Headlines

PAK vs AUS: ತವರಿನಲ್ಲಿ ಆಸ್ಟ್ರೇಲಿಯಾವನ್ನು ಮಣಿಸಿ ಟಿ20 ಸರಣಿ ಗೆದ್ದ ಪಾಕಿಸ್ತಾನ – Kannada News | Pakistan Secures T20 Series Win vs Australia, Boosts World Cup Morale

ಟಿ20 ವಿಶ್ವಕಪ್​ ಆರಂಭಕ್ಕೂ ಮುನ್ನ ತವರಿನಲ್ಲಿ ಆಸ್ಟ್ರೇಲಿಯಾ ವಿರುದ್ಧ ಮೂರು ಪಂದ್ಯಗಳ ಟಿ20 ಸರಣಿಯನ್ನು ಆಡುತ್ತಿರುವ ಪಾಕಿಸ್ತಾನ ತಂಡ ಇನ್ನೊಂದು ಪಂದ್ಯ ಬಾಕಿ ಇರುವಂತೆಯೇ ಈ ಸರಣಿಯನ್ನು ತನ್ನ ಕೈವಶ ಮಾಡಿಕೊಂಡಿದೆ. ಪ್ರಮುಖ ಆಟಗಾರರಿಲ್ಲದೆ ಪಾಕಿಸ್ತಾನಕ್ಕೆ ತೆರಳಿದ್ದ ಆಸ್ಟ್ರೇಲಿಯಾ ಟಿ20 ವಿಶ್ವಕಪ್​ಗೂ ಮುನ್ನ ಟಿ20 ಸರಣಿ ಸೋಲಿನ ಆಘಾತಕ್ಕೀಡಾಗಿದೆ. ಸರಣಿಯ ಮೊದಲ ಪಂದ್ಯವನ್ನು ಏಕಪಕ್ಷೀಯವಾಗಿ ಗೆದ್ದುಕೊಂಡಿದ್ದ ಪಾಕಿಸ್ತಾನ ಇದೀಗ ಸರಣಿಯ ಎರಡನೇ ಪಂದ್ಯವನ್ನು ಬರೋಬ್ಬರಿ 90 ರನ್​ಗಳಿಂದ ಗೆದ್ದುಕೊಂಡಿದೆ. ಟಿ20 ವಿಶ್ವಕಪ್​ಗೂ ಮುನ್ನ ಆಸ್ಟ್ರೇಲಿಯಾ ತಂಡವನ್ನು ಮಣಿಸಿರುವುದು…

Read More

ನಟಿಯರ ಪರವಾಗಿ ಚಿತ್ರರಂಗಕ್ಕೆ ವಿಶೇಷ ಮನವಿ ಮಾಡಿದ ರಚಿತಾ ರಾಮ್

ಚಿತ್ರಮಂದಿರಗಳ ಎದುರು ಸಾಮಾನ್ಯವಾಗಿ ದೊಡ್ಡದಾಗಿ ಹೀರೋಗಳ ಕಟೌಟ್ ಹಾಕಲಾಗುತ್ತದೆ. ಹೀರೋಯಿನ್​​ಗಳ ಕಟೌಟ್ ನಿಲ್ಲಿಸಲಾಗೋದಿಲ್ಲ. ‘ಲ್ಯಾಂಡ್​ ಲಾರ್ಡ್’ ಸಿನಿಮಾಗಾಗಿ ರಚಿತಾ ಕಟೌಟ್ ನಿಲ್ಲಿಸಲಾಗಿದೆ. ಹೀರೋಗಳ ಪಕ್ಕದಲ್ಲಿ ಹೀರೋಯಿನ್​​​ಗಳ ಕಟೌಟ್ ನಿಲ್ಲಿಸಬೇಕು ಎಂಬುದು ಅವರ ಕೋರಿಕೆ. ‘ಎಲ್ಲಾ ಹೀರೋಯಿನ್​​​ಗಳು ಕಟೌಟ್ ಬೇಕು. ಅವರ ಕಟೌಟ್ ನಿಲ್ಲಿಸಬೇಕು. ಇದು ಚಿತ್ರತಂಡಕ್ಕೆ ನನ್ನ ಮನವಿ’ ಎಂದು ಅವರು ಹೇಳಿದ್ದಾರೆ. ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ. Source link

Read More

Suvendu Adhikari: ಪಶ್ಚಿಮ ಬಂಗಾಳದ ಮೊದಲ ಬಿಜೆಪಿ ಮುಖ್ಯಮಂತ್ರಿಯಾಗಿ ಸುವೇಂದು ಅಧಿಕಾರಿ ಆಯ್ಕೆ; ನಾಳೆಯೇ ಪ್ರಮಾಣವಚನ – Kannada News | Suvendu Adhikari selected as BJPs first Chief Minister in West Bengal Amit Shah Announces

ಕೊಲ್ಕತ್ತಾ, ಮೇ 8: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಐತಿಹಾಸಿಕ ಗೆಲುವಿನ ನಂತರ, ಸುವೇಂದು ಅಧಿಕಾರಿ ಅವರನ್ನು ರಾಜ್ಯದ ಮೊದಲ ಬಿಜೆಪಿ ಮುಖ್ಯಮಂತ್ರಿಯಾಗಿ ಘೋಷಿಸಲಾಗಿದೆ. ಅವರು ನಾಳೆ (ಶನಿವಾರ) ಬೆಳಗ್ಗೆ 11 ಗಂಟೆಗೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಅವರು ಮೊದಲು ನಂದಿಗ್ರಾಮದಲ್ಲಿ ಮತ್ತು ಈಗ ಭವಾನಿಪುರದಲ್ಲಿ ಮಾಜಿ ಸಿಎಂ ಮಮತಾ ಬ್ಯಾನರ್ಜಿ ಅವರನ್ನು ಸೋಲಿಸಿ, ಬಂಗಾಳದಲ್ಲಿ ಬಿಜೆಪಿಯ ಅತ್ಯಂತ ಪ್ರಭಾವಿ ನಾಯಕನಾಗಿ ಹೊರಹೊಮ್ಮುವ ಮೂಲಕ ಟಿಎಂಸಿ ಸರ್ಕಾರಕ್ಕೆ ಸವಾಲು ಹಾಕಿದ್ದರು. Source link

Read More

ಬೇರೆಯವರ ಪ್ಯಾನ್ ಕಾರ್ಡ್ ದಾಖಲೆ ಬಳಸಿ ಸಾಲ ಸೂರೆಗೊಂಡ ವಂಚಕರು; ನಿಮ್ಮ ಪ್ಯಾನ್ ದುರ್ಬಳಕೆ ಗುರುತಿಸುವುದು ಹೇಗೆ?

ಬೆಂಗಳೂರು, ಏಪ್ರಿಲ್ 8: ಆಧಾರ್, ಪ್ಯಾನ್ ಇತ್ಯಾದಿ ವೈಯಕ್ತಿಕ ದಾಖಲೆಗಳನ್ನು ಎಲ್ಲೆಂದರಲ್ಲಿ ನೀಡಬಾರದು ಎಂದು ಸರ್ಕಾರ ಪದೇ ಪದೇ ಹೇಳುತ್ತಿರುತ್ತದೆ. ವಂಚಕರು ಈ ದಾಖಲೆಗಳನ್ನು ದುರ್ಬಳಕೆ ಮಾಡಿಕೊಳ್ಳುವ ಸಾಧ್ಯತೆ ಇರುತ್ತದೆ. ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ಬಹಿರಂಗವಾದ ಘಟನೆಯೊಂದು ಈ ಎಚ್ಚರಿಕೆಯನ್ನು ಪುಷ್ಟೀಕರಿಸುತ್ತದೆ. ಒಬ್ಬ ವ್ಯಕ್ತಿಯ ಪ್ಯಾನ್ ಕಾರ್ಡ್ (PAN) ಅನ್ನು ಪಡೆದು, ದುರುಳರು 22 ಲಕ್ಷ ರೂ ಮೊತ್ತದ ಐದು ವಿವಿಧಗಳನ್ನು ಮಾಡಿದ್ದಾರೆ. ಉತ್ತಮವಾಗಿದ್ದ ಆ ವ್ಯಕ್ತಿಯ ಕ್ರೆಡಿಟ್ ಸ್ಕೋರ್ ಒಮ್ಮೆಗೇ ಕುಸಿದಿದೆ. ಈ ಘಟನೆಯನ್ನು ಟ್ಯಾಕ್ಸ್…

Read More

ಕಾಂಗ್ರೆಸ್ ಶಾಸಕ ಹ್ಯಾರಿಸ್, ಪುತ್ರ ನಲಪಾಡ್ ಮನೆ ಮೇಲೆ ಇ.ಡಿ ದಾಳಿ – Kannada News | ED Raids Congress MLA NA Haris and Son Mohammed Nalapad’s Residences in Bengaluru Over Bitcoin Scam Links

ಬೆಂಗಳೂರು, ಏಪ್ರಿಲ್ 20: ಕಾಂಗ್ರೆಸ್ ಶಾಸಕ ಎನ್​ಎ ಹ್ಯಾರಿಸ್ ಮತ್ತು ಅವರ ಪುತ್ರ ಮೊಹಮ್ಮದ್ ನಲಪಾಡ್ ನಿವಾಸಗಳ ಮೇಲೆ ಸೋಮವಾರ ಬೆಳಗ್ಗೆ ಜಾರಿ ನಿರ್ದೇಶನಾಲಯ (ಇ.ಡಿ.) ದಾಳಿ ನಡೆಸಿದೆ. ಬೆಂಗಳೂರಿನ ಅಶೋಕನಗರದಲ್ಲಿರುವ ಹ್ಯಾರಿಸ್ ನಿವಾಸ ಹಾಗೂ ಮೊಹಮ್ಮದ್ ನಲಪಾಡ್ ಮನೆಯ ಮೇಲೆ ದಾಳಿ ನಡೆದಿದೆ. ಬಿಟ್‌ಕಾಯಿನ್ ಹಗರಣಕ್ಕೆ ಸಂಬಂಧಿಸಿದಂತೆ ಈ ದಾಳಿ ನಡೆದಿದೆ. ಇ.ಡಿ. ಅಧಿಕಾರಿಗಳು ಬೆಂಗಳೂರು ಸೇರಿದಂತೆ ಒಟ್ಟು 17 ಸ್ಥಳಗಳಲ್ಲಿ ಮಹತ್ವದ ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ. ಮೊಹಮ್ಮದ್ ನಲಪಾಡ್ ಹ್ಯಾಕರ್ ಶ್ರೀಕಿ ಜೊತೆ ನಂಟು…

Read More

ಸಂಬಂಧಿಯಿಂದಲೇ ನಟಿ ಕಾವ್ಯಾ ಗೌಡಗೆ ಬಂತು ರೇಪ್ ಬೆದರಿಕೆ; ಪತಿಯ ಮೇಲೆ ಹಲ್ಲೆ – Kannada News | Kavya Gowda’s Husband Somashekhar Attacked Amidst Family Feud: FIR Filed

‘ಗಾಂಧಾರಿ’, ‘ರಾಧಾ ರಮಣ’ ಧಾರಾವಾಹಿಗಳಲ್ಲಿ (Serial Actress) ನಟಿಸಿರೋ ಕಾವ್ಯಾ ಗೌಡ ಅವರು ಇತ್ತೀಚೆಗೆ ಬಣ್ಣದ ಲೋಕದಿಂದ ಅಂತರ ಕಾಯ್ದುಕೊಂಡಿದ್ದಾರೆ. ಕೆಲವು ಜಾಹೀರಾತುಗಳಲ್ಲಿ ಮಾತ್ರ ಮಿಂಚುತ್ತಿದ್ದಾರೆ. ಈಗ ಅವರು ಕುಟುಂಬದ ಜೊತೆ ಸಮಯ ಕಳೆಯುತ್ತಿದ್ದಾರೆ. ಹೀಗಿರುವಾಗಲೇ ಕಾವ್ಯ ಗೌಡ ಪತಿ ಸೋಮಶೇಖರ್ ಮೇಲೆ ಹಲ್ಲೆ ನಡೆದಿದೆ. ನಟಿ ಕಾವ್ಯ ಗೌಡ ಗಳಿಸಿರುವ ಜನಪ್ರಿಯತೆಯನ್ನು ಸಿಹಿಸದೆ ಈ ಹಲ್ಲೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ನಟಿ ಕಾವ್ಯಾ ಗೌಡ ಅವರು ಕೆಲ ವರ್ಷಗಳ ಹಿಂದೆ ಉದ್ಯಮಿ ಸೋಮಶೇಖರ್ ಅವರನ್ನು ಮದುವೆ…

Read More

IND vs SL: ಕೊನೆಯ ಎಸೆತದಲ್ಲಿ ಸೋತ ಭಾರತ; ಶ್ರೀಲಂಕಾ ಪಾಲಾದ ಏಕದಿನ ಸರಣಿ – Kannada News | India U19 Lose Thrilling ODI Series to Sri Lanka 1 2: Final Match Decided on Last Ball

ಮೂರು ಪಂದ್ಯಗಳ ಯುವ ಏಕದಿನ ಸರಣಿಗಾಗಿ ಶ್ರೀಲಂಕಾ ಪ್ರವಾಸ ಮಾಡಿದ 19 ವರ್ಷದೊಳಗಿನವರ ಭಾರತ ತಂಡ ಸರಣಿ ಸೋಲಿನೊಂದಿಗೆ ಪ್ರವಾಸವನ್ನು ಅಂತ್ಯಗೊಳಿಸಿದೆ. ಮೊದಲ ಏಕದಿನ ಪಂದ್ಯವನ್ನು ಗೆಲ್ಲುವ ಮೂಲಕ ಸರಣಿಯಲ್ಲಿ ಶುಭಾರಂಭ ಮಾಡಿದ್ದ ಭಾರತ ಯುವ ಪಡೆ, ಕೊನೆಯ ಎರಡು ಪಂದ್ಯಗಳನ್ನು ಸೋಲುವ ಮೂಲಕ ಸರಣಿಯನ್ನು ಕಳೆದುಕೊಂಡಿತು. ಸರಣಿಯ ಮೂರನೇ ಹಾಗೂ ಕೊನೆಯ ಏಕದಿನ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಭಾರತ ತಂಡ 290 ರನ್​ಗಳ ಸ್ಪರ್ಧಾತ್ಮಕ ಮೊತ್ತವನ್ನು ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಶ್ರೀಲಂಕಾ ಕೊನೆಯ…

Read More

IND vs NZ: ರೋ-ಕೊ ಕ್ರೇಜ್.. 480 ಸೆಕೆಂಡ್​ಗಳಲ್ಲಿ ಎಲ್ಲಾ ಟಿಕೆಟ್ಸ್ ಸೋಲ್ಡ್ ಔಟ್ – Kannada News | IND vs NZ ODI Series: Kohli Rohit Fever Sells Out Baroda Tickets in Minutes!

ಭಾರತ ಮತ್ತು ನ್ಯೂಜಿಲೆಂಡ್ (India vs New Zealand) ನಡುವಿನ ಮೂರು ಪಂದ್ಯಗಳ ಏಕದಿನ ಸರಣಿ ಜನವರಿ 11 ರಂದು ಆರಂಭವಾಗಲಿದೆ. ಈ ಸರಣಿಯ ಮೊದಲ ಪಂದ್ಯ ಜನವರಿ 11 ರಂದು ಬರೋಡಾದಲ್ಲಿ ನಡೆಯಲಿದೆ. ಈ ಸರಣಿಗಾಗಿ ಇನ್ನು ಟೀಂ ಇಂಡಿಯಾವನ್ನು ಪ್ರಕಟಿಸಿಲ್ಲ. ಆದಾಗ್ಯೂ ಈ ತಂಡದಲ್ಲಿ ಯಾರೆಲ್ಲ ಇರಬಹುದು ಎಂಬುದು ಈಗಾಗಲೇ ಖಚಿತವಾಗಿದೆ. ಹಾಗೆಯೇ ತಂಡದಲ್ಲಿ ಏನೆಲ್ಲ ಬದಲಾವಣೆಗಳಾದರೂ ರೋಹಿತ್ ಶರ್ಮಾ (Rohit Sharma) ಮತ್ತು ವಿರಾಟ್ ಕೊಹ್ಲಿ (Virat Kohli) ಆಡುವುದಂತೂ ಖಚಿತ. ಹೀಗಾಗಿ…

Read More

ತೆಲುಗು ರಾಜ್ಯಗಳಲ್ಲಿ ಪವನ್ ಕಲ್ಯಾಣ್ ಚಿತ್ರಕ್ಕೆ ಹೊಡೆತ ಕೊಟ್ಟ ‘ಧುರಂಧರ್ 2’

‘ಟಾಕ್ಸಿಕ್’ vs ‘ಧುರಂಧರ್ 2’ ಎಂಬ ಟಾಕ್ ಜೋರಾಗಿತ್ತು. ಆದರೆ, ಯಶ್ ಅವರು ತಮ್ಮ ಚಿತ್ರವನ್ನು ಮುಂದಕ್ಕೆ ಹಾಕಿಕೊಳ್ಳುವ ಮೂಲಕ ಕ್ಲ್ಯಾಶ್ ತಪ್ಪಿಸಿದರು. ಹೀಗಾಗಿ, ‘ಧುರಂಧರ್ 2’ ಸೋಲೋ ರಿಲೀಸ್ ಕಾಣಲಿದೆ ಎನ್ನುವಾಗಲೇ ಪವನ್ ಕಲ್ಯಾಣ್ ಅವರ ‘ಉಸ್ತಾದ ಭಗತ್ ಸಿಂಗ್’ ಸಿನಿಮಾ ರಿಲೀಸ್ ಆಗುತ್ತಿದೆ. ಆದರೆ, ಈ ಚಿತ್ರಕ್ಕೆ ತೆಲುಗು ಭಾಗದಲ್ಲೇ ‘ಧುರಂಧರ್ 2’ ಸಿನಿಮಾ ಹೊಡೆತ ಕೊಡೋ ಸಾಧ್ಯತೆ ಇದೆ ಎಂದು ವರದಿ ಆಗಿದೆ. ‘ಧುರಂಧರ್ 2’ ಚಿತ್ರದ ದೊಡ್ಡ ಬಲ ಎಂದರೆ, ‘ಧುರಂಧರ್’…

Read More

ಶ್ರೇಯಾಂಕ ಪಾಟೀಲ್​ಗೆ ಗಂಭೀರ ಗಾಯ..! ಕಣ್ಣೀರಿಡುತ್ತ ಮೈದಾನ ತೊರೆದ ಕನ್ನಡತಿ – Kannada News | Major Blow! Shreyanka Patil Seriously Injured at 2026 Women’s T20 World Cup

ಇಂಗ್ಲೆಂಡ್​ನಲ್ಲಿ ನಡೆಯುತ್ತಿರುವ 2026 ರ ಮಹಿಳಾ ಟಿ20 ವಿಶ್ವಕಪ್‌ನಲ್ಲಿ ಭಾರತ ವನಿತಾ ಪಡೆಗೆ ದೊಡ್ಡ ಆಘಾತ ಎದುರಾಗಿದೆ. ತಂಡದ ಸ್ಟಾರ್ ಸ್ಪಿನ್ನರ್, ಕನ್ನಡತಿ ಶ್ರೇಯಾಂಕ ಪಾಟೀಲ್ ಗಂಭೀರ ಗಾಯಕ್ಕೆ ತುತ್ತಾಗಿದ್ದಾರೆ. ಶ್ರೇಯಾಂಕ ಅವರ ಗಾಯ ಎಷ್ಟು ಗಂಭೀರವಾಗಿದೆಯೆಂದರೆ ಅವರಿಗೆ ನಡೆಯಲು ಸಹ ಸಾಧ್ಯವಾಗುತ್ತಿಲ್ಲ. ಹೀಗಾಗಿ ಅವರನ್ನು ಸ್ಟ್ರೆಚರ್ ಮೂಲಕ ಮೈದಾನದಿಂದ ಹೊರಕ್ಕೆ ಕರೆದುಕೊಂಡು ಹೋಗಲಾಗಿದೆ. ಮೇಲ್ನೋಟಕ್ಕೆ ಶ್ರೇಯಾಂಕ ಅವರ ಗಾಯ ಗಂಭೀರವಾಗಿರುವಂತೆ ಕಾಣುತ್ತಿದ್ದು, ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಸ್ಕ್ಯಾನ್ನಿಂಗ್ ವರದಿ ಬಂದ ಬಳಿಕವಷ್ಟೇ ಶ್ರೇಯಾಂಕ ಅವರ ಗಾಯ…

Read More