Headlines

ಯೂಥ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಫೈರೋಜ್ ಪಠಾಣ್​ ಬರ್ಬರ ಹತ್ಯೆ!

ಧಾರವಾಡ, ಏಪ್ರಿಲ್ 11: ಅವಳಿ ನಗರದಲ್ಲಿ ಬೆಚ್ಚಿಬೀಳಿಸುವ ಘಟನೆಯೊಂದು ನಡೆದುದ್ದು, ಯೂಥ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿದ್ದ ಫೈರೋಜ್ ಪಠಾಣ್​ನನ್ನು (Fairoz Pathan Murder) ಧಾರವಾಡ ನಗರದ ಹಾಶ್ಮಿ ನಗರದಲ್ಲಿರುವ ಅವರ ಮನೆಯಲ್ಲಿ ಬರ್ಬರವಾಗಿ ಹತ್ಯೆಗೈಯಲಾಗಿದೆ. ಶುಕ್ರವಾರ ರಾತ್ರಿ ಆತನ ಮನೆಗೆ ನುಗ್ಗಿದ ಆರೋಪಿಗಳು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಘಟನೆಯ ಮಾಹಿತಿ ತಿಳಿದು ಸ್ಥಳಕ್ಕೆ ಉಪನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆರು ಮಂದಿ ಸೇರಿ ಈ ಕೃತ್ಯವನ್ನೆಸಗಿದ್ದಾರೆ ಎನ್ನಲಾಗಿದೆ….

Read More

ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ ಬಗ್ಗೆ ವಿಜಯೇಂದ್ರಗೆ ವರದಿ ಸಲ್ಲಿಸಿ ಸಿ.ಟಿ ರವಿ ಹೇಳಿದ್ದೇನು? – Kannada News | Council Polls: CT Ravi Submits Report to Vijayendra Over 12 Cross Votes

ಬೆಂಗಳೂರು, ಜೂನ್ 27: ವಿಧಾನ ಪರಿಷತ್ ಚುನಾವಣೆಯ ಅಡ್ಡ ಮತದಾನಕ್ಕೆ ಸಂಬಂಧಿಸಿದಂತೆ ಸಿ.ಟಿ. ರವಿ ನೇತೃತ್ವದ ಸಮಿತಿಯು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರಿಗೆ ಆಂತರಿಕ ವರದಿ ಸಲ್ಲಿಸಿದೆ. ನ್‌ಡಿಎ ಮೈತ್ರಿಕೂಟದ ಒಟ್ಟು 12 ಸದಸ್ಯರು ಕ್ರಾಸ್ ವೋಟಿಂಗ್ ಮಾಡಿದ್ದಾರೆ. ಬಿಜೆಪಿ ಮತ್ತು ಜೆಡಿಎಸ್ ಸೇರಿ ಈ ಅಡ್ಡಮತದಾನ ನಡೆದಿದೆ ಎಂದು ಸಿ.ಟಿ.ರವಿ ಸ್ಪಷ್ಟಪಡಿಸಿದ್ದಾರೆ. ವರದಿ ಸಲ್ಲಿಕೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿ.ಟಿ.ರವಿ, ಇದು ಆಂತರಿಕ ತನಿಖೆಯ ವರದಿಯಾಗಿದ್ದು, ಸಿದ್ಧಪಡಿಸಿದ ವರದಿಯನ್ನು ರಾಜ್ಯಾಧ್ಯಕ್ಷರಿಗೆ ತಲುಪಿಸಿದ್ದೇವೆ. ಬಿಜೆಪಿ ಭಾಗದಿಂದ…

Read More

ಪ್ರತಿಷ್ಠಿತ ಪ್ರಶಸ್ತಿ ಗೆದ್ದ ಭಾರತೀಯ ಸಿನಿಮಾ: ಪ್ರಧಾನಿ ಮೋದಿ ಅಭಿನಂದನೆ – Kannada News | Manipuri Language Indian movie Boong won prestigious BAFTA award

ಆಸ್ಕರ್ (Oscar) ಪ್ರಶಸ್ತಿಯಲ್ಲಿ ಭಾರತೀಯ ಸಿನಿಮಾ ‘ಹೋಮ್​​ಬೌಂಡ್’ ಅಂತಿಮ ಹದಿನೈದು ಸಿನಿಮಾಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದು ದೊಡ್ಡ ಸುದ್ದಿಯಾಗಿತ್ತು. ಆದರೆ ಆ ಸಿನಿಮಾ ನಾಮಿನೇಷನ್ ಹಂತ ತಲುಪಲು ವಿಫಲವಾಗಿತ್ತು. ಆದರೆ ಇದೀಗ ಸದ್ದೇ ಇಲ್ಲದೆ ಭಾರತೀಯ ಸಿನಿಮಾ ಒಂದು ಆಸ್ಕರ್​​ನಷ್ಟೆ ಪ್ರಮುಖವಾದ ಅಂತರಾಷ್ಟ್ರೀಯ ಸಿನಿಮಾ ಪ್ರಶಸ್ತಿ ಗೆದ್ದಿದೆ. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ಗಣ್ಯರು ಸಿನಿಮಾಕ್ಕೆ ಸಿನಿಮಾದ ತಾಂತ್ರಿಕ ವರ್ಗಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ. ಮಣಿಪುರಿ ಸಿನಿಮಾ ‘ಬೂಂಗ್’ ಸಿನಿಮಾ ಪ್ರತಿಷ್ಠಿತ ಭಾಫ್ಟಾ ಪ್ರಶಸ್ತಿ ಗೆದ್ದುಕೊಂಡಿದೆ. ಇತ್ತೀಚೆಗೆ…

Read More

ಟಿಎಂಸಿಯಲ್ಲಿ ಒಡಕು: 59 ಶಾಸಕರ ಸಹಿಯೊಂದಿಗೆ ವಿಧಾನಸಭೆಗೆ ಆಗಮಿಸಿದ ಉಚ್ಚಾಟಿತ ಶಾಸಕ ರಿತಬ್ರತ ಬ್ಯಾನರ್ಜಿ – Kannada News

ಕೋಲ್ಕತಾ, ಜೂನ್ 03: ಪಶ್ಚಿಮ ಬಂಗಾಳ(West Bengal) ವಿಧಾನಸಭೆಯ ವಿರೋಧ ಪಕ್ಷದ ನಾಯಕರ ನೇಮಕಕ್ಕೆ ಸಂಬಂಧಿಸಿದಂತೆ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (TMC) ವಲಯದಲ್ಲಿ ಬುಧವಾರ ಭಾರಿ ರಾಜಕೀಯ ಚಟುವಟಿಕೆಗಳು ಕಂಡುಬಂದಿವೆ. ಸೋಭಾಂದೇಬ್ ಚಟ್ಟೋಪಾಧ್ಯಾಯ ಅವರನ್ನು ವಿರೋಧ ಪಕ್ಷದ ನಾಯಕನನ್ನಾಗಿ ಗುರುತಿಸುವಂತೆ ಟಿಎಂಸಿ ಹೈಕಮಾಂಡ್ ಸ್ಪೀಕರ್ ರತೀಂದ್ರ ಬೋಸ್ ಅವರಿಗೆ ಪತ್ರ ಬರೆದ ಬೆನ್ನಲ್ಲೇ, ಪಕ್ಷದಿಂದ ಉಚ್ಚಾಟಿತಗೊಂಡಿರುವ ಶಾಸಕ ರಿತಬ್ರತ ಬ್ಯಾನರ್ಜಿ ಅವರು 59 ಶಾಸಕರ ಸಹಿಯೊಂದಿಗೆ ವಿಧಾನಸಭೆಗೆ ಭೇಟಿ ನೀಡಿರುವುದು ತೀವ್ರ ಕುತೂಹಲ ಮೂಡಿಸಿದೆ. ಮಮತಾ ಬ್ಯಾನರ್ಜಿ…

Read More

ಗ್ರಹಗತಿಗಳ ಬದಲಾವಣೆ: ಇಂದು ಮಧ್ಯಾಹ್ನ ಮೀನ ರಾಶಿಗೆ ಕುಜ ಸಂಚಾರ; 12 ರಾಶಿಗಳ ಮೇಲೆ ಇದರ ಪ್ರಭಾವವೇನು?

ಬೆಂಗಳೂರು, ಏ.2: ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ. ಬಸವರಾಜ ಗುರೂಜಿ ಅವರು 2026ರ ಮಾರ್ಚ್ 2ರಂದು ದ್ವಾದಶ ರಾಶಿಗಳ ಫಲಾಫಲಗಳನ್ನು ಪ್ರಸ್ತುತಪಡಿಸಿದ್ದಾರೆ. ಈ ದಿನವು ಪರಾಭವನಾ ಸಂವತ್ಸರ, ಉತ್ತರಾಯಣ, ಚೈತ್ರ ಮಾಸ, ವಸಂತ ಋತು, ಶುಕ್ಲ ಪಕ್ಷ, ಪೂರ್ಣಿಮಾ ತಿಥಿ, ಹಸ್ತ ನಕ್ಷತ್ರವನ್ನು ಒಳಗೊಂಡಿರುವ ವಿಶೇಷ ದಿನವಾಗಿದೆ. ಇದು ಚಿತ್ರ ಪೌರ್ಣಮಿ, ದವನದ ಹುಣ್ಣಿಮೆ ಹಾಗೂ ಯುಗಾದಿಯ ನಂತರದ ಮೊದಲ ಹುಣ್ಣಿಮೆಯಾಗಿರುವುದರಿಂದ ಪವಿತ್ರ ದಿನವಾಗಿದೆ. ಅಕ್ಕಮಹಾದೇವಿ ಜಯಂತಿ ಮತ್ತು ಕೆಲವು ಕಡೆ ಹನುಮ ಜಯಂತಿಯನ್ನೂ…

Read More

ಬಾಗಲಕೋಟೆ: ದಾಖಲೆ ಇಲ್ಲದೆ ಸಾಗಿಸುತ್ತಿದ್ದ ಕಂತೆ ಕಂತೆ ಹಣ ನಾಯನೇಗಲಿ ಚೆಕ್ ಪೋಸ್ಟ್​ನಲ್ಲಿ ಸೀಜ್

ಬಾಗಲಕೋಟೆ, ಮಾರ್ಚ್ 19: ಉಪಚುನಾವಣೆಯ ನೀತಿ ಸಂಹಿತೆ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಬಾಗಲಕೋಟೆ ಜಿಲ್ಲೆಯಲ್ಲಿ ಅಧಿಕಾರಿಗಳು ಕಟ್ಟುನಿಟ್ಟಿನ ತಪಾಸಣೆ ನಡೆಸುತ್ತಿದ್ದು, ದಾಖಲೆ ಇಲ್ಲದೆ ಸಾಗಿಸುತ್ತಿದ್ದ 15.50 ಲಕ್ಷ ರೂ. ನಗದನ್ನು ಜಪ್ತಿ ಮಾಡಿದ್ದಾರೆ. ಬಾಗಲಕೋಟೆ ತಾಲ್ಲೂಕಿನ ನಾಯನೇಗಲಿ ಚೆಕ್‌ಪೋಸ್ಟ್‌ನಲ್ಲಿ ನಡೆದ ವಾಹನ ತಪಾಸಣೆಯ ವೇಳೆ, ಕೆಎ-28 ಎಎ-4833 ಸಂಖ್ಯೆಯ ಸ್ವಿಫ್ಟ್ ಡಿಜೈರ್ ಕಾರಿನಲ್ಲಿ ಸಾಗಿಸುತ್ತಿದ್ದ ಹಣವನ್ನು ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ. ವಿಜಯಪುರ ಜಿಲ್ಲೆಯ ಬಬಲೇಶ್ವರದಿಂದ ಕುಷ್ಟಗಿ ಕಡೆಗೆ ತೆರಳುತ್ತಿದ್ದ ಈ ಕಾರಿನಲ್ಲಿ ವಿಜಯ್ ಮೇಲಗಡೆ ಹಾಗೂ ಕುಮಾರ ಹಿರೇಮಠ…

Read More

ಮುಸ್ಲಿಂ ಯುವಕನ ಜೊತೆ ಹಿಂದೂ ಹುಡುಗಿ ಪರಾರಿ ಕೇಸ್​​ನಲ್ಲಿ SDPI ಕೈವಾಡ, ಲವ್​​ ಜಿಹಾದ್​ ಆರೋಪ – Kannada News | Mangaluru Interfaith Marriage Case: Father Alleges Love Jihad, SDPI Role in Daughter’s Disappearance

ಮಂಗಳೂರು, ಫೆಬ್ರವರಿ 12: ಸುರತ್ಕಲ್‌ನ ಹಿಂದೂ ಯುವತಿಯೊಬ್ಬಳು ಮುಸ್ಲಿಂ ಯುವಕನೊಂದಿಗೆ ಪರಾರಿಯಾದ ಪ್ರಕರಣದಲ್ಲಿ ಲವ್ ಜಿಹಾದ್ ನಡೆದಿರುವ ಬಗ್ಗೆ ಯುವತಿಯ ತಂದೆ ವಿಶ್ವನಾಥ್ ಆರೋಪಿಸಿದ್ದಾರೆ. ತಮ್ಮ ಮಗಳು ವೈಶಾಲಿ ಲವ್ ಜಿಹಾದ್‌ಗೆ ಒಳಗಾಗಿದ್ದಾಳೆ ಮತ್ತು ಇದರ ಹಿಂದೆ SDPI ಸಂಘಟನೆಯ ಕೈವಾಡವಿದೆ ಎಂದು ಅವರು ಆರೋಪಿಸಿದ್ದಾರೆ. ಮಗಳೊಂದಿಗೆ ಪರಾರಿಯಾದ ಯುವಕ ಮೊಹಮ್ಮದ್ ಮಿದ್ಲಾಜ್ SDPI ಸಂಘಟನೆಯಲ್ಲಿ ಸಕ್ರಿಯನಾಗಿದ್ದ ಎಂಬ ಮಾಹಿತಿ ಇದೆ. ಅಲ್ಲದೆ, ಆ ಯುವಕ ಕೆಲಸ ಮಾಡುತ್ತಿದ್ದ ಅಟ್ಲಾಂಟಿಕ್ ಜುವೆಲ್ಲರ್ಸ್ ಮಾಲೀಕರು SDPI ಮುಖಂಡರು ಎಂದು…

Read More

ಬದರಿನಾಥ, ಕೇದಾರನಾಥ ದೇವಾಲಯಗಳ ಬಳಿ ಮೊಬೈಲ್ ಬಳಕೆ ನಿಷೇಧ; ಚಾರ್ ಧಾಮ್ ಯಾತ್ರೆ ವೇಳೆ ರೀಲ್ಸ್​ ಮಾಡುವಂತಿಲ್ಲ – Kannada News | Mobiles banned near Badrinath Kedarnath temples reels and videos restricted during Char Dham Yatra

ನವದೆಹಲಿ, ಫೆಬ್ರವರಿ 17: ಚಾರ್ ಧಾಮ್ ಯಾತ್ರೆ 2026ರ ಸಮಯದಲ್ಲಿ ಬದರಿನಾಥ ಮತ್ತು ಕೇದಾರನಾಥ ದೇವಾಲಯಗಳ 70 ಮೀಟರ್ ಒಳಗೆ ಮೊಬೈಲ್ ಫೋನ್‌ಗಳನ್ನು ನಿಷೇಧಿಸಲಾಗುವುದು. ಚಾರ್ ಧಾಮ್ ಯಾತ್ರೆ (Char Dham Yatra) 2026ಕ್ಕೆ ಮುಂಚಿತವಾಗಿ ಬದರಿನಾಥ, ಕೇದಾರನಾಥ ದೇವಾಲಯ ಸಮಿತಿ (BKTC) ಬದರಿನಾಥ ಮತ್ತು ಕೇದಾರನಾಥ ದೇವಾಲಯ ಸಂಕೀರ್ಣಗಳ 70 ಮೀಟರ್ ವ್ಯಾಪ್ತಿಯಲ್ಲಿ ಮೊಬೈಲ್ ಫೋನ್‌ಗಳ ಮೇಲೆ ಸಂಪೂರ್ಣ ನಿಷೇಧವನ್ನು ಘೋಷಿಸಿದೆ. ಭಕ್ತರಿಗೆ ದೇವಾಲಯಗಳ ಬಳಿ ರೀಲ್‌ಗಳು ಅಥವಾ ವೀಡಿಯೊಗಳನ್ನು ಮಾಡಲು ಅನುಮತಿ ನೀಡುವುದಿಲ್ಲ. ದೇವಾಲಯಗಳ…

Read More

ಸಾಲ ಮಾಡಿ ತಂದಿದ್ದ ‘ಕನಸಿನ ಬೈಕ್’ ಕೊಂಡ ರಾತ್ರಿಯೇ ಕಳ್ಳತನ! ಕೆಟಿಎಂ ಬೈಕ್ ಕಳವಿನ ಕೃತ್ಯ ಸಿಸಿಟಿವಿಲಿ ಸೆರೆ – Kannada News | Nelamangala: Youth’s Dream KTM Bike Stolen on First Night of Purchase; Theft Caught on CCTV

ನೆಲಮಂಗಲ, ಏಪ್ರಿಲ್ 21: ಯುವಕನೊಬ್ಬ ಕಷ್ಟಪಟ್ಟು ಹಣ ಉಳಿಸಿ, ಸಾಲ ಮಾಡಿ ತಂದಿದ್ದ ಕನಸಿನ ಬೈಕ್ ಅದೇ ದಿನ ರಾತ್ರಿ ಕಳ್ಳತನವಾಗಿರುವ ಘಟನೆ ನೆಲಮಂಗಲದಲ್ಲಿ ನಡೆದಿದೆ. ಬೈಕ್ ಮಾಲೀಕ ಚಂದು ಈಗ ಕಂಗಾಲಾಗಿದ್ದಾರೆ. ನೆಲಮಂಗಲ ನಗರದ ವೀವರ್ಸ್ ಕಾಲೋನಿಯ ಮನೆಯ ಮುಂದೆ ಚಂದು ತನ್ನ ಕೆಟಿಎಂ (KTM) ಬೈಕ್ ಅನ್ನು ಸುರಕ್ಷಿತವಾಗಿ ಲಾಕ್ ಮಾಡಿ ನಿಲ್ಲಿಸಿದ್ದರು. ಆದರೆ, ಮಧ್ಯರಾತ್ರಿ ಬೇರೆ ಬೈಕ್‌ನಲ್ಲಿ ಬಂದ ಕಳ್ಳರ ಗ್ಯಾಂಗ್, ಯಾರ ಭಯವೂ ಇಲ್ಲದೆ ಕ್ಷಣಾರ್ಧದಲ್ಲಿ ಲಾಕ್ ಓಪನ್ ಮಾಡಿದೆ. ಅತ್ಯಂತ…

Read More

ಬೇಲೂರು ಚನ್ನಕೇಶವಸ್ವಾಮಿ ದೇಗಲದ ಹುಂಡಿ ಎಣಿಕೆ ವೇಳೆ 1.98 ಲಕ್ಷ ರೂ. ಜಾಕೆಟ್ ಒಳಗೆ ಇಳಿಸಿ ಎಗರಿಸಿ ಸಿಕ್ಕಿಬಿದ್ದ ಆಸಾಮಿ – Kannada News | Belur Chennakeshava Temple: Man Caught Stealing Rs 1.98 Lakh During Hundi Counting

ಹಾಸನ, ಜುಲೈ 10: ಒಂದೆಡೆ ಅಯೋಧ್ಯೆಯ ದೇಣಿಗೆ ವಿಚಾರ ದೇಶದಾದ್ಯಂತ ಸದ್ದು ಮಾಡಿದ್ದರೆ, ಇತ್ತ ಕರ್ನಾಟಕದ ಕೊಪ್ಪಳದಲ್ಲಿ ಅಂಜನಾದ್ರಿಯ ಹುಂಡಿ ಹಣ ಎಣಿಕೆ ಮಾಹಿತಿ ನೀಡಲು ವಿಳಂಬ ಮಾಡಿರುವುದು ಚರ್ಚೆಗೆ ಗ್ರಾಸವಾಗಿತ್ತು. ಇದೆಲ್ಲದರ ಮಧ್ಯೆ, ಹಾಸನ ಜಿಲ್ಲೆಯ ಬೇಲೂರು ಪಟ್ಟಣದ ಐತಿಹಾಸಿಕ ಚನ್ನಕೇಶವ ಸ್ವಾಮಿ ದೇವಾಲಯದ ಹುಂಡಿ ಎಣಿಕೆ ವೇಳೆ ವ್ಯಕ್ತಿಯೊಬ್ಬ 1,98,000 ರೂಪಾಯಿ ಹಣವನ್ನು ಜರ್ಕಿನ್ ಒಳಗೆ ಹಾಕಿ ಎಗರಿಸಿದ ಘಟನೆ ನಡೆದಿದೆ. ವಿಶೇಷವೆಂದರೆ, ಹುಂಡಿ ಎಣಿಕೆ ಕಾರ್ಯದ ವಿಡಿಯೋ ಗ್ರಾಫಿಗಾಗಿ ಬಂದಿದ್ದ ವ್ಯಕ್ತಿಯೇ ಕೃತ್ಯ…

Read More