Headlines

‘ಸರ್ಸೆ ನಿನ್ನ ಸೆರಗ ಸರ್ಸೆ’ ಹಾಡಿಗೆ ದೇಶಾದ್ಯಂತ ವಿರೋಧ: ಹಿಂದಿ ವರ್ಷನ್ ಡಿಲೀಟ್

ಬಾಲಿವುಡ್ ನಟಿ ನೋರಾ ಫತೇಹಿ (Nora Fatehi) ಮತ್ತು ನಟ ಸಂಜಯ್ ದತ್ ಕಾಣಿಸಿಕೊಂಡಿರುವ ‘ಸರ್ಸೆ ನಿನ್ನ ಸೆರಗ ಸರ್ಸೆ’ ಹಾಡು ಭಾರಿ ವಿವಾದಕ್ಕೆ ಗುರಿಯಾಗಿದೆ. ಹಾಡಿನ ಸಾಹಿತ್ಯ ಮತ್ತು ದೃಶ್ಯಗಳು ಮಹಿಳೆಯರಿಗೆ ಅವಮಾನಕಾರಿಯಾಗಿವೆ ಎಂಬ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ, ಹಿಂದಿ ವರ್ಷನ್ (Sarke Chunar Teri) ಹಾಡನ್ನು ಅಧಿಕೃತ ಪ್ಲಾಟ್‌ಫಾರ್ಮ್‌ಗಳಿಂದ ತೆಗೆದುಹಾಕಲಾಗಿದೆ. ಅರ್ಜುನ್ ಜನ್ಯ ಸಂಗೀತ ಸಂಯೋಜಿಸಿರುವ, ಮಂಗ್ಲಿ ಹಾಡಿರುವ ಈ ಹಾಡಿನ ಸಾಲುಗಳು ಭಾರಿ ಟೀಕೆಗೆ ಒಳಗಾಗಿವೆ. ಸಾಹಿತ್ಯದಲ್ಲಿ ಬಳಸಲಾದ ಪದಗಳು ಮಹಿಳೆಯರನ್ನು ಕೆಟ್ಟದಾಗಿ…

Read More

Bangalore Rain: ಬೆಂಗಳೂರಿನಲ್ಲಿ ಶುಕ್ರವಾರದವರೆಗೆ ಗುಡುಗು ಸಹಿತ ಭಾರೀ ಮಳೆ – Kannada News | Bangalore Weather Update: Heavy Rain Expected, Temperature Drops, Yellow Alert Issued by IMD

ಬೆಂಗಳೂರು, ಮೇ.25: ತೀವ್ರ ಉಷ್ಣಾಂಶ ಮತ್ತು ಬಿಸಿಲಿನಿಂದ ಕಂಗಾಲಾಗಿದ್ದ ರಾಜಧಾನಿ ಬೆಂಗಳೂರಿನ ಜನತೆಗೆ ಹವಾಮಾನ ಇಲಾಖೆ ಕೂಲ್​ ಸುದ್ದಿ ನೀಡಿದೆ. ಭಾರತೀಯ ಹವಾಮಾನ ಇಲಾಖೆ (IMD) ಭಾನುವಾರ ಹೊರಡಿಸಿರುವ ಇತ್ತೀಚಿನ ಮುನ್ಸೂಚನೆಯ ಪ್ರಕಾರ, ಬೆಂಗಳೂರಿನಲ್ಲಿ ಮೇ 29 ರವರೆಗೆ ವ್ಯಾಪಕ ಮಳೆಯಾಗುವ ಸಾಧ್ಯತೆ ಇದೆ. ಮುಂದಿನ ಇಡೀ ವಾರ ನಗರದಾದ್ಯಂತ ಗುಡುಗು, ಸಿಡಿಲು ಸಹಿತ ಹಗುರದಿಂದ ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ. ಬಂಗಾಳಕೊಲ್ಲಿಯಲ್ಲಿ ಚಂಡಮಾರುತದ ಪರಿಚಲನೆ (Cyclonic Circulation) ಉಂಟಾಗಿರುವುದರಿಂದ ಹವಾಮಾನ ಪರಿಸ್ಥಿತಿ ಸಂಪೂರ್ಣವಾಗಿ…

Read More

ಅಮೆರಿಕ ಹೊಸ ‘ವರಸೆ’; ಫೋರ್ಸ್ಡ್ ಲೇಬರ್ ಹೆಸರಲ್ಲಿ ಭಾರತ ಸೇರಿ 60 ದೇಶಗಳ ಮೇಲೆ ಶೇ. 12.5 ಹೆಚ್ಚುವರಿ ಸುಂಕಕ್ಕೆ ಯೋಜನೆ – Kannada News

ವಾಷಿಂಗ್ಟನ್, ಜೂನ್ 3: ಭಾರತ ಮತ್ತು ಅಮೆರಿಕ ನಡುವೆ ದ್ವಿಪಕ್ಷೀಯ ವ್ಯಾಪಾರ ಒಪ್ಪಂದದ ಮಾತುಕತೆಗಳು ಪುನರಾರಂಭಗೊಂಡ ಬೆನ್ನಲ್ಲೇ, ಭಾರತಕ್ಕೆ ಅಮೆರಿಕ ಹೊಸದೊಂದು ಆಘಾತ ನೀಡಿದೆ. ಬಲವಂತದ ಕಾರ್ಮಿಕ ಕ್ರಮ ಮೂಲಕ ತಯಾರಾದ ಸರಕುಗಳಿಗೆ ನಿರ್ಬಂಧ ಹಾಕಿಲ್ಲ ಎನ್ನುವ ಕಾರಣವೊಡ್ಡಿ 60 ದೇಶಗಳಿಗೆ ಅಮೆರಿಕ ಶೇ. 12.5ರಷ್ಟು ಹೆಚ್ಚುವರಿ ಸುಂಕವನ್ನು (Tariff) ವಿಧಿಸಲು ಯೋಜಿಸಿದೆ. ಅಮೆರಿಕದ ವ್ಯಾಪಾರ ಪ್ರತಿನಿಧಿ (ಯುಎಸ್ ಟ್ರೇಡ್ ರೆಪ್ರೆಸೆಂಟೇಟಿವ್) ಇಂಥದ್ದೊಂದು ಪ್ರಸ್ತಾಪ ಮಾಡಿದ್ದಾರೆ. ಈ 60 ದೇಶಗಳ ಪಟ್ಟಿಯಲ್ಲಿ ಭಾರತ, ಚೀನಾ, ರಷ್ಯಾ ಮೊದಲಾದವು…

Read More

ಈ ಕೌಶಲ್ಯ ಕಲಿತರೆ ಮನೆಯಲ್ಲೇ ಕೂತ ಲಕ್ಷ ಸಂಪಾದನೆ ಸಾಧ್ಯ; ಕೆನರಾ ಬ್ಯಾಂಕ್ RSETI ಯಿಂದ ಮಹಿಳೆಯರಿಗೆ ಉಚಿತ ತರಬೇತಿ – Kannada News | Canara Bank RSETI conducting free Aari Work, Fabric Painting workshop for women at Hoskote

ಸಾಂದರ್ಭಿಕ ಚಿತ್ರImage Credit source: Afriadi Hikmal/NurPhoto via Getty Images ಹೊಸಕೋಟೆ, ಜುಲೈ 3: ಗ್ರಾಮೀಣ ಮತ್ತು ನಗರ ಪ್ರದೇಶದ ನಿರುದ್ಯೋಗಿ ಮಹಿಳೆಯರು ಸ್ವಂತ ಕಾಲಿನ ಮೇಲೆ ನಿಲ್ಲಲು ಕೆನರಾ ಬ್ಯಾಂಕ್ ನೆರವಾಗುತ್ತಿದೆ. ಹೊಸಕೋಟೆ ತಾಲೂಕಿನ ಸೊಣ್ಣಹಳ್ಳಿಪುರದಲ್ಲಿ ಕಾರ್ಯಾಚರಿಸುತ್ತಿರುವ ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆಯು (RSETI) ಮಹಿಳೆಯರಿಗಾಗಿ ಒಂದು ತಿಂಗಳ ಅವಧಿಯ ವಿಶೇಷ ಕೌಶಲ್ಯಾಭಿವೃದ್ಧಿ ಶಿಬಿರವನ್ನು ಹಮ್ಮಿಕೊಂಡಿದೆ. ಸಂಪೂರ್ಣ ಉಚಿತವಾಗಿ ನಡೆಯಲಿರುವ ಈ ಶಿಬಿರದಲ್ಲಿ ಪ್ರಸ್ತುತ ಮಾರುಕಟ್ಟೆಯಲ್ಲಿ ಭಾರಿ ಬೇಡಿಕೆಯಿರುವ ‘ಎಂಬ್ರಾಯ್ಡರಿ…

Read More

ಹೆಣ್ಣು ಮಕ್ಕಳು ತಮ್ಮ ತಂದೆಯಿಂದ ಕಲಿಯುವ ಗುಣಗಳಿವು – Kannada News | Daughter learns these qualities from father

ಮಗಳಿಗೆ ಅಪ್ಪನೆಂದರೆ (father) ವಿಶೇಷ ಪ್ರೀತಿ, ಗೌರವ. ಆಕೆಯ ಪಾಲಿಗೆ ಅಪ್ಪನೇ ಸೂಪರ್‌ ಹೀರೋ. ತಂದೆಗೂ ಅಷ್ಟೆ ಮುದ್ದಿನ ಮಗಳೆಂದರೆ ಎಲ್ಲಿಲ್ಲದ ಪ್ರೀತಿ. ಮಗಳನ್ನು ಪ್ರೀತಿಸುವ, ಮುದ್ದಿಸುವುದರ ಜೊತೆ ಜೊತೆಗೆ ತಂದೆ ಹಲವಾರು ಜೀವನ ಮೌಲ್ಯಗಳನ್ನು ಸಹ ಕಲಿಸುತ್ತಾನೆ. ಹೆಣ್ಣು ಮಕ್ಕಳು ತಮ್ಮ ತಂದೆ ಕಲಿಸಿಕೊಡುವ ಜೀವನ ಮೌಲ್ಯಗಳನ್ನು ಮಾತ್ರವಲ್ಲ, ತಮ್ಮ ತಂದೆಯ ಗುಣಗಳನ್ನು ಸಹ ಕಲಿಯುತ್ತಾರಂತೆ. ಹೆಣ್ಣು ಮಕ್ಕಳು ತಮ್ಮ ತಂದೆಯಿಂದ ಕಲಿಯುವ ಅ ಗುಣಗಳು ಯಾವುವು ಎಂಬುದನ್ನು ನೋಡೋಣ ಬನ್ನಿ. ಮಗಳಾದವಳು ತನ್ನ ಅಪ್ಪನಿಂದ…

Read More

Video: ಪುಟ್ಟ ಪುಟ್ಟ ಹೆಜ್ಜೆಯಿಟ್ಟು ಕಂದಮ್ಮ ನಡೆಯುತ್ತಿದ್ದಂತೆ ಭಾವುಕಳಾದ ತಾಯಿ – Kannada News | Mother reacts cutely as little girl takes tiny steps

ತಾಯಿಯ (mother love) ಪ್ರೀತಿಯೇ ಹಾಗೇ, ಮಕ್ಕಳ ಆರೈಕೆಯಲ್ಲೇ ಖುಷಿ ಕಾಣುವ ಜೀವವದು. ಮಗುವಿಗೆ ಎಣ್ಣೆ ಹಚ್ಚಿ ಸ್ನಾನ ಮಾಡಿಸುವುದು, ಆಹಾರ ನೀಡುವುದು ಆಕೆಯ ದಿನನಿತ್ಯ ರೂಟೀನ್ ಆಗಿರುತ್ತದೆ. ಮಗುವಿನ ತೊದಲು ನುಡಿ ಕೇಳುತ್ತ ತನ್ನೆಲ್ಲಾ ನೋವುಗಳನ್ನು ಮರೆಯುತ್ತಾಳೆ. ಇದೀಗ ಪುಟಾಣಿಯೊಂದು  ಮೊದಲ ಬಾರಿಗೆ ಹೆಜ್ಜೆ ಇಟ್ಟು ನಡೆಯುತ್ತಿದ್ದರೆ, ತಾಯಿ ತನ್ನ ಮಗಳ ಮೊದಲ ನಡಿಗೆಯನ್ನು ಕಣ್ತುಂಬಿಸಿಕೊಂಡು ಭಾವುಕಳಾಗಿದ್ದಾಳೆ. ಈ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ fun_factorss ಹೆಸರಿನ ಫೇಸ್ಬುಕ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, ಈ…

Read More

ಇದುವೇ ನನ್ನ ಏಕೈಕ ಗುರಿ: ಮನದಿಂಗಿತ ಬಿಟ್ಟಿಟ್ಟ ಕೃನಾಲ್ ಪಾಂಡ್ಯ – Kannada News | Krunal Pandya Sets Sights on 2027 ODI World Cup Comeback

ಐಪಿಎಲ್ 2026ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಮ್ಯಾಚ್-ವಿನ್ನರ್ ಆಗಿ ಹೊರಹೊಮ್ಮುತ್ತಿರುವ ಕೃನಾಲ್ ಪಾಂಡ್ಯ, ರಾಷ್ಟ್ರೀಯ ತಂಡಕ್ಕೆ ಮರಳುವ ಇಚ್ಛೆಯನ್ನು ಬಹಿರಂಗಪಡಿಸಿದ್ದಾರೆ. 2027ರಲ್ಲಿ ಆಫ್ರಿಕಾ ಮಣ್ಣಿನಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್‌ನಲ್ಲಿ ಭಾರತವನ್ನು ಪ್ರತಿನಿಧಿಸುವುದೇ ನನ್ನ ಪರಮ ಗುರಿ ಎಂದು ಘೋಷಿಸಿರುವ ಅವರ ಈ ಹೇಳಿಕೆ ಈಗ ಕ್ರಿಕೆಟ್ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಈ ಬಗ್ಗೆ ಮಾತನಾಡಿದ ಕೃನಾಲ್ ಪಾಂಡ್ಯ, ನನಗೆ 6-7 ವಯಸ್ಸಿದ್ದಾಗಿನಿಂದಲೂ ದೇಶಕ್ಕಾಗಿ ಆಡುವ ಕನಸು ಕಂಡಿದ್ದೆ. ಆ ಕನಸು ಇಂದಿಗೂ ಬದಲಾಗಿಲ್ಲ….

Read More

ಜಗಳೂರಿನಲ್ಲಿ ಭುಗಿಲೆದ್ದ ಕುಡಿಯುವ ನೀರಿನ ಆಕ್ರೋಶ!: ಇಒ, ಪಿಡಿಒ ಅಧಿಕಾರಿಗಳನ್ನು ಕತ್ತಲೆ ಕೋಣೆಯಲ್ಲಿ ಕೂಡಿ ಹಾಕಿದ ಗ್ರಾಮಸ್ಥರು – Kannada News

ದಾವಣಗೆರೆ ಕುಡಿಯುವ ನೀರಿನ ಸಮಸ್ಯೆ ದಾವಣಗೆರೆ ಜೂ.8: ತಾಲೂಕಿನ ಮರೇನಹಳ್ಳಿ ಗ್ರಾಮದಲ್ಲಿ ಕುಡಿಯುವ ನೀರಿನ ತೀವ್ರ ಸಮಸ್ಯೆಯನ್ನು ಬಗೆಹರಿಸದೆ ನಿರ್ಲಕ್ಷ್ಯ ವಹಿಸಿದ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರ ಆಕ್ರೋಶ ಹೊರಹಾಕಿದ್ದಾರೆ. ಕುಡಿಯುವ ನೀರಿಗಾಗಿ ಕಳೆದ ಒಂದು ತಿಂಗಳಿನಿಂದ ಪರದಾಡುತ್ತಿದ್ದ ಸಾರ್ವಜನಿಕರು, ಗ್ರಾಮಕ್ಕೆ ಭೇಟಿ ನೀಡಿದ್ದ ಜಗಳೂರು ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ (EO) ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳನ್ನು (PDO) ಕೂಡಿ ಹಾಕಿ ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ಇದೇ ವೇಳೆ ಗ್ರಾಮಸ್ಥರು ಬಿಲ್ ಕಲೆಕ್ಟರ್ ಮೇಲೆ ಭೀಕರ ಹಲ್ಲೆ…

Read More

‘ಬೆಂಗಳೂರು ಇನ್’ ಸಿನಿಮಾ ಮತ್ತು ನಟಿ ಅನುಷಾ ರೈ ಬಗ್ಗೆ ಧರ್ಮ ಕೀರ್ತಿ ಮಾತು: ವಿಡಿಯೋ

ಧರ್ಮ ಕೀರ್ತಿ (Dharma Keerthy) ನಟನೆಯ ‘ಬೆಂಗಳೂರು ಇನ್’ ಸಿನಿಮಾದ ಟ್ರೈಲರ್ ಇದೀಗ ಬಿಡುಗಡೆ ಆಗಿದ್ದು, ಸಿನಿಮಾದ ಪ್ರಚಾರಾರ್ಥ ಆಯೋಜನೆ ಮಾಡಿದ್ದ ಕಾರ್ಯಕ್ರಮದಲ್ಲಿ ಸಿನಿಮಾದ ನಾಯಕ ಧರ್ಮ ಕೀರ್ತಿ ಮಾತನಾಡಿದರು. ಧರ್ಮ ಕೀರ್ತಿ ಹಾಗೂ ಅನುಷಾ ರೈ ಒಟ್ಟಿಗೆ ನಟಿಸಿರುವ ಮೂರನೇ ಸಿನಿಮಾ ಇದು. ಅನುಷಾ ರೈ ಅವರೊಟ್ಟಿಗಿನ ತಮ್ಮ ಕೆಮಿಸ್ಟ್ರಿ ಬಗ್ಗೆ ಹಾಗೂ ಅನುಷಾ ರೈ ಅವರ ನಟನೆ, ವ್ಯಕ್ತಿತ್ವದ ಬಗ್ಗೆ ಧರ್ಮ ಕೀರ್ತಿ ಮಾತನಾಡಿದರು. ವಿಡಿಯೋ ನೋಡಿ… ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ…

Read More

Video: ಮೊದಲ ಬಾರಿಗೆ ಕಡಲ ತೀರಕ್ಕೆ ಭೇಟಿ ನೀಡಿ ಸೌಂದರ್ಯ ಸವಿದ ವೃದ್ಧ ದಂಪತಿ – Kannada News | An elderly couple visited the beach for the first time and enjoyed its beauty.

ನಮ್ಮ ಅಜ್ಜ ಅಜ್ಜಿಯಂದಿರಿಗೆ (grandparents) ಮನೆ ಬಿಟ್ಟರೆ ಪ್ರಪಂಚ ಬೇರೆ ಇಲ್ಲ. ಹೀಗಾಗಿ ಟ್ರಿಪ್, ಟ್ರಕ್ಕಿಂಗ್, ಸುತ್ತಾಟ ಇದ್ಯಾವುದನ್ನು ಎಂಜಾಯ್ ಮಾಡಿದವರೇ ಅಲ್ಲ. ಮಕ್ಕಳು, ಮೊಮ್ಮಕ್ಕಳು ಕರೆದುಕೊಂಡು ಹೋದರಷ್ಟೇ ಅವರ ಹಿಂದೆಯೇ ಪುಟಾಣಿ ಮಕ್ಕಳಂತೆ ಬರುತ್ತಾರೆ. ಇದೀಗ ವೃದ್ಧ ದಂಪತಿ ಮೊದಲ ಬಾರಿಗೆ ಬೀಚ್ (beach) ನೋಡಲು ಬಂದಿದ್ದಾರೆ. ಹೌದು, ಮೊದಲ ಬಾರಿಗೆ ಸಮುದ್ರ ತೀರದಲ್ಲಿ ನಡೆಯುತ್ತಾ, ಅಲೆಗಳನ್ನು ನೋಡುತ್ತಾ ಖುಷಿ ಪಡುತ್ತಿರುವ ವೃದ್ಧ ದಂಪತಿಯ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿ…

Read More