Headlines

ರಾಜ್ಯದ ಜನತೆಗೆ ಶೀಘ್ರದಲ್ಲೇ ಕಾದಿದ್ಯಾ ಬಸ್ ಪ್ರಯಾಣ ದರ ಏರಿಕೆ ಶಾಕ್? – Kannada News | Karnataka Transport Corporations Seeks Government about Bus Fare Hike

ಬೆಂಗಳೂರು, (ಜೂನ್ 19): ಪೆಟ್ರೋಲ್ ಡೀಸೆಲ್ ಹಾಗೂ ಗ್ಯಾಸ್ ಸಿಲೆಂಡರ್ ದರ ಏರಿಕೆ ಬೆನ್ನಲ್ಲೇ ಹಲವು ವಸ್ತುಗಳ ಬೆಲೆ ಏರಿಕೆಯಾಗಿದೆ. ಇದರಿಂದ ಜನಸಾಮಾನ್ಯರು ಕಂಗಾಲಾಗಿದ್ದಾರೆ. ಇದರ ಮಧ್ಯೆ ಇದೀಗ ಕರ್ನಾಟಕದಲ್ಲಿ ಸಾರಿಗೆ ಬಸ್​ ಟಿಕೆಟ್ ದರ ಏರಿಕೆ ಚರ್ಚೆಗಳು ನಡೆದಿವೆ. ಹೀಗಾಗಿ ಸಾರ್ವಜನಿಕರಿಗೆ ಮತ್ತೊಂದು ಬೆಲೆ ಏರಿಕೆ ಆತಂಕ ಶುರುವಾಗಿದೆ. ಹೌದು…ಬಸ್ ಪ್ರಯಾಣ ದರ ಹೆಚ್ಚಳ ಮಾಡುವಂತೆ ಸಾರಿಗೆ ನಿಗಮಗಳು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿವೆ. ಇಮದು (ಜೂನ್ 19) ಸಿಎಂ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ನಡೆದ…

Read More

ಈ ಬಾರಿ ದೆಹಲಿಯಲ್ಲಿ ನಡೆಯಲಿರುವ ಗಣರಾಜ್ಯೋತ್ಸವ ಪರೆಡ್​​​ನಲ್ಲಿ ಕರ್ನಾಟಕದ ಸ್ತಬ್ಧಚಿತ್ರ, ಯಾವುದು ಗೊತ್ತಾ? – Kannada News | Republic Day 2025: Karnataka’s Innovative Tableau Highlights Agri Tech and Atmanirbhar Bharat

ದೆಹಲಿ, ಜ.21: ಜನವರಿ 26ರಂದು ದೆಹಲಿಯಲ್ಲಿ ನಡೆಯಲಿರುವ ಗಣರಾಜ್ಯೋತ್ಸವ ಪರೇಡ್​​​ನಲ್ಲಿ ಈ ಬಾರಿ ಕರ್ನಾಟಕದ ಸ್ತಬ್ಧಚಿತ್ರಗಳ ಪ್ರದರ್ಶನಕ್ಕೆ ಅವಕಾಶ ಸಿಕ್ಕಿದೆ. ಈ ಹಿಂದೆಯೂ ಗಣರಾಜ್ಯೋತ್ಸವ ಪರೇಡ್​​​ನಲ್ಲಿ ಹಲವಾರು ಬಾರಿ ಅವಕಾಶಗಳು ಸಿಕ್ಕಿತು. ಇದೀಗ ಮತ್ತೊಮ್ಮೆ ಕರ್ನಾಟಕಕ್ಕೆ ಅವಕಾಶ ಸಿಕ್ಕಿದೆ. ಈ ಬಾರಿ ವಿಶೇಷ ಸ್ತಬ್ಧಚಿತ್ರಗಳನ್ನು ಕರ್ನಾಟಕ ನೀಡಿಲಿದೆ. ಇದಕ್ಕೂ ಮುನ್ನ ಇದರ ಪರೇಡ್​​​ ಅಭ್ಯಾಸಗಳು ನಡೆಯಲಿದೆ ಎಂದು ಹೇಳಲಾಗಿದೆ. ದೆಹಲಿಯ ಕರ್ತವ್ಯ ಪಥದಲ್ಲಿ ಈ ಪರೇಡ್​​​ ನಡೆಯಲಿದೆ. ಈ ಬಾರಿ ಟ್ಯಾಬ್ಲೋ ಮಿಲೆಟ್ಸ್ ಟು ಮೈಕ್ರೋಚಿಪ್ ಪರಿಕಲ್ಪನೆಯಲ್ಲಿ…

Read More

ಬೆಂಗಳೂರಿನಲ್ಲಿ ಬೀದಿನಾಯಿಗಳ ಅಟ್ಟಹಾಸ: ಹೊಯ್ಸಳ ನಗರದಲ್ಲಿ ಒಂದೂವರೆ ತಿಂಗಳಲ್ಲಿ 3ನೇ ದಾಳಿ; ಜಿಬಿಎ ವಿರುದ್ಧ ಜನರ ಆಕ್ರೋಶ – Kannada News | Bengaluru Stray Dog Menace: Worker Attacked in Hoysala Nagar; 3rd Case Within 1.5 Months

ಬೀದಿ ನಾಯಿಗಳು (ಸಾಂದರ್ಭಿಕ ಚಿತ್ರ)Image Credit source: PTI ಬೆಂಗಳೂರು, ಜುಲೈ 2: ಬೆಂಗಳೂರು (Bengaluru) ನಗರದಲ್ಲಿ ಬೀದಿನಾಯಿಗಳ ಹಾವಳಿಗೆ ಬ್ರೇಕ್ ಹಾಕಲು ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಸಂಪೂರ್ಣ ವಿಫಲವಾಗುತ್ತಿರುವುದು ಮತ್ತೆ ಮತ್ತೆ ಸಾಬೀತಾಗುತ್ತಿದೆ. ಅದರಲ್ಲೂ ಒಂದೇ ಪ್ರದೇಶದಲ್ಲಿ ಮೇಲಿಂದ ಮೇಲೆ ಅಮಾಯಕರ ಮೇಲೆ ಬೀದಿನಾಯಿಗಳು ಎರಗುತ್ತಿದ್ದು, ಪೂರ್ವ ನಗರ ಪಾಲಿಕೆ ವ್ಯಾಪ್ತಿಯ ಹೊಯ್ಸಳ ನಗರದ ಜನಸಾಮಾನ್ಯರು ರೋಸಿಹೋಗಿದ್ದಾರೆ. ರಾಮಮೂರ್ತಿ ನಗರ ಸಮೀಪದ ಹೊಯ್ಸಳ ನಗರದಲ್ಲಿ ಕಾರ್ಮಿಕನೊಬ್ಬನ ಮೇಲೆ ಬೀದಿನಾಯಿ ಭೀಕರ ದಾಳಿ ನಡೆಸಿರುವ ಘಟನೆ…

Read More

ಕಿರುಕುಳ ಆರೋಪ: ಮಾಗಡಿಯಲ್ಲಿ ಪತಿ ಶಾಲೆ ಮುಂದೆಯೇ ಪತ್ನಿ ಪ್ರೊಟೆಸ್ಟ್​​ – Kannada News | Family dispute: Wife protests outside husband’s school in Magadi, Ramanagara

ರಾಮನಗರ, ಡಿಸೆಂಬರ್​​ 30: ಕಿರುಕುಳ ನೀಡಿದ್ದಲ್ಲದೆ ಮನೆಗೆ ಸೇರಿಸದ ಆರೋಪದ ಹಿನ್ನೆಲೆ ಪತಿ ಒಡೆತನದ ಶಿಕ್ಷಣ ಸಂಸ್ಥೆಯ ಎದುರೇ ಕುಳಿತು ಪತ್ನಿ ಪ್ರತಿಭಟನೆ ನಡೆಸಿರುವ ಘಟನೆ ಮಾಗಡಿಯಲ್ಲಿ ನಡೆದಿದೆ. ಮಾರುತಿ ಇಂಟರ್ ನ್ಯಾಶನಲ್ ಪಬ್ಲಿಕ್ ಸ್ಕೂಲ್ ಮಾಲಕ ರೂಪೇಶ್ ಜೊತೆ ಕಳೆದ ಒಂದು ವರ್ಷದ ಹಿಂದೆ ಪ್ರೀತಿ ವಿವಾಹವಾಗಿತ್ತು. ಆದರೆ ಪತಿ ಕಿರುಕುಳ ನೀಡುತ್ತಿದ್ದು, ಕೆಲ ದಿನಗಳಿಂದ ಮನೆಗೂ ತನ್ನನ್ನು ಸೇರಿಸುತ್ತಿಲ್ಲ ಎಂದು ಪ್ರೀತಿ ಆರೋಪಿಸಿದ್ದಾರೆ. ಈ ಬಗ್ಗೆ ಪೊಲೀಸರಿಗೂ ದೂರು ನೀಡಿರುವ ಇವರು, ನ್ಯಾಯಕ್ಕಾಗಿ ಪತಿಗೆ…

Read More

ಅಮೆರಿಕ ಏನೇ ಮಾಡಿದರೂ ಛಲ ಬಿಡದ ಚೀನಾ; ಇಯುವಿ ಮೆಷೀನ್​ನ ಪ್ರೋಟೋಟೈಪ್ ತಯಾರು; ಮುಂದಿದೆ ಟೆಕ್ನಾಲಜಿ ಜಟಾಪಟಿ – Kannada News | China develops extremely complicated prototype of EUV Lithography machine for AI chip production

ನವದೆಹಲಿ, ಡಿಸೆಂಬರ್ 18: ಹಿಂದೆ ಕೋಲ್ಡ್ ವಾರ್ ಸಂದರ್ಭದಲ್ಲಿ ಪರಮಾಣು ತಂತ್ರಜ್ಞಾನ ಸಿದ್ಧಿಸಿಕೊಳ್ಳಲು ಪೈಪೋಟಿ ನಡೆದಿತ್ತು. ಈಗ ಚಿಪ್ ಟೆಕ್ನಾಲಜಿಗೆ ಜಿದ್ದಾಜಿದ್ದಿ ನಡೆದಿದೆ. ಎಐ ಬಳಕೆಗೆ ಬೇಕಾದ ಬಹಳ ಸೂಕ್ಷ್ಮ ಚಿಪ್​ಗಳನ್ನು ತಯಾರಿಸುವ ಇಯುವಿ ಲಿಥೋಗ್ರಫಿ ತಂತ್ರಜ್ಞಾನ ಹೊಂದಿರುವುದು ಯೂರೋಪ್​ನ ಎಎಸ್​ಎಂಎಲ್ ಕಂಪನಿ ಮಾತ್ರವೇ. ಈ ಟೆಕ್ನಾಲಜಲಿ ಅಪ್ಪಿತಪ್ಪಿಯೂ ಚೀನಾ ಕೈಗೆ ಹೋಗಬಾರದೆಂದು ಅಮೆರಿಕ ಹಲವು ವರ್ಷ ಕಾಲದಿಂದಲೂ ಯತ್ನಿಸುತ್ತಿದೆ. ಇದೇ ಹೊತ್ತಲ್ಲಿ ಅಮೆರಿಕಕ್ಕೆ ಶಾಕ್ ಎನಿಸುವಂತೆ, ಚೀನಾ ಇಯುವಿ ಲಿಥೋಗ್ರಫಿ ಮೆಷೀನ್​ನ ಪ್ರೋಟೋಟೈಪ್ ಅಭಿವೃದ್ಧಿಪಡಿಸಿದೆ. ಈ…

Read More

‘ಅದಕ್ಕೆ ದೊಡ್ಡೋರು ಅನ್ನೋದು’; ಸುದೀಪ್ ಬಗ್ಗೆ ಧನ್ವೀರ್ ಮೆಚ್ಚುಗೆ – Kannada News | Dhanveer Happy about Kichcha Sudeep Appreciation in Darshan matter

ಚಿತ್ರರಂಗ ಒಟ್ಟಾಗಿ ಸಾಗಬೇಕು ಎಂಬುದು ಅನೇಕರ ಕೋರಿಕೆ. ಆದರೆ, ಇದಕ್ಕೆ ಪ್ರತಿಕೂಲವಾಗಿ ಘಟನೆಗಳು ನಡೆದಿದ್ದೇ ಹೆಚ್ಚು. ದರ್ಶನ್ ಬಗ್ಗೆ ಸುದೀಪ್ ಅವರು ಸದಾ ಮೆಚ್ಚುಗೆ ಸೂಚಿಸಿ ಮಾತನಾಡುತ್ತಾರೆ. ಆದರೆ, ಇಬ್ಬರ ಅಭಿಮಾನಿಗಳ ಮಧ್ಯೆ ಆಗಾಗ ಕಿರಿಕ್​​ಗಳು ಆಗುತ್ತವೆ. ಸೋಶಿಯಲ್ ಮೀಡಿಯಾದಲ್ಲಿ ಕಿತ್ತಾಡಿಕೊಳ್ಳುತ್ತಾರೆ. ಇತ್ತೀಚೆಗೆ ಮಾತನಾಡಿದ್ದ ಸುದೀಪ್ (Sudeep) ಅವರು, ದರ್ಶನ್ ಆಪ್ತ ಧನ್ವೀರ್ ಬಗ್ಗೆ ಮಾತನಾಡಿದ್ದರು. ಈ ವಿಷಯಕ್ಕೆ ಧನ್ವೀರ್ ಪ್ರತಿಕ್ರಿಯೆ ನೀಡಿದ್ದಾರೆ. ವಿನಯ್ ಹಾಗೂ ಧನ್ವೀರ್ ಪೋಸ್ಟ್ ಹಾಕಿಕೊಂಡು ಕಿರಿಕ್ ಮಾಡಿಕೊಂಡ ಬಗ್ಗೆ ಸುದೀಪ್ ಮಾತನಾಡಿದ್ದರು….

Read More

ನಕಲಿ ಸಹಿ ಆರೋಪ; ಮಮತಾ ಬ್ಯಾನರ್ಜಿ ನಿವಾಸದ ಮೇಲೆ ಸಿಐಡಿ ದಾಳಿ – Kannada News

ಕೊಲ್ಕತ್ತಾ, ಜೂನ್ 9: ತೃಣಮೂಲ ಕಾಂಗ್ರೆಸ್ (TMC) ಶಾಸಕರ ‘ನಕಲಿ ಸಹಿ’ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆಯೊಂದರಲ್ಲಿ ಅಪರಾಧ ತನಿಖಾ ಇಲಾಖೆಯ (CID) ತಂಡವೊಂದು ಇಂದು ಟಿಎಂಸಿ ಪಕ್ಷದ ಕೇಂದ್ರ ಕಚೇರಿಗೆ ತಲುಪಿದೆ. ಈ ಕಚೇರಿಯು ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರ ಕಾಳೀಘಾಟ್ ನಿವಾಸವೂ ಆಗಿದೆ. ಲಭ್ಯವಿರುವ ಮಾಹಿತಿಯ ಪ್ರಕಾರ, ರಾಜ್ಯ ತನಿಖಾ ಸಂಸ್ಥೆಯ ಅಧಿಕಾರಿಗಳು ಮಧ್ಯಾಹ್ನ 12 ಗಂಟೆ ಸುಮಾರಿಗೆ 30ಬಿ ಹರೀಶ್ ಚಟರ್ಜಿ ರಸ್ತೆಯ ನಿವಾಸಕ್ಕೆ ಆಗಮಿಸಿದ್ದಾರೆ. ಸಿಐಡಿ ತಂಡದೊಂದಿಗೆ ಕಾಳೀಘಾಟ್ ಪೊಲೀಸ್…

Read More

ಮೆಟ್ರೊ ಟಿಕೆಟ್ ದರ ಏರಿಕೆ ಬಗ್ಗೆ ಕೊನೆಗೂ ಮೌನಮುರಿದ ಸಿದ್ದರಾಮಯ್ಯ ಹೇಳಿದ್ದಿಷ್ಟು – Kannada News | Bengaluru Metro Fare Hike: CM Siddaramaiah Assures Talks With Central Government

ಸಿಎಂ ಸಿದ್ದರಾಮಯ್ಯ, ಮೆಟ್ರೋ Image Credit source: tv9 kannada ಬೆಂಗಳೂರು, ಫೆಬ್ರವರಿ 06: ಬೆಂಗಳೂರಿಗರ ಜೀವನಾಡಿ ಮೆಟ್ರೋ (Metro) ಪ್ರಯಾಣ ದರ ಫೆಬ್ರವರಿ 9ರಿಂದ ಶೇಕಡಾ 5ರಷ್ಟು ಏರಿಕೆ ಆಗಲಿದೆ. ಜನರ ವಿರೋಧದ ನಡುವೆ ಟಿಕೆಟ್​​ ದರ ಹೆಚ್ಚಿಸಲಾಗಿದ್ದು, BMRCL ವಿರುದ್ಧ ಆಕ್ರೋಶದ ಕಟ್ಟೆಯೊಡಿದಿದೆ. ಸಾಮಾಜಿಕ ಜಾಲತಾಣದಲ್ಲಿ ಮೆಟ್ರೋ ಬಾಯ್ಕಾಟ್ ಕ್ಯಾಂಪೇನ್ ನಡೆಸಲಾಗುತ್ತಿದೆ. ಅಷ್ಟೇ ಅಲ್ಲದೆ ಈ ವಿಚಾರ ರಾಜ್ಯ ಸರ್ಕಾರ ಮತ್ತು ಬಿಜೆಪಿ ಮಧ್ಯೆ ರಾಜಕೀಯ ಜಟಾಪಟಿಗೂ ಕಾರಣವಾಗಿದೆ. ಇದೆಲ್ಲದರ ಮಧ್ಯೆ ಕೇಂದ್ರ ಸರ್ಕಾರದ…

Read More

Video: ಮುಗ್ಧ ಮನಸ್ಸುಗಳ ಶುದ್ಧ ಸ್ನೇಹ: ಬೀದಿ ನಾಯಿ ಜತೆಗೆ ಆಟವಾಡಿದ ಪುಟಾಣಿಗಳು – Kannada News | Children playing with a stray dog, video goes viral

ಈ ಜಗತ್ತಿನಲ್ಲಿ ಎಲ್ಲ ಬಂಧಗಳನ್ನು ಮೀರಿದ ಸಂಬಂಧವೇ ಈ ಸ್ನೇಹ (friendship). ಈ ಸುಂದರವಾದ ಬಂಧಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಹೌದು, ಈ ಮೂಕ ಪ್ರಾಣಿಗಳ ಜತೆಗೆ ಸ್ನೇಹ ಬೆಳೆಸಿದರೆ ಅವುಗಳು ಜೀವನ ಪರ್ಯಂತ ಜತೆಗಿರುತ್ತವೆ. ಇದೀಗ ಪುಟಾಣಿಗಳು ರಸ್ತೆ ಬದಿಯಲ್ಲಿದ್ದ ಶ್ವಾನದ ಜತೆಗೆ ಆಟ ಆಡಿರುವ ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರ ಗಮನ ಸೆಳೆದಿದೆ. md_royal_teams ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾದ ವಿಡಿಯೋದಲ್ಲಿ ಪುಟಾಣಿಗಳ ಜತೆಗೆ ಶ್ವಾನದ ಸ್ನೇಹ ಸಂಬಂಧವನ್ನು ಕಾಣಬಹುದು. ರಸ್ತೆ ಬದಿಯಲ್ಲಿ ಕುಳಿತ…

Read More

ಅಕ್ರಮ ಗ್ಯಾಂಬ್ಲಿಂಗ್ ದಂಧೆಗೆ ಕಡಿವಾಣ; ಕೆಲವೇ ತಿಂಗಳಲ್ಲಿ 7,800ಕ್ಕೂ ಹೆಚ್ಚು ವೆಬ್​ಸೈಟ್​ಗಳನ್ನು ಬ್ಲಾಕ್ ಮಾಡಿದ ಸರ್ಕಾರ – Kannada News | Government blocks 242 illegal betting, gambling website links, number of blocked sites rise to over 7,800 in India

ನವದೆಹಲಿ, ಜನವರಿ 16: ಭಾರತ ಸರ್ಕಾರ ಅಕ್ರಮ ಬೆಟ್ಟಿಂಗ್ ದಂದೆಗಳಿಗೆ (Illegal betting and Gambling) ಕಡಿವಾಣ ಹಾಕುವ ಪ್ರಯತ್ನ ಮುಂದುವರಿಸಿದೆ. ಈ ನಿಟ್ಟಿನಲ್ಲಿ ಇವತ್ತು ಒಂದೇ ದಿನ 242 ಅಕ್ರಮ ಬೆಟ್ಟಿಂಗ್ ಮತ್ತು ಗ್ಯಾಂಬ್ಲಿಂಗ್ ವೆಬ್​ಸೈಟ್​ಗಳ ಲಿಂಕ್​ಗಳನ್ನು ಬ್ಲಾಕ್ ಮಾಡಿದೆ. ಕಳೆದ ಕೆಲ ತಿಂಗಳಲ್ಲಿ ಸಾವಿರಾರು ಅಕ್ರಮ ಬೆಟ್ಟಿಂಗ್ ವೆಬ್​ಸೈಟ್​ಗಳನ್ನು ಸರ್ಕಾರ ನಿರ್ಬಂಧಿಸಿರುವುದು ಗಮನಾರ್ಹ. 2025ರ ಆಗಸ್ಟ್ ತಿಂಗಳಲ್ಲಿ ಆನ್ಲೈನ್ ಗೇಮಿಂಗ್ ಕಾಯ್ದೆ ಜಾರಿಗೆ ಬಂದಿತು. ಆಗಿನಿಂದ ಇಲ್ಲಿಯವರೆಗೆ 7,800ಕ್ಕೂ ಅಧಿಕ ಅಕ್ರಮ ಬೆಟ್ಟಿಂಗ್ ಮತ್ತು…

Read More