Headlines

ಫಾರಂ ಕೋಳಿ, ಮೊಟ್ಟೆ ತಿನ್ನೋ ಮುನ್ನ ಎಚ್ಚರ: ಕೆಲವೊಂದು ಕಡೆ ಹೀಗೆಲ್ಲ ಮಾಡ್ತಾರೆ ನೋಡಿ! – Kannada News | Gadag Poultry Farm Reality Check: Unhygienic Conditions Raise Health Concerns

ಗದಗ, ಡಿಸೆಂಬರ್ 26: ಗದಗ ಜಿಲ್ಲೆಯ ಉಣಚಗೆರೆ ಗ್ರಾಮದಲ್ಲಿರುವ ಕೋಳಿ ಫಾರಂ ಅತಿಯಾದ ಗಲೀಜಿನಿಂದ ಕೂಡಿದ್ದು, ಜನರ ಆರೋಗ್ಯಕ್ಕೆ ಗಂಭೀರ ಅಪಾಯವನ್ನುಂಟು ಮಾಡುತ್ತಿದೆ. ಈ ಕೋಳಿ ಫಾರಂ ಅನೇಕ ವರ್ಷಗಳಿಂದ ಇದೇ ರೀತಿ ಕಾರ್ಯನಿರ್ವಹಿಸುತ್ತಿತ್ತು ಎಂಬುದು ‘ಟಿವಿ9’ ಗ್ರೌಂಡ್ ರಿಪೋರ್ಟ್​​ನಲ್ಲಿ ತಿಳಿದುಬಂದಿದೆ. ಕೋಳಿಗಳಿಗೆ ಕೊಳಕು ಮಿಶ್ರಿತ ಆಹಾರವನ್ನು ನೀಡಲಾಗುತ್ತಿದೆ ಮತ್ತು ಫಾರಂ ಪರಿಸರವು ತಿಪ್ಪೆಗುಂಡಿಗಿಂತಲೂ ಗಲೀಜಾಗಿದೆ. ಮಾರುಕಟ್ಟೆಗೆ ಸರಬರಾಜಾಗುವ ಕಳಪೆ ಮೊಟ್ಟೆಗಳು ಮತ್ತು ಕೋಳಿಗಳು ಗಜೇಂದ್ರಗಡ ಮತ್ತು ರೋಣ ತಾಲೂಕು ಸೇರಿದಂತೆ ಹಲವೆಡೆ ತಲುಪುತ್ತಿವೆ. ಇದು ಜನರ…

Read More

ಮೂರು ದಿನಗಳಿಂದ ನಾಪತ್ತೆಯಾಗಿದ್ದ ಶ್ರೀನಂದಾ ಮೃತದೇಹ ಚಂದ್ರದ್ರೋಣ ಪರ್ವತದ 2 ಸಾವಿರ ಅಡಿ ಪ್ರಪಾತದಲ್ಲಿ ಪತ್ತೆ

ಚಿಕ್ಕಮಗಳೂರು, ಏ.10: ಚಂದ್ರದ್ರೋಣ ಪರ್ವತ ಶ್ರೇಣಿಯ ಮಾಣಿಕ್ಯಧಾರಾ ಜಲಪಾತದ ಬಳಿ ಕಳೆದ ಮೂರು ದಿನಗಳಿಂದ ನಾಪತ್ತೆಯಾಗಿದ್ದ ಕೇರಳ ಮೂಲದ 14 ವರ್ಷದ ಬಾಲಕಿ ಶ್ರೀನಂದಾ ಅವರ ಮೃತದೇಹ ಇಂದು (ಏಪ್ರಿಲ್ 10) ಪತ್ತೆಯಾಗಿದೆ. ಸುಮಾರು 2 ಸಾವಿರ ಅಡಿ ಆಳದ ಪ್ರಪಾತದಲ್ಲಿ ಬಾಲಕಿಯ ಶವ ಸಿಕ್ಕಿರುವುದು ದೃಢಪಟ್ಟಿದೆ. ಕೇರಳದಿಂದ ಏಪ್ರಿಲ್ 7ರಂದು ಚಿಕ್ಕಮಗಳೂರು ನಗರಕ್ಕೆ ಆಗಮಿಸಿದ್ದ 40 ಜನರ ಪ್ರವಾಸಿ ತಂಡದಲ್ಲಿ ಶ್ರೀನಂದಾ ಕೂಡ ಇದ್ದರು. ಇನಾಮು ದತ್ತಾತ್ರೇಯ ಪೀಠ ಹಾಗೂ ಮಾಣಿಕ್ಯಧಾರಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ…

Read More

ಬಾಯ್ಕಾಟ್​ನಿಂದ ಪಾಕಿಸ್ತಾನ್ ಎದುರಿಸಲಿರುವ ಪರಿಣಾಮಗಳೇನು? – Kannada News | Implications Of Pakistan’s India Match Boycott In T20 World Cup 2026

ಟಿ20 ವಿಶ್ವಕಪ್​ ಆರಂಭಕ್ಕೆ ದಿನಗಳು ಮಾತ್ರ ಉಳಿದಿರುವಾಗ ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ ಹೊಸ ವರಸೆ ಶುರು ಮಾಡಿದೆ. ಅದು ಭಾರತದ ವಿರುದ್ಧದ ಪಂದ್ಯವನ್ನು ಬಹಿಷ್ಕರಿಸುವ ಬೆದರಿಕೆಯೊಡ್ಡುವ ಮೂಲಕ. ಫೆಬ್ರವರಿ 15 ರಂದು ಕೊಲೊಂಬೊದಲ್ಲಿ ನಡೆಯಲಿರುವ ಟೀಮ್ ಇಂಡಿಯಾ ವಿರುದ್ಧದ ಪಂದ್ಯದಿಂದ ಹಿಂದೆ ಸರಿಯಲು ಪಾಕಿಸ್ತಾನ್ ಕ್ರಿಕೆಟ್ ಮಂಡಳಿ ನಿರ್ಧರಿಸಿದೆ. ಪಿಸಿಬಿಯ ಈ ಹೇಳಿಕೆ ಬೆನ್ನಲ್ಲೇ ಐಸಿಸಿ ತುರ್ತು ಸಭೆ ಕರೆದಿದೆ. ಈ ಸಭೆಯ ಬಳಿಕ ಪಾಕಿಸ್ತಾನ್ ತಂಡವನ್ನು ಟಿ20 ವಿಶ್ವಕಪ್​ನಲ್ಲಿ ಮುಂದುವರೆಸಬೇಕಾ ಅಥವಾ ಬೇಡವಾ ಎಂಬುದು ನಿರ್ಧಾರವಾಗಲಿದೆ….

Read More

ಟಿಸಿಎಸ್ ಲೈಂಗಿಕ ಕಿರುಕುಳ, ಮತಾಂತರ ಪ್ರಕರಣ: ತನಿಖೆಯಲ್ಲಿ ಮಹತ್ವದ ಬೆಳವಣಿಗೆ, ಮತ್ತಷ್ಟು ಆಘಾತಕಾರಿ ವಿಚಾರ ಬಯಲು – Kannada News | Nashik TCS Case: SIT Bypasses High Level Digital Security on Accused’s Phone; Intoxicating Sheer Khurma Lead Emerges

ಟಿಸಿಎಸ್ (ಸಾಂದರ್ಭಿಕ ಚಿತ್ರ)Image Credit source: TV9 Network ಮುಂಬೈ, ಏಪ್ರಿಲ್ 25: ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (TCS) ನ ನಾಸಿಕ್ ಘಟಕದಲ್ಲಿ ನಡೆದಿರುವ ಮಹಿಳಾ ಉದ್ಯೋಗಿಗಳ ಮೇಲಿನ ಲೈಂಗಿಕ ಕಿರುಕುಳ ಹಾಗೂ ಬಲವಂತದ ಧಾರ್ಮಿಕ ಮತಾಂತರ ಪ್ರಕರಣ ಸಂಬಂಧ ಮತ್ತಷ್ಟು ಸ್ಫೋಟಕ ಮಾಹಿತಿ ಬಯಲಾಗಿದೆ. ಪ್ರಕರಣದ ತನಿಖೆಯನ್ನು ಪೊಲೀಸರು ಚುರುಕುಗೊಳಿಸಿದ್ದು, ಪ್ರಮುಖ ಆರೋಪಿಯ ಮೊಬೈಲ್ ದತ್ತಾಂಶಗಳನ್ನು ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರಮುಖ ಆರೋಪಿ ದಾನಿಶ್ ಶೇಖ್ ಮೊಬೈಲ್ ಫೋನ್‌ನ ಪ್ರತಿ ಫೈಲ್ ಮತ್ತು ಅಪ್ಲಿಕೇಶನ್‌ಗೆ ಪ್ರತ್ಯೇಕ ಪಾಸ್‌ವರ್ಡ್…

Read More

ಶಿವಮೊಗ್ಗ: ರಸ್ತೆ ಅಗಲೀಕರಣ ವೇಳೆ ಭೀಕರ ದುರಂತ; ಗುಡ್ಡ ಕುಸಿದು ಮೂವರು ಕಾರ್ಮಿಕರು ಸಾವು

ಶಿವಮೊಗ್ಗ, ಏಪ್ರಿಲ್​ 09: ರಸ್ತೆ ಅಗಲೀಕರಣ ವೇಳೆ ಗುಡ್ಡ ಕುಸಿದು ಓರ್ವ ಹೊರ ರಾಜ್ಯದ ಕಾರ್ಮಿಕ ಸೇರಿ ಮೂವರು ಸಾವನ್ನಪ್ಪಿರುವಂತಹ ಘಟನೆ ಜಿಲ್ಲೆಯ ಹೊಸನಗರ ತಾಲೂಕಿನ ಹುಲಿಕಲ್ ಘಾಟ್​ನಲ್ಲಿ ನಡೆದಿದೆ. ರಾಘವೇಂದ್ರ(37), ರಾಜು(30) ಮತ್ತು ಶಬ್ಬೀರ್(40) ಮೃತರು. ಘಟನಾ ಸ್ಥಳದಲ್ಲಿ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿಯಿಂದ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ. ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಮತ್ತಷ್ಟು ಮಾಹಿತಿ ಅಪ್​ಡೇಟ್ ಆಗಲಿದೆ. Source link

Read More

ಕರ್ನಾಟಕ ರೈಲ್ವೆ ಪ್ರಯಾಣಿಕರಿಗೆ ಗುಡ್‌ ನ್ಯೂಸ್! ಯಶವಂತಪುರ-ತಾಳಗುಪ್ಪ ಸೇರಿದಂತೆ 19 ವಿಶೇಷ ರೈಲುಗಳು ಇನ್ನು ಮುಂದೆ ಖಾಯಂ

ಬೆಂಗಳೂರು, ಮಾರ್ಚ್​ 24: ರಾಜ್ಯದ ರೈಲು ಪ್ರಯಾಣಿಕರಿಗೆ ಸಿಹಿ ಸುದ್ದಿ ದೊರೆತಿದೆ. ಪ್ರಯಾಣಿಕರ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡ ರೈಲ್ವೇ ಮಂಡಳಿ (Railway Board) ಕರ್ನಾಟಕದಲ್ಲಿ ಸಂಚರಿಸುತ್ತಿದ್ದ 19 ವಿಶೇಷ ರೈಲುಗಳನ್ನು ಖಾಯಂ ಸೇವೆಗೆ ಪರಿವರ್ತಿಸಿದೆ. ಇದರಲ್ಲಿ 6 ಎಕ್ಸ್‌ಪ್ರೆಸ್, 9 ಮೆಮು/ಡೆಮು ಹಾಗೂ 4 ಪ್ಯಾಸೆಂಜರ್ ರೈಲುಗಳು ಸೇರಿವೆ. ಈ ನಿರ್ಧಾರದಿಂದ ಬೆಂಗಳೂರು, ಮೈಸೂರು, ಶಿವಮೊಗ್ಗ ಸೇರಿದಂತೆ 15ಕ್ಕೂ ಹೆಚ್ಚು ಜಿಲ್ಲೆಗಳ ಜನರಿಗೆ ಪ್ರಯಾಣ ಸೌಲಭ್ಯ ಹೆಚ್ಚಾಗಲಿದೆ. ವಿಶೇಷ ರೈಲುಗಳಾಗಿ ಓಡುತ್ತಿದ್ದ ಸೇವೆಗಳು ಸಾಮಾನ್ಯವಾಗಿ ಹೆಚ್ಚಿನ ದರ ಹಾಗೂ…

Read More

ಸಚಿವರ ಬುಡಕ್ಕೆ ಅಬಕಾರಿ ಡಿಸಿ ಲಂಚ ಪ್ರಕರಣ: ಆರ್​​ಬಿ ತಿಮ್ಮಾಪುರಗೆ ಸಂಕಷ್ಟ – Kannada News | Excise DC bribe Case: Complaint registered In lokayukta Against Minister RB Timmapur

ಬೆಂಗಳೂರು, (ಜನವರಿ 19): ಅಬಕಾರಿ ಡಿಸಿ ಲೋಕಾ ಬಲೆಗೆ ಬಿದ್ದ ಬೆನ್ನಲ್ಲೇ ಅಬಕಾರಿ ಸಚಿವ ಆರ್​​ಬಿ ತಿಮ್ಮಾಪುರ ಅವರಿಗೂ ಸಂಕಷ್ಟ ಎದುರಾಗಿದೆ. ಲಂಚದ ಬಹುಪಾಲು ಹಣವನ್ನ ಮಿನಿಸ್ಟರ್‌ಗೆ ಕೊಡಬೇಕು ಎನ್ನುವ ಅಬಕಾರಿ ಡಿಸಿಯ (Excise DC) ಆಡಿಯೊ ಆಧಾರದ ಮೇಲೆ ಆರ್.ಬಿ ತಿಮ್ಮಾಪುರ್ (RB Timmapur) ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡಲಾಗಿದೆ. ಹೀಗಾಗಿ ಅಬಕಾರಿ ಲೈಸೆನ್ಸ್ ಗಾಗಿ ಕೋಟಿ ಕೋಟಿ ರೂಪಾಯಿ ಲಂಚ ಕೇಳಿದ್ದ ಅಬಕಾರಿ ಡಿಸಿ ಪ್ರಕರಣ ಇದೀಗ ಸಚಿವರ ಬುಡಕ್ಕೂ ಬಂದಿದೆ. ಬ್ಯಾಟರಾಯನಪುರ ಕಚೇರಿಯಲ್ಲಿ…

Read More

ಪಾಕ್ ಆಟಗಾರನ ಕಳ್ಳಾಟ ಬಯಲು..! – Kannada News | Shaheen Afridi Faces Disciplinary Heat Over Ball Tampering

ಕ್ರಿಕೆಟ್ ಎನ್ನುವುದು ಜಂಟಲ್​ಮ್ಯಾನ್ ಗೇಮ್. ಇದರ ಜೊತೆಗೆ ಕ್ರೀಡಾ ಸ್ಫೂರ್ತಿಗೆ ಹೆಸರಾದ ಆಟ. ಆದರೆ, ಗೆಲುವಿನ ಹಪಾಹಪಿ ಅಥವಾ ಮೈದಾನದ ಹತಾಶೆ ಕೆಲವೊಮ್ಮೆ ಸ್ಟಾರ್ ಆಟಗಾರರನ್ನೂ ದಾರಿ ತಪ್ಪಿಸುತ್ತದೆ. ಇದಕ್ಕೆ ತಾಜಾ ಉದಾಹರಣೆ ಪಾಕಿಸ್ತಾನ್ ವೇಗಿ ಶಾಹೀನ್ ಶಾ ಆಫ್ರಿದಿ. ಬಾಂಗ್ಲಾದೇಶ್ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ ವೇಳೆ ಶಾಹೀನ್ ‘ಬಾಲ್ ಟ್ಯಾಂಪರಿಂಗ್’ (ಚೆಂಡು ವಿರೂಪಗೊಳಿಸುವಿಕೆ) ಮಾಡಿದ ಗಂಭೀರ ಆರೋಪಕ್ಕೆ ಗುರಿಯಾಗಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಕ್ರಿಕೆಟ್ ವಲಯದಲ್ಲಿ ಭಾರಿ…

Read More

ಮಗನ ಕೊಲ್ಲಲು ಸುಪಾರಿ ಕೊಟ್ಟಿದ್ದ ಮಹಿಳೆಯನ್ನೇ ಕೊಂದು ಹಣ ದೋಚಿದ್ದ ವ್ಯಕ್ತಿ ಅರೆಸ್ಟ್​

ರಾಯ್​ಪುರ್, ಮಾರ್ಚ್​ 23: ತಾನು ಬಿಟ್ಟ ಬಾಣ ತನಗೇ ಮುಳುವಾಯ್ತು, ಸ್ವಂತ ಮಗನನ್ನು ಕೊಲ್ಲಲು ಸುಪಾರಿಕೊಟ್ಟಿದ್ದ ಮಹಿಳೆಯನ್ನೇ ಕೊಲೆ(Murder) ಮಾಡಿ ಹಣ ದೋಚಿದ್ದ ಹಿಟ್​ಮ್ಯಾನ್​ ಅನ್ನು ಐದು ವರ್ಷಗಳ ಬಳಿಕ ಪೊಲೀಸರು ಬಂಧಿಸಿದ್ದಾರೆ. ಛತ್ತೀಸ್‌ಗಢದ ರಾಯ್‌ಪುರದಲ್ಲಿ 2021 ರಲ್ಲಿ ನಡೆದ ಕೊಲೆ ಮತ್ತು ದರೋಡೆ ಪ್ರಕರಣವನ್ನು ಭೇದಿಸಿದ ಪೊಲೀಸರು ಆರೋಪಿ ಅಜಯ್ ಮಿಶ್ರಾ ಎಂಬಾತನನ್ನು ಅಹಮದಾಬಾದ್ ಅಪರಾಧ ವಿಭಾಗವು ನರೋಡಾ ಪ್ರದೇಶದಲ್ಲಿ ಬಂಧಿಸಿದ್ದಾರೆ. ಶಕುಂತಲಾ ಯಾದವ್ ಮತ್ತು ಅವರ ಕಿರಿಯ ಮಗ ಅಮಿತ್ ಯಾದವ್, ತಮ್ಮ ಹಿರಿಯ…

Read More

ಆಲಸ್ಯವನ್ನು ಹೋಗಲಾಡಿಸಿ ದಿನವಿಡೀ ಆಕ್ಟಿವ್‌ ಆಗಿರಲು ಈ ಅಹಾರಗಳನ್ನು ಸೇವನೆ ಮಾಡಿ – Kannada News | Eat these foods to get rid of laziness and stay active throughout the day

ಆರೋಗ್ಯ ಸಮಸ್ಯೆಗಳು ಕಾಣಿಸಿಕೊಂಡಾಗ ಆಯಾಸ (fatigue) ಕಾಣಿಸಿಕೊಳ್ಳುವುದು ಸಹಜ.  ಆದರೆ ಕೆಲವರು ಆರೋಗ್ಯವಾಗಿದ್ದರೂ ಸಹ ಲವಲವಿಕೆಯೇ ಇಲ್ಲದೆ ಸುಸ್ತಾಗಿರುತ್ತಾರೆ. ಯಾವುದೇ ತೀರಾ ಸಣ್ಣ ಕೆಲಸ ಮಾಡಿದರೂ ಸಹ ಆಯಾಸವನ್ನು ಅನುಭವಿಸುತ್ತಾರೆ. ಇದಕ್ಕೆಲ್ಲಾ ಅಗತ್ಯ ಪೋಷಕಾಂಶಗಳ ಕೊರತೆಯೇ ಮುಖ್ಯ ಕಾರಣ.  ನಮ್ಮ ಪ್ರಸ್ತುತ ಜೀವನಶೈಲಿ ಮತ್ತು ಜಂಕ್ ಫುಡ್ ಸೇವನೆ ಅಭ್ಯಾಸಗಳು ನಮ್ಮ ದೇಹವನ್ನು ಒಳಗಿನಿಂದ ದುರ್ಬಲಗೊಳಿಸುತ್ತಿವೆ, ಇದರಿಂದಾಗಿ ದೇಹದಲ್ಲಿ ಸುಸ್ತು ಆವರಿಸಿದಂತಾಗುತ್ತದೆ. ಹೀಗಿರುವಾಗ ಆಲಸ್ಯವನ್ನು ಹೋಗಲಾಡಿಸಿ ದೇಹವನ್ನು ಪುನರುಜ್ಜೀವನಗೊಳಿಸಲು ಪ್ರತಿನಿತ್ಯ ಈ ಕೆಲವು ಪೋಷಕಾಂಶಯುಕ್ತ ಆಹಾರಗಳನ್ನು ಸೇವನೆ…

Read More