Headlines

ಲಕ್ಕುಂಡಿ ಉತ್ಖನನ ಸ್ಥಳದಲ್ಲಿ ಸ್ವಾಮೀಜಿ ಹೈಡ್ರಾಮಾ: ಗ್ರಾಮಸ್ಥರಿಗೆ ಬೆದರಿ ಓಡಿದ ಸ್ವಯಂಘೋಷಿತ ಪವಾಡ ಪುರುಷ! – Kannada News | Swamiji Creates Disturbance at Lakkundi Excavation Site, Flees After Locals Object

ಗದಗ, ಜನವರಿ 19: ಲಕ್ಕುಂಡಿಯಲ್ಲಿ ಇಂದು ನಾಲ್ಕನೇ ದಿನದ ಉತ್ಖನನ ನಡೆಯುತ್ತಿದ್ದು, ಗ್ರಾಮಕ್ಕೆ ಬಂದ ಸ್ವಾಮೀಜಿಯೊಬ್ಬರು ಫುಲ್​​ ಹೈಡ್ರಾಮಾ ನಡೆಸಿದ ಪ್ರಸಂಗ ನಡೆದಿದೆ. ತಾರಾಣಿಚೆನ್ನಮ್ಮ ವಂಶಸ್ಥ ಎಂದು ಪರಿಚಯಿಸಿಕೊಂಡಿರುವ ಎಸ್. ಸಿ. ಹಿರೇಮಠ ಹೆಸರಿನ ಸ್ವಾಮೀಜಿ, ತಾನೊಬ್ಬ ಪವಾಡ ಪುರುಷ. ತಾನು ನಿಂತ ಜಾಗದಲ್ಲಿ ಸಾವಿರ ಕೆಜಿ ಚಾಮುಂಡಿ‌ ಮೂರ್ತಿ ಇದೆ ಎಂದು ಕೈಯಲ್ಲಿ ಗಜಲಿಂಬೆ ಹಿಡಿದುಕೊಂಡು ಡ್ರಾಮಾ ಮಾಡಿದ್ದಾರೆ. ಆರಂಭದಲ್ಲಿ ಎಲ್ಲವನ್ನೂ ತೀವ್ರ ಕುತೂಹಲದಲ್ಲಿ ವೀಕ್ಷಿಸಿದ ಗ್ರಾಮಸ್ಥರು ಬಳಿಕ ಸ್ವಯಂಘೋಷಿತ ಪವಾಡ ಪುರುಷನನ್ನು ಬೆನ್ನಟ್ಟಿ ಓಡಿಸಿದ್ದಾರೆ….

Read More

ಒತ್ತಡದಿಂದ ದೇಹದಲ್ಲಿ ಎಷ್ಟೆಲ್ಲಾ ಬದಲಾವಣೆಯಾಗುತ್ತೆ ಗೊತ್ತಾ? ತಿಳಿದ್ರೆ ಶಾಕ್ ಆಗ್ತೀರಾ! – Kannada News | Stress: The Silent Health Threat

ಒತ್ತಡ (Stress) ಇಲ್ಲದ ವ್ಯಕ್ತಿ ಇರಲು ಸಾಧ್ಯವೇ… ಎಂಬ ಪ್ರಶ್ನೆಗೆ ಸಹಜವಾಗಿ ಇಲ್ಲ ಎಂಬ ಉತ್ತರವೇ ಬರುತ್ತೆ. ಹಣಕಾಸಿನ ತೊಂದರೆ, ಕಚೇರಿ ಕೆಲಸ, ಕುಟುಂಬದ ಜವಾಬ್ದಾರಿ ಹೀಗೆ ನಾನಾ ರೀತಿಯ ಕಾರಣಗಳು ವ್ಯಕ್ತಿಯನ್ನು ಒಳಗಿನಿಂದ ಹಿಂಡಿ ಹಿಪ್ಪೆ ಮಾಡಿಬಿಡಬಹುದು, ಆದರೆ ನಿಮಗೆ ಗೊತ್ತಾ… ನಿಮಗೆ ತಿಳಿದೋ ತಿಳಿಯದೆಯೋ ಅನುಭವಿಸುವ ಒತ್ತಡ ಅಕಾಲಿಕ ವಯಸ್ಸಾಗುವಿಕೆಗೆ ಕಾರಣವಾಗುತ್ತದೆ. ಹೌದು, ಅತಿಯಾಗಿ ಯೋಚಿಸುವುದರಿಂದ ಕೂದಲು ಉದುರುವಿಕೆಯಿಂದ ಹಿಡಿದು ಹೃದಯ ಸಂಬಂಧಿ ಕಾಯಿಲೆಗಳವರೆಗೆ ಅನೇಕ ರೀತಿಯ ಸಮಸ್ಯೆಗಳಿಗೆ ಕಾರಣವಾಗಬಹುದು. ಅಷ್ಟೇ ಅಲ್ಲ, ಒತ್ತಡಕ್ಕೆ…

Read More

ಸಂಖ್ಯಾಶಾಸ್ತ್ರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 4, 5, 6ರ ಮಾರ್ಚ್ 1ರ ದಿನಭವಿಷ್ಯ – Kannada News | March 01 Sunday Horoscope: Birth Numbers 4,5,6 Daily Forecast and Life Advice

ಅಶಕ್ತರಿಗೆ ಅನ್ನದಾನ ಮಾಡುವುದರಿಂದ, ಅದರಲ್ಲೂ ಕನಿಷ್ಠ ಒಬ್ಬರಿಗೆ ಊಟ ಹಾಕುವುದರಿಂದ ಬಾಕಿ ಇರುವಂಥ ಹಣವನ್ನು ವಸೂಲಿ ಮಾಡುವುದಕ್ಕೆ ಮಾರ್ಗೋಪಾಯಗಳು ಗೋಚರ ಆಗಲಿವೆ. ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4): ಲಾರಿ ಅಥವಾ ಭಾರೀ ವಾಹನಗಳ ಚಾಲನೆ ಮಾಡುವಂಥವರಿಗೆ ಒಂದಲ್ಲ ಒಂದು ರೀತಿ ಒತ್ತಡ ಅನುಭವಕ್ಕೆ ಬರಲಿದೆ. ನೀವು ತೋರಿದ ನಿರ್ಲಕ್ಷ್ಯದಿಂದ ನಷ್ಟ ಕಾಣುವಂತಾಯಿತು ಎಂದು ಕೆಲವರು ಆಕ್ಷೇಪ ವ್ಯಕ್ತಪಡಿಸುತ್ತಾರೆ. ಆದರೆ ಇಂಥ ಮಾತುಗಳಿಂದ ನೀವು ಆತ್ಮವಿಶ್ವಾಸ ಕಳೆದುಕೊಳ್ಳದಿರುವುದು…

Read More

RRB Recruitment 2026: ರೈಲ್ವೆ ಇಲಾಖೆಯಲ್ಲಿ ನೇಮಕಾತಿ; 11,127 ಸಹಾಯಕ ಲೋಕೋ ಪೈಲಟ್ ಹುದ್ದೆಗೆ ಅರ್ಜಿ ಆಹ್ವಾನ – Kannada News | RRB ALP Recruitment 2026: 11,127 Assistant Loco Pilot Posts. Apply Now!

ರೈಲ್ವೆ ಇಲಾಖೆಯಲ್ಲಿ ಬೃಹತ್ ನೇಮಕಾತಿ ಭಾರತೀಯ ರೈಲ್ವೆ ಸಚಿವಾಲಯದ ಅಡಿಯಲ್ಲಿ ಬರುವ ರೈಲ್ವೆ ನೇಮಕಾತಿ ಮಂಡಳಿಯು (RRB) ದೇಶಾದ್ಯಂತ ಖಾಲಿ ಇರುವ ಸಹಾಯಕ ಲೋಕೋ ಪೈಲಟ್ (ALP) ಹುದ್ದೆಗಳ ಭರ್ತಿಗೆ ಅಧಿಕೃತ ಅಧಿಸೂಚನೆ ಹೊರಡಿಸಿದೆ. ಈ ನೇಮಕಾತಿ ಪ್ರಕ್ರಿಯೆಯ ಮೂಲಕ ಒಟ್ಟು 11,127 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದ್ದು, ಬೆಂಗಳೂರು, ಮುಂಬೈ, ಚೆನ್ನೈ, ಸಿಕಂದರಾಬಾದ್ ಸೇರಿದಂತೆ ದೇಶದ ಪ್ರಮುಖ ರೈಲ್ವೆ ವಲಯಗಳಲ್ಲಿ ಕೆಲಸ ಮಾಡಲು ಅರ್ಹ ಅಭ್ಯರ್ಥಿಗಳಿಗೆ ಸುವರ್ಣ ಅವಕಾಶ ಲಭಿಸಿದೆ. ಶೈಕ್ಷಣಿಕ ಅರ್ಹತೆ ಮತ್ತು ವಯೋಮಿತಿ: ಈ…

Read More

ಕೆಪಿಸಿಸಿ ಕಚೇರಿಯಲ್ಲೇ ಮೊಳಗಿತು ‘ಮುಂದಿನ ಸಿಎಂ ಡಿಕೆ ಶಿವಕುಮಾರ್’ ಘೋಷಣೆ – Kannada News | Next CM DK Shivakumar Slogans Echo at KPCC Office Bangalore Amid Leadership Buzz in Karnataka Congress

ಬೆಂಗಳೂರು, ಜನವರಿ 8: ಬೆಂಗಳೂರಿನ ಕೆಪಿಸಿಸಿ ಕಚೇರಿ ಮುಂದೆ ಡಿಸಿಎಂ ಡಿಕೆ ಶಿವಕುಮಾರ್ ಅವರು ಮುಂದಿನ ಮುಖ್ಯಮಂತ್ರಿ ಎಂಬ ಘೋಷಣೆಗಳು ಮೊಳಗಿವೆ. ಕಾರ್ಯಕರ್ತರು, ‘‘ಮುಂದಿನ ಸಿಎಂ ಡಿಕೆ ಶಿವಕುಮಾರ್ ಸಾಹೇಬ್ರಿಗೆ ಜೈ’’ ಎಂದು ಘೋಷಣೆ ಕೂಗಿ ಜೈಕಾರ ಹಾಕಿದ್ದಾರೆ. ಆದರೆ, ಕಾಂಗ್ರೆಸ್ ಹೈಕಮಾಂಡ್ ಡಿಕೆ ಶಿವಕುಮಾರ್ ಅವರನ್ನು ಅಸ್ಸಾಂ ಚುನಾವಣೆಗೆ ಹಿರಿಯ ವೀಕ್ಷಕರನ್ನಾಗಿ ನೇಮಿಸಿದೆ. ಈ ನಿರ್ಧಾರ, ನಾಯಕತ್ವ ಬದಲಾವಣೆಯ ಕುರಿತ ಚರ್ಚೆಗಳಿಗೆ ಪಂಚರಾಜ್ಯಗಳ ಚುನಾವಣೆ ಮುಗಿಯುವವರೆಗೆ ವಿರಾಮ ನೀಡುವ ಪರೋಕ್ಷ ಸಂದೇಶ ಎಂದು ಕಾಂಗ್ರೆಸ್ ವಲಯದಲ್ಲಿ…

Read More

ಮಕ್ಕಳ ಮುದ್ದಾದ ಪ್ರಶ್ನೆಗೆ ಗಿಲ್ಲಿಯ ತಮಾಷೆಯ ಉತ್ತರ: ವಿಡಿಯೋ – Kannada News | Bigg Boss Kannada Winner Gilli Nata attended a school function

ಬಿಗ್​​ಬಾಸ್ (Bigg Boss) ವಿನ್ನರ್ ಆದ ಬಳಿಕ ಗಿಲ್ಲಿ ನಟ ಅವರಿಗೆ ಬಿಡುವೇ ಇಲ್ಲದಾಗಿದೆ. ರಾಜ್ಯದಾದ್ಯಂತ ಸಂಚರಿಸುತ್ತಿರುವ ಗಿಲ್ಲಿ ವಿವಿಧ ಕಾರ್ಯಕ್ರಮಗಳು, ಉತ್ಸವಗಳಿಗೆ ಅತಿಥಿಯಾಗಿ ಹಾಜರಾಗುತ್ತಿದ್ದಾರೆ. ಇತ್ತೀಚೆಗಷ್ಟೆ ಗಿಲ್ಲಿ ಶಾಲಾ ಕಾರ್ಯಕ್ರಮವೊಂದಕ್ಕೆ ಅತಿಥಿಯಾಗಿ ಸಹ ಹೋಗಿದ್ದರು. ಈ ವೇಳೆ ವೇದಿಕೆ ಮೇಲೆ ಮಾತನಾಡಿದ ಗಿಲ್ಲಿ ನಟ ತಮ್ಮ ಮಾತುಗಳಿಂದ ನೆರೆದಿದ್ದವರನ್ನು ರಂಜಿಸಿದರು. ಇದೇ ವೇಳೆ ಕೆಲವು ಪುಟ್ಟ ಮಕ್ಕಳು ಗಿಲ್ಲಿಗೆ ಕೆಲವು ಪ್ರಶ್ನೆಗಳನ್ನು ಸಹ ಕೇಳಿದರು. ಗಿಲ್ಲಿ ಕೊಟ್ಟ ಉತ್ತರ ಏನು? ವಿಡಿಯೋ ನೋಡಿ ನೀವೇ ತಿಳಿಯಿರಿ……

Read More

Video: ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ; ವಿಡಿಯೋ ವೈರಲ್ – Kannada News | Viral Video: Burqa Woman’s Chili Powder Robbery Bid at Jewelry Store Caught on CCTV

ಬುರ್ಖಾ ಧರಿಸಿ ಗ್ರಾಹಕಿಯಂತೆ ಚಿನ್ನದ ಅಂಗಡಿಗೆ ನುಗ್ಗಿದ ಮಹಿಳೆಯೊಬ್ಬಳು, ಮಾಲೀಕ ಮತ್ತು ಸಿಬ್ಬಂದಿಯ ಕಣ್ಣಿಗೆ ಖಾರಪುಡಿ ಎರಚಿ ದರೋಡೆಗೆ ಯತ್ನಿಸಿದ ಘಟನೆ ನಡೆದಿದೆ. ಆಭರಣಗಳನ್ನು ನೋಡುವ ನೆಪದಲ್ಲಿ ಹೊಂಚು ಹಾಕಿದ್ದ ಈ ಕಿರಾತಕಿ, ತನ್ನ ಬಳಿಯಿದ್ದ ಖಾರದಪುಡಿಯನ್ನು ಅವರ ಕಣ್ಣಿಗೆ ಎಸೆದು ಆಭರಣಗಳನ್ನು ಎಗರಿಸಲು ಯತ್ನಿಸಿದ್ದಾಳೆ. ಈ ಇಡೀ ದರೋಡೆ ಯತ್ನದ ದೃಶ್ಯಾವಳಿಗಳು ಅಂಗಡಿಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗುತ್ತಿದೆ. ಪೊಲೀಸರು ಸಿಸಿಟಿವಿ ಆಧಾರದ ಮೇಲೆ ತನಿಖೆ ಚುರುಕುಗೊಳಿಸಿದ್ದಾರೆ ಎಂದು ವರದಿಯಾಗಿದೆ. ಇದನ್ನೂ…

Read More

Ugadi 2026: ಕರ್ನಾಟಕದ ಜನತೆಗೆ ಕನ್ನಡದಲ್ಲೇ ಶುಭ ಕೋರಿದ ಪ್ರಧಾನಿ ಮೋದಿ; ಹೊಸ ವರ್ಷಕ್ಕೆ ನಮೋ ಹಾರೈಕೆ!

ದೆಹಲಿ, ಮಾ.19: ಚಾಂದ್ರಮಾನ ಯುಗಾದಿ ಮತ್ತು ಹೊಸ ವರ್ಷದ ಈ ಶುಭ ಸಂದರ್ಭದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ದೇಶವಾಸಿಗಳಿಗೆ ಹೃತ್ಪೂರ್ವಕ ಶುಭಾಶಯಗಳನ್ನು ತಿಳಿಸಿದ್ದಾರೆ. ವಸಂತ ಋತುವಿನ ಆಗಮನವು ಹೊಸ ಚೈತನ್ಯ ಮತ್ತು ಸಾಧ್ಯತೆಗಳನ್ನು ಹೊತ್ತು ತರಲಿ ಎಂದು ಅವರು ಹಾರೈಸಿದ್ದಾರೆ. “ಪವಿತ್ರ ಯುಗಾದಿಯ ಸಂದರ್ಭದಲ್ಲಿ ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ಸುಖಮಯ ಹೊಸ ವರ್ಷದ ಶುಭಾಶಯಗಳು” ಎಂದು ಪ್ರಧಾನಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ವಸಂತ ಕಾಲದ ಹಸಿರು, ಹೂವುಗಳ ಸುಗಂಧ ಮತ್ತು ಹಣ್ಣುಗಳ ಆಗಮನವು ಹೊಸ…

Read More

ಎಣ್ಣೆ ಪ್ರಿಯರೇ ಎಚ್ಚರ: ಅಧಿಕಾರಿಗಳ ನೇತೃತ್ವದಲ್ಲೇ ನಡೀತಿದೆ ಅವಧಿ ಮೀರಿದ ಮದ್ಯ ಮಾರಾಟ!

ರಾಮನಗರ, ಮಾರ್ಚ್​​ 29: ಮದ್ಯ ಮಾರಾಟ ವಿಚಾರವಾಗಿ ಅಕ್ರಮಗಳನ್ನು ತಡೆಯಬೇಕಿದ್ದ ಅಧಿಕಾರಿಗಳೇ ಕಳ್ಳಾಟ ಆಡುತ್ತಿರುವ ಪ್ರಸಂಗವೊಂದು ಬೆಂಗಳೂರು ದಕ್ಷಿಣ ಜಿಲ್ಲೆ ರಾಮನಗರದಲ್ಲಿ ಬಯಲಾಗಿದೆ. ಹಣದಾಸೆಗೆ ಅಧಿಕಾರಿಗಳಿಂದಲೇ ಅವಧಿ ಮೀರಿದ ಮದ್ಯ ಮಾರಾಟ ನಡೆಯುತ್ತಿರೋದು, ಐಜೂರು ಠಾಣೆ ಪೊಲೀಸರ ಕಾರ್ಯಾಚರಣೆ ವೇಳೆ ಬೆಳಕಿಗೆ ಬಂದಿದೆ. ಕರ್ನಾಟಕ ರಾಜ್ಯ ಪಾನೀಯ ನಿಗಮದ ಅಧಿಕಾರಿಗಳು ಹಾಗೂ ಸಿಬ್ಬಂದಿ ಜಪ್ತಿ ಮಾಡಿದ ಅವಧಿಮೀರಿದ ಮದ್ಯ ಮಾರುತ್ತಿದ್ದು, ನಿಗಮದ ಸೂಪರ್ ವೈಸರ್ ಮನೆಯಲ್ಲಿ ಇವು ಪತ್ತೆಯಾಗಿದೆ. ಸುರೇಶ್ ನಿವಾಸದಲ್ಲಿ ವಿವಿಧ ಕಂಪನಿಗಳ 20 ಬಾಕ್ಸ್​…

Read More

ಟೈರ್ ಸ್ಪೋಟಗೊಂಡು ಮನೆಯ ಆವರಣಕ್ಕೆ ಹಾರಿ ಬಂದು ಬಿದ್ದ ಕಾರು, ಭಯಾನಕ ವಿಡಿಯೋ ವೈರಲ್ – Kannada News | Marakada Car Accident: Tire Blast Leads to Crash, Occupants Saved on CCTV

ಮಂಗಳೂರು, ಜ.3: ಚಲಿಸುತ್ತಿದ್ದ ಕಾರಿನ ಟೈರ್ ಸ್ಫೋಟಗೊಂಡು ನಿಯಂತ್ರಣ ತಪ್ಪಿ ಮನೆಯೊಂದರ ಆವರಣ ಗೋಡೆಗೆ ಡಿಕ್ಕಿಯೊಡೆದಿದೆ.ಕಾರು ಸಿನಿಮೀಯ ರೀತಿಯಲ್ಲಿ‌ ನುಗ್ಗಿ ಬಂದಿದೆ. ಘಟನೆಯ ಭಯಾನಕ ದೃಶ್ಯ ಸಿ.ಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಮಂಗಳೂರು ನಗರ ಹೊರವಲಯದ ಮರಕಡ ಎಂಬಲ್ಲಿ ಈ ಘಟನೆ ನಡೆದಿದೆ.ಕಾರಿನಲ್ಲಿದ್ದವರು ಪವಾಡ ಸಾದೃಶ್ಯವಾಗಿ ಪಾರಾಗಿದ್ದಾರೆ ಎಂದು ಹೇಳಲಾಗಿದೆ. ತಕ್ಷಣ ಸ್ಥಳೀಯರು ಬಂದು ಕಾರಿನಲ್ಲಿದ್ದವರನ್ನು ಕಾಪಾಡಿದ್ದಾರೆ. ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ Source link

Read More