ಕ್ರೈಸ್ತ ವ್ಯಕ್ತಿಯಿಂದ ದೈವ ನರ್ತನ ಸೇವೆ ಆರೋಪ:ಜಾತಿ ಪ್ರಮಾಣಪತ್ರ ಮೂಲಕ ದೈವ ನರ್ತಕ ಸ್ಪಷ್ಟನೆ
ಮಂಗಳೂರು, (ಮಾರ್ಚ್ 18): ಮಂಗಳೂರಿನ ದೈವಸ್ಥಾನವೊಂದರಲ್ಲಿ ನಡೆದ ದೈವ ನರ್ತನ ಸೇವೆ ಇದೀಗ ದೊಡ್ಡ ವಿವಾದಕ್ಕೆ (Mangaluru Daivaradhane Row) ಕಾರಣವಾಗಿದೆ. ಪಂಬದ ಸಮಾಜದ ಸಂಶೋಧಕಿ ಡಾ. ರತಿ ಕೆಲ ದಿನಗಳ ಹಿಂದೆ ಗಂಭೀರ ಆರೋಪ ಮಾಡಿದ್ದರು. ಬಂಟ ದೈವದ ನರ್ತನ ಸೇವೆ ವೇಳೆ ಕ್ರೈಸ್ತ ಧರ್ಮದ ವ್ಯಕ್ತಿಯಿಂದ ದೈವ ನರ್ತನ ಮಾಡಿಸಲಾಗಿದೆ ಎಂದು ಅವರು ಹೇಳಿಕೆ ನೀಡಿದ್ದರು. ಶ್ರೀ ಜಾರಂದಾಯ ದೈವಕ್ಕೆ ನಿಯಮಾನುಸಾರ ಪಂಬದ ಸಮುದಾಯದವರೇ ನರ್ತನ ಮಾಡಿದ್ದರೂ, ಬಂಟ ದೈವಕ್ಕೆ ಮಾತ್ರ ಅನ್ಯಧರ್ಮದ ವ್ಯಕ್ತಿಗೆ…