ಮತ್ತೊಂದು ಹಂತಕ್ಕೆ ತಲುಪಿದ ಕಾಂಗ್ರೆಸ್ನ ಬಣ ಬಡಿದಾಟ: ಸಿಎಂ ನಡೆಗೆ ಆಪ್ತರಿಂದಲೇ ಅಸಮಾಧಾನ – Kannada News | Karnataka Congress Infighting: Siddaramaiah’s Allies Express Dissatisfaction Over CM’s Inaction
ಬೆಂಗಳೂರು, ಏಪ್ರಿಲ್ 17: ಉಪ ಚುನಾವಣೆಯ ಬಳಿಕ ರಾಜ್ಯ ಕಾಂಗ್ರೆಸ್ನಲ್ಲಿನ ಬಣ ಬಡಿದಾಟ ಮತ್ತೊಂದು ಹಂತಕ್ಕೆ ತಲುಪಿದೆ. ಪಕ್ಷ ವಿರೋಧಿ ಚಟುವಟಿಕೆ ಆರೋಪದ ಮೇಲೆ ಪದೇಪದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆಪ್ತರ ಟಾರ್ಗೆಟ್ ಮಾಡಲಾಗುತ್ತಿದೆ ಎಂಬ ಮಾತುಗಳು ಕೇಳಿಬರತೊಡಗಿವೆ. ಹೀಗಿದ್ದರೂ ತಮ್ಮ ಆಪ್ತರ ರಕ್ಷಣೆಗೆ ಮುಂದಾಗದ ಮುಖ್ಯಮಂತ್ರಿಗಳ ನಡೆಗೆ ಬಹಿರಂಗ ಅಸಮಾಧಾನ ವ್ಯಕ್ತವಾಗಿದೆ. ಸಿದ್ದರಾಮಯ್ಯ ತಮ್ಮ ಆಪ್ತರ ವಿಷಯದಲ್ಲಿ ಗಟ್ಟಿ ನಿಲುವು ತಾಳುತ್ತಿಲ್ಲ. ಅಸಹಾಯಕರಂತೆ ಅವರು ವರ್ತಿಸುತ್ತಿದ್ದು, ಹೈಕಮಾಂಡ್ ಮಟ್ಟದಲ್ಲಿ ಆಪ್ತರ ರಕ್ಷಣೆಗೆ ಏನು ಕ್ರಮ ಕೈಗೊಳ್ಳುತ್ತಿಲ್ಲ. ಹೀಗಾದರೆ…