ಯೋಗ ಒಂದು ದಿನದ ಕಾರ್ಯಕ್ರಮ ಆಗುವುದು ಬೇಡ, 365 ದಿನ ನಿಮ್ಮ ಜೀವನದ ಭಾಗವಾಗಿರಲಿ: ಮೋದಿ – Kannada News | Make Yoga a Year Round Lifestyle, Not a One Day Event: PM Modi on International Yoga Day
ಕೋಲ್ಕತ್ತಾ, ಜೂನ್ 21: ಯೋಗ(Yoga) ಕೇವಲ ಒಂದು ದಿನದ ಕಾರ್ಯಕ್ರಮವಾಗುವುದು ಬೇಡ, 362 ದಿನವೂ ನಿಮ್ಮ ಜೀವನದ ಅಂಗವಾಗಿರಲಿ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಕೋಲ್ಕತ್ತಾದಲ್ಲಿ ಇಂದು ಅಂತಾರಾಷ್ಟ್ರೀಯ ಯೋಗ ದಿನದ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು. ಯೋಗವನ್ನು ಅಳವಡಿಸಿಕೊಂಡರೆ ಸಮಾಜ ಸ್ವಸ್ಥವಾಗಿರುತ್ತೆ, ರಾಷ್ಟ್ರವು ಕೂಡ ಅಧಿಕ ಸಕ್ಷಮ ಹಾಗೂ ಸಮೃದ್ಧವಾಗಿರುತ್ತದೆ. 100 ದಿನಗಳ ಆನ್ಲೈನ್ ಯೋಗ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದ್ದು, 130 ದೇಶಗಳ 30 ಲಕ್ಷಕ್ಕೂ ಅಧಿಕ ಮಂದಿ ಇದರಲ್ಲಿ ಪಾಲ್ಗೊಂಡಿದ್ದರು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ….