ಬಿಲ್ನಲ್ಲಿ ನಕಲಿ ಜಿಎಸ್ಟಿ ನಂಬರ್ ಕೊಟ್ಟು ಸರ್ಕಾರಕ್ಕೂ, ಗ್ರಾಹಕರಿಗೂ ಯಾಮಾರಿಸುತ್ತಾರೆ; ಅಸಲಿ ಪತ್ತೆ ಹಚ್ಚೋದು ಹೇಗೆ? – Kannada News | Businesses can show fake GSTIN, know how to check authenticity of GST number
ನೀವು ಹೋಟೆಲ್ಗೆ ಹೋದಾಗ ಅಥವಾ ಏನಾದರೂ ಸರಕು ಖರೀದಿಸಿದಾಗ ಜಿಎಸ್ಟಿ (GST) ಸೇರಿಸಿ ಬಿಲ್ ಹಾಕುತ್ತಾರೆ. ಬಿಲ್ನಲ್ಲಿ ಜಿಎಸ್ಟಿ ಶೇ. 5 ಅಥವಾ ಶೇ. 18 ಸೇರಿಸಲಾಗಿರುತ್ತದೆ. ಜೊತೆಗೆ ಜಿಎಸ್ಟಿ ನಂಬರ್ ಕೂಡ ನಮೂದಾಗಿರುತ್ತದೆ. ಇದನ್ನು ಕಂಡಾಗ ಅಧಿಕೃತವಾಗಿ ನಡೆಯುವ ಬ್ಯುಸಿನೆಸ್ ಎಂದು ಮೇಲ್ನೋಟಕ್ಕೆ ಗೊತ್ತಾಗುತ್ತದೆ. ಆದರೆ, ಕೆಲವರು ಬಿಲ್ನಲ್ಲಿ ಜಿಎಸ್ಟಿ ಸೇರಿಸಿರುತ್ತಾರೆ, ಆದರೆ, ಜಿಎಸ್ಟಿ ನಂಬರ್ ಏನು ಅಂತ ಹಾಕಿರೋದಿಲ್ಲ. ಜಿಎಸ್ಟಿ ನಂಬರ್ ಹಾಕಿದರೂ ಅದು ಅಸಲಿಯೋ ಅಥವಾ ನಕಲಿಯೋ ಎಂದು ಯಾರಿಗೆ ಗೊತ್ತು? ಕೆಲ…