ್ನು…

Read More

ರಿಷಿ-ಪ್ರಕಾಶ್ ಬೆಳವಾಡಿ ಚಿತ್ರಕ್ಕೆ ‘ಅನಂತ ಪದ್ಮನಾಭ’ ಟೈಟಲ್; ಶೀರ್ಷಿಕೆಯಲ್ಲೇ ಕಥೆಯ ಎಳೆ ರಿವೀಲ್ – Kannada News | Ananta Padmanabha: Rishi, Prakash Belawadi Star in Prashanth Rajappa’s Comedy Drama

ಸಂಭಾಷಣೆಕಾರರು ಸಿನಿಮಾ ನಿರ್ದೇಶಕರಾಗಿ ಬಡ್ತಿ ಪಡೆದ ಸಾಕಷ್ಟು ಉದಾಹರಣೆ ಇದೆ. ಈಗ ಇದಕ್ಕೆ ಹೊಸ ಸೇರ್ಪಡೆ ಆಗಿದೆ.‘ಅಧ್ಯಕ್ಷ’, ‘ವಿಕ್ಟರಿ’, ‘ರನ್ನ’, ‘ಪೊಗರು’, ‘ತೀರ್ಥರೂಪ ತಂದೆಯವರಿಗೆ’, ‘ಅಣ್ಣ ಫ್ರಂ ಮೆಕ್ಸಿಕೋ’ ರೀತಿಯ ಸಿನಿಮಾಗಳಿಗೆ ಸಂಭಾಷಣೆ ಬರೆದ ಪ್ರಶಾಂತ್‌ ರಾಜಪ್ಪ ಈಗ ನಿರ್ದೇಶನ ಮಾಡುತ್ತಿದ್ದಾರೆ. ಅವರ ಮೊದಲ ಸಿನಿಮಾಗೆ ‘ಅನಂತ ಪದ್ಮನಾಭ’ ಎಂದು ಟೈಟಲ್ ಇಡಲಾಗಿದೆ. ಈ ಚಿತ್ರದಲ್ಲಿ ರಿಷಿ ಹಾಗೂ ಪ್ರಕಾಶ್‌ ಬೆಳವಾಡಿ (Prakash Belavadi) ಮುಖ್ಯಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸಿನಿಮಾದ ಟೈಟಲ್ ರಿವೀಲ್ ಮಾಡುವ ಪೋಸ್ಟರ್ ರಿವೀಲ್ ಆಗಿದೆ….

Read More

ಖಾನ್ ಸರ್ ಕೋಚಿಂಗ್ ಕೇಂದ್ರದ ಪ್ರತಿಸ್ಪರ್ಧಿ, ಜ್ಞಾನಬಿಂದು ಅಕಾಡೆಮಿಯ ನಿರ್ದೇಶಕನ ಸಹೋದರ ನೇಪಾಳದಲ್ಲಿ ಶವವಾಗಿ ಪತ್ತೆ – Kannada News | Khan Sir Rival’s Brother Dead in Nepal: Prince Yadav’s Mysterious Death, Police Probe

ಕಠ್ಮಂಡು, ಜೂನ್ 14: ಖಾನ್​ ಸರ್(Khan Sir) ಅವರ ಕೋಚಿಂಗ್ ಕೇಂದ್ರದ ಪ್ರತಿಸ್ಪರ್ಧಿ ಜ್ಞಾನ ಬಿಂದು ಅಕಾಡೆಮಿ ನಿರ್ದೇಶಕ ರೋಶನ್ ಆನಂದ್ ಅವರ ಸಹೋದರ ಪ್ರಿನ್ಸ್ ಯಾದವ್, ನೇಪಾಳದ ಬಿರಾಟ್‌ನಗರದ ಹೋಟೆಲ್‌ನಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದಾರೆ. ನೇಪಾಳ ಪೊಲೀಸರು ತನಿಖೆ ಆರಂಭಿಸಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಐವರನ್ನು ಬಂಧಿಸಿದ್ದಾರೆ, ಅಧಿಕಾರಿಗಳು ಸಾವಿನ ನಿಖರವಾದ ಕಾರಣವನ್ನು ನಿರ್ಧರಿಸಲು ಮರಣೋತ್ತರ ಪರೀಕ್ಷೆಯ ವರದಿಗಾಗಿ ಕಾಯುತ್ತಿದ್ದಾರೆ. ಪ್ರಿನ್ಸ್ ಯಾದವ್ ನೇಪಾಳದ ಬಿರಾಟ್‌ನಗರದ ಹೋಟೆಲ್‌ನಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಬೆನ್ನಲ್ಲೇ ನೇಪಾಳ ಪೊಲೀಸರು ಅತ್ಯಂತ ಚುರುಕಿನ…

Read More

ಮಂತ್ರಾಲಯ ರಾಯರ ಸನ್ನಿಧಿಯಲ್ಲಿ ಹೊಸ ವರ್ಷದ ಸಂಭ್ರಮ: ಸಾಗರೋಪಾದಿಯಲ್ಲಿ ಹರಿದುಬಂದ ಭಕ್ತರು – Kannada News | New Year 2026 Celebrations at Mantralayam: Sea of Devotees Flock to Raghavendra Swamy Mutt

ರಾಯಚೂರು, ಜನವರಿ 1: ಹೊಸ ವರ್ಷ 2026ಕ್ಕೆ ಜಗತ್ತು ಕಾಲಿಟ್ಟಾಗಿದೆ. ‘ರಾಯರೇ, ಎಲ್ಲಾ ಒಳಿತು ಮಾಡಪ್ಪ’ ಎಂದು ಮಂತ್ರಾಲಯಕ್ಕೆ ಭಕ್ತಸಾಗರವೇ ಹರಿದು ಬಂದಿದೆ. 2025ರ ವರ್ಷಾಂತ್ಯ, 2026 ರ ಆರಂಭದ ಹಿನ್ನೆಲೆ ರಾಯಚೂರಿನ ಮಂತ್ರಾಲಯದ ರಾಯರ ಮಠಕ್ಕೆ ಸಾಗರೋಪಾದಿಯಲ್ಲಿ ಬಂದ ಜನರು ತುಂಗಾಭದ್ರಾ ನದಿಯಲ್ಲಿ ಪುಣ್ಯಸ್ನಾನ ಮಾಡಿ ಪುನೀತರಾದರು. ಕ್ರಿಸ್​ಮಸ್​, ಈಯರ್​ ಎಂಡ್​, ನ್ಯೂ ಇಯರ್​ ಅಂತ ವೆಕೇಷನ್​ ಮೂಡ್​​ನಲ್ಲಿರುವ ಜನರು ಮಂತ್ರಾಲಯದತ್ತ ಮುಖ ಮಾಡಿದ್ದಾರೆ. ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ Source link

Read More

ಬೆಂಗಳೂರಿನಲ್ಲಿ ಮೂವರನ್ನು ಬಲಿ ಪಡೆದ ಮಳೆ ನೀರಿನ ಇಂಗು ಗುಂಡಿ – Kannada News | Bengaluru Sump Tragedy: 3 Dead Due to Chemical Fumes in Rainwater Pit

ಬೆಂಗಳೂರು, ಫೆಬ್ರವರಿ 28: ಮಳೆ ನೀರಿನ ಇಂಗು ಗುಂಡಿಗೆ ಮೂರು ಬಲಿ (death) ಆಗಿರುವಂತಹ ಘಟನೆ ನಗರದ ವೈಟ್‌ಫೀಲ್ಡ್ ಠಾಣಾ ವ್ಯಾಪ್ತಿಯ ಇಮ್ಮಡಿಹಳ್ಳಿ ದೇಗುಲದ ವೃತ್ತದ ಬಳಿ ನಡೆದಿದೆ. ಮುನಿಶಾಮಪ್ಪ(67), ರುದ್ರಕುಮಾರ್(40) ಮತ್ತು ವಿಶ್ವನಾಥ್ ಆಚಾರಿ(24) ಮೃತರು. ವೈಟ್‌ಫೀಲ್ಡ್ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಡೆದಿದ್ದೇನು? ಮಾಲೀಕ ಮುನಿಶಾಮಪ್ಪ 12 ವರ್ಷಗಳ ಹಿಂದೆಯೇ ಇಂಗು ಗುಂಡಿ ನಿರ್ಮಿಸಿದ್ದರೂ ಬಳಸುತ್ತಿರಲಿಲ್ಲ. ಹೀಗಾಗಿ ನೀರಿನಲ್ಲಿ ಬಿದ್ದ ವಸ್ತುಗಳು ಕೊಳೆತು ನಾರುತ್ತಿದ್ದವು. ಕೆಮಿಕಲ್ ಹಾಕಿ ಕ್ಲೀನ್ ಮಾಡಲು ಮುಂದಾಗಿದ್ದರು. ಈ ವೇಳೆ …

Read More

47ನೇ ವಯಸ್ಸಿನಲ್ಲಿ ನಟಿ ಜ್ಯೋತಿಕಾ ವರ್ಕೌಟ್ ಹೇಗಿದೆ ನೋಡಿ; ವಿಡಿಯೋ ವೈರಲ್

ಖ್ಯಾತ ನಟಿ ಜ್ಯೋತಿಕಾ (Jyothika) ಅವರಿಗೆ ಈಗ 47 ವರ್ಷ ವಯಸ್ಸು. ಸಿನಿಮಾಗಳಲ್ಲಿ ನಟಿಸುವುದು ಕಡಿಮೆ ಆಗಿದ್ದರೂ ಕೂಡ ಅವರು ಫಿಟ್ನೆಸ್ ಕಳೆದುಕೊಂಡಿಲ್ಲ. ಇಂದಿಗೂ ಅವರು ತಪ್ಪದೇ ವರ್ಕೌಟ್ ಮಾಡುತ್ತಾರೆ. ಆ ಕಾರಣದಿಂದ ಅವರು ಫಿಟ್ ಆಗಿದ್ದಾರೆ. ತಮ್ಮ ವರ್ಕೌಟ್ ಹೇಗಿರುತ್ತದೆ ಎಂಬುದನ್ನು ಅಭಿಮಾನಿಗಳಿಗೆ ತೋರಿಸಲು ಅವರು ಈ ವಿಡಿಯೋ ಹಂಚಿಕೊಂಡಿದ್ದಾರೆ. 47ರ ಪ್ರಾಯದ ಜ್ಯೋತಿಕಾ ಅವರು ಹದಿಹರೆಯದ ಹುಡುಗಿಯ ರೀತಿಯಲ್ಲಿ ವರ್ಕೌಟ್ ಮಾಡುತ್ತಾರೆ. ಅವರ ಶಿಸ್ತು ಮತ್ತು ಉತ್ಸಾಹ ಎಲ್ಲರಿಗೂ ಮಾದರಿ ಆಗುವಂತಿದೆ. ಇತ್ತೀಚಿನ ವರ್ಷಗಳಲ್ಲಿ…

Read More

BOB Capital Markets: 103 ಬಿಸಿನೆಸ್ ಡೆವಲಪ್‌ಮೆಂಟ್ ಮ್ಯಾನೇಜರ್ ಹುದ್ದೆಗೆ ನೇಮಕಾತಿ; ಪದವೀಧರರಿಗೆ ಸುವರ್ಣಕಾಶ

ಬ್ಯಾಂಕ್ ಆಫ್ ಬರೋಡಾದ ಅಂಗಸಂಸ್ಥೆಯಾದ ‘ಬಿಒಬಿ ಕ್ಯಾಪಿಟಲ್ ಮಾರ್ಕೆಟ್ಸ್ ಲಿಮಿಟೆಡ್’ (BOB Capital Markets Ltd), ದೇಶಾದ್ಯಂತ ಖಾಲಿ ಇರುವ ಬಿಸಿನೆಸ್ ಡೆವಲಪ್‌ಮೆಂಟ್ ಮ್ಯಾನೇಜರ್ ಹುದ್ದೆಗಳ ಭರ್ತಿಗೆ ಬೃಹತ್ ನೇಮಕಾತಿ ಅಧಿಸೂಚನೆಯನ್ನು ಹೊರಡಿಸಿದೆ. ಒಟ್ಟು 103 ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದ್ದು, ಬ್ಯಾಂಕಿಂಗ್ ಮತ್ತು ಬಂಡವಾಳ ಮಾರುಕಟ್ಟೆ ಕ್ಷೇತ್ರದಲ್ಲಿ ವೃತ್ತಿಜೀವನ ರೂಪಿಸಿಕೊಳ್ಳಲು ಬಯಸುವವರಿಗೆ ಇದೊಂದು ಸುವರ್ಣಾವಕಾಶವಾಗಿದೆ. ಈ ನೇಮಕಾತಿಯಡಿ ಉತ್ತರ ವಲಯಕ್ಕೆ 37, ಪಶ್ಚಿಮ ವಲಯಕ್ಕೆ 44 ಹಾಗೂ ದಕ್ಷಿಣ ಮತ್ತು ಪೂರ್ವ ವಲಯಗಳಿಗೆ ಒಟ್ಟು…

Read More

ಎಂ.ಜಿ. ರೋಡ್​ನಲ್ಲಿರುವ ಪ್ರತಿಷ್ಠಿತ ಹೋಟೆಲ್‌ನಲ್ಲಿ ಯುವತಿ ಮೇಲೆ ಹಲ್ಲೆ; ಮ್ಯಾನೇಜರ್ ಮೇಲೆ ಬಟ್ಟೆ ಹರಿಯಲು ಯತ್ನಿಸಿದ ಆರೋಪ – Kannada News | Bengaluru Shock: Tandoor Hotel Manager Accused of Misbehavior, Assault on MG Road

ಬೆಂಗಳೂರು, ಏ.28: ಸಿಲಿಕಾನ್ ಸಿಟಿಯ ಹೃದಯಭಾಗ ಎಂ.ಜಿ. ರಸ್ತೆಯಲ್ಲಿರುವ (MG Road) ಪ್ರಖ್ಯಾತ ‘ತಂದೂರ್ ಹೋಟೆಲ್’ನಲ್ಲಿ ಯುವತಿಯೊಬ್ಬಳ ಮೇಲೆ ಮ್ಯಾನೇಜರ್ ಅಸಭ್ಯವಾಗಿ ವರ್ತಿಸಿ, ಹಲ್ಲೆ ನಡೆಸಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಈ ಸಂಬಂಧ ಹೋಟೆಲ್ ಮ್ಯಾನೇಜರ್ ರವಿ ಎಂಬಾತನ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಕೀರ್ತಿ ಎಂಬ ಯುವತಿ ನಿನ್ನೆ (ಏ.27) ಮಧ್ಯಾಹ್ನ ಸುಮಾರು 2:30ರ ಸಮಯದಲ್ಲಿ ತಮ್ಮ ಸ್ನೇಹಿತರೊಂದಿಗೆ ಊಟಕ್ಕಾಗಿ ತಂದೂರ್ ಹೋಟೆಲ್‌ಗೆ ತೆರಳಿದ್ದರು. ಈ ವೇಳೆ ಕ್ಷುಲ್ಲಕ ಕಾರಣಕ್ಕೆ ಗ್ರಾಹಕರು ಮತ್ತು ಹೋಟೆಲ್ ಮ್ಯಾನೇಜರ್…

Read More