Headlines

IND vs ENG ನಡುವಣ 2ನೇ ಪಂದ್ಯ ಯಾವಾಗ? ಇಲ್ಲಿದೆ ಸಂಪೂರ್ಣ ಮಾಹಿತಿ – Kannada News | India vs England 2nd ODI Date and Venue

ಇಂಗ್ಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸಿರುವ ಟೀಮ್ ಇಂಡಿಯಾ ಇದೀಗ ದ್ವಿತೀಯ ಪಂದ್ಯಕ್ಕಾಗಿ ಸಜ್ಜಾಗುತ್ತಿದೆ. ಕಾರ್ಡಿಫ್​ನಲ್ಲಿ ನಡೆಯಲಿರುವ ಈ ಪಂದ್ಯವು ಇಂಗ್ಲೆಂಡ್ ಪಾಲಿಗೆ ನಿರ್ಣಾಯಕ. ಏಕೆಂದರೆ ಈ ಮ್ಯಾಚ್​ನಲ್ಲೂ ಟೀಮ್ ಇಂಡಿಯಾ ಗೆದ್ದರೆ 2-0 ಅಂತರದಿಂದ ಸರಣಿ ವಶಪಡಿಸಿಕೊಳ್ಳಲಿದೆ. ಹೀಗಾಗಿ ನಾಳಿನ (ಜು.16) ಪಂದ್ಯದಲ್ಲಿ ಆಂಗ್ಲರ ಪಡೆಯಿಂದ ಭರ್ಜರಿ ಪೈಪೋಟಿ ನಿರೀಕ್ಷಿಸಬಹುದು. ಇನ್ನು ಈ ಪಂದ್ಯದ ಕುರಿತಾದ ಮತ್ತಷ್ಟು ಮಾಹಿತಿ ಈ ಕೆಳಗಿನಂತಿದೆ. ಭಾರತ ಮತ್ತು ಇಂಗ್ಲೆಂಡ್ ನಡುವಣ 2ನೇ ಪಂದ್ಯ ನಡೆಯುವುದು…

Read More

ನಟ ರಾಜವರ್ಧನ್ ಪ್ಯಾನ್ ಏಷ್ಯಾ ಸಿನಿಮಾ ಕನಸಿಗೆ ವರ್ಷಗಳಿಂದ ನಡೆದಿದೆ ತಯಾರಿ

ಹಿರಿಯ ನಟ ಡಿಂಗ್ರಿ ನಾಗರಾಜ್ ಅವರ ಪುತ್ರ ರಾಜವರ್ಧನ್ ಈವರೆಗೂ 4 ಸಿನಿಮಾಗಳಲ್ಲಿ ಹೀರೋ ಆಗಿ ನಟಿಸಿದ್ದಾರೆ. ಪ್ರತಿ ಸಿನಿಮಾದಲ್ಲಿ ಬೇರೆ ಬೇರೆ ರೀತಿಯ ಪ್ರಯತ್ನ ಮಾಡಿದ್ದರು. ಈಗ ಪ್ಯಾನ್ ಏಷ್ಯಾ ಪ್ರಯತ್ನಕ್ಕೆ ಕೈ ಹಾಕುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ಅವರ ಹೊಸ ಸಿನಿಮಾಗೆ ಈಗಾಗಲೇ ಮುಹೂರ್ತ ನೇರವೇರಿದೆ. ಗಣಪತಿ ದೇವಸ್ಥಾನದಲ್ಲಿ ಸಿನಿಮಾದ ಮುಹೂರ್ತಕ್ಕೆ ಚಾಲನೆ ನೀಡುವ ಮೂಲಕ ಕೆಲಸಗಳನ್ನು ಆರಂಭಿಸಲಾಗಿದೆ. ಈ ಸಿನಿಮಾಗಾಗಿ ರಾಜವರ್ಧನ್ (Rajavardhan) ಅವರು ಇತ್ತೀಚಿನ ಕೆಲವು ವರ್ಷಗಳಿಂದ ತಯಾರಿ ಮಾಡಿಕೊಂಡಿದ್ದಾರೆ. ಕೆಜಿಎಫ್, ಕಾಂತಾರ, ಟಾಕ್ಸಿಕ್…

Read More

ರಶ್ಮಿಕಾ ಮದುವೆಗೆ ಒಟಿಟಿ ಡೀಲ್​ ಆಫರ್; ನಿರ್ಧಾರ ತಿಳಿಸಿದ ವಿಜಯ್ – Kannada News | Vijay Rashmika Wedding: OTT Deal Rejected, Why They Said No To Rs 60 Cr Offer

ಟಾಲಿವುಡ್​ನ ಜನಪ್ರಿಯ ಸೆಲೆಬ್ರಿಟಿಗಳಾದ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಶೀಘ್ರದಲ್ಲೇ ವಿವಾಹವಾಗಲಿದ್ದಾರೆ ಎಂಬ ಸುದ್ದಿ ಕಳೆದ ಕೆಲವು ದಿನಗಳಿಂದ ಹರಿದಾಡುತ್ತಲೇ ಇದೆ. ಫೆಬ್ರವರಿ 26ರಂದು ಉದಯಪುರದಲ್ಲಿ ಈ ವಿವಾಹ ನಡೆಯಲಿದೆ ಎನ್ನಲಾಗಿದೆ. ಈಗ ಅವರ ವಿವಾಹದ ಬಗ್ಗೆ ದೊಡ್ಡ ವರದಿ ಒಂದು ಕೇಳಿ ಬಂದಿದೆ. ಪ್ರಮುಖ ಅಂತಾರಾಷ್ಟ್ರೀಯ ಒಟಿಟಿ ಕಂಪನಿ ವಿಜಯ್ ವಿವಾಹ ವೀಡಿಯೊದ ಸ್ಟ್ರೀಮಿಂಗ್ ಹಕ್ಕುಗಳಿಗಾಗಿ ಭಾರಿ ಮೊತ್ತದ ಬೇಡಿಕೆ ಇಟ್ಟಿತ್ತು ಎನ್ನಲಾಗಿದೆ. ಆದರೆ, ಅವರು ಇದನ್ನು ತಿರಸ್ಕರಿಸಿದ್ದಾರಂತೆ. ಸೆಲೆಬ್ರಿಟಿಗಳ ವಿವಾಹ ನೋಡಬೇಕು ಎಂಬ…

Read More

IPL 2026 Final: ಟಾಸ್ ಸೋತರೆ ಏನಾಗಲಿದೆ? ಗೆದ್ದರೆ ಏನು ಆಯ್ಕೆ ಮಾಡಬೇಕು?

ವಿಶ್ವದ ಅತೀ ದೊಡ್ಡ ಕ್ರಿಕೆಟ್ ಸ್ಟೇಡಿಯಂನಲ್ಲಿ ಇಂದು (ಮೇ 31) ಇಂಡಿಯನ್ ಪ್ರೀಮಿಯರ್ ಲೀಗ್​ನ ಫೈನಲ್ ಪಂದ್ಯ ಜರುಗಲಿದೆ. ಅಹಮದಾಬಾದ್​ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಹಾಗೂ ಗುಜರಾತ್ ಟೈಟಾನ್ಸ್ (GT) ತಂಡಗಳು ಮುಖಾಮುಖಿಯಾಗಲಿದೆ. ಈ ಪಂದ್ಯದಲ್ಲಿ ಟಾಸ್ ಗೆಲ್ಲುವ ತಂಡ ಏನನ್ನು ಆಯ್ಕೆ ಮಾಡಿಕೊಳ್ಳಬೇಕು? ಟಾಸ್ ಸೋತರೆ ಏನು ಮಾಡಬೇಕು ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ. ನರೇಂದ್ರ ಮೋದಿ ಸ್ಟೇಡಿಯಂ ಪಿಚ್‌ನ ಗುಣಲಕ್ಷಣಗಳು: ಕೆಂಪು ಮತ್ತು ಕಪ್ಪು…

Read More

ಗ್ಯಾರಂಟಿ ಯೋಜನೆಗಳಿಗೆ ಮತ್ತೊಂದು ರೂಲ್ಸ್: ನಿಮ್ಮ ಮನೆಗೆ ಬರಲಿದ್ದಾರೆ ಚೆಕ್ಕಿಂಗ್ ಆಫೀರ್ಸ್ – Kannada News | Guarantee Schemes Revision: DK Shivakumar Governmnet to Plan Door To door survey for document verification

ಬೆಂಗಳೂರು, (ಜೂನ್ 19): ರಾಜ್ಯ ಕಾಂಗ್ರೆಸ್ ಸರ್ಕಾರದ ಮಹತ್ವದ ಗ್ಯಾರಂಟಿ ಯೋಜನೆಗಳಿಗೆ (guarantee schemes) ಆಪರೇಷನ್ ಮಾಡಲು ಸಿಎಂ ಡಿಕೆ ಶಿವಕುಮಾರ್ ಮುಂದಾಗಿದ್ದಾರೆ. ಯೋಜನೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿರುವ ಅನರ್ಹರಿಗೆ ಸಂಪೂರ್ಣವಾಗಿ ಬ್ರೇಕ್ ಹಾಕಿ ಅರ್ಹರಿಗೆ ಮುಟ್ಟಿಸಲು ಇನ್ನಿಲ್ಲದ ಕಸರತ್ತು ನಡೆಸಿದ್ದು, ಇದಕ್ಕಾಗಿ ನಾನಾ ನಿಯಮಗಳನ್ನ ಜಾರಿಗೆ ತರುವ ಚಿಂತನೆಗಳು ನಡೆದಿವೆ. ಇಂದು (ಜೂನ್ 19) ವಿಧಾನಸೌಧದಲ್ಲಿ ನಡೆದ ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಹಿರಿಯ ಅಧಿಕಾರಿಗಳು ಹಾಗೂ ಸಚಿವರ ಉನ್ನತ ಮಟ್ಟದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಗ್ಯಾರಂಟಿ ಯೋಜನೆಗಳ ಪರಿಷ್ಕರಣೆಗೆ…

Read More

ಏರಿಕೆ ಕಂಡ ‘ಬಾರ್ಡರ್ 2’ ಸಿನಿಮಾ ಕಲೆಕ್ಷನ್; 2 ದಿನಕ್ಕೆ ಎಷ್ಟು ಕೋಟಿ? – Kannada News | Varun Dhawan starrer Border 2 Box Office Collection Day 2 report

ಸಿನಿಪ್ರಿಯರು ದೇಶಭಕ್ತಿ ಸಿನಿಮಾಗಳನ್ನು ಖಂಡಿತಾ ಇಷ್ಟಪಡುತ್ತಾರೆ. ಕಳೆದ ವರ್ಷ ಬಿಡುಗಡೆಯಾಗಿ ಬ್ಲಾಕ್ ಬಸ್ಟರ್ ಆದ ‘ಧುರಂಧರ್’ ಚಿತ್ರವೇ ಅದಕ್ಕೆ ಸಾಕ್ಷಿ. ಈಗ ‘ಬಾರ್ಡರ್ 2’ (Border 2) ಸಿನಿಮಾ ರಿಲೀಸ್ ಆಗಿದೆ. ಈ ಸಿನಿಮಾಗೆ ಜನರು ಮೆಚ್ಚುಗೆ ಸೂಚಿಸಿದ್ದಾರೆ. ಮೊದಲ ದಿನ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡ ಈ ಸಿನಿಮಾಗೆ ಉತ್ತಮ ಓಪನಿಂಗ್ ಸಿಕ್ಕಿತು. ಎರಡನೇ ದಿನ ಕೂಡ ಒಳ್ಳೆಯ ಕಲೆಕ್ಷನ್ (Box Office Collection) ಆಗಿದೆ. ಮೂರೇ ದಿನಕ್ಕೆ 100 ಕೋಟಿ ರೂಪಾಯಿ ಕಲೆಕ್ಷನ್ ಆಗುವ ಸೂಚನೆ…

Read More

TV9 Kannada Live: ರಾಜ್ಯದಲ್ಲಿ ಮತ್ತೆ ರೆಸಾರ್ಟ್​​ ರಾಜಕೀಯ, ಕೈ ಶಾಸಕರಿಂದು ಬಿಡದಿಗೆ ಶಿಫ್ಟ್​​ – Kannada News | TV9 Kannada News Live 16 June 2026 Karnataka Politics, Weather, Politics, MLC Polls Latest Updates

ಮತ್ತೆ ಶುರುವಾದ ರೆಸಾರ್ಟ್​​ ರಾಜಕೀಯImage Credit source: Tv9 Kannada ರಾಜ್ಯದ ವಿವಿಧೆಡೆ ಅಧಿಕಾರಿಗಳಿಗೆ ಲೋಕಾಯುಕ್ತ ಭರ್ಜರಿ ಶಾಕ್​​ ಕೊಟ್ಟಿದ್ದು ಕಲಬುರಗಿ, ಚಿಕ್ಕಮಗಳೂರು ಮತ್ತು ದಾವಣಗೆರೆಯಲ್ಲಿ ದಾಳಿ ನಡೆದಿದೆ. ಮನೆ ಮತ್ತು ಕಚೇರಿಗಳು ಸೇರಿದಂತೆ ವಿವಿಧೆಡೆ ಲೋಕಾಯುಕ್ತ ಅಧಿಕಾರಿಗಳು ತಲಾಶ್​​ ನಡೆಸಿದ್ದಾರೆ. ಮತ್ತೊಂದೆಡೆ ವಿಧಾನ ಪರಿಷತ್​​ ಚುನಾವಣಾ ಕಣ ರಾಜ್ಯದಲ್ಲಿ ರಂಗೇರಿದ್ದು, ರೆಸಾರ್ಟ್​​ ಪಾಲಿಟಿಕ್ಸ್​​ ಶುರುವಾಗಿದೆ. ಇಂದು ‘ಕೈ’ ಶಾಸಕರಿಂದ ರೆಸಾರ್ಟ್​ ವಾಸ್ತವ್ಯ ಶುರುವಾಗಿದ್ದರೆ​, ನಾಳೆ JDSನವರ ಸರದಿ ನಿಗದಿಯಾಗಿದೆ. ಐದಾರು ಜೆಡಿಎಸ್​​ ಶಾಸಕರನ್ನು ಸೆಳೆಯಲು ಕೈ…

Read More

ಬಳ್ಳಾರಿಯಲ್ಲಿ ಭುಗಿಲೆದ್ದ ಆಕ್ರೋಶ: ಎಲ್ಲೆಲ್ಲೂ ಖಾಕಿ ಸರ್ಪಗಾವಲು

ಬಳ್ಳಾರಿ, ಜನವರಿ 24: ಬಳ್ಳಾರಿಯಲ್ಲಿ ಬ್ಯಾನರ್‌ ವಿಚಾರಕ್ಕೆ ಶುರುವಾದ ಗಲಾಟೆ ಇನ್ನೂ ಸಂಪೂರ್ಣವಾಗಿ ತಣ್ಣಗಾಗಿಲ್ಲ. ಗನ್‌ಮ್ಯಾನ್‌ಗಳಿಗೆ ಇನ್ನೂ ಬಿಡುಗಡೆ ಭಾಗ್ಯ ಸಿಕ್ಕಿಲ್ಲ. ಅಷ್ಟರಲ್ಲೇ ರೆಡ್ಡಿಗಳ ಮಧ್ಯೆ ಈಗ ಬೆಂಕಿ ರಾಜಕೀಯ ಶುರುವಾಗಿದೆ. ಶಾಸಕ ಜನಾರ್ದನ ರೆಡ್ಡಿ ಮತ್ತು ಮಾಜಿ ಸಚಿವ ಶ್ರೀರಾಮುಲುಗೆ ಸೇರಿದ ಮಾಡೆಲ್‌ ಹೌಸ್‌ಗೆ ಬೆಂಕಿ ಬಿದ್ದಿದೆ. ಬಳ್ಳಾರಿಯ ಜಿ ಸ್ಕ್ವೇರ್‌ನಲ್ಲಿರುವ ಲೇಔಟ್‌ನಲ್ಲಿರುವ ಮಾಡೆಲ್‌ ಹೌಸ್‌ ಹೊತ್ತಿ ಉರಿದಿದೆ. ಇದು ಶಾಸಕ ಭರತ್‌ ರೆಡ್ಡಿ ಅವರದ್ದೇ ಕೃತ್ಯ ಎಂದು ರೆಡ್ಡಿ ಸಹೋದರರು ಆರೋಪಿಸಿದ್ದಾರೆ. ಘಟನೆ ಖಂಡಿಸಿ…

Read More

ಅಲ್ಲು ಅರ್ಜುನ್, ದೀಪಿಕಾ ಸಿನಿಮಾ ಬಗ್ಗೆ ಅಟ್ಲಿ ಕೊಟ್ಟರು ಅಪ್​​ಡೇಟ್ – Kannada News | Atlee talks about Allu Arjun and Deepika Padukone movie

‘ಪುಷ್ಪ’ ಮತ್ತು ‘ಪುಷ್ಪ 2’ (Pushpa 2) ಸಿನಿಮಾಗಳ ಮೂಲಕ ಭಾರಿ ದೊಡ್ಡ ಹಿಟ್ ಸಿನಿಮಾ ನೀಡಿದ ಅಲ್ಲು ಅರ್ಜುನ್ (Allu Arjun), ಮುಂದಿನ ಸಿನಿಮಾ ಆಗಿ ಅಟ್ಲಿಯ ಸಿನಿಮಾವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಇದು ಸ್ವತಃ ಅಲ್ಲು ಅಭಿಮಾನಿಗಳಿಗೇ ಗೊಂದಲ ಮೂಡಿಸಿತ್ತು. ಅಟ್ಲಿ ಕೆಲವಾರು ಹಿಟ್ ಸಿನಿಮಾ ನೀಡಿದ್ದಾರಾದರೂ ಅಟ್ಲಿ ಸ್ವಂತ ಸಿನಿಮಾ ಮಾಡುವುದಿಲ್ಲ ಬದಲಿಗೆ ನಕಲು ಮಾಡಿ ಸಿನಿಮಾ ಮಾಡುವ ನಿರ್ದೇಶಕ ಎಂಬ ಕೆಟ್ಟ ಹೆಸರಿದೆ. ಅದೂ ಅಲ್ಲದೆ, ಅಟ್ಲಿಯ ಈ ಬಾರಿ ಅಲ್ಲು ಅರ್ಜುನ್​​ಗಾಗಿ…

Read More

ರೈಲ್ವೆ ಮುಂಬಡ್ತಿ ಪರೀಕ್ಷೆ: ಕನ್ನಡಪರ ಸಂಘಟನೆಗಳ ಪ್ರತಿಭಟನೆ ದಿಢೀರ್ ರದ್ದು, ಕಾರಣ ನಿಜಕ್ಕೂ ಗ್ರೇಟ್! – Kannada News | Kannada Outfits Call Off Railway Promotion Exam Protest After Request From Kannada Candidates: Main reason here

ರೈಲ್ವೆ ಇಲಾಖೆ ಮುಂಬಡ್ತಿ ಪರೀಕ್ಷೆ: ಕನ್ನಡಪರ ಸಂಘಟನೆಗಳ ಪ್ರತಿಭಟನೆ ವಾಪಸ್Image Credit source: PTI and tv9 ಹುಬ್ಬಳ್ಳಿ, ಜೂನ್ 23: ರೈಲ್ವೆ ಇಲಾಖೆಯ (Indian Railways) ಮುಂಬಡ್ತಿ ಪರೀಕ್ಷೆಗಳಲ್ಲಿ ಕನ್ನಡ (Kannada) ಭಾಷೆಗೆ ಅವಕಾಶ ನೀಡದೆ ಕನ್ನಡಿಗರಿಗೆ ನಿರಂತರವಾಗಿ ಅನ್ಯಾಯ ಮಾಡಲಾಗುತ್ತಿದೆ ಎಂಬ ಆರೋಪದ ನಡುವೆಯೇ, ರೈಲ್ವೆ ಮಂಡಳಿ (Railway Board) ವಿರುದ್ಧ ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನೆಯನ್ನು ಕನ್ನಡಪರ ಸಂಘಟನೆಗಳು ದಿಢೀರನೆ ಕೈಬಿಟ್ಟಿವೆ. ಈ ನಿರ್ಧಾರದ ಹಿಂದೆ ಅತ್ಯಂತ ಆಸಕ್ತಿದಾಯಕ ಕಾರಣವೊಂದಿದೆ! ಸ್ವತಃ ಕನ್ನಡಿಗ ಅಭ್ಯರ್ಥಿಗಳ…

Read More