ಹೆಣದ ಮೇಲೂ ಹಣ: ಪೆದ್ದರಂತೆ ಫೋನ್ಪೇನಲ್ಲೇ ಲಂಚ ಪಡೆದು ಸಿಕ್ಕಿಬಿದ್ದ ಮೂವರು ಸಿಬ್ಬಂದಿ ವಜಾ – Kannada News | KIMS Hubballi Staff Sacked for Taking Money from Patients’ Families After TV Report
ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆImage Credit source: tv9 ಹುಬ್ಬಳ್ಳಿ, ಫೆಬ್ರವರಿ 12: ಉತ್ತರ ಕರ್ನಾಟಕದ ಬಡವರ ಸಂಜೀವನಿ ಎಂದೇ ಖ್ಯಾತಿ ಪಡೆದಿರುವ ಹುಬ್ಬಳ್ಳಿ ಕಿಮ್ಸ್ (KIMS Hospital) ಆಸ್ಪತ್ರೆಯಲ್ಲಿ ರೋಗಿಗಳು ಮತ್ತು ಅವರ ಕುಟುಂಬದವರಿಂದ ಹಣ ವಸೂಲಿ ಮಾಡುತ್ತಿದ್ದ ಆರೋಪದಲ್ಲಿ ಮೂವರು ಸಿಬ್ಬಂದಿಯ ವಿರುದ್ಧ ಗಂಭೀರ ಕ್ರಮ ಕೈಗೊಳ್ಳಲಾಗಿದೆ. ‘ಟಿವಿ9’ ವರದಿ ಮಾಡಿದ ಬೆನ್ನಲ್ಲೇ ವೈದ್ಯಕೀಯ ಶಿಕ್ಷಣ ಇಲಾಖೆ ಎಚ್ಚೆತ್ತುಕೊಂಡಿದ್ದು, ಹಣ ಪಡೆದ ಮೂವರು ಸಿಬ್ಬಂದಿಯನ್ನು ಕೆಲಸದಿಂದ ವಜಾ ಮಾಡಲಾಗಿದೆ. ಸರ್ಕಾರಿ ಆಸ್ಪತ್ರೆಯಾಗಿದ್ದರೂ, ಕೆಲ ಸ್ವಚ್ಛತಾ ಹಾಗೂ…