Headlines

ಬೆಂಗಳೂರಲ್ಲಿ ಸಿಎನ್​​ಜಿ ದರ 2 ರೂ ಏರಿಕೆ: ವಾಹನ ಸವಾರರು ಕಂಗಾಲು – Kannada News | Bengaluru CNG Price Increased by Rs 2: Commuters and Drivers Worried

ಬೆಂಗಳೂರು, ಮೇ 23: ಪೆಟ್ರೋಲ್, ಡೀಸೆಲ್ ದರ ಏರಿಕೆ ಬೆನ್ನೆಲ್ಲೇ ಸಿಎನ್​​ಜಿ ಬೆಲೆಯೂ ಏರಿಕೆಯಾಗಿದೆ. ಕಂಪನಿಗಳು 9 ದಿನದಲ್ಲಿ ಮೂರನೇ ಬಾರಿ ಸಿಎನ್‌ಜಿ ದರ ಏರಿಸಿವೆ. ಬೆಂಗಳೂರಿನಲ್ಲೂ CNG ದರ 2 ರೂಪಾಯಿ ಏರಿಕೆಯಾಗಿದ್ದು, ಕೆಜಿ ಸಿಎನ್​​ಜಿ 93 ರೂಪಾಯಿಯಿಂದ 95 ರೂಪಾಯಿಗೆ ಹೆಚ್ಚಳವಾಗಿದೆ. ಇದರಿಂದ ವಾಹನ ಸವಾರರು ಕಂಗಾಲಾಗಿದ್ದಾರೆ. ಶಾಂತಿನಗರದ ಗಿಲ್ ಗ್ಯಾಸ್ ಮುಂಭಾಗದಲ್ಲಿ ಸಿಎನ್‌ಜಿಗಾಗಿ ಚಾಲಕರು ಗಂಟೆಗಟ್ಟಲೆ ಕಾಯಬೇಕಾದ ಪರಿಸ್ಥಿತಿ ಎದುರಾಗಿದೆ. ಗಂಟೆಗಳ ಕಾಲ ಕಾದರೂ ಇಂಧನ ಸಿಗುವ ಯಾವುದೇ ಖಾತರಿಯಿಲ್ಲ. ಇದು ದೈನಂದಿನ…

Read More

ಐಟಿಆರ್ ಸಲ್ಲಿಕೆಯಿಂದ ಟಿಡಿಎಸ್ ಪಾವತಿವರೆಗೆ, ಜುಲೈನಲ್ಲಿ ಡೆಡ್​ಲೈನ್​ಗಳಿವೆ, ಗಮನಿಸಿ – Kannada News | Income Tax and financial tasks deadlines in 2026 July Month

ನವದೆಹಲಿ, ಜೂನ್ 29: ಭಾರತದ ಟ್ಯಾಕ್ಸ್ ಕ್ಯಾಲೆಂಡರ್‌ನಲ್ಲಿ ಜುಲೈ ತಿಂಗಳು ಅತ್ಯಂತ ಬಿಡುವಿಲ್ಲದ ಮತ್ತು ಪ್ರಮುಖವಾದ ತಿಂಗಳಾಗಿದೆ. ಈ ತಿಂಗಳಲ್ಲಿ ಸಾಮಾನ್ಯ ಸಂಬಳದಾರರಿಂದ ಹಿಡಿದು ಕಂಪನಿಗಳವರೆಗೆ ಹಲವು ಪ್ರಮುಖ ತೆರಿಗೆ ನಿಯಮಗಳನ್ನು ಪೂರ್ಣಗೊಳಿಸಬೇಕಾಗುತ್ತದೆ. ವೈಯಕ್ತಿಕ ತೆರಿಗೆ ಪಾವತಿದಾರರು (Individual tax payers) ಜುಲೈ 31ರೊಳಗೆ ಐಟಿಆರ್ ಫೈಲಿಂಗ್ ಮಾಡಬೇಕು. ಹಾಗೆಯೇ, ಆದಾಯ ತೆರಿಗೆಗೆ (Income Tax) ಸಂಬಂಧಿಸಿದ ಒಂದಷ್ಟು ಹಣಕಾಸು ಕಾರ್ಯಗಳಿಗೆ ಜುಲೈನಾದ್ಯಂತ ಬೇರೆ ಬೇರೆ ಡೆಡ್​ಲೈನ್​ಗಳಿವೆ. ಈ ಕುರಿತು ಮಾಹಿತಿ ಇಲ್ಲಿದೆ: ಜುಲೈ 7: ಟಿಡಿಎಸ್…

Read More

ಬೆಂಗಳೂರಿನಲ್ಲಿ ಪ್ರೀತಿಸಿದವರ ವಶೀಕರಣಕ್ಕೆ ಆನ್‌ಲೈನ್‌ನಲ್ಲಿ ಉಡದ ಜನನಾಂಗ ಮಾರಾಟ ಮಾಡುತ್ತಿದ್ದ ಮಾಂತ್ರಿಕ – Kannada News | Bengaluru godman arrested for selling monitor lizard parts online

ಬೆಂಗಳೂರು, ಜ.11: ಬೆಂಗಳೂರಿನಲ್ಲಿ ಮಾಂತ್ರಿಕನೊಬ್ಬ ಉಡದ (Monitor lizard )ಜನನಾಂಗಗಳನ್ನು ಆನ್‌ಲೈನ್‌ನಲ್ಲಿ ಮಾರಾಟ ಮಾಡುತ್ತಿದ್ದಾಗ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಪ್ರೀತಿಗಾಗಿ ವಶೀಕರಣ, ಪ್ರೇಮ ವಿವಾಹದ ಕಲಹಗಳಿಗೆ ಈ ಹಲ್ಲಿಯ ಜನನಾಂಗವನ್ನು ನೀಡುತ್ತಿದ್ದ ಎಂದು ಹೇಳಲಾಗಿದೆ. ಮಾಂತ್ರಿಕ ಶಕ್ತಿ ಇದೆ ಎಂದು ಹೇಳಿಕೊಂಡು ಜನರನ್ನು ನಂಬಿಸುತ್ತಿದ್ದ, ಪ್ರೇಮಿಗಳ ನಡುವಿನ ಘರ್ಷಣೆಯನ್ನು ಪರಿಹರಿಸಬಹುದು ಎಂದು ಹೇಳಿ ಪ್ರತಿ ತುಂಡನ್ನು 10,000 ರೂ.ಗೆ ಮಾರಾಟ ಮಾಡಿದನೆಂದು ವರದಿಯಾಗಿದೆ. ಈ ಬಗ್ಗೆ ಸುಳಿವು ಸಿಕ್ಕ ತಕ್ಷಣ, ಎನ್‌ಜಿಒವೊಂದು ತನಿಖೆ ಮಾಡಲು ವೈಯಕ್ತಿಕ ಸಮಸ್ಯೆ…

Read More

ಮುಸ್ಲಿಂ ಸಮುದಾಯದ ಇಬ್ಬರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಚರ್ಚೆ: ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದೇನು? – Kannada News | Karnataka Cabinet Formation: Minister Satish Jarkiholi on Regional Representation and Future Decisions

ಬೆಳಗಾವಿ, ಜೂ.23: ಮುಂಗಾರು ಅಧಿವೇಶನ ಹಾಗೂ ಸಚಿವ ಸಂಪುಟ ವಿಸ್ತರಣೆಯ ಕುರಿತು ಮಾಧ್ಯಮದವರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಸಚಿವ ಸತೀಶ್ ಜಾರಕಿಹೊಳಿ, ಸಚಿವ ಸಂಪುಟ ರಚನೆಯಲ್ಲಿ ಪ್ರಾದೇಶಿಕತೆ ಮತ್ತು ಜಾತಿ ಆಧಾರಿತ ಪ್ರಾತಿನಿಧ್ಯವನ್ನು ಗಮನದಲ್ಲಿಟ್ಟುಕೊಳ್ಳಲಾಗುವುದು ಎಂದು ಹೇಳಿದ್ದಾರೆ. ಹಾಸನ ಜಿಲ್ಲೆಗೆ ಸಚಿವ ಸ್ಥಾನ ಸಿಕ್ಕಿಲ್ಲ ಎಂಬ ಕುರಿತು ಮಾತನಾಡಿದ ಅವರು, ಇನ್ನು ಹಾಸನಕ್ಕೆ ಸಿಕ್ಕಿಲ್ಲ ಎಂದಿದ್ದಾರೆ. ಪಕ್ಷದ ನಿಲುವು ಸ್ಪಷ್ಟಪಡಿಸಿದ ಸಚಿವ ಜಾರಕಿಹೊಳಿ, ಮುಸ್ಲಿಂ ಸಮುದಾಯದ ಇಬ್ಬರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಪಕ್ಷದಲ್ಲಿ ಚರ್ಚೆಯಾಗಿದೆ. ಮುಂದಿನ ನಿರ್ಧಾರ…

Read More

ಇತಿಹಾಸ ಬರೆದ ‘ಬ್ರಮಯುಗಂ’ ಆಸ್ಕರ್​​ನಿಂದ ವಿಶೇಷ ಗೌರವ – Kannada News | Mammootty starrer Bramayugam movie to premier in Oscars special screening

ಭಾರತೀಯ ಚಿತ್ರರಂಗದಲ್ಲಿಯೇ ಅತ್ಯಂತ ಭಿನ್ನವಾದ ಚಿತ್ರರಂಗವೆಂದರೆ ಅದು ಮಲಯಾಳಂ (Malayalam) ಚಿತ್ರರಂಗ. ಇತರೆ ಕೆಲ ಜನಪ್ರಿಯ ಮತ್ತು ದೊಡ್ಡ ಚಿತ್ರರಂಗಗಳು ಕಮರ್ಶಿಯಲ್, ಮಾಸ್ ಸಿನಿಮಾಗಳು, ಪ್ಯಾನ್ ಇಂಡಿಯಾ ರೀಚ್, ಭರ್ಜರಿ ಮಾರ್ಕೆಟಿಂಗ್​​ಗಳ ಕಡೆ ಗಮನ ವಹಿಸಿದ್ದರೆ ಮಲಯಾಳಂ ಸಿನಿಮಾಗಳು ಇದೆಲ್ಲವನ್ನೂ ಬದಿಗೆ ಸರಿಸಿ ಕೇವಲ ಭಿನ್ನ ಕತೆ, ಮಾನವೀಯ ಮೌಲ್ಯಗಳು, ಸ್ವಚ್ಛ ಮನರಂಜನೆಗೆ ಒತ್ತು ನೀಡಿ ಸಿನಿಮಾಗಳನ್ನು ನಿರ್ಮಿಸುತ್ತಿದೆ. ಹಲವು ಅತ್ಯದ್ಭುತ ಸಿನಿಮಾಗಳನ್ನು ಮಲಯಾಳಂ ಚಿತ್ರರಂಗ ನೀಡುತ್ತಾ ಬಂದಿದೆ. ಅವುಗಳಲ್ಲಿ ಇತ್ತೀಚೆಗಿನ ‘ಬ್ರಮಯುಗಂ’ ಸಹ ಒಂದು. ಇದೀಗ…

Read More

ಸರ್ಕಾರ ನೋಟ್ ಪ್ರಿಂಟ್ ಮಾಡಿ ಸಾಲ ತೀರಿಸಬಹುದಲ್ಲ? ಹೆಚ್ಚು ನೋಟ್ ಪ್ರಿಂಟ್ ಮಾಡಿದರೆ ಏನು ಅಪಾಯ? – Kannada News | Know what happens if government prints more money

ಯಾರನ್ನ ನೋಡಿದರೂ ಸಾಲ, ಎಲ್ಲಿ ನೋಡಿದರೂ ಬೆಲೆ ಏರಿಕೆ, ಇದು ದುಬಾರಿ ದುನಿಯಾ ಅನಿಸುತ್ತದೆ. ಸರ್ಕಾರ ಬೇಕಾದಷ್ಟು ನೋಟುಗಳನ್ನು ಮುದ್ರಿಸಿ ಅಗತ್ಯ ಇದ್ದವರಿಗೆ ಹಂಚಬಹುದಲ್ಲ, ಸರ್ಕಾರದ ಸಾಲವನ್ನೂ ತೀರಿಸಬಹುದಲ್ಲ ಎಂದು ಕೆಲವರಿಗಾದರೂ ಅನಿಸಿರಬಹುದು. ವಾಸ್ತವದಲ್ಲಿ, ಹಾಗೆ ಮಾಡಲು ಸಾಧ್ಯ ಇಲ್ಲ. ಒಂದೊಮ್ಮೆ ಹಾಗೆ ಮಾಡಿದರೆ ತನ್ನ ಕುತ್ತಿಗೆ ತಾನೇ ಕುಯ್ದುಕೊಂಡಂತೆ. ವೆನಿಜುವೆಲಾ, ಜಿಂಬಾಬ್ವೆ ಇತ್ಯಾದಿ ಕೆಲವಾರು ದೇಶಗಳು ಹೀಗೆ ಮಾಡಲು ಹೋಗಿ ಈಗಲೂ ಒದ್ದಾಡುತ್ತಿವೆ. ಸಾಲದ ಸುಳಿಗೆ ಸಿಲುಕಿರುವ ಪಾಕಿಸ್ತಾನ (Pakistan), ಶ್ರೀಲಂಕಾದಂತಹ ದೇಶಗಳು ಈ ದುಸ್ಸಾಹಸಕ್ಕೆ…

Read More

ಉದ್ಯೋಗ ಭವಿಷ್ಯ: ಉದ್ಯೋಗ ಭವಿಷ್ಯ: ಈ ವಾರ ಯಾರಿಗೆ ಸಿಗಲಿದೆ ಪ್ರಮೋಷನ್ ಹಾಗೂ ವಿದೇಶಿ ಯೋಗ? – Kannada News | May 17 23 Job Outlook: Unpredictable Career Trends and Financial Hurdles Ahead

ಮೇ 17ರಿಂದ ಮೇ 23ರವರೆಗಿನ ಎರಡನೇ ವಾರವಾಗಿದ್ದು ಉದ್ಯೋಗರಂಗದಲ್ಲಿ ಅನಿರೀಕ್ಷಿತ ಬೆಳವಣಿಗೆಯಿಂದ ಆತಂಕ ಸೃಷ್ಟಿ ಆಗಬಹುದು. ಹಲವು ಆದಾಯ ಮೂಲಕ್ಕೆ ಹಿನ್ನಡೆ ಸಾಧ್ಯತೆ. ಕೆಲವರಿಗೆ ನಿರ್ವಹಣೆ ಕಷ್ಟ. ​ಮೇಷ : ​ಅಂಗಾರಕನ ಶಕ್ತಿಯು ನಿಮ್ಮಲ್ಲಿ ಅಡಗಿದೆ. ಕಚೇರಿಯ ಕಣದಲ್ಲಿ ನಿಮ್ಮದೇ ಪಾರುಪತ್ಯ. ಪದೋನ್ನತಿಯ ಕೆಂಪುಹಾಸು ಸ್ವಾಗತಿಸಲು ಸಿದ್ಧವಾಗಿದೆ. ಕಾರ್ಯದೊತ್ತಡದ ಬಿರುಗಾಳಿ ಬೀಸಿದರೂ, ನಿಮ್ಮ ದಕ್ಷತೆಯ ನೌಕೆ ಸ್ಥಿರವಾಗಿರುತ್ತದೆ. ವಿದೇಶಿ ದಿಗಂತಗಳತ್ತ ವೃತ್ತಿಯ ಪಯಣ ಬೆಳೆಯುವ ಶುಭ ಸೂಚನೆಯಿದೆ. ​ವೃಷಭ : ​ವೃತ್ತಿ ಜೀವನದ ಉದ್ಯಾನದಲ್ಲಿ ಸಮೃದ್ಧಿಯ ಹೂವು…

Read More

ಚಲಿಸುವ ರೈಲಿನಲ್ಲಿ ಪೂಜೆ, ವಿಡಿಯೋ ವೈರಲ್ ಆದ ಬೆನ್ನಲ್ಲೇ ಭಾರತೀಯ ರೈಲ್ವೆಯಿಂದ ಸ್ಪಷ್ಟನೆ – Kannada News | Moving Train Puja Viral Video: Indian Railways Clarifies Rs3 Lakh Luxury Saloon Car Booking

ನವದೆಹಲಿ, ಜುಲೈ 13: ಇತ್ತೀಚೆಗಷ್ಟೇ ರೈಲು(Train) ಬೋಗಿಯೊಂದನ್ನು ವಧು-ವರರ ಕೋಣೆಯಂತೆ ಅಲಂಕರಿಸಲಾಗಿದ್ದ ‘ಹನಿಮೂನ್ ಕೋಚ್’ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡಿತ್ತು. ಈಗ ಚಲಿಸುವ ರೈಲಿನೊಳಗೇ ಪುರೋಹಿತರ ಸಮ್ಮುಖದಲ್ಲಿ ಮಂತ್ರ ಘೋಷಗಳೊಂದಿಗೆ ಧಾರ್ಮಿಕ ಪೂಜಾ ವಿಧಿವಿಧಾನಗಳನ್ನು ನೆರವೇರಿಸುತ್ತಿರುವ ಮತ್ತೊಂದು ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರಲ್ಲಿ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ವೈರಲ್ ವಿಡಿಯೋದಲ್ಲಿ, ಬಿಳಿ ವಸ್ತ್ರ ಧರಿಸಿದ ಭಕ್ತರ ಸಮ್ಮುಖದಲ್ಲಿ ಅರ್ಚಕರೊಬ್ಬರು ರೈಲು ಬೋಗಿಯ ನೆಲದ ಮೇಲೆಯೇ ಕುಳಿತು ಪೂಜೆನೆರವೇರಿಸುತ್ತಿರುವುದು ಕಂಡುಬಂದಿದೆ. ಸಾಮಾನ್ಯ ಪ್ರಯಾಣಿಕರು ಓಡಾಡುವ ರೈಲಿನಲ್ಲಿ…

Read More

ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆಗೆ ಬೆದರಿಕೆ ಕೇಸ್​​: ರಾಜಿಗೆ ಯತ್ನಿಸಿದ್ದನಾ ರಾಜೀವ್​​ ಗೌಡ? – Kannada News | Shidlaghatta City Municipality Commissioner Threat Case: Did Accused Rajeev Gowda Try for a Compromise?

ಚಿಕ್ಕಬಳ್ಳಾಪುರ, ಜನವರಿ 16: ಶಿಡ್ಲಘಟ್ಟ ನಗರಸಭೆಯ ಪೌರಾಯುಕ್ತೆ ಅಮೃತಾ ಜಿ. ಅವರಿಗೆ ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ಬೆದರಿಕೆ ಹಾಕಿದ ವಿಚಾರ ಸುದ್ದಿಯಾಗುತ್ತಿದ್ದಂತೆ ರಾಜೀ ಸಂಧಾನದ ಯತ್ನ ನಡೆದಿರುವ ವಿಷಯ ಬಹಿರಂಗವಾಗಿದೆ. ಪೌರಾಯುಕ್ತೆ ಅಮೃತಾ ಅವರ ತಂದೆಗೆ ರಾಜೀವ್​​ ಗೌಡ ಕಡೆಯಿಂದ ಕರೆ ಬಂದಿತ್ತು ಎನ್ನಲಾಗಿದ್ದು, ಈ ಬಗ್ಗೆ ಸ್ವತಃ ಅಮೃತಾ ಅವರೇ ಮಾಹಿತಿ ನೀಡಿದ್ದಾರೆ. ಆ ಬಗ್ಗೆ ನಾವು ನಿರ್ಧಾರ ಮಾಡಲು ಆಗಲ್ಲ. ಅದು ನಮ್ಮ ಮಗಳಿಗೆ ಸಂಬಂಧಿಸಿದ ವಿಷಯ ಎಂದು ಈ ವೇಳೆ ನಮ್ಮ…

Read More

ಕೃಷಿ ಅಧಿಕಾರಿಯೋ, ಕುಬೇರನೋ! ಲೋಕಾಯುಕ್ತ ದಾಳಿ ವೇಳೆ 2.50 ಕೋಟಿ ರೂ. ಮೌಲ್ಯದ ಅಕ್ರಮ ಆಸ್ತಿ ಪತ್ತೆ – Kannada News | Lokayukta Raid on Vijayapura Agriculture Officer Exposes ₹2.5 Crore Disproportionate Assets

ವಿಜಯಪುರ, ಡಿಸೆಂಬರ್ 24: ವಿಜಯಪುರ ಜಿಲ್ಲೆಯ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಮಾಳಪ್ಪ ಯರಝರಿ ಅವರ ನಿವಾಸದ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದಾಗ ಆದಾಯಕ್ಕಿಂತ ಹೆಚ್ಚುವರಿಯಾಗಿ ಮಾಡಿಟ್ಟ 2.50 ಕೋಟಿ ರೂಪಾಯಿ ಮೌಲ್ಯದ ಅಕ್ರಮ ಆಸ್ತಿ ಪತ್ತೆಯಾಗಿದೆ. ಬಾಗೇವಾಡಿಯ ಕೃಷಿ ಇಲಾಖೆಯ ಈ ಅಧಿಕಾರಿಯ ಮನೆಯಲ್ಲಿ ಕಂತೆ ಕಂತೆ ಹಣ, ಚಿನ್ನಾಭರಣ ಮತ್ತು ಬೆಳ್ಳಿ ವಸ್ತುಗಳನ್ನು ಲೋಕಾಯುಕ್ತ ತಂಡ ವಶಪಡಿಸಿಕೊಂಡಿದೆ. ದಾಳಿ ವೇಳೆ 29.48 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ, ಬೆಳ್ಳಿ ಮತ್ತು ನಗದು ಪತ್ತೆಯಾಗಿದೆ….

Read More