Headlines

‘ರಕ್ಕಸಪುರದೋಳ್’, ‘ಜೆಸಿ’ ಜೊತೆ ಹಲವು ಸಿನಿಮಾಗಳು ಈ ವಾರ ರಿಲೀಸ್ – Kannada News | Rakkasapuradhol JC The University and other movies releasing on 6 February

ಫೆಬ್ರವರಿ 6ರಂದು ಸ್ಯಾಂಡಲ್‌ವುಡ್‌ನಲ್ಲಿ ಹಲವು ಸಿನಿಮಾಗಳು (New Kannada Movies) ಬಿಡುಗಡೆ ಆಗುತ್ತಿವೆ. 10ಕ್ಕೂ ಹೆಚ್ಚು ಚಿತ್ರಗಳು ತೆರೆಗೆ ಬರಲು ಸಜ್ಜಾಗಿವೆ. ಈ ವಾರದ ಪ್ರಮುಖ ಆಕರ್ಷಣೆ ಎಂದರೆ ರಾಜ್ ಬಿ. ಶೆಟ್ಟಿ ನಟನೆಯ ‘ರಕ್ಕಸಪುರದೋಳ್’ (Rakkasapuradhol) ಮತ್ತು ಡಾಲಿ ಧನಂಜಯ ನಿರ್ಮಾಣದ ‘ಜೆಸಿ ದಿ ಯೂನಿವರ್ಸಿಟಿ’. ಇವುಗಳು ಮಾತ್ರವಲ್ಲದೇ ‘ಕಟ್ಲೆ’, ‘ಕರಿಕಾಡ’, ‘ಘಾರ್ಗಾ’, ‘ಸುಖೀಭವ’ ಮುಂತಾದ ಸಿನಿಮಾಗಳು ತೆರೆಕಾಣುತ್ತಿವೆ. ಫೆಬ್ರವರಿ 6ರಂದು ಬಿಡುಗಡೆ ಆಗಲಿರುವ ಕನ್ನಡ ಸಿನಿಮಾಗಳ ಬಗ್ಗೆ ಮಾಹಿತಿ ಇಲ್ಲಿದೆ.. ರಕ್ಕಸಪುರದೋಳ್: ಈ ವಾರದ…

Read More

IND vs AFG: 6 ರನ್​ಗೆ 4 ವಿಕೆಟ್..! ಕನ್ನಡಿಗ ಪ್ರಸಿದ್ಧ್ ದಾಳಿಗೆ ತತ್ತರಿಸಿದ ಅಫ್ಘನ್ – Kannada News | Prasidh Krishna’s Fiery 4 Wicket Haul Stuns Afghanistan in Chennai ODI Powerplay

ಭಾರತ ಮತ್ತು ಅಫ್ಘಾನಿಸ್ತಾನ (India vs Afghanistan) ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯ ಮೂರನೇ ಮತ್ತು ಕೊನೆಯ ಪಂದ್ಯ ಚೆನ್ನೈನಲ್ಲಿ ನಡೆಯುತ್ತಿದೆ. ಈ ಪಂದ್ಯದಲ್ಲಿ ಅಫ್ಘಾನಿಸ್ತಾನ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ಮೊದಲೆರಡು ಪಂದ್ಯಗಳಲ್ಲಿ ಹೀನಾಯವಾಗಿ ಸೋತಿದ್ದ ಅಫ್ಘಾನಿಸ್ತಾನ 2-0 ಅಂತರದಲ್ಲಿ ಸರಣಿಯನ್ನು ಕಳೆದುಕೊಂಡಿತ್ತು. ಹೀಗಾಗಿ ಮೂರನೇ ಪಂದ್ಯವನ್ನು ಗೆದ್ದು ವೈಟ್ ವಾಶ್ ಮುಖಭಂಗದಿಂದ ಪಾರಾಗುವ ಸಲುವಾಗಿ ಅಫ್ಘನ್ ತಂಡ ಮೊದಲು ಬ್ಯಾಟಿಂಗ್‌ ಮಾಡಲು ನಿರ್ಧರಿಸಿತು. ಆದರೆ ಚಿದಂಬರಂ ಮೈದಾನದಲ್ಲಿ ಅಫ್ಘನ್ ಬ್ಯಾಟಿಂಗ್‌…

Read More

ಹೆಚ್ಚಿನ ಬಡ್ಡಿ ಆಸೆ ತೋರಿಸಿ ಕೋಟಿ ಕೋಟಿ ವಂಚನೆ: ಮಹಿಳಾ ಸಂಘದ ಹೆಸರಲ್ಲಿ ಲೂಟಿ ಹೊಡೆದ ಮಹಿಳೆಯರು – Kannada News | Crores Duped in Alleged Fraud Using Women’s Association Name

ಬಾಗಲಕೋಟೆ, ಜುಲೈ 13: ಮಹಿಳಾ ಸಂಘದ ಹೆಸರಿನಲ್ಲಿ ಸಾವಿರಾರು ಅಮಾಯಕ ಮಹಿಳೆಯರಿಂದ ಕೋಟ್ಯಂತರ ರೂ ವಂಚಿಸಿರುವ (fraud) ಪ್ರಕರಣವೊಂದು ಬಾಗಲಕೋಟೆ (bagalkot) ಜಿಲ್ಲೆಯ ಬೀಳಗಿ ಪಟ್ಟಣದಲ್ಲಿ ಬೆಳಕಿಗೆ ಬಂದಿದೆ. ಬೀಳಗಿ ಪಟ್ಟಣದ ದುರ್ಗಾದೇವಿ ಮಹಿಳಾ ಮತ್ತು ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಅಧ್ಯಕ್ಷೆ ವಿದ್ಯಾ ಹಳ್ಳೂರು ಹಾಗೂ ಕಾರ್ಯದರ್ಶಿ ರಚನಾ ಬಂಟನೂರು ಎಂಬುವವರು ಕೋಟ್ಯಂತರ ರೂ ವಂಚಿಸಿದ್ದಾರೆ. ಸದ್ಯ ಹಣ ಕಳೆದುಕೊಂಡ ಮಹಿಳೆಯರು ಬೀಳಗಿ ಪೊಲೀಸರಿಗೆ ದೂರು ಕೊಡಲು ಮುಂದಾಗಿದ್ದಾರೆ. ನಡೆದಿದ್ದೇನು? ವಿದ್ಯಾ ಹಳ್ಳೂರು ಮತ್ತು ರಚನಾ ಬಂಟನೂರು…

Read More

ಜೀನಿಯಸ್ ರೂಪದಲ್ಲಿ ‘ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು’ ಹಾಡು ಬರೆದಿದ್ದ ಹಂಸಲೇಖ – Kannada News | How Hamsalekha write Akasmika’s ‘Huttidare Kannada’: The Iconic Song’s written

ಕನ್ನಡ ನೆಲ, ಜಲ ಹಾಗೂ ಭಾಷೆಯ ಹಿರಿಮೆಯನ್ನು ಸಾರುವ ನೂರಾರು ಗೀತೆಗಳು ಕನ್ನಡ ಚಿತ್ರರಂಗದಲ್ಲಿ ಮೂಡಿಬಂದಿವೆ. ಆದರೆ, ಡಾ. ರಾಜ್‌ಕುಮಾರ್ ಅಭಿನಯದ ‘ಆಕಸ್ಮಿಕ’ ಚಿತ್ರದ “ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು…” ಹಾಡಿಗೆ ಇರುವ ಕ್ರೇಜ್ ಹಾಗೂ ಗೌರವವೇ ಬೇರೆ. ಕನ್ನಡಿಗರ ಪಾಲಿಗೆ ಇದು ಕೇವಲ ಒಂದು ಸಿನಿಮಾದ ಹಾಡಲ್ಲ, ಇದೊಂದು ಅನಧಿಕೃತ ನಾಡಗೀತೆ. ಆದರೆ, ಕನ್ನಡ ಚಿತ್ರರಂಗದ ಇತಿಹಾಸ ಬರೆದ ಈ ಕಲ್ಟ್ ಹಾಡು ಮೊದಲು ಸಿನಿಮಾದ ಕಥೆಯಲ್ಲೇ ಇರಲಿಲ್ಲ ಎಂಬ ಅಚ್ಚರಿಯ ಸಂಗತಿ ನಿಮಗೆ ಗೊತ್ತೇ?…

Read More

ಬೈಕ್​ನಲ್ಲಿ ಸ್ಟಂಟ್ ಮಾಡಿದ ಪ್ರೇಮಿಯಿಂದ ಮಹಿಳೆಯ ಗುಪ್ತಾಂಗಕ್ಕೆ ಗಾಯ! – Kannada News | Mumbai Woman Injured In Private Parts After her boyfriends Dhoom Style bike Stunt Goes Wrong

ನವದೆಹಲಿ, ಫೆಬ್ರವರಿ 16: ಯುವಕ-ಯುವತಿಯರಿಬ್ಬರ ರಾತ್ರಿಯ ಔಟಿಂಗ್ ಸಂಕಷ್ಟ ತಂದೊಡ್ಡಿದೆ. ಬೈಕ್​ನಲ್ಲಿ ಬಾಯ್​​ಫ್ರೆಂಡ್ (Boyfriend) ಹಿಂದೆ ಕುಳಿತು ಹೋಗುವಾಗ ಸ್ವಲ್ಪ ಸಮಯದವರೆಗೆ ಇಬ್ಬರೂ ಎಂಜಾಯ್ ಮಾಡುತ್ತಿದ್ದರು. ಅಲ್ಲಿಯವರೆಗೂ ಎಲ್ಲವೂ ಸರಿಯಾಗೇ ಇತ್ತು. ಆಕೆ ಬಾಯ್​​ಫ್ರೆಂಡ್​​ನನ್ನು ಹಿಡಿದು ಕುಳಿತಿದ್ದಾಗ ಆತ ಆಕೆಗೆ ತನ್ನ ಸ್ಟಂಟ್ ತೋರಿಸಲು ಧೂಮ್ ಸಿನಿಮಾ ಸ್ಟೈಲ್​ನಲ್ಲಿ ವೀಲಿಂಗ್ ಮಾಡಿದ್ದಾನೆ. ಇದರ ಸುಳಿವಿಲ್ಲದ ಆಕೆ ಹಿಂದಿನ ಸೀಟಿನಿಂದ ಕೆಳಗೆ ಜಾರಿದಳು. ಆಗ ಹಿಂದಿನ ಚಕ್ರ ಮತ್ತು ಸೀಟಿನ ನಡುವಿನ ಜಾಗದಲ್ಲಿ ಆಕೆ ಸಿಲುಕಿಕೊಂಡಳು. ಇದರಿಂದ ಆಕೆಯ…

Read More

‘ಒಳ್ಳೆತನದ ಮುಖವಾಡ ಧರಿಸಿದ್ದ ದೀಪಿಕಾ ಪಡುಕೋಣೆ’: ಹೇಳಿಕೆಗೆ ಕ್ಷಮೆ ಕೇಳಿದ ನಿರ್ದೇಶಕ – Kannada News | Imtiaz Ali clarification on Deepika Padukone Good Girl Image Comment Controversy

ಬಾಲಿವುಡ್‌ನ ಖ್ಯಾತ ನಟಿ ದೀಪಿಕಾ ಪಡುಕೋಣೆ (Deepika Padukone) ಅವರ ‘ಒಳ್ಳೆಯ ಹುಡುಗಿ ಇಮೇಜ್ ಕೇವಲ ಒಂದು ಮುಖವಾಡ ಆಗಿತ್ತು’ ಎಂದು ಇತ್ತೀಚಿನ ಸಂದರ್ಶನವೊಂದರಲ್ಲಿ ಹೇಳಿಕೆ ನೀಡಿದ್ದ ಖ್ಯಾತ ನಿರ್ದೇಶಕ ಇಮ್ತಿಯಾಜ್ ಅಲಿ, ಈಗ ತಮ್ಮ ಹೇಳಿಕೆಗೆ ಸ್ಪಷ್ಟನೆ ಹಾಗೂ ಕ್ಷಮೆಯಾಚನೆ ಮಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ದೀಪಿಕಾ ಅವರಿಗಾಗಿ ಒಂದು ಸುದೀರ್ಘ ಪೋಸ್ಟ್ ಹಂಚಿಕೊಂಡಿರುವ ಇಮ್ತಿಯಾಜ್, ತಮ್ಮ ಹೇಳಿಕೆ ಕೇವಲ ತಮಾಷೆಗಾಗಿ ಎಂದು ಹೇಳಿದ್ದಾರೆ. ಇತ್ತೀಚೆಗೆ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಇಮ್ತಿಯಾಜ್ ಅಲಿ (Imtiaz Ali) ಅವರು…

Read More

ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್: ಅರ್ಜಿ ಸಲ್ಲಿಕೆ ಹೇಗೆ? ಏನೇನು ದಾಖಲೆಗಳು ಬೇಕು? ಇಲ್ಲಿದೆ ವಿವರ – Kannada News

ಬಿಎಂಟಿಸಿ ಬಸ್ (ಸಾಂದರ್ಭಿಕ ಚಿತ್ರ)Image Credit source: tv9 ಬೆಂಗಳೂರು, ಜೂನ್ 4: ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿರುವ ಡಿಕೆ ಶಿವಕುಮಾರ್ (DK Shivakumar) ವಿದ್ಯಾರ್ಥಿ ಸಮೂಹಕ್ಕೆ ಭರ್ಜರಿ ಕೊಡುಗೆ ನೀಡಿದ್ದಾರೆ. ರಾಜ್ಯದ ಎಲ್ಲಾ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ‘ಉಚಿತ ಬಸ್ ಪಾಸ್’ ನೀಡುವುದಾಗಿ ಮುಖ್ಯಮಂತ್ರಿಗಳು ಮಹತ್ತರ ಘೋಷಣೆ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) ವ್ಯಾಪ್ತಿಯಲ್ಲಿ ಸದ್ಯ ಪಾಸ್ ಪಡೆಯಲು ಇರುವ ನಿಯಮಗಳು, ಪ್ರಸ್ತುತ ಇರುವ ದರ ಪಟ್ಟಿ ಹಾಗೂ ಇನ್ನು…

Read More

Spiritual Growth: ಸರಳ ಆದರೆ ಅತ್ಯಂತ ಪ್ರಭಾವಶಾಲಿ; ‘ಓಂ ನಮಃ ಶಿವಾಯ’ ಮಂತ್ರದ ರಹಸ್ಯ ಇಲ್ಲಿದೆ – Kannada News | Discover Om Namah Shivaya Mantra: Its Significance, Chanting and Benefits

ಭಾರತೀಯ ಸಂಸ್ಕೃತಿಯಲ್ಲಿ, ಆಧ್ಯಾತ್ಮಿಕ ಸಾಧನೆಯಲ್ಲಿ ಮಂತ್ರಗಳಿಗೆ ಅತ್ಯುನ್ನತ ಸ್ಥಾನವಿದೆ. ಮಂತ್ರೋಚ್ಚಾರಣೆಯಿಂದ ಹೊರಹೊಮ್ಮುವ ಶಬ್ದ ತರಂಗಗಳು ದೇಹದಲ್ಲಿ ಮತ್ತು ಸುಪ್ತ ಮನಸ್ಸಿನಲ್ಲಿ ಅದ್ಭುತವಾದ ಸಕಾರಾತ್ಮಕ ಶಕ್ತಿಯನ್ನು ತುಂಬುತ್ತವೆ ಎಂದು ಶಾಸ್ತ್ರಗಳು ಸಾರುತ್ತವೆ. ಶಿವನ ಆರಾಧಕರು ಮತ್ತು ಗೃಹಸ್ಥರು ನಿತ್ಯವೂ ಜಪಿಸುವ ಪರಮ ಪವಿತ್ರವಾದ ಮಹಾಮಂತ್ರವೇ ‘ಓಂ ನಮಃ ಶಿವಾಯ’. ಸಾಮಾನ್ಯವಾಗಿ ಕಠಿಣವಾದ ಮಂತ್ರ ಸಾಧನೆಗಳಿಗೆ ನಿರ್ದಿಷ್ಟ ತಿಥಿ, ನಕ್ಷತ್ರ, ಶುಭ ಮುಹೂರ್ತ ಅಥವಾ ಕಠೋರವಾದ ನಿಯಮಗಳ ಅಗತ್ಯವಿರುತ್ತದೆ. ಆದರೆ ಈ ಶಿವ ಮಂತ್ರಕ್ಕೆ ಅಂತಹ ಯಾವುದೇ ಸಂಕೀರ್ಣ ನಿಯಮಗಳಿಲ್ಲದಿರುವುದೇ…

Read More

‘ಅಪ್ಪನೇ ಗರ್ಭಿಣಿ ಮಗಳನ್ನು ಕುರಿ ಕಡಿದಂಗೆ ಕಡಿದವ್ನೆ’: ಮರ್ಯಾದಾ ಹತ್ಯೆಯ ಭೀಕರತೆ ಬಿಚ್ಚಿಟ್ಟ ಯುವಕನ ದೊಡ್ಡಮ್ಮ – Kannada News | Dharwad Honour Killing Case: Victim’s Relative Reveals crime Details, Sparks Outrage

ಹುಬ್ಬಳ್ಳಿ, ಡಿಸೆಂಬರ್ 22: ಹುಬ್ಬಳ್ಳಿ ತಾಲೂಕಿನ ಇನಾಂ ವೀರಾಪುರ ಗ್ರಾಮದಲ್ಲಿ ನಡೆದ ಮರ್ಯಾದಾ ಹತ್ಯೆ ಇಡೀ ಧಾರವಾಡ ಜಿಲ್ಲೆಯನ್ನೇ ಬೆಚ್ಚಿಬೀಳಿಸಿದೆ. ದಲಿತ ಯುವಕನನ್ನು ಮದುವೆಯಾಗಿದ್ದಕ್ಕೆ 7 ತಿಂಗಳ ಗರ್ಭಿಣಿಯಾಗಿದ್ದ ಮಗಳನ್ನು ತಂದೆಯೇ ಕೊಲೆ ಮಾಡಿದ ಘಟನೆ ನಡೆದಿದೆ. ಘಟನೆಯ ಭೀಕರತೆಯನ್ನು ಯುವಕ ವಿವೇಕಾನಂದನ ದೊಡ್ಡಮ್ಮ ಜಯಶ್ರೀ ಬಹಿರಂಗಪಡಿಸಿದ್ದು, ಆ ಹುಡುಗಿಯನ್ನು ನಮ್ಮ ಹುಡುಗ ಮದುವೆಯಾಗಿದ್ದು ತಪ್ಪೇ? ನಮ್ಮ ಮಕ್ಕಳನ್ನು ಹೊಡೆದುಹಾಕಿದ್ದಾರೆ. ಮದುವೆಯಾಗಿ ತಿಂಗಳುಗಳೇ ಆಗಿದ್ದವು. ಹುಡುಗಿ ಏಳು ತಿಂಗಳ ಗರ್ಭಿಣಿಯಾಗಿದ್ದಳು ಎಂದು ಕಣ್ಣೀರು ಹಾಕಿದ್ದಾರೆ. ಅವರು ‘‘ದೊಡ್ಡ…

Read More

ಮಂಡ್ಯ: ತ್ರಿವಳಿ ಮಕ್ಕಳಿಗೆ ಜನ್ಮ ನೀಡಿದ ಮುಸ್ಲಿಂ ದಂಪತಿ! – Kannada News | Mandya: Muslim Couple Welcomes Triplets ,1 Girl, 2 Boys in Akkihebbalu

ಮಂಡ್ಯ, ಫೆಬ್ರವರಿ 23: ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಅಕ್ಕಿಹೆಬ್ಬಾಳು ಗ್ರಾಮದ ಅಪ್ತಾಬ್ ಮತ್ತು ಆರೀಫಾ ಎಂಬ ಮುಸ್ಲಿಂ ದಂಪತಿಗೆ ತ್ರಿವಳಿ ಮಕ್ಕಳ ಜನನವಾಗಿದೆ. ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಒಂದು ಹೆಣ್ಣು ಮತ್ತು ಎರಡು ಗಂಡು ಮಕ್ಕಳಿಗೆ ಆರೀಫಾ ಭಾನು ಜನ್ಮ ನೀಡಿದ್ದು, ವೈದ್ಯರ ಆರೈಕೆಯಿಂದ ತಾಯಿ ಮತ್ತು ಮೂವರು ಶಿಶುಗಳು ಸುರಕ್ಷಿತವಾಗಿದ್ದಾರೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ. ಸಾಮಾನ್ಯವಾಗಿ ಒಂದು ಮಗುವನ್ನು ಸಾಕುವುದೇ ಕಷ್ಟಕರ ಎನಿಸುವ ಈ ದಿನಗಳಲ್ಲಿ, ದಂಪತಿಗೆ ಒಂದೇ ಬಾರಿಗೆ ಮೂರು ಮಕ್ಕಳಾಗಿದ್ದು, ಕುಟುಂಬಸ್ಥರಲ್ಲಿ…

Read More