Headlines

RCB ಫ್ಯಾನ್ಸ್ ಬಳಗ ಸೇರಿದ ಸ್ಟಾರ್ ಅಥ್ಲೀಟ್; ಯಾರಿದು ಹೊಸ ಅಭಿಮಾನಿ? – Kannada News | Usain Bolt Joins RCB Fan Base: Fastest Man Backs Royal Challengers Bangalore IPL

ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯ ಜನಪ್ರಿಯತೆ ಕೇವಲ ಭಾರತಕ್ಕೆ ಮಾತ್ರ ಸೀಮಿತವಾಗಿಲ್ಲ. ವಿಶ್ವಾದ್ಯಂತ ಅವರಿಗೆ ಅಭಿಮಾನಿಗಳಿದ್ದಾರೆ. ಆಸ್ಟ್ರೇಲಿಯಾ, ಸೌತ್ ಆಫ್ರಿಕಾ ಸೇರಿದಂತೆ ಅನೇಕ ದೇಶದ ಜನರು ಆಸ್​​​ರಿಬಿ ಜೆರ್ಸಿ ಹಾಕಿ ಪೋಸ್ ಕೊಟ್ಟ ಉದಾಹರಣೆ ಇದೆ. Source link

Read More

ಇದು ವಿನಾಶದ ಕಥೆಯಲ್ಲ,ಭಾರತದ ಸ್ವಾಭಿಮಾನದ ಗಾಥೆ, ಸೋಮನಾಥ ದೇವಾಲಯ ದಾಳಿಯ ಬಗ್ಗೆ ಮೋದಿ ಭಾವನಾತ್ಮಕ ಬ್ಲಾಗ್ – Kannada News | PM Modi Highlights Somnath Temple’s Millennium Long Legacy

ನವದೆಹಲಿ, ಜನವರಿ 05: ಸೋಮನಾಥ ದೇವಾಲಯ(Somnath Temple) ದ ಮೇಲಿನ ದಾಳಿಯು ಇತಿಹಾಸದ ಅತ್ಯಂತ ದೊಡ್ಡ ದುರಂತಗಳಲ್ಲಿ ಒಂದಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಬ್ಲಾಗ್​ನಲ್ಲಿ ಬರೆದಿದ್ದಾರೆ. ಮೊಹಮ್ಮದ್ ಘಜ್ನಿ ಲೂಟಿ ಮಾಡಿ ಹೊರಟುಹೋದ, ಆದರೆ ಅವನಿಗೆ ಸೋಮನಾಥನ ಮೇಲಿನ ನಮ್ಮ ಭಕ್ತಿಯನ್ನು ಕಸಿದುಕೊಳ್ಳಲು ಸಾಧ್ಯವಾಗಲಿಲ್ಲ. ಗುಜರಾತ್‌ನ ಪ್ರಭಾಸ್ ಪಟನ್‌ನಲ್ಲಿರುವ ಸೋಮನಾಥ ದೇವಾಲಯವು ಭಾರತೀಯ ನಂಬಿಕೆ ಮತ್ತು ನಾಗರಿಕತೆಯ ಶಾಶ್ವತ ಸಂಕೇತವಾಗಿದೆ. ಈ ದೇವಾಲಯವು ಪದೇ ಪದೇ ವಿದೇಶಿ ಆಕ್ರಮಣಗಳು ಮತ್ತು ವಿನಾಶಗಳನ್ನು ಎದುರಿಸಿದೆ, ಆದರೆ ಪ್ರತಿ…

Read More

ತರಕಾರಿ ಮಾರಿ ಪ್ರಭುಲಿಂಗ ದೇವರಿಗೆ 16 ಲಕ್ಷ ರೂ. ಬೆಳ್ಳಿ ಬಾಗಿಲು ಮಾಡಿಸಿದ್ದ ದಾನಜ್ಜಿ ಅಣ್ಣನ ಮಕ್ಕಳಿಂದಲೇ ಬರ್ಬರ ಹತ್ಯೆ – Kannada News | Philanthropist Who Donated Rs 16 Lakh Silver Door to Prabhulinga Temple Brutally Murdered by Relatives in Bagalkot

ದಾನಜ್ಜಿ ಅಲಿಯಾಸ್ ಚಂದ್ರವ್ವ ನೀಲಗಿ ಬಾಗಲಕೋಟೆ, ಜನವರಿ 15: ಬಾಗಲಕೋಟೆ (Bagalkot) ಜಿಲ್ಲೆಯ ಜಗದಾಳ ಗ್ರಾಮದಲ್ಲಿ 80 ವರ್ಷದ ವೃದ್ಧೆ ದಾನಜ್ಜಿ ಅಲಿಯಾಸ್ ಚಂದ್ರವ್ವ ನೀಲಗಿ ಅವರನ್ನು ಅಣ್ಣನ ಮಕ್ಕಳೇ ಆಸ್ತಿಗಾಗಿ ಹತ್ಯೆ ಮಾಡಿದ್ದಾರೆ. 11 ಎಕರೆ ಆಸ್ತಿಗಾಗಿ ಈ ಅಮಾನವೀಯ ಕೃತ್ಯ ಎಸಗಲಾಗಿದೆ ಎಂಬುದು ತಿಳಿದುಬಂದಿದೆ. ಬಾಗಲಕೋಟೆ ಜಿಲ್ಲೆ ತೇರದಾಳ ಮತ್ತು ರಬಕವಿಬನಹಟ್ಟಿ ಭಾಗದಲ್ಲಿ ದಾನಜ್ಜಿ ಎಂದೇ ಹೆಸರಾಗಿದ್ದ ಚಂದ್ರವ್ವ ನೀಲಗಿ ಅವರ ಕೊಲೆ ಸ್ಥಳೀರನ್ನು ಆಘಾತಕ್ಕೀಡು ಮಾಡಿದೆ. ತರಕಾರಿ ಮಾರಟ ಮಾಡಿ ಜೀವನ, ದಾನದಿಂದಲೇ…

Read More

ರಾಜ್​ಕುಮಾರ್ ಅಭಿಮಾನಿಗಳ ಆಕ್ರೋಶಕ್ಕೆ ಮಣಿದ ಚೇತನ್ ಅಹಿಂಸ, ಕ್ಷಮೆ ಯಾಚನೆ – Kannada News | Chetan Ahimsa asks apology after Dr Rajkumar fans express anger

ಡಾ ರಾಜ್​ಕುಮಾರ್ (Rajkumar) ಅವರ ಸಮಾಧಿಗೆ 2.50 ಎಕರೆ ಸ್ಥಳ ನೀಡಿರುವ ಸರ್ಕಾರದ ನಿರ್ಧಾರವನ್ನು ಟೀಕೆ ಮಾಡಿ ನಟ, ಸಾಮಾಜಿಕ ಕಾರ್ಯಕರ್ತ ಚೇತನ್ ಅಹಿಂಸ ನಿನ್ನೆ ಹಾಕಿದ್ದ ಪೋಸ್ಟ್​​ಗೆ ರಾಜ್​ಕುಮಾರ್ ಅಭಿಮಾನಿಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಇಂದು (ಏಪ್ರಿಲ್ 25) ಹಲವಾರು ಕಡೆ ರಾಜ್​ಕುಮಾರ್ ಅಭಿಮಾನಿಗಳು ನಟ ಚೇತನ್ ಅಹಿಂಸ ವಿರುದ್ಧ ದೂರುಗಳನ್ನು ದಾಖಲಿಸಿದ್ದರು. ಸಾರಾ ಗೋವಿಂದು ಸೇರಿದಂತೆ ಇನ್ನೂ ಕೆಲವು ಹಿರಿಯರು ಚೇತನ್ ಅಹಿಂಸ ವಿರುದ್ಧ ಕಟು ವಾಗ್ದಾಳಿ ಮಾಡಿದ್ದರ ಜೊತೆಗೆ ಚೇತನ್ ಅವರ ಗಡಿಪಾರಿಗೆ…

Read More

The Wedding of VIROSH: ವಿವಾಹಕ್ಕೂ ಮೊದಲು ಸಖತ್ ಎಂಜಾಯ್​​ ಮಾಡಿದ ವಿಜಯ್-ರಶ್ಮಿಕಾ – Kannada News | Virosh Wedding Confirmed: Vijay Deverakonda and Rashmika Mandanna’s Udaipur Pre Wedding Fun

ನಟಿ ರಶ್ಮಿಕಾ ಮಂದಣ್ಣ (Rashmika Mandanna) ಹಾಗೂ ವಿಜಯ್ ದೇವರಕೊಂಡ ವಿವಾಹ ಆಗೋದು ಅಧಿಕೃತ ಆಗಿದೆ. ಸ್ವತಃ ರಶ್ಮಿಕಾ ಮಂದಣ್ಣ ಅವರೇ ಈ ವಿಷಯವನ್ನು ಖಚಿತಪಡಿಸಿದ್ದಾರೆ. ಈ ಮಧ್ಯೆ ದಂಪತಿಗಳು ಪ್ರೀ ವೆಡ್ಡಿಂಗ್ ಸೆಲಬ್ರೇಷನ್ ಅಲ್ಲಿ ತೊಡಗಿಕೊಂಡಿದ್ದಾರೆ. ಈ ಸಂದರ್ಭದ ವಿಡಿಯೋ ಹಾಗೂ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾಗುತ್ತಾ ಇದೆ. ಇದು ಅಭಿಮಾನಿಗಳ ಖುಷಿಯನ್ನು ಹೆಚ್ಚಿಸಿದೆ. ತಮ್ಮ ಜೋಡಿಯನ್ನು ವಿರೋಶ್ ಎಂದು ಕರೆದುಕೊಂಡಿದ್ದಾರೆ ರಶ್ಮಿಕಾ ಹಾಗೂ ವಿಜಯ್. ಇದು ಅಭಿಮಾನಿಗಳೇ ಇಟ್ಟ ಹೆಸರು ಎಂದು ಅವರು ಹೇಳಿದ್ದಾರೆ….

Read More

Free VPN: ಬಳಕೆದಾರರಿಗೆ ಎಲ್ಲವನ್ನೂ ಉಚಿತವಾಗಿ ನೀಡುವ VPN ಅಪ್ಲಿಕೇಶನ್‌ಗಳು ಹೇಗೆ ಹಣ ಗಳಿಸುತ್ತವೆ ಗೊತ್ತೇ? – Kannada News | Free VPN apps how they make money data privacy paid plans

ಇಂದಿನ ದಿನಗಳಲ್ಲಿ ಇಂಟರ್ನೆಟ್‌ನಲ್ಲಿ (Internet) ಸುರಕ್ಷಿತವಾಗಿ ಬ್ರೌಸ್ ಮಾಡಲು ಅನೇಕರು VPN (Virtual Private Network) ಆ್ಯಪ್‌ಗಳನ್ನು ಬಳಸುತ್ತಾರೆ. ಆಶ್ಚರ್ಯದ ಸಂಗತಿ ಎಂದರೆ, ಈ ಆ್ಯಪ್‌ಗಳಲ್ಲಿ ಹಲವಾರು ಸಂಪೂರ್ಣ ಉಚಿತವಾಗಿಯೇ ಸೇವೆ ನೀಡುತ್ತವೆ. ಹಾಗಾದರೆ, ಯಾವುದೇ ಶುಲ್ಕ ಪಡೆಯದೆ ಈ ಕಂಪನಿಗಳು ಹೇಗೆ ಆದಾಯ ಗಳಿಸುತ್ತವೆ ಎಂಬ ಪ್ರಶ್ನೆ ಹಲವರಲ್ಲಿ ಮೂಡುತ್ತದೆ. ವಾಸ್ತವವಾಗಿ, ಎಲ್ಲಾ ಉಚಿತ VPNಗಳು ಒಂದೇ ರೀತಿಯಲ್ಲಿ ಹಣ ಸಂಪಾದಿಸುವುದಿಲ್ಲ. ಕೆಲವು ವಿಶ್ವಾಸಾರ್ಹ ಕಂಪನಿಗಳು ತಮ್ಮ ಪೇಯ್ಡ್ (Paid) ಸೇವೆಗಳ ಮೂಲಕ ಗಳಿಸುವ ಆದಾಯದಿಂದ…

Read More

ಕರ್ನಾಟಕ ಹವಾಮಾನ ವರದಿ: ರಾಜ್ಯದಲ್ಲಿ ನಿಲ್ಲದ ಶೀತದಲೆಯ ಅಬ್ಬರ; 5 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್​! – Kannada News | Bengaluru temperature :Extreme cold weather Karnataka, Orange alert for 5 districts, yellow alert for 10

ರಾಜ್ಯದಲ್ಲಿ ನಿಲ್ಲದ ಶೀತದಲೆಯ ಅಬ್ಬರ; 5 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್​! ಬೆಂಗಳೂರು, ಡಿಸೆಂಬರ್ 20: ರಾಜ್ಯದೆಲ್ಲೆಡೆ ಶೀತದಲೆ (Weather Forecast) ಅಬ್ಬರಿಸುತ್ತಿದ್ದು, ಚಳಿಯ ಪ್ರಭಾವದಿಂದ ಜನಜೀವನ ಅಸ್ತವ್ಯಸ್ತವಾಗಿದೆ. ಬೆಂಗಳೂರಿನಲ್ಲೂ ಮೈಕೊರೆಯುವ ಚಳಿ ಜನರನ್ನು ಬೆಂಬಿಡದೆ ಕಾಡುತ್ತಿದ್ದು, ಮೋಡ ಮುಸುಕಿದ ವಾತಾವರಣವಿರಲಿದೆ ಎಂದು ಇಲಾಖೆ ತಿಳಿಸಿದೆ. ಕಲಬುರಗಿ, ರಾಯಚೂರು ಸೇರಿದಂತೆ 5 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್​ ಘೋಷಿಸಿರುವ ಇಲಾಖೆ, 10 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​ ಘೋಷಿಸಿದೆ. ಯಾವ ಜಿಲ್ಲೆಗಳಿಗೆ ಅಲರ್ಟ್​? ಬೀದರ್, ಕಲಬುರಗಿ, ರಾಯಚೂಎಉ, ವಿಜಯಪುರ, ಯಾದಗಿರಿ ಜಿಲ್ಲೆಗಳಲ್ಲಿ…

Read More

SRH vs RR: ಅತಿ ಹೆಚ್ಚು ಸಿಕ್ಸರ್; ಕ್ರಿಸ್ ಗೇಲ್ ದಾಖಲೆ ಮುರಿದ ವೈಭವ್ ಸೂರ್ಯವಂಶಿ

ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಎಲಿಮಿನೇಟರ್ ಪಂದ್ಯದಲ್ಲಿ ವೈಭವ್ ಸೂರ್ಯವಂಶಿ ಸಿಕ್ಸರ್ ಮತ್ತು ಬೌಂಡರಿಗಳ ಮಳೆ ಸುರಿಸಿ ಕೇವಲ 29 ಎಸೆತಗಳಲ್ಲಿ 97 ರನ್ ಬಾರಿಸಿದರು. ಕೂದಲೆಳೆ ಅಂತರದಲ್ಲಿ ಶತಕ ವಂಚಿತರಾದ ವೈಭವ್ ಕೇವಲ 3 ರನ್‌ಗಳಿಂದ ಐಪಿಎಲ್ ಇತಿಹಾಸದಲ್ಲಿ ಅತಿ ವೇಗದ ಶತಕವನ್ನು ತಪ್ಪಿಸಿಕೊಂಡರು. ವೈಭವ್ ಈ ಶತಕವನ್ನು ಪೂರೈಸಿದ್ದರೆ, ಅದು ಐಪಿಎಲ್ ಇತಿಹಾಸದಲ್ಲಿ ಅತ್ಯಂತ ವೇಗದ ಶತಕವಾಗುತ್ತಿತ್ತು. ಈ ಮೂಲಕ ವೈಭವ್ ಕ್ರಿಸ್ ಗೇಲ್ ಅವರ ದಾಖಲೆಯನ್ನು ಮುರಿಯುತ್ತಿದ್ದರು. 2013 ರ ಐಪಿಎಲ್‌ನಲ್ಲಿ ಕ್ರಿಸ್ ಗೇಲ್…

Read More

ಹೊಸ ವರ್ಷ ನಿಮ್ಮ ಬಾಳು ಕತ್ತಲಾದಿತು ಹುಷಾರ್, ನ್ಯೂ ಇಯರ್ ಆಫರ್ ಬಗ್ಗೆ ಇರಲಿ ಎಚ್ಚರ – Kannada News | Karnataka Police Warn of New Year Cyber Scams as Fraudulent Links Target Bank Accounts

ಬೆಂಗಳೂರು, (ಡಿಸೆಂಬರ್ 28): ಹೊಸ ವರ್ಷದ ಟೈಮ್ನಲ್ಲಿ ಕಲರ್ ಪುಲ್ ಶುಭಾಶಯಗಳನ್ನ ( New Year Cyber Scams) ಕಳಿಸಲು ಎಪಿಕೆ ಫೈಲ್ ಬಳಸುತ್ತಾರೆ. ಇದು ಅಪಾಯಕ್ಕೆ ಅವಕಾಶ ಮಾಡಿಕೊಡಬಹುದು. ಯಾಕಂದ್ರೆ ಈ ಫೈಲ್ ಅಥವಾ ಅ್ಯಪ್ ಮೂಲಕ ಹ್ಯಾಕ್ ಮಾಡಿ ನಿಮ್ಮ ಖಾತೆಗೆ ಕನ್ನ ಹಾಕಬಹುದು. ಇನ್ನು ಕೆಲವು ಶುಭಾಶಯದ ಗಿಫ್ಟ್ ಹಾಗೂ ಹೊಸ ವರ್ಷದ ಟೈಮ್ನಲ್ಲಿ ಆಫರ್ ಅಂತಾ ನಕಲಿ ಕಂಪನಿಗಳು, ಅಪರಿಚಿತ ವೆಬ್ ಸೈಟ್ ಗಳು ನಿಮ್ಮ ಖಾತೆಗೆ ಕನ್ನ ಹಾಕುತ್ತಾರೆ. ಅಪ್ಪಿ…

Read More

ಫೈಬರ್ ಕೇಬಲ್‌ಗಳೇ ಕಳ್ಳರ ಟಾರ್ಗೆಟ್: ಲಾಹೋರ್ ಇಂಟರ್ನೆಟ್ ಕಡಿತದ ಹಿಂದೆ ಅಡಗಿದೆ ಸ್ಕ್ರ್ಯಾಪ್ ಮಾಫಿಯಾ – Kannada News | Internet Outages in Lahore Linked to Fiber Cable Theft

ಲಾಹೋರ್, ಮೇ 05: ಪಾಕಿಸ್ತಾನದ ರಾಜಧಾನಿ ಲಾಹೋರ್‌ನ ಅನೇಕ ನಿವಾಸಿಗಳು ಇತ್ತೀಚಿನ ದಿನಗಳಲ್ಲಿ ನಿರಂತರ ಇಂಟರ್ನೆಟ್ ಕಡಿತದ ಸಮಸ್ಯೆಯಿಂದ ಹೈರಾಣಾಗಿದ್ದರು. ಮೊದಲು ಇದನ್ನು ತಾಂತ್ರಿಕ ದೋಷ ಅಥವಾ ವಿದ್ಯುತ್ ವ್ಯತ್ಯಯದ ಪರಿಣಾಮ ಎಂದು ಭಾವಿಸಲಾಗಿತ್ತು. ಆದರೆ, ಈ ವ್ಯವಸ್ಥಿತ ಇಂಟರ್ನೆಟ್ ಸ್ಥಗಿತದ ಹಿಂದೆ ಸ್ಕ್ರ್ಯಾಪ್ ಕಳ್ಳರ ಜಾಲವಿರುವುದು ತನಿಖೆಯ ವೇಳೆ ಬಯಲಾಗಿದೆ.ಲಾಹೋರ್‌ನ ವಿವಿಧ ಬಡಾವಣೆಗಳಲ್ಲಿ ರಾತ್ರೋರಾತ್ರಿ ಇಂಟರ್ನೆಟ್ ಸಂಪರ್ಕ ಕಡಿತಗೊಳ್ಳುತ್ತಿತ್ತು. ಇದರಿಂದಾಗಿ ಸಾವಿರಾರು ಗ್ರಾಹಕರು, ವಿಶೇಷವಾಗಿ ಮನೆಯಿಂದ ಕೆಲಸ ಮಾಡುವವರು ಮತ್ತು ವಿದ್ಯಾರ್ಥಿಗಳು ಭಾರಿ ತೊಂದರೆ ಅನುಭವಿಸಿದ್ದರು….

Read More