Headlines

KKR vs SRH Playing XI: ಟಾಸ್ ಗೆದ್ದ ಕೆಕೆಆರ್; ಎಸ್​ಆರ್​ಎಚ್ ತಂಡದಲ್ಲಿ ಬದಲಾವಣೆ

ಐಪಿಎಲ್ 2026 (IPL 2026) ರ ಆರನೇ ಪಂದ್ಯವು ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ (Kolkata Knight Riders vs Sunrisers Hyderabad) ನಡುವೆ ನಡೆಯುತ್ತಿದೆ. ಆರಂಭಿಕ ಪಂದ್ಯಗಳಲ್ಲಿ ಸೋತ ಎರಡೂ ತಂಡಗಳು ಒತ್ತಡದಲ್ಲಿವೆ. ಸನ್‌ರೈಸರ್ಸ್ ಹೈದರಾಬಾದ್ ತನ್ನ ಮೊದಲ ಪಂದ್ಯದಲ್ಲಿ ಆರ್​ಸಿಬಿ ವಿರುದ್ಧ ಸೋತರೆ, ಇತ್ತ ಕೋಲ್ಕತ್ತಾ ನೈಟ್ ರೈಡರ್ಸ್​, ಮುಂಬೈ ಇಂಡಿಯನ್ಸ್ ವಿರುದ್ಧ ಸೋತಿತ್ತು. ಆದ್ದರಿಂದ, ಈ ಎರಡು ತಂಡಗಳು ತಮ್ಮ ಮೊದಲ ಗೆಲುವನ್ನು ಎದುರು…

Read More

ರಾಜ್ಯದ 5 ಜಿಲ್ಲೆಗಳಲ್ಲಿ 40 ಡಿಗ್ರಿ ದಾಟಿದ ತಾಪಮಾನ: ಬಿಸಿಲಿನ ಝಳದಿಂದ ಪಾರಾಗಲು ಜನರ ನಾನಾ ಕಸರತ್ತು – Kannada News | Karnataka Heatwave: Five Districts Cross 40 Degrees Celsius as Residents Struggle

ಬೆಂಗಳೂರು, ಏಪ್ರಿಲ್​ 19: ರಾಜ್ಯದಲ್ಲಿ ಬಿಸಿಲಿನ ಬೇಗೆ ದಿನದಿಂದ ದಿನಕ್ಕೆ ಏರುತ್ತಲೇ ಸಾಗಿದ್ದು, ಪ್ರಮುಖವಾಗಿ ಉತ್ತರ ಕರ್ನಾಟಕದ ಜಿಲ್ಲೆಗಳು ಅಕ್ಷರಶಃ ಕೆಂಡದಂತಾಗಿವೆ. ಐದು ಜಿಲ್ಲೆಗಳಲ್ಲಿ ತಾಪಮಾನವು 40 ಡಿಗ್ರಿ ಸೆಲ್ಸಿಯಸ್ ಗಡಿ ದಾಟಿದ್ದು, ಜನರು ಬಿಸಿಲಿನಿಂದ ತತ್ತರಿಸಿದ್ದಾರೆ. ಗದಗ, ರಾಯಚೂರು, ವಿಜಯಪುರ, ಯಾದಗಿರಿ ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ ಸೂರ್ಯನ ತಾಪಮಾನ 40 ಡಿಗ್ರಿ ಸೆಲ್ಸಿಯಸ್‌ಗಿಂತ ಅಧಿಕ ದಾಖಲಾಗಿದೆ. ಮನೆಯಲ್ಲಿದ್ದರೂ ಫ್ಯಾನ್ ಮತ್ತು ಕೂಲರ್‌ಗಳಿಂದ ಬಿಸಿ ಗಾಳಿ ಬರುತ್ತಿರುವುದರಿಂದ ಜನರು ನೆಮ್ಮದಿ ಕಳೆದುಕೊಂಡಿದ್ದಾರೆ. ಮಧ್ಯಾಹ್ನದ ವೇಳೆ ಜನರು ಮನೆಯಿಂದ…

Read More

ವಂದೇ ಭಾರತ್ ರೈಲಿನ ಊಟದಲ್ಲಿ ಹುಳುಗಳು ಪತ್ತೆ; ಅಡುಗೆ ಕಂಪನಿಗೆ 50 ಲಕ್ಷ ರೂ. ದಂಡ

ನವದೆಹಲಿ, ಮಾರ್ಚ್ 26: ವಂದೇ ಭಾರತ್ ಎಕ್ಸ್‌ಪ್ರೆಸ್‌ನಲ್ಲಿ (Vande Bharat Express) ನೀಡಲಾದ ಊಟದಲ್ಲಿ ಮೊಸರಿನಲ್ಲಿ ಹುಳುಗಳು ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ರೈಲ್ವೆ ಇಲಾಖೆ ಐಆರ್‌ಸಿಟಿಸಿಗೆ 10 ಲಕ್ಷ ರೂ. ದಂಡ ವಿಧಿಸಿದೆ. ಹಾಗೇ, ಅಡುಗೆ ಒದಗಿಸುವವರಿಗೆ 50 ಲಕ್ಷ ರೂ. ದಂಡ ವಿಧಿಸಿದೆ. ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನಲ್ಲಿರುವ ಮೊಸರಿನಲ್ಲಿ ಹುಳುಗಳು ಕಂಡುಬಂದಿವೆ ಎಂಬ ದೂರುಗಳ ಹಿನ್ನೆಲೆಯಲ್ಲಿ ಭಾರತೀಯ ರೈಲ್ವೆ ಸಚಿವಾಲಯ ಕಠಿಣ ಕ್ರಮ ಕೈಗೊಂಡಿದೆ. IRCTCಗೆ 1 ಮಿಲಿಯನ್ (10 ಲಕ್ಷ) ಮತ್ತು ಅಡುಗೆ…

Read More

ಆಂಧ್ರಪ್ರದೇಶ: ಸಿಎಂ ಚಂದ್ರಬಾಬು ನಾಯ್ಡು ಮಾಧ್ಯಮಗಳೊಂದಿಗೆ ಮಾತನಾಡುತ್ತಿರುವಾಗ ಕುಸಿದ ಬಿದ್ದ ಎನ್​ಎಸ್​ಜಿ ಕಮಾಂಡೋ – Kannada News | NSG Commando Collapses During CM Chandrababu Naidu’s Public Interaction Amid Heat

ಆಂಧ್ರಪ್ರದೇಶ, ಏಪ್ರಿಲ್ 20: ಇಂದು ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಅವರ ಹುಟ್ಟುಹಬ್ಬ. ಈ ಪ್ರಯುಕ್ತ ನಾಯ್ಡು ದಂಪತಿ ವಿಜಯವಾಡದಲ್ಲಿರುವ ಪಟಮಟ ಅನ್ನ ಕ್ಯಾಂಟೀನ್‌ಗೆ ಬಂದಿದ್ದರು.ಅಲ್ಲಿ ಅವರು ಬಡವರಿಗೆ ಉಪಾಹಾರ ಬಡಿಸಿದರು. ಈ ಭೇಟಿಯ ಸಮಯದಲ್ಲಿ ಅನಿರೀಕ್ಷಿತ ಘಟನೆಯೊಂದು ಸಂಭವಿಸಿತ್ತು. ಕಾರ್ಯಕ್ರಮದ ನಂತರ ಸಿಎಂ ಹೊರಗೆ ಮಾಧ್ಯಮಗಳೊಂದಿಗೆ ಮಾತನಾಡುತ್ತಿದ್ದಾಗ, ಅವರ ಸುರಕ್ಷತಾ ತಂಡದ ಭಾಗವಾಗಿದ್ದ ಎನ್‌ಎಸ್‌ಜಿ ಕಮಾಂಡೋ ವಿಪರೀತ ಸೆಕೆಯಿಂದಾಗಿ ಕುಸಿದುಬಿದ್ದಿದ್ದಾರೆ. ಮಾಹಿತಿ ತಿಳಿದ ಇತರ ಭದ್ರತಾ ಸಿಬ್ಬಂದಿ ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ…

Read More

ಬಿಹಾರದ ಆಸ್ಪತ್ರೆಯಲ್ಲಿ ಅಗ್ನಿ ಅವಘಡ, 3ಕ್ಕೂ ಅಧಿಕ ಮಂದಿ ಸಾವು – Kannada News

ಮುಜಫರ್‌ಪುರ, ಜೂನ್ 4: ಬಿಹಾರದ ಪ್ರಸಾದ್ ಆಸ್ಪತ್ರೆಯ ಐಸಿಯು ಘಟಕದಲ್ಲಿ ಇಂದು ಅಗ್ನಿ ಅವಘಡ(Fire Accident) ಸಂಭವಿಸಿದ್ದು, ಮೂರಕ್ಕೂ ಅಧಿಕ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಆಸ್ಪತ್ರೆಯೊಳಗೆ ದಟ್ಟ ಹೊಗೆ ಮತ್ತು ಬೆಂಕಿಯ ನಡುವೆ ಸಿಲುಕಿದ್ದ 20 ಕ್ಕೂ ಹೆಚ್ಚು ರೋಗಿಗಳನ್ನು ಅಗ್ನಿಶಾಮಕ ಸಿಬ್ಬಂದಿ ಸುರಕ್ಷಿತವಾಗಿ ಹೊರಗೆ ಕರೆತಂದಿದ್ದಾರೆ. ಹಲವು ರೋಗಿಗಳನ್ನು ಹತ್ತಿರದ ಆಸ್ಪತ್ರೆಗೆ ಕಳುಹಿಸಲಾಗಿದೆ. ಅಧಿಕಾರಿಗಳು ಪ್ರಸ್ತುತ ಸ್ಥಿತಿ ಮತ್ತು ಸ್ಥಳದ ಪರಿಶೀಲನೆ ನಡೆಸುತ್ತಿದ್ದಾರೆ. ಬೆಳಗಿನ ಜಾವ 3 ಗಂಟೆಯ ಸುಮಾರಿಗೆ ಶಾರ್ಟ್…

Read More

ಡಾ. ಚಂದ್ರು ಲಮಾಣಿ ಕಾರು ಚಾಲಕನ ಆತ್ಮಹತ್ಯೆ ಕೇಸ್​​ಗೆ ಬಿಗ್​​ ಟ್ವಿಸ್ಟ್​​: ಶಾಸಕರ ವಿರುದ್ಧವೇ ಮೃತನ ಕುಟುಂಬಸ್ಥರಿಂದ ಗಂಭೀರ ಆರೋಪ – Kannada News | Shirahatti MLA Driver Death Case Takes Dramatic Twist: Family Alleges Threat and Foul Play by MLA Chandru Lamani

ಶಾಸಕ ಚಂದ್ರು ಲಮಾಣಿ ಮತ್ತು ಚಾಲಕ ಸುನೀಲ್​​Image Credit source: Tv9 Kannada ಗದಗ, ಜುಲೈ 02: ಡಾ. ಚಂದ್ರು ಲಮಾಣಿ ಕಾರು ಚಾಲಕ ಸುನೀಲ್ ಲಮಾಣಿ ಆತ್ಮಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಶಿರಹಟ್ಟಿ ಶಾಸಕರ ವಿರುದ್ಧವೇ ಮೃತನ ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ. 2025 ಜನವರಿ 9ರಂದು ನೇಣು ಬಿಗಿದುಕೊಂಡು ಚಾಲಕ ಸುನೀಲ್​​ ಆತ್ಮಹತ್ಯೆ ಮಾಡಿಕೊಂಡಿದ್ದರು. ಶಾಸಕರ ಅವ್ಯವಹಾರ ಆತನಿಗೆ ಗೊತ್ತಿತ್ತು. ಹೀಗಾಗಿ ಅವನಿಗೆ ಶಾಸಕರು ಬೆದರಿಕೆ ಹಾಕಿದ್ದರು. ಅಲ್ಲದೆ ಕೆಲಸ ಮಾಡಿರುವ ವೇತನವನ್ನು…

Read More

ಇನ್ಮುಂದೆ ಬೆಂಗಳೂರಿನಿಂದ ಮಂಗಳೂರಿಗೆ ಕೇವಲ 5 ಗಂಟೆಗಳಲ್ಲಿ ತಲುಪಬಹುದು! ಅದು ಹೇಗೆ ಗೊತ್ತಾ? – Kannada News | New Bengaluru Mangaluru Vande Bharat Train: Faster Travel for Karnataka

ದಕ್ಷಿಣ ಕನ್ನಡ ಜಿಲ್ಲೆಯ ಜನರಿಗೆ ಕೇಂದ್ರ ಸರ್ಕಾರ ಸಿಹಿ ಸುದ್ದಿ ನೀಡಿದೆ. ಬಹುನಿರೀಕ್ಷಿತ ವಂದೇ ಭಾರತ್ ರೈಲು ಬೆಂಗಳೂರು ಮತ್ತು ಮಂಗಳೂರು ಸಂಚಾರಿಸಲಿದೆ. ಈ ಮೂಲಕ ಕರಾವಳಿ ಪ್ರದೇಶಗಳ ಪುಣ್ಯಕ್ಷೇತ್ರಕ್ಕೆ ಹೋಗುವವರಿಗೆ ಇದು ಒಳ್ಳೆಯ ಪ್ರಯಾಣ ನೀಡಲಿದೆ. ಸಕಲೇಶಪುರ ಮತ್ತು ಸುಬ್ರಹ್ಮಣ್ಯ ರಸ್ತೆಯ ನಡುವಿನ 55 ಕಿ.ಮೀ ಘಾಟ್ ವಿಭಾಗದಲ್ಲಿ ವಿದ್ಯುದ್ದೀಕರಣ ಪೂರ್ಣಗೊಂಡ ನಂತರ ಯೋಜನೆಗೆ ಚಾಲನೆ ನೀಡಲಾಗುವುದು. ಈಗಾಗಲೇ ಈ ವಿದ್ಯುದ್ದೀಕರಣ ಕಾಮಗಾರಿ ಪೂರ್ಣಗೊಳ್ಳುತ್ತ ಬಂದಿದೆ. ಅದಷ್ಟು ಬೇಗ ಈ ರೈಲು ಸಂಚಾರ ಮಾಡಲಿದೆ ಎಂದು…

Read More

ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಷಣ ಮಾಡುತ್ತಿರುವಾಗಲೇ ಬಂತು ಪ್ರಮೋಷನ್ ಚೀಟಿ: ಮಹತ್ವದ ಹೇಳಿಕೆ ನೀಡಿದ ಸಿಎಂ – Kannada News | Karnataka CM to KAS: Prioritize Public Service, Curb Agents, Ensure Timely Promotions

ಬೆಂಗಳೂರು, ಏ.27: “ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರೇ ನಿಜವಾದ ಪ್ರಭುಗಳು. ನಾವು ಮತ್ತು ನೀವು ಅವರ ಸೇವೆಗಾಗಿ ಇದ್ದೇವೆ,” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸರ್ಕಾರಿ ಅಧಿಕಾರಿಗಳಿಗೆ ಸಂವಿಧಾನದ ಆಶಯವನ್ನು ನೆನಪಿಸಿದ್ದಾರೆ. ಸಮಾಜದ ಕಟ್ಟಕಡೆಯ ವ್ಯಕ್ತಿಯ ಸಮಸ್ಯೆಗೆ ಸ್ಪಂದಿಸುವಂತೆ ಅವರು ಅಧಿಕಾರಿಗಳಿಗೆ ಕರೆ ನೀಡಿದ್ದಾರೆ. ಅವರು ಬೆಂಗಳೂರಿನಲ್ಲಿ KAS ಅಧಿಕಾರಿಗಳ ಸಂಘದ ನವೀಕರಿಸಿದ ಕಟ್ಟಡ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು. ಇದೇ ವೇಳೆ ಅವರು ಅಧಿಕಾರಿಗಳ ಪ್ರಮೋಷನ್ ಬಗ್ಗೆಯೂ ಮಾತನಾಡಿದರು. ನಿಮ್ಮ ಪದೋನ್ನತಿ ಬಗ್ಗೆ ವೇದಿಕೆಯಲ್ಲಿ ಅಧಿಕಾರಿಯೊಬ್ಬರಿ ಚೀಟಿ ನೀಡಿದ್ದಾರೆ….

Read More

ಗ್ಯಾಸ್ ಸಿಲಿಂಡರ್​​ಗಾಗಿ ಹೈಕೋರ್ಟ್​​ ಮೆಟ್ಟಿಲೇರಿದ ಬೆಂಗಳೂರು ಹೋಟೆಲ್ ಅಸೋಸಿಯೇಷನ್: ರಿಟ್​​ ಅರ್ಜಿ ಸಲ್ಲಿಕೆ

ಬೆಂಗಳೂರು, ಮಾರ್ಚ್​​ 17: ರಾಜ್ಯದಲ್ಲಿ ಕಮರ್ಷಿಯಲ್​​ ಸಿಲಿಂಡರ್​​ಗಳ ಅಭಾವ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇರೋದು ಹೋಟೆಲ್​​ ಉದ್ಯಮವನ್ನು ನಷ್ಟದ ಕೂಪಕ್ಕೆ ತಳ್ಳುತ್ತಿದೆ. ಈಗಾಗಲೇ ಹಲವು ಹೋಟೆಲ್​​ಗಳು ಬಂದ್​​ ಆಗಿದ್ದರೆ, ಇನ್ನೊಂದಿಷ್ಟು ಮೆನುವಿನಲ್ಲಿ ಭಾರೀ ಕಡಿತದ ಜೊತೆ ಗ್ರಾಹಕರಿಗೆ ಸೇವೆ ನೀಡುತ್ತಿವೆ. ಸ್ಥಿತಿ ಹೀಗೆಯೇ ಮುಂದುವರಿದರೆ ಅವುಗಳೂ ಕ್ಲೋಸ್​​ ಆಗುವ ಆತಂಕ ಎದುರಾಗಿದೆ. ಈ ಬೆನ್ನಲ್ಲೇ ಬೆಂಗಳೂರು ಹೋಟೆಲ್ ಅಸೋಸಿಯೇಷನ್, ವಾಣಿಜ್ಯ ಬಳಕೆಯ ಸಿಲಿಂಡರ್​​ಗಳಿಗಾಗಿ ಹೈಕೋರ್ಟ್​​ ಕದ ತಟ್ಟಿದೆ. ಹೈಕೋರ್ಟ್​ಗೆ ರಿಟ್ ಅರ್ಜಿ ಹೋಟೆಲ್​ಗಳಿಗೆ ಗ್ಯಾಸ್ ಸಿಲಿಂಡರ್ ಕೋರಿ…

Read More

ರಾಮ ಮಂದಿರ ದೇಣಿಗೆ ವಿವಾದ: ಸಿಬಿಐ ತನಿಖೆ ಕೋರಿ ಸಲ್ಲಿಸಿದ್ದ ಅರ್ಜಿ ವಜಾ – Kannada News | Ayodhya Ram Mandir Donation Row: High Court Rejects PIL for CBI Probe, Cites SC Case

ಲಕ್ನೋ, ಜುಲೈ 06: ಅಯೋಧ್ಯೆಯ ರಾಮ ಮಂದಿರ(Ram Mandir)ಕ್ಕೆ ಭಕ್ತರು ನೀಡಿರುವ ದೇಣಿಗೆ ದುರುಪಯೋಗವಾಗಿದೆ ಎಂಬ ಆರೋಪದ ಕುರಿತು ಸಿಬಿಐ ತನಿಖೆಗೆ ಆದೇಶಿಸಬೇಕು ಎಂದು ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್) ವಿಚಾರಣೆಗೆ ಸ್ವೀಕರಿಸಲು ಅಲಹಾಬಾದ್ ಹೈಕೋರ್ಟ್ ನಿರಾಕರಿಸಿದೆ. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಈಗಾಗಲೇ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಕೆಯಾಗಿರುವುದರಿಂದ, ಹೈಕೋರ್ಟ್ ಈ ನಿರ್ಧಾರ ಕೈಗೊಂಡಿದೆ. ಅರ್ಜಿಯಲ್ಲೇನಿತ್ತು? ವಕೀಲ ಮೋಹಿತ್ ಅಶೋಕ್ ಎಂಬುವವರು ಅಲಹಾಬಾದ್ ಹೈಕೋರ್ಟ್‌ನ ಲಕ್ನೋ ಪೀಠಕ್ಕೆ ಈ ಅರ್ಜಿ ಸಲ್ಲಿಸಿದ್ದರು. ರಾಮ ಮಂದಿರದ ದೇಣಿಗೆ…

Read More