ಆಪರೇಷನ್ ಎಪಿಕ್ ಫ್ಯೂರಿಯಲ್ಲಿ ಅಮೆರಿಕಕ್ಕೆ ಭಾರಿ ಪೆಟ್ಟು, ಇರಾನ್ ಮೇಲಿನ ದಾಳಿಯಲ್ಲಿ 42 ಯುದ್ಧ ವಿಮಾನಗಳು, ಡ್ರೋನ್‌ಗಳು ಧ್ವಂಸ – Kannada News | The Ghostly Cost of Epic Fury How a Single U.S. Operation Against Iran Left 42 Warplanes Damaged or Destroyed
ವಾಷಿಂಗ್ಟನ್, ಮೇ 20: ಅಮೆರಿಕ(America)ವು ಫೆಬ್ರವರಿ 28ರಂದು ಇರಾನ್ ವಿರುದ್ಧ ನಡೆಸಿದ ಹೈ-ವೋಲ್ಟೇಜ್ ಮಿಲಿಟರಿ ಕಾರ್ಯಾಚರಣೆ ‘ಆಪರೇಷನ್ ಎಪಿಕ್ ಫ್ಯೂರಿ’ ವೇಳೆ ತನ್ನ ಅತ್ಯಂತ ಆಧುನಿಕ ಫೈಟರ್ ಜೆಟ್‌ಗಳು ಮತ್ತು ಡ್ರೋನ್‌ಗಳು ಸೇರಿದಂತೆ ಕನಿಷ್ಠ 42 ಯುದ್ಧ ವಿಮಾನಗಳನ್ನು ಕಳೆದುಕೊಂಡಿದೆ ಅಥವಾ ಭೀಕರವಾಗಿ ಹಾನಿಗೊಳಿಸಿಕೊಂಡಿದೆ ಎಂದು ಅಧಿಕೃತ ವರದಿ ಬಹಿರಂಗಪಡಿಸಿದೆ. ಮಿಲಿಟರಿ ಕಾರ್ಯಾಚರಣೆಗಳ ರಹಸ್ಯ ವರ್ಗೀಕರಣ ನಿರ್ಬಂಧಗಳು, ಆ ಪ್ರದೇಶದಲ್ಲಿ ಇನ್ನೂ ನಡೆಯುತ್ತಿರುವ ಯುದ್ಧ ಮತ್ತು ಹಾನಿಯ ನಿಖರ ಮೌಲ್ಯಮಾಪನದ ಸವಾಲುಗಳಿಂದಾಗಿ ಈ ಸಂಖ್ಯೆ ಇನ್ನೂ ಹೆಚ್ಚಾಗಬಹುದು…