ಝೆಲೆನ್ಸ್ಕಿ- ಟ್ರಂಪ್ ಶಾಂತಿ ಮಾತುಕತೆಗೂ ಮುನ್ನ ಉಕ್ರೇನ್ ಮೇಲೆ ರಷ್ಯಾ ದಾಳಿ – Kannada News | Russia Intensifies Attacks in Ukraine Ahead of Key Zelenskyy Trump Talks
ದಾಳಿ-ಸಾಂದರ್ಭಿಕ ಚಿತ್ರImage Credit source: India TV ಕೈವ್, ಡಿಸೆಂಬರ್ 28: ಉಕ್ರೇನ್(Ukraine)ನ ರಾಜಧಾನಿಯಲ್ಲಿ ರಷ್ಯಾ ಶನಿವಾರ ತೀವ್ರ ದಾಳಿ ನಡೆಸಿದ್ದು, ಓರ್ವ ಸಾವನ್ನಪ್ಪಿದ್ದು, 27 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಮತ್ತು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡುವೆ ಶಾಂತಿ ಮಾತುಕತೆ ನಡೆಯುವ ಒಂದು ದಿನದ ಮೊದಲು ಇದು ಸಂಭವಿಸಿದೆ. ಮುಂಜಾನೆ ದಾಳಿ ಪ್ರಾರಂಭವಾಗಿ ಗಂಟೆಗಳ ಕಾಲ ಮುಂದುವರೆದಿತ್ತು ಕೈವ್‌ನಾದ್ಯಂತ ಪ್ರಬಲ ಸ್ಫೋಟಗಳು ಸಂಭವಿಸಿವೆ. ರಷ್ಯಾ ಬ್ಯಾಲಿಸ್ಟಿಕ್ ಕ್ಷಿಪಣಿಗಳು ಮತ್ತು ಡ್ರೋನ್‌ಗಳ…