Navy Submarine Career: ಭಾರತೀಯ ನೌಕಾಪಡೆಯ ಸಬ್‌ಮರೀನ್ ವಿಭಾಗ ಸೇರುವುದು ಹೇಗೆ? ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್
ಇತ್ತೀಚೆಗೆ ಭಾರತೀಯ ನೌಕಾಪಡೆಗೆ ಸೇರ್ಪಡೆಗೊಂಡ ಐಎನ್ಎಸ್ ಅರಿದಮಾನ್ (INS Aridhaman) ಸುದ್ದಿಯಲ್ಲಿದೆ. ಇದು ದೇಶದ ಮೂರನೇ ಪರಮಾಣು ಚಾಲಿತ ಜಲಾಂತರ್ಗಾಮಿಯಾಗಿದ್ದು, ಭೂಮಿ, ಆಕಾಶ ಮತ್ತು ಸಮುದ್ರದ ಆಳದಿಂದ ಪರಮಾಣು ಶಸ್ತ್ರಾಸ್ತ್ರಗಳನ್ನು ಉಡಾಯಿಸುವ ‘ನ್ಯೂಕ್ಲಿಯರ್ ಟ್ರಯಾಡ್’ ಸಾಮರ್ಥ್ಯವನ್ನು ಭಾರತಕ್ಕೆ ನೀಡಿದೆ. ಈ ಸುದ್ದಿಯ ಬೆನ್ನಲ್ಲೇ, ಸಾಹಸಮಯ ಸಮುದ್ರದ ಆಳದ ಜೀವನ ಮತ್ತು ನೌಕಾಪಡೆಯ ಜಲಾಂತರ್ಗಾಮಿ ವಿಭಾಗದಲ್ಲಿ ಕೆಲಸ ಪಡೆಯುವುದು ಹೇಗೆ ಎಂಬ ಕುತೂಹಲ ಅನೇಕರಲ್ಲಿ ಮೂಡಿದೆ. ಅದರ ಸಂಪೂರ್ಣ ಮಾಹಿತಿ ಇಲ್ಲಿದೆ. ಜಲಾಂತರ್ಗಾಮಿ (Submarine) ಎಂದರೇನು? ಜಲಾಂತರ್ಗಾಮಿ ಎಂದರೆ…