ಈ ಬಾರಿ ಬಹಳ ಜನರಿಗೆ ಸಿಕ್ಕಿಲ್ಲ ಇನ್ಕಮ್ ಟ್ಯಾಕ್ಸ್ ರೀಫಂಡ್; ಏನು ಕಾರಣ? – Kannada News | Many tax payers not yet received Income tax refunds, know the reasons for this delay
ನವದೆಹಲಿ, ಜನವರಿ 8: ಈ ಬಾರಿ ಐಟಿ ರಿಟರ್ನ್ಸ್ (Income Tax) ಸಲ್ಲಿಸಿರುವ ಬಹಳ ತೆರಿಗೆ ಪಾವತಿದಾರರಿಗೆ ರೀಫಂಡ್ಗಳು ಇನ್ನೂ ಸಿಕ್ಕಿಲ್ಲ ಎಂದು ಹೇಳಲಾಗುತ್ತಿದೆ. ಹಿಂದಿನ ವರ್ಷಗಳಲ್ಲಿ ರೀಫಂಡ್ ಆಗದೇ ಇರುವ ಪ್ರಕರಣಗಳು ಕಡಿಮೆ ಇದ್ದವು. ಈ ವರ್ಷ ಇದು ಹೆಚ್ಚಾಗಿದೆ. ರೀಫಂಡ್ಗಳು ಬರುವುದಕ್ಕೆ ಇನ್ನೂ ಸಮಯಾವಕಾಶ ಇದೆಯಾದರೂ ಬಹಳ ಜನರು ತಮಗೆ ರೀಫಂಡ್ ಸಿಗುತ್ತೋ ಇಲ್ಲವೋ ಎನ್ನುವ ಆತಂಕದಲ್ಲಿದ್ದಾರೆ. ಆದಾಯ ತೆರಿಗೆ ಇಲಾಖೆ ಈ ಬಾರಿ ಹಲವು ಐಟಿಆರ್ಗಳನ್ನು ಕೂಲಂಕಷವಾಗಿ ಪರಿಶೀಲಿಸಲು ಹೆಚ್ಚು ಸಮಯ ತೆಗೆದುಕೊಂಡಿದೆ….