Headlines

ನಿಮ್ಮ ದೇಹದಲ್ಲಿ ಪ್ರೋಟೀನ್ ಕಡಿಮೆ ಇದೆ ಎಂಬುದನ್ನು ದೇಹ ನೀಡುವ ಈ 6 ಲಕ್ಷಣಗಳ ಮೂಲಕ ತಿಳಿಯಬಹುದು! – Kannada News | Protein Deficiency: How Diet Can Help

ಸಾಮಾನ್ಯವಾಗಿ ಪ್ರೋಟೀನ್ (Protein) ದೇಹದ ಬಿಲ್ಡಿಂಗ್ ಬ್ಲಾಕ್ ಆಗಿ ಕೆಲಸ ಮಾಡುತ್ತದೆ ಎಂಬುದು ಕೆಲವರಿಗೆ ತಿಳಿದಿರುವುದಿಲ್ಲ. ಹೌದು, ಮನೆ ಕಟ್ಟಲು ಇಟ್ಟಿಗೆಗಳು ಬೇಕಾದಂತೆ, ದೇಹವನ್ನು ಆರೋಗ್ಯವಾಗಿ ಇಟ್ಟುಕೊಳ್ಳಲು ಪ್ರೋಟೀನ್ ಅಗತ್ಯವಿದೆ. ಆದರೆ ನಮ್ಮಲ್ಲಿ ಅನೇಕರು ಪ್ರೋಟೀನ್‌ಗಿಂತ ಕಾರ್ಬೋಹೈಡ್ರೇಟ್‌ಗಳು ಮತ್ತು ಕೊಬ್ಬಿನಿಂದ ಸಮೃದ್ಧವಾಗಿರುವ ಆಹಾರಗಳಿಗೆ ಆದ್ಯತೆ ನೀಡುತ್ತಾರೆ. ನಾವು ಸೇವಿಸುವ ಆಹಾರದಲ್ಲಿ ಪ್ರೋಟೀನ್ ಪ್ರಮಾಣ ಕಡಿಮೆಯಾದರೆ, ಸ್ನಾಯುಗಳು ಮಾತ್ರವಲ್ಲದೆ ರೋಗನಿರೋಧಕ ಶಕ್ತಿ, ಮಾನಸಿಕ ಸ್ಥಿತಿ ಮತ್ತು ಅಂತಿಮವಾಗಿ ನಿಮ್ಮ ಸೌಂದರ್ಯದ ಮೇಲೂ ಪರಿಣಾಮ ಬೀರುತ್ತದೆ. ಹಾಗಾಗಿ ದೇಹದಲ್ಲಿ ಪ್ರೋಟೀನ್…

Read More

ಆಪರೇಷನ್ ಸಿಂಧೂರ್ ವೇಳೆ ಬೀಜಿಂಗ್ ಮಧ್ಯಸ್ಥಿಕೆ; ಲಜ್ಜೆಗೆಟ್ಟು ಚೀನಾದ ಬೆಂಬಲಕ್ಕೆ ನಿಂತ ಪಾಕಿಸ್ತಾನ – Kannada News | China was in constant touch Pakistan now backs Beijings mediation claims on Operation Sindoor

ನವದೆಹಲಿ, ಜನವರಿ 3: ಪಾಕಿಸ್ತಾನದಲ್ಲಿ ಆಶ್ರಯ ಪಡೆದಿರುವ ಭಯೋತ್ಪಾದನಾ ಸಂಘಟನೆಗಳು ಇದೀ ಜಗತ್ತಿಗೆ ಆತಂಕ ತಂದೊಡ್ಡುತ್ತಿವೆ ಎಂಬುದು ಎಲ್ಲ ದೇಶಗಳಿಗೂ ತಿಳಿದಿರುವ ವಿಚಾರ. ಇದೇ ಕಾರಣದಿಂದ ಹಲವು ದೇಶಗಳು ‘ದುಷ್ಟರಿಂದ ದೂರವಿರು’ ಎಂಬ ಗಾದೆಯನ್ನು ಗಂಭೀರವಾಗಿ ಪರಿಗಣಿಸಿ ಪಾಕಿಸ್ತಾನದಿಂದ ಅಂತರ ಕಾಯ್ದುಕೊಂಡಿವೆ. ಆದರೆ, ಚೀನಾ, ನೇಪಾಳ, ಬಾಂಗ್ಲಾದೇಶದಂತಹ ಕೆಲವು ದೇಶಗಳು ಪಾಕಿಸ್ತಾನದ (Pakistan) ಜೊತೆ ಬಹಳ ಆತ್ಮೀಯ ಸಂಬಂಧ ಹೊಂದಿವೆ. ಅಮೆರಿಕ ಅತ್ತ ಪಾಕಿಸ್ತಾನದ ಕಡೆಗೂ ಮೋಹವಿಟ್ಟುಕೊಂಡು ಇತ್ತ ಮೋದಿಯನ್ನೂ ಸಂಪೂರ್ಣವಾಗಿ ಎದುರು ಹಾಕಿಕೊಳ್ಳಲಾಗದೆ ಡಬಲ್ ಗೇಮ್…

Read More

‘ಟಾಕ್ಸಿಕ್’ ಮತ್ತೆ ಮುಂದಕ್ಕೆ ಹೋಗುತ್ತಾ? ಅನುಮಾನದ ಪ್ರಶ್ನೆಗೆ ಉತ್ತರ ನೀಡಿದ ನಟಿ – Kannada News | Yash Toxic movie release date confirmed Tara Sutaria dismisses delay rumors

‘ರಾಕಿಂಗ್ ಸ್ಟಾರ್’ ಯಶ್ (Yash) ಅಭಿಮಾನಿಗಳು ಬಹುನಿರೀಕ್ಷೆಯಿಂದ ಕಾಯುತ್ತಿರುವ ‘ಟಾಕ್ಸಿಕ್’ (Toxic) ಸಿನಿಮಾ ಮುಂದೂಡಿಕೆಯಾಗಲಿದೆ ಎಂಬ ಸುದ್ದಿಗಳು ಕಳೆದ ಕೆಲವು ದಿನಗಳಿಂದ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದ್ದವು. ಜೂನ್ 4ರಂದು ಸಿನಿಮಾ ತೆರೆಗೆ ಬರುವುದು ಅನುಮಾನ ಎಂಬ ಮಾತುಗಳು ಕೇಳಿಬಂದಿದ್ದವು. ಆದರೆ ಈಗ ಈ ಎಲ್ಲಾ ವದಂತಿಗಳಿಗೆ ‘ಟಾಕ್ಸಿಕ್’ ಸಿನಿಮಾದ ನಟಿ ತಾರಾ ಸುತಾರಿಯಾ (Tara Sutaria) ಅವರು ತೆರೆ ಎಳೆದಿದ್ದಾರೆ. ಈ ಸಿನಿಮಾದಲ್ಲಿ ತಾರಾ ಸುತಾರಿಯಾ ಅವರು ಒಂದು ಪ್ರಮುಖ ಪಾತ್ರವನ್ನು ಮಾಡಿದ್ದಾರೆ. ಇತ್ತೀಚೆಗೆ…

Read More

ಪೂರ್ಣ ಪ್ರಮಾಣದಲ್ಲಿ ‘ಧುರಂಧರ್ 2’ ಟಿಕೆಟ್ ಬುಕಿಂಗ್ ವಿಳಂಬ: ಹಲವು ಕಾರಣ

ಭಾರತೀಯ ಚಿತ್ರರಂಗದ ಈ ವರ್ಷದ ಬಹುನಿರೀಕ್ಷಿತ ಸಿನಿಮಾ ‘ಧುರಂಧರ್: ದಿ ರಿವೆಂಜ್’ (Dhurandhar: The Revenge) ಬಿಡುಗಡೆಗೆ ಕೆಲವೇ ದಿನ ಬಾಕಿ ಇದೆ. ಆದಿತ್ಯ ಧಾರ್ ನಿರ್ದೇಶನದ, ರಣವೀರ್ ಸಿಂಗ್ ನಟನೆಯ ಈ ಸಿನಿಮಾದ ಟ್ರೇಲರ್ ಈಗಾಗಲೇ ಧೂಳೆಬ್ಬಿಸಿದೆ. ಸದ್ಯಕ್ಕೆ ಪೇಯ್ಡ್ ಪ್ರೀಮಿಯರ್ ಶೋ ಬುಕಿಂಗ್ ಮಾತ್ರ ಶುರುವಾಗಿದೆ. ಅದಕ್ಕೆ ಅತ್ಯುತ್ತಮ ರೆಸ್ಪಾನ್ಸ್ ಬಂದಿದೆ. ಆದರೆ ಪೂರ್ಣ ಪ್ರಮಾಣದಲ್ಲಿ ‘ಧುರಂಧರ್ 2’ (Dhurandhar 2) ಸಿನಿಮಾದ ಟಿಕೆಟ್ ಬುಕಿಂಗ್ ಆರಂಭಿಸಲು ವಿಳಂಬ ಆಗಿದೆ. ಅದಕ್ಕೆ ಒಂದಷ್ಟು ಕಾರಣಗಳಿವೆ….

Read More

349 ರನ್ ಬಾರಿಸಿಯೂ ಅಫ್ಘನ್ ವಿರುದ್ಧ ಸೋತ ಟೀಂ ಇಂಡಿಯಾ – Kannada News

ತ್ರಿಕೋನ ಏಕದಿನ ಸರಣಿಗಾಗಿ ಶ್ರೀಲಂಕಾ ಪ್ರವಾಸ ಮಾಡಿರುವ (Sri Lanka Triangular Series) ಭಾರತ ಎ ತಂಡ ಸರಣಿಯ ಮೊದಲ ಪಂದ್ಯದಲ್ಲಿ ಆತಿಥೇಯ ಶ್ರೀಲಂಕಾ ತಂಡವನ್ನು ಮಣಿಸುವ ಮೂಲಕ ಪ್ರವಾಸವನ್ನು ಗೆಲುವಿನೊಂದಿಗೆ ಆರಂಭಿಸಿತ್ತು. ಆದರೆ ಎರಡನೇ ಪಂದ್ಯದಲ್ಲಿ ಅಫ್ಘಾನಿಸ್ತಾನ ಎ ತಂಡವನ್ನು ಎದುರಿಸಿದ್ದ ಭಾರತ ಎ ಪಡೆ ( Afghanistan A vs India A) 349 ರನ್​ಗಳ ಬೃಹತ್ ಮೊತ್ತವನ್ನು ಕಲೆಹಾಕಿದ ಹೊರತಾಗಿಯೂ ಸೋಲಿಗೆ ಕೊರಳೊಡ್ಡಬೇಕಾಯಿತು. ರಂಗಿರಿ ದಂಬುಲ್ಲಾ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಎರಡನೇ ಏಕದಿನ…

Read More

ವೋಟ್ ಹಾಕಿದ ಪೊಲೀಸರಿಗೂ ಧನ್ಯವಾದ ಹೇಳಿದೆ ಬಿಗ್ ಬಾಸ್ ವಿನ್ನರ್ ಗಿಲ್ಲಿ ನಟ – Kannada News | Bigg Boss Kannada Season 12 Winner Gilli Nata thanks police personnel for support

‘ಬಿಗ್ ಬಾಸ್ ಕನ್ನಡ ಸೀಸನ್ 12’ ಶೋನಲ್ಲಿ ಟ್ರೋಫಿ ಗೆದ್ದ ಗಿಲ್ಲಿ ನಟ ಅವರು ಅನೇಕ ಕಾರ್ಯಕ್ರಮಗಳಿಗೆ ಅತಿಥಿಯಾಗಿ ತೆರಳುತ್ತಿದ್ದಾರೆ. ಅವರನ್ನು ಇಷ್ಟಪಡುವ ದೊಡ್ಡ ಅಭಿಮಾನಿ ಬಳಗ ಇದೆ. ಕನಕಪುರದಲ್ಲಿ ನಡೆದ ಕನಕೋತ್ಸವ ಕಾರ್ಯಕ್ರಮದಲ್ಲಿ ಗಿಲ್ಲಿ ನಟ ಭಾಗಿ ಆಗಿದ್ದಾರೆ. ಈ ವೇಳೆ ಅವರು ಭಾವುಕವಾಗಿ ಮಾತನಾಡಿದರು. ತಮಗೆ ಬೆಂಬಲ ನೀಡಿದ ಪೊಲೀಸರಿಗೂ ಅವರು ಧನ್ಯವಾದ ತಿಳಿಸಿದರು. ‘ಇಷ್ಟೊಂದು ಪ್ರೀತಿ ಸಂಪಾದನೆ ಮಾಡುತ್ತೇನೆ ಅಂತ ಬಿಗ್ ಬಾಸ್ ಮನೆಯಲ್ಲಿ ಇದ್ದಾಗ ಸತ್ಯವಾಗಲೂ ಅಂದುಕೊಂಡಿರಲಿಲ್ಲ. ನನ್ನ ಹೆಣ ಬೀಳುವವರೆಗೂ…

Read More

ವಿಧಾನಸಭೆಯಲ್ಲಿ ಬಿಕೆ ಹರಿಪ್ರಸಾದ್ ಬಟ್ಟೆ ಹರಿದರಾ ಬಿಜೆಪಿಗರು? ಅಸಲಿ ಸತ್ಯ ಈ ವಿಡಿಯೋದಲ್ಲಿದೆ! – Kannada News | Did BJP Leaders Tear BK Hariprasad’s Clothes in Karnataka Assembly? The real truth is in this video!

ಬೆಂಗಳೂರು, ಜನವರಿ 22: ಕರ್ನಾಟಕ ವಿಧಾನಸಭೆ ವಿಶೇಷ ಅಧಿವೇಶನದ ಆರಂಭದಲ್ಲಿ ರಾಜ್ಯಪಾಲ ಥಾವರ್​ಚಂದ್ ಗೆಹ್ಲೋಟ್ ಒಂದೇ ವಾಕ್ಯದಲ್ಲಿ ಭಾಷಣ ಮುಗಿಸಿ ನಿರ್ಗಮಿಸುವ ವೇಳೆ ನಡೆದ ಹೈಡ್ರಾಮಾದಲ್ಲಿ ಕಾಂಗ್ರೆಸ್​ ಎಂಎಲ್ಸಿ ಬಿಕೆ ಹರಿಪ್ರಸಾದ್ ಬಟ್ಟೆ ಹರಿದಿದೆ. ಬಿಜೆಪಿಯವರೇ ಬಟ್ಟೆ ಎಳೆದು ಹರಿದಿದ್ದಾರೆ ಎಂದು ಹರಿಪ್ರಸಾದ್ ಆರೋಪಿಸಿದ್ದಾರೆ. ರಾಜ್ಯಪಾಲರು ವಿಧಾನಸಭೆಯಿಂದ ಹೊರಗೆ ತೆರಳುತ್ತಿದ್ದ ವೇಳೆ ವಿಧಾನ ಪರಿಷತ್ ಸದಸ್ಯರಾದ ಬಿ.ಕೆ. ಹರಿಪ್ರಸಾದ್, ಐವಾನ್ ಡಿಸೋಜಾ, ಶಾಸಕರಾದ ಶರತ್ ಬಚ್ಚೇಗೌಡ, ಪ್ರದೀಪ್ ಈಶ್ವರ್, ಹೆಚ್.ಸಿ. ಬಾಲಕೃಷ್ಣ ಘೋಷಣೆ ಕೂಗುತ್ತಿದ್ದರು. ಈ ವೇಳೆ…

Read More

HPCL Recruitment 2026: HPCLನಲ್ಲಿ 608 ಅಪ್ರೆಂಟಿಸ್ ಟ್ರೈನಿ ನೇಮಕಾತಿ; ತರಬೇತಿಯ ಜೊತೆಗೆ ಆಕರ್ಷಕ ವೇತನ – Kannada News | HPCL Recruitment 2026: 608 Graduate Apprentice Trainee Jobs Apply Now!

ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (HPCL) 608 ಗ್ರಾಜುಯೇಟ್ ಅಪ್ರೆಂಟಿಸ್ ಟ್ರೈನಿ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಈ ಅವಕಾಶವು ನಿರ್ದಿಷ್ಟವಾಗಿ ಪ್ರತಿಷ್ಠಿತ ಸಾರ್ವಜನಿಕ ವಲಯದ ಕಂಪನಿಯೊಂದಿಗೆ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಲು ಬಯಸುವ ಹೊಸಬರಿಗೆ ಆಗಿದೆ. ಆಯ್ಕೆ ಪ್ರಕ್ರಿಯೆಯು ಸಂಪೂರ್ಣವಾಗಿ ಅರ್ಹತೆಯನ್ನು ಆಧರಿಸಿರುತ್ತದೆ ಮತ್ತು ಯಾವುದೇ ಲಿಖಿತ ಪರೀಕ್ಷೆ ಅಥವಾ ಸಂದರ್ಶನ ಇರುವುದಿಲ್ಲ. ಆಸಕ್ತ ಅಭ್ಯರ್ಥಿಗಳು ನಿಗದಿತ ದಿನಾಂಕದೊಳಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. HPCL ಒಟ್ಟು 608 ಗ್ರಾಜುಯೇಟ್ ಅಪ್ರೆಂಟಿಸ್ ಟ್ರೈನಿ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ….

Read More

ರಾಜ್ಯವನ್ನೇ ಬೆಚ್ಚಿಬೀಳಿಸಿದ್ದ ಬೀದರ್‌ ATM ದರೋಡೆ ಕೇಸ್‌ಗೆ 1 ವರ್ಷ: ಆರೋಪಿಗಳ ಸುಳಿವೇ ಇಲ್ಲ – Kannada News | Bidar 83 Lakh ATM Robbery: One Year On, Unsolved Heist, No clue about accused

ಬೀದರ್, ಜನವರಿ 16: ನಗರದಲ್ಲಿ ನಡೆದಿದ್ದ ಸಿಎಂಸಿ (CMC) ವಾಹನ ದರೋಡೆ ಪ್ರಕರಣ (robbery case) ಇಡೀ ರಾಜ್ಯವನ್ನ ಬೆಚ್ಚಿಬೀಳಿಸಿತ್ತು. ಬರೋಬ್ಬರಿ 83 ಲಕ್ಷ ರೂ ಹಣ ದರೋಡೆ ಮಾಡಿದವರು ಇನ್ನೂ ಪತ್ತೆಯಾಗಿಲ್ಲ. ಮೂರು ರಾಜ್ಯದ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಹಣ ಕದ್ದು ಹಂತಕರು ಪರಾರಿಯಾಗಿ ಇಂದಿಗೆ ಒಂದು ವರ್ಷವಾದರೂ ದರೋಡೆಕೋರರ ಗ್ಯಾಂಗ್ ಇನ್ನೂ ಪತ್ತೆಯಾಗಿಲ್ಲ. ಇತ್ತ ಗುಂಡಿನ ದಾಳಿಗೆ ಗಾಯಗೊಂಡಿದ್ದ ಕುಟುಂಬಕ್ಕೆ ಆರ್ಥಿಕ ಸಹಾಯ ಮಾಡಲಾಗುವುದೆಂದು ಹೇಳಿದ್ದ ಜಿಲ್ಲಾಡಳಿತ ಇದೀಗ ಕೈ ಚೆಲ್ಲಿದ್ದು, ಕುಟುಂಬಸ್ಥರ ಆಕ್ರೋಶಕ್ಕೆ…

Read More

ದಾಂಪತ್ಯ ಜೀವನಕ್ಕೆ ಕಾಲಿಟ್ಟ ‘ಕ್ರಾಂತಿ’ ನಟಿ ನಿಮಿಕಾ ರತ್ನಾಕರ್: ಚಿತ್ರಗಳ ನೋಡಿ

ದರ್ಶನ್ ನಟನೆಯ ‘ಕ್ರಾಂತಿ’ ಸೇರಿದಂತೆ ಇನ್ನೂ ಕೆಲವು ಸಿನಿಮಾಗಳಲ್ಲಿ ನಟಿಸಿರುವ ನಟಿ ನಿಮಿಕಾ ರತ್ನಾಕರ್ ಮದುವೆಯಾಗಿ ದಾಂಪತ್ಯಕ್ಕೆ ಕಾಲಿರಿಸಿದ್ದಾರೆ. ‘ಅಬ್ಬರ’, ‘ಮಿಸ್ಟರ ಬ್ಯಾಚುಲರ್’, ‘ಕ್ರಾಂತಿ’, ‘ಫ್ಲರ್ಟ್’ ಇನ್ನೂ ಕೆಲವಾರು ಸಿನಿಮಾಗಳಲ್ಲಿ ನಿಮಿಕಾ ರತ್ನಾಕರ್ ನಟಿಸಿದ್ದಾರೆ. ಮಂಗಳೂರು ಮೂಲದವರೇ ಆದ ನಿಮಿಕಾ ಅವರು ಇದೀಗ ಮಂಗಳೂರಿನಲ್ಲೇ ವಿವಾಹವಾಗಿದ್ದು, ಮದುವೆಯ ಸಂಭ್ರಮದ ಚಿತ್ರಗಳನ್ನು ಇನ್​​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಮಂಗಳೂರಿನಲ್ಲಿ ನಿಮಿಕಾ ರತ್ನಾಕರ್ ಅವರ ವಿವಾಹ ನಡೆದಿದ್ದು, ಆಶಿಶ್ ಎಂಬುವರೊಟ್ಟಿಗೆ ನಿಮಿಕಾ ರತ್ನಾಕರ್ ಸಪ್ತಪದಿ ತುಳಿದಿದ್ದಾರೆ. ಇದೀಗ ನಿಮಿಕಾ ರತ್ನಾಕರ್ ಅವರು ಮಂಗಳೂರಿನಲ್ಲಿ…

Read More