Headlines

ಸರ್ಕಾರಿ ಅಧಿಕಾರಿಗಳಿಗೆ ಶೇ. 30ರಷ್ಟು ಸಂಬಳ ಕಡಿತ; ಹಿಮಾಚಲ ಪ್ರದೇಶದಲ್ಲಿ ಹೊಸ ನಿಯಮ ಜಾರಿ – Kannada News | Himachal Pradesh Government Imposes 30 percent Salary Cut on senior officers amid Financial crisis

ನವದೆಹಲಿ, ಏಪ್ರಿಲ್ 20: ಹಿಮಾಚಲ ಪ್ರದೇಶದಲ್ಲಿ ಆರ್ಥಿಕ ಬಿಕ್ಕಟ್ಟು ಎದುರಾಗಿದ್ದು, ಇದನ್ನು ಸರಿದೂಗಿಸಲು ಸರ್ಕಾರದ ಹಿರಿಯ ಅಧಿಕಾರಿಗಳ ಸಂಬಳದ ಶೇ. 30ರಷ್ಟನ್ನು ಕಡಿತ ಮಾಡಲು ಸುಖ್ವಿಂದರ್ ಸಿಂಗ್ ಸುಖು (Sukhvinder Singh Sukhu) ನೇತೃತ್ವದ ಹಿಮಾಚಲ ಪ್ರದೇಶ ಸರ್ಕಾರ ನಿರ್ಧರಿಸಿದೆ. ಏಪ್ರಿಲ್ ತಿಂಗಳಿಂದ 6 ತಿಂಗಳವರೆಗೆ ಕೇವಲ ಶೇ. 70ರಷ್ಟು ಸಂಬಳವನ್ನು ಮಾತ್ರ ಹಿರಿಯ ಅಧಿಕಾರಿಗಳಿಗೆ ನೀಡಲಾಗುತ್ತದೆ. ಹಿಮಾಚಲ ಪ್ರದೇಶದ ಸುಖ್ವಿಂದರ್ ಸಿಂಗ್ ಸುಖು ಸರ್ಕಾರವು ರಾಜ್ಯದ ಹದಗೆಡುತ್ತಿರುವ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಲು ಕಠಿಣ ಕ್ರಮಗಳನ್ನು ತೆಗೆದುಕೊಂಡಿದೆ….

Read More

ಬಾಗಲಕೋಟೆಯಲ್ಲಿ ನದಿಗಳು ಖಾಲಿ ಖಾಲಿ, ಕುಸಿಯುತ್ತಿರುವ ಅಂತರ್ಜಲ: 114 ಗ್ರಾಮಗಳಲ್ಲಿ ಜಲಕ್ಷಾಮದ ಭೀತಿ – Kannada News | Bagalkote Water Crisis: Krishna and Malaprabha Rivers Reach Dead Storage; 114 Villages Face Water Scarcity Amid Heat wave

ಬಾಗಲಕೋಟೆ ನದಿಗಳಲ್ಲಿ ನೀರು ಕಡಿಮೆಯಾಗಿರುವುದುImage Credit source: tv9 ಬಾಗಲಕೋಟೆ, ಏಪ್ರಿಲ್ 20: ಬಾಗಲಕೋಟೆಯಲ್ಲಿ (Bagalkot) ಸೂರ್ಯನ ತಾಪ (Heat wave) ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಬರೋಬ್ಬರಿ 39 ಡಿಗ್ರಿ ಸೆಲ್ಸಿಯಸ್ ತಲುಪಿದೆ. ಇದರ ಬೆನ್ನಲ್ಲೇ ಜಿಲ್ಲೆಯ ಪ್ರಮುಖ ಜಲಮೂಲಗಳು ಬತ್ತುತ್ತಿದ್ದು, ಜನರಲ್ಲಿ ಜಲಕ್ಷಾಮದ ಭೀತಿ ಆವರಿಸಿದೆ. ಜಿಲ್ಲೆಯ ಜೀವನದಿಗಳಾದ ಕೃಷ್ಣಾ, ಘಟಪ್ರಭಾ ಮತ್ತು ಮಲಪ್ರಭಾ ನದಿಗಳಲ್ಲಿ ನೀರಿನ ಮಟ್ಟ ತಳಮಟ್ಟಕ್ಕೆ ಕುಸಿದಿದೆ. ಬತ್ತಿದ ಜಲಮೂಲಗಳು ಆಲಮಟ್ಟಿ ಹಿನ್ನೀರು ಹಾಗೂ ಕೃಷ್ಣಾ ನದಿ ಪಾತ್ರದಲ್ಲಿ ನೀರು ಸಂಪೂರ್ಣವಾಗಿ…

Read More

ಹಿಂದೂ ದೇವಾಲಯಗಳಲ್ಲಿರುವ ಚಿನ್ನವನ್ನು ಸಾರ್ವಜನಿಕ ಉದ್ದೇಶಕ್ಕೆ ಬಳಸಿ: ಫಾದರ್ ಪೌಲ್ – Kannada News | Church vs Temple Assets: FCRA Bill Fuels Religious Controversy Over Foreign Funds

ಕೊಚ್ಚಿ, ಏ.20: ವಿದೇಶಿ ದೇಣಿಗೆ (ನಿಯಂತ್ರಣ) ತಿದ್ದುಪಡಿ (FCRA) ಮಸೂದೆಗೆ ಸಂಬಂಧಿಸಿದಂತೆ ಸಿರೋ-ಮಲಬಾರ್ ಚರ್ಚಿನ ಧರ್ಮಗುರು ಫಾದರ್ ಪಾಲ್ ತೇಲಕ್ಕಾಟ್ ನೀಡಿರುವ ಹೇಳಿಕೆ ಈಗ ಹೊಸ ವಿವಾದಕ್ಕೆ ನಾಂದಿ ಹಾಡಿದೆ. “ಕ್ರೈಸ್ತ ಚರ್ಚ್‌ಗಳು ದೇವಸ್ಥಾನಗಳಂತೆ ಹಣ ಅಥವಾ ಆಸ್ತಿಯನ್ನು ಕೂಡಿಡುವುದಿಲ್ಲ” ಎಂಬ ಅವರ ಹೇಳಿಕೆ ಹಿಂದೂ ಸಂಘಟನೆಗಳ ತೀವ್ರ ಆಕ್ರೋಶಕ್ಕೆ ಗುರಿಯಾಗಿದೆ. ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಫಾದರ್ ಪಾಲ್ ತೇಲಕ್ಕಾಟ್ ವಿವಾದತ್ಮಕ ಹೇಳಿಕೆ ನೀಡಿದ್ದಾರೆ. ಚರ್ಚ್‌ಗಳು ತಮ್ಮಲ್ಲಿರುವ ಹಣವನ್ನು ಶಿಕ್ಷಣ, ಆರೋಗ್ಯ ಮತ್ತು ಸಾರ್ವಜನಿಕ ಸೇವೆಗೆ ಬಳಸುತ್ತವೆ….

Read More

ನಾನು ಸರ್ಕಾರ ಅಲ್ಲ, ಸಚಿವ ಸಂಪುಟ ಸ್ಥಾನ ಮಾನ ನೀಡಿರೋದು ಗೌರವಕ್ಕೆ: ರಾಯರೆಡ್ಡಿ ಹೀಗೆ ಹೇಳಿದ್ಯಾಕೆ? – Kannada News | Im Not a Minister, no power Says Congress MLA Basavaraj rayareddy In Koppal

ಕೊಪ್ಪಳ, (ಏಪ್ರಿಲ್ 20): ಇತ್ತೀಚೆಗೆ ಕೊಪ್ಪಳದಲ್ಲಿ ಜಿಲ್ಲೆಗಯಲ್ಲಿ ಮೂರ್ತಿಗಳ ಭಗ್ನ ಪ್ರಕರಣಗಳು ಹೆಚ್ಚಾಗುತ್ತಿವೆ. ಅಂಬೇಡ್ಕರ್ ಹಾಗೂ ದೇವರುಗಳ ಮೂರ್ತಿಗಳಿಗೆ ಕಿಡಿಗೇಡಿಗಳು ಹಾನಿ ಮಾಡುತ್ತಿದ್ದಾರೆ. ಮೂರ್ತಿಗಳ ಬಳಿ ಸಿಸಿ ಟಿವಿ ಅಳವಡಿಸಲು ನಿರ್ದೇಶನ ಮಾಡುತ್ತೀರಾ ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಿಎಂ ಆರ್ಥಿಕ ಸಲಹೆಗಾರ ಬಸವರಾಜ್ ರಾಯರೆಡ್ಡಿ (Basavaraj rayareddy) ,ನಾನ ಮಾಡಲ್ಲ, ಸರ್ಕಾರ ಮಾಡಬೇಕು. ಶಾಸಕರಿಗೆ ಅಧಿಕಾರ ಇರಲ್ಲ. ಮಂತ್ರಿಗೆ ಅಧಿಕಾರ ಇರತ್ತೆ. ನಾನು ಸಲಹೆಗಾರ ಮಾತ್ರ. ಮಂತ್ರಿ ಅಲ್ಲ. ನನನೆ ಸಚಿವ ಸಂಪುಟ ಸ್ಥಾನ…

Read More

ದೇಗುಲಕ್ಕೆ ಬರುವ ಭಕ್ತರನ್ನ ಬಿಸಿಲಿನಿಂದ ರಕ್ಷಿಸಲು ಗ್ರೀನ್ ಮ್ಯಾಟ್ ಅಳವಡಿಕೆ – Kannada News | Mailara Mallanna Temple Battles Heat: Green Mats Ensure Devotee Comfort and Darshan

ಮೈಲಾರ ಮಲ್ಲಣ್ಣ ದೇವಸ್ಥಾನದಲ್ಲಿ ಗ್ರೀನ್ ‌ಮ್ಯಾಟ್ ಅಳವಡಿಕೆImage Credit source: tv9 kannada ಬೀದರ್, ಏಪ್ರಿಲ್​ 20: ಜಿಲ್ಲೆಯಲ್ಲಿ ಬಿಸಿಲಿನ (heat) ಕಾವು ದಿನದಿಂದ ದಿನಕ್ಕೆ ಏರುತ್ತಲಿದೆ. ಇದರಿಂದ ಹೆದರಿ ಜನರು ಮನೆಯಿಂದ ಹೊರಬರುತ್ತಿಲ್ಲ. ಜಿಲ್ಲೆಯಲ್ಲಿ ಪ್ರತಿದಿನ 36ರಿಂದ 41 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗುತ್ತಿದೆ. ಇನ್ನು ದೇವಸ್ಥಾನಕ್ಕೂ ಭಕ್ತರು ಹೋಗಲು ಹಿಂದೆಟು ಹಾಕುತ್ತಿದ್ದಾರೆ. ಹೀಗಾಗಿ ಭಕ್ತರಿಗೆ ನೆರಳು ಒದಗಿಸುವ ದೃಷ್ಟಿಯಿಂದ ದೇವಸ್ಥಾನದಲ್ಲಿ ಗ್ರೀನ್ ಮ್ಯಾಟ್ ಅಳವಡಿಸಲಾಗಿದೆ. ಆ ಮೂಲಕ  ಭಕ್ತರ ಖುಷಿ ಹೆಚ್ಚಿಸುವಂತೆ ಮಾಡಿದೆ. ಬಿಸಿಲ…

Read More

ETPL 2026: ಟಿ20 ತಂಡ ಖರೀದಿಸಿದ ಕ್ರಿಸ್ ಗೇಲ್ – Kannada News | Chris Gayle Buys Glasgow Team in ETPL

ಟಿ20 ಕ್ರಿಕೆಟ್ ಲೀಗ್​ಗೆ ಮತ್ತೊಂದು ಟೂರ್ನಿ ಸೇರ್ಪಡೆಯಾಗುತ್ತಿದೆ. ಹೊಸ ಟೂರ್ನಿ ಆಯೋಜನೆಗೊಳ್ಳಲಿರುವುದು ದೂರದ ಯುರೋಪಿನಲ್ಲಿ. ಅದರಂತೆ ಶೀಘ್ರದಲ್ಲೇ ಯುರೋಪಿಯನ್ ಟಿ20 ಪ್ರೀಮಿಯರ್ ಲೀಗ್‌ಗೆ (ETPL) ಚಾಲನೆ ದೊರೆಯಲಿದೆ.  ಬಾಲಿವುಡ್ ನಟ ಅಭಿಷೇಕ್ ಬಚ್ಚನ್ ಸಹ-ಮಾಲೀಕತ್ವದ ಈ ಲೀಗ್‌ನಲ್ಲಿ, ಗ್ಲ್ಯಾಸ್ಗೋ ಫ್ರಾಂಚೈಸಿಯನ್ನು ವೆಸ್ಟ್ ಇಂಡೀಸ್​ನ ಮಾಜಿ ಕ್ರಿಕೆಟಿಗ ಕ್ರಿಸ್ ಗೇಲ್ ಖರೀದಿಸಿದ್ದಾರೆ.  ‘ಗ್ಲ್ಯಾಸ್ಗೋ ಮುಗಾಫಿಯನ್ಸ್’ ವೆಸ್ಟ್ ಇಂಡೀಸ್‌ನ ಮಾಜಿ ಆಟಗಾರ ಕ್ರಿಸ್ ಗೇಲ್ ಅವರು ಕೇವಲ ಈ ತಂಡದ ಸಹ-ಮಾಲೀಕರಷ್ಟೇ ಅಲ್ಲದೆ, ಗ್ಲ್ಯಾಸ್ಗೋ ಮುಗಾಫಿಯನ್ಸ್ ತಂಡದ ಜಾಗತಿಕ ರಾಯಭಾರಿಯಾಗಿಯೂ…

Read More

ಕೊನೆಗೂ ಹುಡುಗಿ ಯಾರೆಂದು ಪರಿಚಯಿಸಿದ ಗಿಚ್ಚಿ ಗಿಲಿಗಿಲಿ ಖ್ಯಾತಿಯ ಪ್ರಶಾಂತ್ ಗೌಡ – Kannada News | Gicchi Giligili Fame Prashanth Gowda Reveals Bride Kruthi Gowda: Wedding and Engagement News

‘ಗಿಚ್ಚಿ ಗಿಲಿ ಗಿಲಿ’, ‘ಕ್ವಾಟ್ಲೆ ಕಿಚನ್’ ರೀತಿಯ ಶೋಗಳ ಮೂಲಕ ಗಮನ ಸೆಳೆದ ಪ್ರಶಾಂತ್ ಗೌಡ ಅವರಿಗೆ ಈಗ ಕಂಕಣ ಭಾಗ್ಯ ಕೂಡಿ ಬಂದಿದೆ. ಅವರು ಕಳೆದ ಕೆಲ ದಿನಗಳಿಂದ ಹೆಣ್ಣು ನೋಡವ ಶಾಸ್ತ್ರದ ವಿಡಿಯೋಗಳನ್ನು ಹಂಚಿಕೊಳ್ಳುತ್ತಾ ಬರುತ್ತಿದ್ದರು. ಆದರೆ, ಎಲ್ಲಿಯೂ ಅವರು ಹುಡುಗಿ ಯಾರು ಎಂಬುದನ್ನು ರಿವೀಲ್ ಮಾಡಿರಲಿಲ್ಲ. ಈಗ ಹೊಸ ವಿಡಿಯೋ ಹಂಚಿಕೊಂಡು ಆ ಬಗ್ಗೆ ಮಾಹಿತಿ ನೀಡಿದ್ದಾರೆ. ಅವರ ಹುಡುಗಿ ನೋಡಿ ಅಭಿಮಾನಿಗಳಿಗೆ ಖುಷಿ ಆಗಿದ್ದು, ಶುಭಾಶಯ ತಿಳಿಸಿದ್ದಾರೆ. ಪ್ರಶಾಂತ್ ಗೌಡ ಅವರು…

Read More

ಕ್ರಿಕೆಟ್ ಬಾಲ್​ ಒಳಗೆ ಗಾಂಜಾ, ಮೊಬೈಲ್ ಇಟ್ಟು ಕೈದಿಗಳಿಗೆ ಸಪ್ಲೈ!

ಮಂಡ್ಯ, ಏಪ್ರಿಲ್ 20: ಜಿಲ್ಲೆಯ ಜೈಲಿನಲ್ಲಿ ಕೈದಿಗಳಿಗೆ ಗಾಂಜಾ ಹಾಗೂ ಮೊಬೈಲ್ ಒದಗಿಸಲು ಖತರ್ನಾಕ್ ತಂತ್ರವನ್ನು ಬಳಸಲಾಗುತ್ತಿದೆ. ಜೈಲಿನಲ್ಲಿ ಮಾದಕವಸ್ತು ಮತ್ತು ನಿಷಿದ್ಧ ವಸ್ತುಗಳ ಪೂರೈಕೆ ಬಗ್ಗೆ ವ್ಯಾಪಕ ಆರೋಪಗಳು ಕೇಳಿಬಂದಿರುವ ಹಿನ್ನೆಲೆಯಲ್ಲಿ, ಇದೀಗ ಹೊಸ ರೀತಿಯ ಕಳ್ಳಾಟವೊಂದು ಬಯಲಾಗಿದೆ. ದುಷ್ಕರ್ಮಿಗಳು ಕ್ರಿಕೆಟ್ ಬಾಲ್ ಒಳಗೆ ಗಾಂಜಾ ಮತ್ತು ಮೊಬೈಲ್ ಫೋನ್ ಇರಿಸಿ, ಅದನ್ನು ಜೈಲಿನ ಕಾಂಪೌಂಡ್ ಒಳಗೆ ಎಸೆದು ಪರಾರಿಯಾಗಿದ್ದಾರೆ. ಈ ಘಟನೆಯು ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿದ್ದು, ಕೈದಿಗಳ ಕಳ್ಳಾಟ ಬಯಲಿಗೆ ಬಂದಿದೆ. ಬಾಲ್ ಎಸೆದ…

Read More

ನಲಪಾಡ್ ಮನೆ ಮೇಲೆ ಇ.ಡಿ ದಾಳಿಗೆ ಕಾರಣವಾಯ್ತಾ 10 ಲಕ್ಷ ರೂ! – Kannada News | Bitcoin Scam: Did a Rs 10 Lakh Transaction Trigger ED Raids on Mohammed Nalapad? 2020 Fraud Case Investigation

ಬೆಂಗಳೂರು, ಏಪ್ರಿಲ್ 20: ಬಿಟ್‌ಕಾಯಿನ್ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ಬೆಂಗಳೂರಿನಲ್ಲಿರುವ ಕಾಂಗ್ರೆಸ್ ಶಾಸಕ ಎನ್.ಎ. ಹ್ಯಾರಿಸ್ ಪುತ್ರ ನಲಪಾಡ್ ನಿವಾಸ ಸೇರಿದಂತೆ 12 ಕಡೆ ಏಕಕಾಲಕ್ಕೆ ದಾಳಿ ನಡೆಸಿದ್ದಾರೆ. ಸೋಮವಾರ ಬೆಳಗ್ಗೆ 6 ಗಂಟೆಯಿಂದ ಆರಂಭವಾದ ಈ ಪರಿಶೀಲನೆ ಈಗಲೂ ಮುಂದುವರಿದಿದೆ. ಅಂದಹಾಗೆ, 10 ಲಕ್ಷ ರೂ. ವಹಿವಾಟಿಗೆ ಸಂಬಂಧಿಸಿ ಈ ದಾಳಿ ನಡೆದಿದೆಯಾ ಎಂಬ ಪ್ರಶ್ನೆ ಈಗ ಮೂಡಿದೆ. ಅದಕ್ಕೆ ಕಾರಣ 2020ರಲ್ಲಿ ದಾಖಲಾಗಿದ್ದ ದೂರು. 2020ರಲ್ಲಿ ಯಶೋದಾದೇವಿ ಎಂಬುವವರು ಅಶೋಕನಗರ…

Read More

ಆಂಧ್ರಪ್ರದೇಶ: ಸಿಎಂ ಚಂದ್ರಬಾಬು ನಾಯ್ಡು ಮಾಧ್ಯಮಗಳೊಂದಿಗೆ ಮಾತನಾಡುತ್ತಿರುವಾಗ ಕುಸಿದ ಬಿದ್ದ ಎನ್​ಎಸ್​ಜಿ ಕಮಾಂಡೋ – Kannada News | NSG Commando Collapses During CM Chandrababu Naidu’s Public Interaction Amid Heat

ಆಂಧ್ರಪ್ರದೇಶ, ಏಪ್ರಿಲ್ 20: ಇಂದು ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಅವರ ಹುಟ್ಟುಹಬ್ಬ. ಈ ಪ್ರಯುಕ್ತ ನಾಯ್ಡು ದಂಪತಿ ವಿಜಯವಾಡದಲ್ಲಿರುವ ಪಟಮಟ ಅನ್ನ ಕ್ಯಾಂಟೀನ್‌ಗೆ ಬಂದಿದ್ದರು.ಅಲ್ಲಿ ಅವರು ಬಡವರಿಗೆ ಉಪಾಹಾರ ಬಡಿಸಿದರು. ಈ ಭೇಟಿಯ ಸಮಯದಲ್ಲಿ ಅನಿರೀಕ್ಷಿತ ಘಟನೆಯೊಂದು ಸಂಭವಿಸಿತ್ತು. ಕಾರ್ಯಕ್ರಮದ ನಂತರ ಸಿಎಂ ಹೊರಗೆ ಮಾಧ್ಯಮಗಳೊಂದಿಗೆ ಮಾತನಾಡುತ್ತಿದ್ದಾಗ, ಅವರ ಸುರಕ್ಷತಾ ತಂಡದ ಭಾಗವಾಗಿದ್ದ ಎನ್‌ಎಸ್‌ಜಿ ಕಮಾಂಡೋ ವಿಪರೀತ ಸೆಕೆಯಿಂದಾಗಿ ಕುಸಿದುಬಿದ್ದಿದ್ದಾರೆ. ಮಾಹಿತಿ ತಿಳಿದ ಇತರ ಭದ್ರತಾ ಸಿಬ್ಬಂದಿ ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ…

Read More