ದತ್ತಪೀಠದಲ್ಲಿ ಹೊಸ ವಿವಾದ: ‘ಕಲಮೆ ತಯ್ಯಬಾ’ ಆಚರಣೆಗೆ ಹಿಂದೂ ಸಂಘಟನೆಗಳ ಆಕ್ರೋಶ – Kannada News | Chikmagaluru Datta Peeta: New Controversy Over Kalame Tayyaba Practice and Mujavar Rules
ಚಿಕ್ಕಮಗಳೂರು, ಫೆಬ್ರವರಿ 5: ಚಿಕ್ಕಮಗಳೂರಿನ ಇನಾಂ ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾ ದತ್ತಪೀಠವು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದೆ. ದತ್ತಪೀಠದ ಗುಹೆಯೊಳಗೆ ಜನವರಿ 23ರಂದು ‘ಕಲಮೆ ತಯ್ಯಬಾ’ ಎಂಬ ಹೊಸ ಆಚರಣೆ ನಡೆಸಲಾಗಿದೆ ಎಂದು ಹಿಂದೂ ಸಂಘಟನೆಗಳು ಆರೋಪಿಸಿವೆ. ಇದು ಸುಪ್ರೀಂ ಕೋರ್ಟ್‌ನ ಆದೇಶಗಳನ್ನು ಉಲ್ಲಂಘಿಸುತ್ತದೆ ಎಂದು ಸಂಘಟನೆಗಳು ಹೇಳಿವೆ. ಹಿಂದೂಗಳಿಗೆ ಗುಹೆಯ ಮುಂಭಾಗ ಹೋಮ ಮಾಡಲು ಅವಕಾಶ ನೀಡದ ಜಿಲ್ಲಾಡಳಿತವು, ಹೊಸ ಆಚರಣೆಗೆ ಹೇಗೆ ಅವಕಾಶ ನೀಡಿದೆ ಎಂದು ವಿಶ್ವ ಹಿಂದೂ ಪರಿಷತ್‌ನ ಜಿಲ್ಲಾ ಪ್ರಧಾನ…