ಚಿನ್ನದ ಬೆಲೆ ಕಡಿಮೆ ಆಗಲು ಕಾರಣಗಳೇನು? ಬಂಗಾರ ಈಗ ಸುರಕ್ಷಿತ ಸರಕಾಗಿ ಉಳಿದಿಲ್ಲವಾ? – Kannada News | Gold not remained as pure safe haven asset, know why its price is going down
ನವದೆಹಲಿ, ಜೂನ್ 29: ಜಾಗತಿಕವಾಗಿ ಆರ್ಥಿಕ ಅಥವಾ ರಾಜಕೀಯ ಬಿಕ್ಕಟ್ಟು ಎದುರಾದಾಗ ಹೂಡಿಕೆದಾರರು ಬಂಗಾರವನ್ನು ಅತ್ಯಂತ ಸುರಕ್ಷಿತ ಹೂಡಿಕೆ (Safe Haven) ಎಂದು ಪರಿಗಣಿಸುವುದುಂಟು. ಆದರೆ ಇತ್ತೀಚಿನ ದಿನಗಳಲ್ಲಿ ಈ ಟ್ರೆಂಡ್ ಬದಲಾಗುತ್ತಿದ್ದು, ಚಿನ್ನದ ಬೆಲೆಯ (Gold) ಮೇಲಿನ ಹಿಡಿತ ಕೈತಪ್ಪುತ್ತಿದೆ. ಚಿನ್ನದ ಬೆಲೆ ಕಳೆದ ನಾಲ್ಕು ತಿಂಗಳಿಂದ ಬಹುತೇಕ ಸತತವಾಗಿ ಕುಸಿಯುತ್ತಾ ಬಂದಿದೆ. ಇರಾನ್ ಅಮೆರಿಕ ಯುದ್ಧ ಹಾಗೂ ನಂತರ ಅನಿಶ್ಚಿತ ಪರಿಸ್ಥಿತಿಯಲ್ಲಿ ಚಿನ್ನಕ್ಕೆ ಬೇಡಿಕೆ ಹೆಚ್ಚುವ ಬದಲು ಇಳಿಕೆ ಆಗುತ್ತಿರುವುದು ಕೌತುಕ ಮೂಡಿಸಿದೆ. ಹೂಡಿಕೆದಾರರ…