Vastu Tips: ನಿಮ್ಮ ಮನೆಯ ಅದೃಷ್ಟ ಬದಲಿಸಬಲ್ಲವು ಈ ಮೂಕ ಜೀವಿಗಳು; ವಾಸ್ತು ಮತ್ತು ಧರ್ಮಗ್ರಂಥಗಳು ಹೇಳುವುದೇನು?
ಮನೆಯಲ್ಲಿ ಸಾಕುಪ್ರಾಣಿಗಳನ್ನು ಸಾಕುವುದು ಕೇವಲ ಹವ್ಯಾಸವಲ್ಲ, ಅದು ಜೀವನದಲ್ಲಿ ಸಕಾರಾತ್ಮಕ ಬದಲಾವಣೆ ತರುವ ಒಂದು ಮಾರ್ಗವೂ ಹೌದು. ವಾಸ್ತು ಶಾಸ್ತ್ರದ ಪ್ರಕಾರ, ಕೆಲವು ಪ್ರಾಣಿಗಳು ಮನೆಯಲ್ಲಿ ನೆಲೆಸುವುದರಿಂದ ಅಥವಾ ಅವುಗಳ ಸೇವೆ ಮಾಡುವುದರಿಂದ ದೈವಿಕ ಆಶೀರ್ವಾದದ ಜೊತೆಗೆ ಆರ್ಥಿಕ ಸಮೃದ್ಧಿಯೂ ಲಭಿಸುತ್ತದೆ. ಅಂತಹ ಅದೃಷ್ಟದ ಜೀವಿಗಳ ಕುರಿತಾದ ಆಸಕ್ತಿದಾಯಕ ಮಾಹಿತಿ ಇಲ್ಲಿದೆ. ನಾಯಿ ಸಾಕುವುದು: ಪ್ರಾಚೀನ ನಂಬಿಕೆಗಳ ಪ್ರಕಾರ, ನಾಯಿಗಳನ್ನು ಕಾಲಭೈರವನ ಸೇವಕರು ಮತ್ತು ನಿಷ್ಠೆಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಮನೆಯಲ್ಲಿ ನಾಯಿಯನ್ನು ಸಾಕುವುದು ಅಥವಾ ಬೀದಿ ನಾಯಿಗಳಿಗೆ…