ಟೀಮ್ ಇಂಡಿಯಾದ 6 ಆಟಗಾರರಿಗೆ ಚೊಚ್ಚಲ ಐರಿಷ್ ಸರಣಿ! – Kannada News | The Six Indian Players Touring Ireland for the First Time
ಟಿ20 ವಿಶ್ವಕಪ್ 2026ರ ಬಳಿಕ ಟೀಮ್ ಇಂಡಿಯಾ ಮತ್ತೆ ಚುಟುಕು ಕ್ರಿಕೆಟ್ನಲ್ಲಿ ಕಣಕ್ಕಿಳಿಯಲು ಸಜ್ಜಾಗಿದೆ. ಈ ಬಾರಿ ಭಾರತ ತಂಡ ಕಣಕ್ಕಿಳಿಯಲಿರುವುದು ಹೊಸ ನಾಯಕ ಹಾಗೂ ಯುವ ಪಡೆಯೊಂದಿಗೆ ಎಂಬುದು ವಿಶೇಷ. ಇನ್ನು ಟೀಮ್ ಇಂಡಿಯಾದ ಎದುರಾಳಿ ಐರ್ಲೆಂಡ್. ಜೂನ್ 26 ರಿಂದ ಬೆಲ್‌ಫಾಸ್ಟ್‌ನಲ್ಲಿ ಆರಂಭವಾಗಲಿರುವ ಐರ್ಲೆಂಡ್ ವಿರುದ್ಧದ ಎರಡು ಪಂದ್ಯಗಳ ಟಿ20 ಸರಣಿಗಾಗಿ ಆಯ್ಕೆಯಾಗಿರುವ 16 ಸದಸ್ಯರ ಭಾರತ ತಂಡದಲ್ಲಿ, ಬರೋಬ್ಬರಿ ಆರು ಆಟಗಾರರು ತಮ್ಮ ವೃತ್ತಿಜೀವನದಲ್ಲಿ ಇದೇ ಮೊದಲ ಬಾರಿಗೆ ಐರ್ಲೆಂಡ್‌ನಲ್ಲಿ ಪಂದ್ಯವಾಡಲು ಸಜ್ಜಾಗಿದ್ದಾರೆ. …