ಬಿಸಿಲಿನ ತಾಪಕ್ಕೆ ‘ಬೆಂದಕಾಳೂರು’ ವಿಲ ವಿಲ! ಮಣ್ಣಿನ ಮಡಿಕೆಗೆ ಡಿಮ್ಯಾಂಡಪ್ಪೋ ಡಿಮ್ಯಾಂಡ್
ಬೆಂಗಳೂರು, ಮಾರ್ಚ್ 09: ಸಿಲಿಕಾನ್ ಸಿಟಿ ಬೆಂಗಳೂರು (Bengaluru) ಸೇರಿದಂತೆ ರಾಜ್ಯದೆಲ್ಲೆಡೆ ಬಿಸಿಲಿನ ತಾಪಮಾನ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಜನರು ಬಿಸಿಲಿನ ತಾಪದಿಂದ ತತ್ತರಿಸಿ ಹೋಗಿದ್ದಾರೆ. ಫೆಬ್ರವರಿಯಿಂದಲೇ ಆರಂಭವಾದ ಬೇಸಿಗೆಯ ತಾಪ ಇನ್ನೂ ಕಡಿಮೆಯಾಗದೇ ಇರುವ ಹಿನ್ನೆಲೆ, ತಂಪಿಗಾಗಿ ಜನರು ಮಣ್ಣಿನ ಮಡಿಕೆ ಮತ್ತು ಎಳನೀರಿನ ಮೊರೆ ಹೋಗುತ್ತಿರುವ ದೃಶ್ಯಗಳು ಮಾರುಕಟ್ಟೆಗಳಲ್ಲಿ ಕಂಡು ಬರುತ್ತಿವೆ. ಮಣ್ಣಿನ ಮಡಿಕೆ, ಎಳನೀರಿಗೆ ಹೆಚ್ಚಿನ ಬೇಡಿಕೆ ಬೇಸಿಗೆ ಕಾಲ ಆರಂಭವಾದಾಗಲೇ ಬೆಂಗಳೂರಿನ ಜನರು ಮಣ್ಣಿನ ಮಡಿಕೆ ಬಳಕೆಗೆ ಹೆಚ್ಚಿನ ಒತ್ತು ನೀಡುತ್ತಾರೆ….