ಅಕ್ರಮ ವಲಸಿಗರನ್ನ ತೋರಿಸಿದ್ರೂ ಕೇಸ್ ಹಾಕ್ತೀರಿ: ಪೊಲೀಸರಿಗೆ ಕೋರ್ಟ್ ಕ್ಲಾಸ್, ಪುನೀತ್ ಕೆರೆಹಳ್ಳಿಗೆ ರಿಲೀಫ್ – Kannada News | High Court Questions government on Illegal Immigrants, Stays Case Against Puneeth Kerehalli
ಬೆಂಗಳೂರು, ಫೆಬ್ರವರಿ 04: ಅಕ್ರಮ ಬಾಂಗ್ಲಾ ವಲಸಿಗರ ವಿಚಾರವಾಗಿ ಹಿಂದೂ ಕಾರ್ಯಕರ್ತ ಪುನೀತ್ ಕೆರೆಹಳ್ಳಿ (Puneeth Kerehalli) ವಿರುದ್ಧ ಎರಡೆರಡು ಕೇಸ್ಗಳು ದಾಖಲಾಗಿದ್ದವು. ಇದೀಗ ಹೈಕೋರ್ಟ್ ಏಕಸದಸ್ಯ ಪೀಠ ಪುನೀತ್ ಕೆರೆಹಳ್ಳಿ ವಿರುದ್ಧದ ಒಂದು ಪ್ರಕರಣಕ್ಕೆ ತಡೆ ನೀಡಿದ್ದು, ಮತ್ತೊಂದು ಪ್ರಕರಣದಲ್ಲಿ ಬಲವಂತದ ಕ್ರಮಕೈಗೊಳ್ಳದಂತೆ ಆದೇಶ ಹೊರಡಿಸಿದೆ. ಆ ಮೂಲಕ ಹಿಂದೂ ಕಾರ್ಯಕರ್ತನಿಗೆ ಕೊಂಚ್ ರಿಲೀಫ್ ಸಿಕ್ಕಂತಾಗಿದೆ. ಹೈಕೋರ್ಟ್ ಏಕಸದಸ್ಯ ಪೀಠ ಇಂದು ಪ್ರಕರಣದ ವಿಚಾರಣೆ ಮಾಡಿದ್ದು, ಎಲ್ಲೆಡೆ ಅಕ್ರಮ ವಲಸಿಗರು ಬಂದು ಸೇರಿದ್ದಾರೆ. ಅಕ್ರಮ ವಲಸಿಗರಿದ್ದಾರೆಂದು…