ಐಪಿಎಲ್ ಮುಗಿದ ಕೂಡಲೇ ಟಿ20 ಸರಣಿ ಆಡಲಿದೆ ಭಾರತ; ವೇಳಾಪಟ್ಟಿ ಪ್ರಕಟ

ಕೆಲವೇ ದಿನಗಳ ಹಿಂದೆ ಟಿ20 ವಿಶ್ವಕಪ್ ಗೆದ್ದುಕೊಂಡಿರುವ ಟೀಂ ಇಂಡಿಯಾ (Team India) ಇದೀಗ ಐಪಿಎಲ್‌ನಲ್ಲಿ (IPL 2026) ಕಣಕ್ಕಿಳಿಯಲು ಸಜ್ಜಾಗಿದೆ. ಎರಡು ತಿಂಗಳ ಕಾಲ ಈ ಮಿಲಿಯನ್ ಡಾಲರ್ ಟೂರ್ನಿಯಲ್ಲಿ ಬೆವರು ಹರಿಸಲಿರುವ ಟೀಂ ಇಂಡಿಯಾ ಆಟಗಾರರು ಆ ಬಳಿಕ ಮತ್ತೆ ರಾಷ್ಟ್ರೀಯ ಕರ್ತವ್ಯಕ್ಕೆ ಮರಳಲಿದ್ದಾರೆ. ಅದಕ್ಕೆ ಪೂರಕವಾಗಿ ಇದೀಗ ಭಾರತದ ಮುಂದಿನ ಟಿ20 ಸರಣಿಯ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ. ಸೂರ್ಯಕುಮಾರ್ ಯಾದವ್ (Suryakumar Yadav) ನೇತೃತ್ವದ ತಂಡವು ಐರ್ಲೆಂಡ್ ವಿರುದ್ಧ ಮೂರು ಪಂದ್ಯಗಳ ಟಿ20 ಸರಣಿಯನ್ನು…

Read More

ಕೇಂದ್ರದ ಅಂತ್ಯೋದಯ’ ಕಲ್ಪನೆಗೆ ಸಿದ್ದಗಂಗಾ ಮಠವೇ ದಾರಿದೀಪ: ಶಿವಕುಮಾರ ಶ್ರೀಗಳನ್ನ ಸ್ಮರಿಸಿದ ಜೋಶಿ

ತುಮಕೂರು, (ಮೇ 01): “ಅನ್ನ-ಅಕ್ಷರ-ಆಶ್ರಯ’ ನೀಡಿ ತ್ರಿವಿಧ ದಾಸೋಹಿಯಾದ ಸಿದ್ಧಗಂಗಾ ಶ್ರೀಗಳು (siddaganga shree) ಸರ್ಕಾರದ ಅನೇಕ ಯೋಜನೆಗಳಿಗೆ ಮಹಾನ್ ಸ್ಪೂರ್ತಿಯಾಗಿದ್ದಾರೆ” ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ ಜೋಶಿ (pralhad joshi) ಸ್ಮರಿಸಿದರು. ತುಮಕೂರಿನಲ್ಲಿ (Tumakuru) ಇಂದು (ಮೇ 01) ಶ್ರೀ ಶಿವಕುಮಾರ ಮಹಾಸ್ವಾಮಿಗಳ (Sri Shivakumar Swamiji) 119ನೇ ಜಯಂತ್ಯುತ್ಸವದಲ್ಲಿ ನುಡಿ ನಮನ ಸಲ್ಲಿಸುತ್ತಾ, ಕೇಂದ್ರ ಸರ್ಕಾರದಲ್ಲಿ ನಾವಿಂದು ಅನುಷ್ಠಾನಕ್ಕೆ ತರುತ್ತಿರುವ ಅನೇಕ ಜನಪರ ಯೋಜನೆಗಳಿಗೆ ಈ ಮಠದ ದಾಸೋಹ…

Read More

ವಾಟ್ಸಾಪ್ ಬೆನ್ನಲ್ಲೇ ಟೆಲಿಗ್ರಾಮ್, ಸಿಗ್ನಲ್‌ಗೂ ಕೇಂದ್ರದ ನೋಟಿಸ್ – Kannada News | Govt Notice to Telegram, Signal on Username Feature After WhatsApp Action

ನವದೆಹಲಿ, ಜುಲೈ 03: ಮೊಬೈಲ್ ಸಂಖ್ಯೆಯನ್ನು ಹಂಚಿಕೊಳ್ಳದೆಯೇ ಚಾಟ್ ಮಾಡಲು ಅನುಕೂಲ ಕಲ್ಪಿಸುವ ‘ಯೂಸರ್​​ನೇಮ್’ (Username) ವೈಶಿಷ್ಟ್ಯದ ಕುರಿತು ಕೇಂದ್ರ ಸರ್ಕಾರವು ಸಾಮಾಜಿಕ ಜಾಲತಾಣಗಳ ವಿರುದ್ಧ ತನ್ನ ನಿಯಂತ್ರಣವನ್ನು ಮತ್ತಷ್ಟು ಬಿಗಿಗೊಳಿಸಿದೆ. ಬುಧವಾರವಷ್ಟೇ ವಾಟ್ಸಾಪ್ ಸಂಸ್ಥೆಗೆ ನೋಟಿಸ್ ನೀಡಿದ್ದ ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ಈಗ ಪ್ರಮುಖ ಮೆಸೇಜಿಂಗ್ ಆಪ್‌ಗಳಾದ ಟೆಲಿಗ್ರಾಮ್ ಮತ್ತು ಸಿಗ್ನಲ್ (Signal)ಗೂ  ಅಧಿಕೃತ ನೋಟಿಸ್ ಜಾರಿ ಮಾಡಿದೆ. ಕೇಂದ್ರ ಸರ್ಕಾರದ ಕಳವಳ ಮತ್ತು ಪ್ರಶ್ನೆಗಳೇನು? ಮೊಬೈಲ್ ಸಂಖ್ಯೆ ಇಲ್ಲದೆಯೇ ಸಂಪರ್ಕ…

Read More

ಮುಸ್ಲಿಂ ಹೆಸರನ್ನ ಡಿಲೀಟ್ ಮಾಡದಂತೆ ಡಿಸಿಗೆ ನಿರ್ದೇಶನ: ಆರ್. ಅಶೋಕ್ ಗಂಭೀರ ಆರೋಪ – Kannada News | ECI Complaint: Opposition Accuses Karnataka Government of Electoral Roll Manipulation

ಬೆಂಗಳೂರು, ಜು.7: ಕರ್ನಾಟಕದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ (SRI) ಪ್ರಕ್ರಿಯೆಯಲ್ಲಿ ಅಕ್ರಮಗಳು ನಡೆಯುತ್ತಿವೆ ಎಂದು ಬಿಜೆಪಿ ಮತ್ತು ಜೆಡಿಎಸ್ ನಾಯಕರು ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ. ರಾಜ್ಯ ಸರ್ಕಾರ ಅಧಿಕಾರಿಗಳ ಮೇಲೆ ಮೌಖಿಕವಾಗಿ ಒತ್ತಡ ಹೇರುತ್ತಿದ್ದು, ಖಾನ್, ಅಬ್ದುಲ್, ಕರೀಮ್ ಎಂಬಂತಹ ಮುಸ್ಲಿಂ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಡಿಲೀಟ್ ಮಾಡದಂತೆ ನಿರ್ದೇಶನ ನೀಡಿದೆ ಎಂದು ಆರೋಪಿಸಲಾಗಿದೆ. ಆರ್. ಅಶೋಕ್, ಪ್ರಹ್ಲಾದ್ ಜೋಶಿ, ಹೆಚ್.ಡಿ. ಕುಮಾರಸ್ವಾಮಿ, ಎಸ್. ಸೋಮಶೇಖರ್ ಸೇರಿದಂತೆ ಹಲವು ನಾಯಕರು ದೆಹಲಿಯಲ್ಲಿ ಚುನಾವಣಾ ಆಯೋಗವನ್ನು…

Read More

ಅಯೋಧ್ಯೆಯ ರಾಮ ಮಂದಿರದ ಸುತ್ತ ಆಲ್ಕೋಹಾಲ್, ಮಾಂಸಾಹಾರ ಸೇವನೆ ನಿಷೇಧ – Kannada News | Uttar Pradesh Bans Sale Of Liquor and Non Veg food Within 15 Km Radius Of Ayodhya Ram Temple

ಅಯೋಧ್ಯೆ, ಜನವರಿ 10: ಯೋಗಿ ಆದಿತ್ಯನಾಥ್ ನೇತೃತ್ವದ ಉತ್ತರ ಪ್ರದೇಶ ಸರ್ಕಾರ ರಾಮ ಮಂದಿರದ (Ram Temple) ಸುತ್ತ 15 ಕಿಮೀ ವ್ಯಾಪ್ತಿಯಲ್ಲಿ ಆಲ್ಕೋಹಾಲ್, ಮಾಂಸಾಹಾರ ಪದಾರ್ಥಗಳ ಮಾರಾಟವನ್ನು ನಿಷೇಧಿಸಿದೆ. ‘ಪಂಚಕೋಸಿ ಪರಿಕ್ರಮ’ದ ಅಡಿಯಲ್ಲಿ ಗುರುತಿಸಲಾದ ಪ್ರದೇಶಗಳಲ್ಲಿ ಮಾಂಸಾಹಾರವನ್ನು ಪೂರೈಸುವ ಆನ್‌ಲೈನ್ ಫುಡ್ ಡೆಲಿವರಿ ಪ್ಲಾಟ್​​ಫಾರ್ಮ್​ಗಳ ಬಗ್ಗೆ ಪದೇ ಪದೇ ದೂರುಗಳು ಬಂದ ನಂತರ ಈ ಕ್ರಮ ಕೈಗೊಳ್ಳಲಾಗಿದೆ. ಅಯೋಧ್ಯೆಯಲ್ಲಿರುವ ಕೆಲವು ಹೋಟೆಲ್‌ಗಳು ಮತ್ತು ಹೋಂಸ್ಟೇಗಳು ಅತಿಥಿಗಳಿಗೆ ಮಾಂಸಾಹಾರಿ ಆಹಾರ ಮತ್ತು ಆಲ್ಕೋಹಾಲ್ ನೀಡುತ್ತಿವೆ. ಇದನ್ನು ತಕ್ಷಣ…

Read More

ಸಿಎಂ ದಳಪತಿ ವಿಜಯ್ ಭೇಟಿಯಾದ ಲೋಕೇಶ್ ಕನಗರಾಜ್: ‘ಲಿಯೋ 2’ ನಿರೀಕ್ಷೆಯಲ್ಲಿ ಅಭಿಮಾನಿಗಳು

ತಮಿಳುನಾಡು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿರುವ ನಟ ಸಿ. ಜೋಸೆಫ್ ವಿಜಯ್ (CM Vijay) ಅವರು ಇತ್ತೀಚೆಗೆ ಸಿನಿಮಾ ರಂಗದ ಪ್ರಮುಖರೊಂದಿಗೆ ಸಭೆ ನಡೆಸಿ, ಚಿತ್ರಮಂದಿರಗಳಲ್ಲಿ ದಿನಕ್ಕೆ 5 ಪ್ರದರ್ಶನಗಳನ್ನು ನಡೆಸಲು ಅನುಮತಿ ನೀಡುವ ಮೂಲಕ ಕಾಲಿವುಡ್‌ಗೆ ದೊಡ್ಡ ರಿಲೀಫ್ ನೀಡಿದ್ದಾರೆ. ಇದರ ಬೆನ್ನಲ್ಲೇ ತಮಿಳಿನ ಸ್ಟಾರ್ ನಿರ್ದೇಶಕ ಲೋಕೇಶ್ ಕನಗರಾಜ್ (Lokesh Kanagaraj) ಅವರು ಮುಖ್ಯಮಂತ್ರಿ ವಿಜಯ್ ಅವರನ್ನು ಭೇಟಿಯಾಗಿದ್ದು, ಈ ಕ್ಷಣದ ಫೋಟೋವನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋ ನೋಡಿದ ಕೂಡಲೇ ಅಭಿಮಾನಿಗಳಿಗೆ…

Read More

SRH vs RCB: ಸನ್‌ರೈಸರ್ಸ್ ವಿರುದ್ಧ ಸೋತರೂ ಅಗ್ರಸ್ಥಾನದಲ್ಲೇ ಉಳಿದ ಆರ್​ಸಿಬಿ

ಐಪಿಎಲ್ 2026 ರ 67ನೇ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಮುಖಾಮುಖಿಯಾಗಿದ್ದವು. ಪಾಯಿಂಟ್ ಪಟ್ಟಿಯಲ್ಲಿ ಅಗ್ರ 2ರಲ್ಲಿ ಸ್ಥಾನ ಪಡೆಯಲು ಈ ಪಂದ್ಯದಲ್ಲಿ ಗೆಲ್ಲುವುದು ಉಭಯ ತಂಡಗಳಿಗೆ ಅತ್ಯಂತ ಮುಖ್ಯವಾಗಿತ್ತು. ಅದರಲ್ಲೂ ಸನ್‌ರೈಸರ್ಸ್ ಅಗ್ರಸ್ಥಾನಕ್ಕೇರಬೇಕೆಂದರೆ ಆರ್​ಸಿಬಿ ವಿರುದ್ಧ ಭಾರೀ ಅಂತರದ ಗೆಲುವು ದಾಖಲಿಸಬೇಕಿತ್ತು. ಆದರೆ ಈ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡ ಗೆಲುವು ಸಾಧಿಸಿತ್ತಾದರೂ ಅಗ್ರ 2ರಲ್ಲಿ ಸ್ಥಾನ ಪಡೆಯುವಲ್ಲಿ ವಿಫಲವಾಯಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಸನ್‌ರೈಸರ್ಸ್ ತಂಡ…

Read More

ಬಿಗ್​​ಬಾಸ್ ಬಳಿಕ ರಕ್ಷಿತಾ ಶೆಟ್ಟಿಯ ಮುಂದಿನ ಯೋಜನೆಗಳೇನು? – Kannada News | What is future plans of Bigg Boss Kannada runner up Rakshita Shetty

ರಕ್ಷಿತಾ ಶೆಟ್ಟಿ (Rakshita Shetty) ಬಿಗ್​​ಬಾಸ್ ಕನ್ನಡ ಸೀಸನ್ 12ರ ರನ್ನರ್ ಅಪ್ ಆಗಿದ್ದಾರೆ. ಮೊದಲ ದಿನವೇ ಶೋನಿಂದ ಹೊರ ಹಾಕಲ್ಪಟ್ಟ ರಕ್ಷಿತಾ ಶೆಟ್ಟಿ ಮತ್ತೆ ರೀ ಎಂಟ್ರಿ ಆಗಿ ಕೊನೆಯ ದಿನದ ವರೆಗೆ ಇದ್ದಿದ್ದು ಸಾಮಾನ್ಯ ಸಾಧನೆಯಲ್ಲ. ಚಿತ್ರರಂಗದ ಹಿನ್ನೆಲೆ ಇಲ್ಲದ, ಕನ್ನಡ ಭಾಷೆ ತಿಳಿಯದೆ, ಅನುಭವದ ಕೊರತೆ ಹೀಗೆ ಹಲವು ತೊಡಕುಗಳು ಇದ್ದಾಗಿಯೂ ಸಹ ರಕ್ಷಿತಾ ಶೆಟ್ಟಿ ಅತ್ಯದ್ಭುತವಾಗಿ ಆಡಿ ರನ್ನರ್ ಅಪ್ ಆದರು. ಇದೀಗ ಶೋ ಮುಗಿದಿದೆ. ಆದರೆ ಮುಂದೇನು? ಯೂಟ್ಯೂಬ್ ಮುಂದುವರೆಸುತ್ತಾರಾ?…

Read More

Ram Navami 2026: ರಾಮ ನವಮಿ ಬಳಿಕ ಈ ಎರಡು ರಾಶಿಗಳಿಗೆ ಶುಭ ದಿನಗಳು ಆರಂಭ

ಇಂದು ದೇಶಾದ್ಯಂತ ಶ್ರೀ ರಾಮ ನವಮಿಯನ್ನು ಸಡಗರ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಈ ಪವಿತ್ರ ದಿನದಂದು ಒಂದು ಅಪರೂಪದ ಗ್ರಹಗಳ ಸಂಯೋಗ ಸಂಭವಿಸುತ್ತಿದೆ. ಈ ಜ್ಯೋತಿಷ್ಯ ವಿದ್ಯಮಾನವು 12 ರಾಶಿಗಳ ಮೇಲೆ ಪ್ರಭಾವ ಬೀರಿದರೂ, ವಿಶೇಷವಾಗಿ ಎರಡು ರಾಶಿಚಕ್ರದವರಿಗೆ ಇದು ಸುವರ್ಣ ಕಾಲವನ್ನು ಹೊತ್ತು ತರಲಿದೆ. ಕಳೆದ ಕೆಲವು ಸಮಯದಿಂದ ಸಂಕಷ್ಟಗಳನ್ನು ಎದುರಿಸುತ್ತಿದ್ದ ಈ ರಾಶಿಗಳ ಜನರಿಗೆ ಶ್ರೀರಾಮನ ಆಶೀರ್ವಾದದಿಂದ ಇಂದಿನಿಂದ ಒಳ್ಳೆಯ ದಿನಗಳು ಆರಂಭವಾಗಲಿವೆ. ಆ ಅದೃಷ್ಟವಂತ ರಾಶಿಗಳು ಯಾವುವು ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ. ಕನ್ಯಾ ರಾಶಿ:…

Read More

ಜೈಲಿನಲ್ಲಿ ನಟ ದರ್ಶನ್ ಮೌನ; ಆತ್ಮಚರಿತ್ರೆ ಬರೆಯಲು ಆರಂಭಿಸಿದ ಪವಿತ್ರಾ ಗೌಡ – Kannada News

ಬೆಂಗಳೂರು ಜೂನ್ 11: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಸದ್ಯ ಪರಪ್ಪನ ಅಗ್ರಹಾರ ಜೈಲು ಪಾಲಾಗಿರುವ ನಟ ದರ್ಶನ್ ಹಾಗೂ ಪವಿತ್ರಾ ಗೌಡ ಅವರ ಜೈಲು ಜೀವನದ ಕುರಿತು ಒಂದು ಕುತೂಹಲಕಾರಿ ಮಾಹಿತಿ ಹೊರ ಬಿದ್ದಿದೆ. ಸುಪ್ರೀಂಕೋರ್ಟ್‌ನಲ್ಲಿ ಜಾಮೀನು ಕೈತಪ್ಪಿದ ಬಳಿಕ ನಟ ದರ್ಶನ್ ಅವರು (Darshan) ಜೈಲಿನಲ್ಲಿ ಸಂಪೂರ್ಣ ಮೌನಕ್ಕೆ ಶರಣಾಗಿದ್ದರೆ, ಇತ್ತ ಎ1 ಆರೋಪಿ ಪವಿತ್ರಾ ಗೌಡ ಅವರು ಕಂಬಿ ಎಣಿಸುತ್ತಲೇ ತಮ್ಮ ಆತ್ಮಚರಿತ್ರೆ ಬರೆಯುವಲ್ಲಿ ಮಗ್ನರಾಗಿದ್ದಾರೆ. ಇಬ್ಬರು ಆರೋಪಿಗಳ ದಿನಚರಿ ಈಗ ಜೈಲಿನಲ್ಲಿ ಸಂಪೂರ್ಣ…

Read More