ಒಟಿಟಿಯಲ್ಲಿ ಬರಲಿದೆ ಹೊಸ ರೂಪದ ‘ಧುರಂಧರ್’; ಪ್ರೇಕ್ಷಕರಿಗೆ ಶುರುವಾಯ್ತು ಗೊಂದಲ – Kannada News | Ranveer Singh Dhurandhar Raw unseen version release Date Netflix Jio Hotstar confusion
ಬಾಲಿವುಡ್ ಸ್ಟಾರ್ ರಣವೀರ್ ಸಿಂಗ್ (Ranveer Singh) ನಟನೆಯ ಆ್ಯಕ್ಷನ್ ಥ್ರಿಲ್ಲರ್ ಸಿನಿಮಾ ‘ಧುರಂಧರ್’ ಸದ್ಯ ಒಟಿಟಿ ಜಗತ್ತಿನಲ್ಲಿ ಭಾರಿ ಸದ್ದು ಮಾಡುತ್ತಿದೆ. ಈ ಚಿತ್ರದ ಎರಡನೇ ಭಾಗ ‘ಧುರಂಧರ್: ದಿ ರಿವೇಂಜ್’ ಇತ್ತೀಚೆಗಷ್ಟೇ ವಿದೇಶಗಳಲ್ಲಿ ಒಟಿಟಿ ಮೂಲಕ ರಿಲೀಸ್ ಆಗಿ ಭಾರಿ ಸೌಂಡ್ ಮಾಡಿತ್ತು. ಇದರ ಬೆನ್ನಲ್ಲೇ ಈಗ ಚಿತ್ರತಂಡ ಹಾಗೂ ನೆಟ್‌ಫ್ಲಿಕ್ಸ್ (Netflix) ಪ್ರೇಕ್ಷಕರಿಗೆ ಮತ್ತೊಂದು ಬಿಗ್ ಸರ್ಪ್ರೈಸ್ ನೀಡಿದೆ. ‘ಧುರಂಧರ್’ (Dhurandhar) ಚಿತ್ರದ ಮೊದಲ ಭಾಗವು, ಯಾವುದೇ ಕಟ್ ಇಲ್ಲದೇ, ಇದುವರೆಗೆ ಯಾರೂ…