KSCA ಅಂಡರ್ 14 ಕ್ರಿಕೆಟ್: ಬೆಂಗಳೂರಿನ ವಿದ್ಯಾನಿಕೇತನ ಶಾಲೆಗೆ 410 ರನ್‌ಗಳ ಭರ್ಜರಿ ಜಯ – Kannada News | KSCA Under 14th Cricket: Bengaluru vidyaniketan School Wins 410 runs Against carmel school

ಬೆಂಗಳೂರು, (ಡಿಸೆಂಬರ್ 25): 2025-26ನೇ ಸಾಲಿನ ಕೆ.ಎಸ್.ಸಿ.ಎ (KSCA) ಬಿ.ಟಿ.ಆರ್ 14 ವರ್ಷದೊಳಗಿನವರ ಎರಡನೇ ಡಿವಿಷನ್ ಕ್ರಿಕೆಟ್ ಪಂದ್ಯದಲ್ಲಿ ಬೆಂಗಳೂರಿನ ವಿದ್ಯಾನಿಕೇತನ ಶಾಲೆ (Bengaluru vidyaniketan School) ಭರ್ಜರಿ ಜಯಗಳಿಸಿದೆ. ವ್ಯೊಮ್ ನಾಯ್ಡು ಅದ್ಭುತ ದ್ವಿಶತಕದ ನೆರವಿನಿಂದ ವಿದ್ಯಾನಿಕೇತನ ಶಾಲೆಯು, ಬೆಂಗಳೂರಿನ ಕಾರ್ಮೆಲ್ ಶಾಲೆ (carmel school) (B-70) ವಿರುದ್ಧ 410 ರನ್‌ಗಳ ಬೃಹತ್ ಮೊತ್ತದ ಜಯ ದಾಖಲಿಸಿದೆ. ಬೆಂಗಳೂರು ನಗರದ ಸರ್ ಎಂ. ವಿಶ್ವೇಶ್ವರಯ್ಯ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (MVIT-2) ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ…

Read More

ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್ – Kannada News | Shivarajkumar condemns fans bad comments on Vijayalakshmi Darshan

ಸೋಶಿಯಲ್ ಮೀಡಿಯಾದಲ್ಲಿ ಕೆಲವು ಕಿಡಿಗೇಡಿಗಳು ದರ್ಶನ್ ಪತ್ನಿ ವಿಜಯಲಕ್ಷ್ಮಿ ಬಗ್ಗೆ ಕೆಟ್ಟದಾಗಿ ಕಮೆಂಟ್ ಮಾಡುತ್ತಿದ್ದಾರೆ. ಅಂಥವರ ವಿರುದ್ಧ ಈಗಾಗಲೇ ವಿಜಯಲಕ್ಷ್ಮಿ ದರ್ಶನ್ (Vijayalakshmi Darshan) ಅವರು ದೂರು ನೀಡಿದ್ದಾರೆ. ಈ ಮೊದಲು ನಟಿ ರಮ್ಯಾಗೆ ಇದೇ ರೀತಿ ಕೆಟ್ಟ ಕಮೆಂಟ್ ಬಂದಿತ್ತು. ಈ ಎಲ್ಲ ಘಟನೆಗಳ ಬಗ್ಗೆ ನಟ ಶಿವರಾಜ್​ಕುಮಾರ್ ಅವರು ಪ್ರತಿಕ್ರಿಯೆ ನೀಡಿದ್ದಾರೆ. ‘ಫ್ಯಾನ್ಸ್ ವಾರ್ ನಿಲ್ಲಿಸಬೇಕು. ಇದನ್ನು ನಾನು ಮೊದಲಿನಿಂದಲೂ ಹೇಳುತ್ತಾ ಬಂದಿದ್ದೇನೆ. ಎಲ್ಲ ಅಭಿಮಾನಿಗಳಲ್ಲೂ ನಾನು ಕೇಳಿಕೊಳ್ಳುತ್ತೇನೆ. ಒಬ್ಬರಿಂದ ಇನ್ನೊಬ್ಬರಿಗೆ ಆ ಕಿಡಿ…

Read More

ಬಿಗ್ ಬಾಸ್ ಧರ್ಮ ಕೀರ್ತಿರಾಜ್ ನಟನೆಯ 25ನೇ ಸಿನಿಮಾ ‘ನಯನ ಮನೋಹರ’ – Kannada News | Dharma Keerthiraj starrer 25th Movie Nayana Manohara title and teaser launch

ನಟ ಧರ್ಮ ಕೀರ್ತಿರಾಜ್ (Dharma Keerthiraj) ಅವರು ಬಿಗ್ ಬಾಸ್ ಶೋ ಮೂಲಕ ಖ್ಯಾತಿ ಹೆಚ್ಚಿಸಿಕೊಂಡರು. ಹಲವು ಸಿನಿಮಾಗಳಲ್ಲಿ ಅವರು ನಟಿಸುತ್ತಿದ್ದಾರೆ. ಈಗ ಅವರು 25ನೇ ಸಿನಿಮಾ ಒಪ್ಪಿಕೊಂಡಿದ್ದಾರೆ. ಈ ಸಿನಿಮಾಗೆ ‘ನಯನ ಮನೋಹರ’ (Nayana Manohara) ಎಂದು ಶೀರ್ಷಿಕೆ ಇಡಲಾಗಿದೆ. ಇತ್ತೀಚೆಗೆ ಈ ಸಿನಿಮಾದ ಟೈಟಲ್ ಅನಾವರಣ ಆಯಿತು. ಜೊತೆಗೆ ಟೀಸರ್ ಕೂಡ ಬಿಡುಗಡೆ ಮಾಡಲಾಗಿದೆ. ಯುಬಿ ಸಿಟಿಯ ಮ್ಯಾರಿಯಟ್ ಅಪಾರ್ಟ್‌ಮೆಂಟ್ಸ್‌ನಲ್ಲಿ ಈ ಕಾರ್ಯಕ್ರಮವು ಅದ್ದೂರಿಯಾಗಿ ನಡೆಯಿತು. ಅನುಷ್ ಸಿದ್ದಪ್ಪ ಅವರು ‘ಎಕ್ಸ್ಕ್ವಿಸಿಟ್ ಎಂಟರ್‌ಟೈನ್‌ಮೆಂಟ್ಸ್’ ಮೂಲಕ…

Read More

Infra Achievements: 2025ರಲ್ಲಿ ಭಾರತದಲ್ಲಿ ಅದೆಷ್ಟು ಮೂಲಸೌಕರ್ಯ ಯೋಜನೆಗಳು, ಮೈಲಿಗಲ್ಲುಗಳು, ಮೊದಲುಗಳು – Kannada News | Building the New India: 2025 A Year of Infrastructure Breakthroughs

ಭಾರತದ ಅಭಿವೃದ್ಧಿ ಪಥದಲ್ಲಿ 2025 ಒಂದು ಪ್ರಮುಖ ಘಟ್ಟ ಎನಿಸಿದೆ. ರೈಲು, ರಸ್ತೆ, ಆಕಾಶ, ಸಮುದ್ರ, ಡಿಜಿಟಲ್, ಹೀಗೆ ಪ್ರತೀ ಆಯಾಮದಲ್ಲೂ ಭಾರತದ ಅಭಿವೃದ್ಧಿಯಲ್ಲಿ ಗಣನೀಯ ಪ್ರಗತಿ ಕಾಣತೊಡಗಿದೆ. ಕನೆಕ್ಟಿವಿಟಿ ದಟ್ಟಗೊಂಡಿತು, ಅಂತರಗಳು ತಗ್ಗಿದವು, ಆಶೋತ್ತರಗಳು ಗಟ್ಟಿಗೊಂಡವು. ಇನ್​ಫ್ರಾಸ್ಟ್ರಕ್ಚರ್​ಗಾಗಿ ಸರ್ಕಾರದ ಬಂಡವಾಳ ಹೂಡಿಕೆ ಮೊತ್ತವು 2025-26ರ ಹಣಕಾಸು ವರ್ಷದಲ್ಲಿ 11.21 ಲಕ್ಷ ಕೋಟಿ ರೂಗೆ ಏರಿದೆ. ಇದು ಜಿಡಿಪಿಯ ಶೇ. 3.1ರಷ್ಟಾಗಿದೆ. 2047ರವರೆಗೂ ಭಾರತದ ಜಿಡಿಪಿ ಪ್ರತೀ 12-18 ತಿಂಗಳಿಗೆ ಒಂದು ಟ್ರಿಲಿಯನ್ ಡಾಲರ್​ನಷ್ಟು ಹೆಚ್ಚಾಗುವ ನಿರೀಕ್ಷೆ…

Read More

ಶಕ್ತಿ ಯೋಜನೆಯೇ ಬಂಡವಾಳ, ಮಹಿಳೆಯರೇ ಟಾರ್ಗೆಟ್​​: ಕಳ್ಳಿಯರ ಗ್ಯಾಂಗ್​​ ಭೇದಿಸಿದ ಖಾಕಿ – Kannada News | Shakti Yojana Misused: Women’s Jewelry Theft Gang Arrested in Kalaburagi

ಕಲಬುರಗಿ, ಡಿಸೆಂಬರ್​​ 25: ಮಹಿಳೆಯರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ರಾಜ್ಯ ಸಾರಿಗೆಯೆ ಸಾಮಾನ್ಯ ಬಸ್​​ಗಳಲ್ಲಿ ಉಚಿತ ಪ್ರಯಾಣ ವ್ಯವಸ್ಥೆಯನ್ನು ಸರ್ಕಾರ ಶಕ್ತಿ ಯೋಜನೆಯಡಿ  ಕಲ್ಪಿಸಿದೆ. ಆದ್ರೆ ಇದೇ ಫ್ರೀ ಬಸ್​​ ಸ್ಕೀಂನ ಬಂಡವಾಳ ಮಾಡಿಕೊಂಡು ಮಹಿಳಾ ಪ್ರಯಾಣಿಕರ ಆಭರಣಗಳನ್ನು ಕದಿಯುತ್ತಿದ್ದ ಖತರ್ನಾಕ್​​ ಲೇಡಿ​​ ಗ್ಯಾಂಗ್​​ ಒಂದನ್ನು ಕಲಬುರಗಿ ಜಿಲ್ಲಾ ಪೊಲೀಸರು ಬಂಧಿಸಿದ್ದಾರೆ. ಕಲಬುರಗಿ ನಗರದ ಮಾಂಗರವಾಡಿ ಬಡಾವಣೆಯ ನಿವಾಸಿಗಳಾದ ಚಿಮನ್ ಕಾಂಬಳೆ, ಶಕೀಲಾಬಾಯಿ ಉಪಾಧ್ಯಾ ಮತ್ತು‌ ಮಾಧುರಿ ಬಂಧಿತ ಆರೋಪಿಗಳಾಗಿದ್ದಾರೆ. ಕಳ್ಳತನವನ್ನೇ ಇವರು ವೃತ್ತಿ ಮಾಡಿಕೊಂಡಿದ್ದು, ರಾಜ್ಯ ಸರ್ಕಾರದ…

Read More

ಕರ್ನಾಟಕದಲ್ಲಿ ಸಾಲು ಸಾಲು ಅಗ್ನಿ ದುರಂತ: ಬೆಳೆ ರಕ್ಷಿಸಿಕೊಳ್ಳಲು ಹೋಗಿ ರೈತ ಸಜೀವದಹನ – Kannada News | Fire Incident Today In Karnataka: Farmer dies who try to rescue palm oil crop from fire at Davanagere

ದಾವಣಗೆರೆ, (ಡಿಸೆಂಬರ್ 25): ಚಿತ್ರದುರ್ಗ  (Chitradruga) ಜಿಲ್ಲೆ ಹಿರಿಯೂರಿನ ಗೊರ್ಲತ್ತು ಕ್ರಾಸ್​​​ಬಳಿ ಬಸ್ ಅಗ್ನಿ ದುರಂತದಲ್ಲಿ ಆರು ಜನ ಸಾವನ್ನಪ್ಪಿದ್ದಾರೆ. ಬೆಂಗಳೂರಿನಿಂದ ಗೋಕರ್ಣಕ್ಕೆ 32 ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದ ಸೀಬರ್ಡ್ ಖಾಸಗಿ ಬಸ್​​ಗೆ ಲಾರಿ ಡಿವೈಡರ್ ಹಾರಿ ಬಂದು ಗುದ್ದಿದೆ. ಇದರಿಂದ ಬಸ್ ಹೊತ್ತಿ ಉರಿದಿದ್ದು, ಆರು ಜನ ಸುಟ್ಟು ಕರಕಲಾಗಿದ್ದಾರೆ. ಈ ಘಟನೆ ಇಡೀ ಕರ್ನಾಟಕವೇ (Karnataka) ಮಮ್ಮಲ ಮರುಗಿದೆ. ಇದರ ನಡುವೆ ದಾವಣಗೆರೆಯಲ್ಲಿ (Davanagere) ಅಗ್ನಿ ದುರಂತ ಸಂಭವಿಸಿದ್ದು, ತಾನು ಬೆಳೆದಿದ್ದ ತಾಳೆ ಬೆಳೆಯನ್ನು ರಕ್ಷಣೆ…

Read More

ಜೈಲಲ್ಲಿದ್ದುಕೊಂಡೇ ಜಾಕ್ವೆಲಿನ್​​ಗೆ ಮನೆ ಉಡುಗೊರೆ ಕೊಟ್ಟ ಸುಖೇಶ್? – Kannada News | Sukhesh claims he gifted Jacqueline Fernandez a house in Beverly Hills

ಸುಖೇಶ್ ಚಂದ್ರಶೇಖರ್ (Sukhesh Chandrashekhar), ಭಾರತದ ನಂಬರ್ ಕಾನ್​ಮ್ಯಾನ್ (ಮೋಸಗಾರ) ಪ್ರಸ್ತುತ ತಿಹಾರ್ ಜೈಲಿನಲ್ಲಿದ್ದಾನೆ. ದೇಶದ ಕೆಲವು ಪ್ರಮುಖ ರಾಜಕಾರಣಿಗಳು, ವಿಐಪಿ ವ್ಯಕ್ತಿಗಳು, ಖ್ಯಾತ ಉದ್ಯಮಿಗಳು, ಚಿತ್ರರಂಗದ ಕೆಲವರಿಗೆ ಸಹ ಮೋಸ ಮಾಡಿ ನೂರಾರು ಕೋಟಿ ರೂಪಾಯಿ ಹಣ ಗಳಿಸಿದ್ದಾನೆ ಈ ಆಸಾಮಿ. ಬಾಲಿವುಡ್​​ ನಟಿಯರ ಮೇಲೆ ವಿಶೇಷ ಮೋಹ ಹೊಂದಿದ್ದ ಸುಖೇಶ್, ತನ್ನ ಮೋಸದ ಹಣದ ನೆರವಿನಿಂದ ಹಲವು ನಟಿಯರಿಗೆ ಕೋಟ್ಯಂತರ ಮೌಲ್ಯದ ಉಡುಗೊರೆಗಳನ್ನು ನೀಡುತ್ತಿದ್ದ. ಜಾಕ್ವೆಲಿನ್ ಫರ್ನಾಂಡೀಸ್​ ಅನ್ನು ಗರ್ಲ್​​ಫ್ರೆಂಡ್ ಸಹ ಮಾಡಿಕೊಂಡಿದ್ದ. ಇದೀಗ…

Read More

ಬಾಂಗ್ಲಾದೇಶದಲ್ಲಿ ಮತ್ತೊಬ್ಬ ಹಿಂದೂ ವ್ಯಕ್ತಿಯ ಹತ್ಯೆ; ದುರುಳರ ಹಿಂಸಾಚಾರಕ್ಕೆ 29 ವರ್ಷದ ಸಾಮ್ರಾಟ್ ಬಲಿ – Kannada News | Bangladesh violence, Amrit Mandal beaten to death, second hindu person killed in a week

ಢಾಕಾ, ಡಿಸೆಂಬರ್ 25: ಬಾಂಗ್ಲಾದೇಶದಲ್ಲಿ ಹಿಂಸಾಚಾರ (Bangladesh violence) ಘಟನೆಗಳು ನಿಲ್ಲುತ್ತಲೇ ಇಲ್ಲ. ರಕ್ತಪಿಪಾಸುಗಳಂತೆ ವರ್ತಿಸುತ್ತಿರುವ ಕೆಲ ಜನರು ಅಲ್ಪಸಂಖ್ಯಾತರನ್ನು ಗುರಿ ಮಾಡಿದಂತೆ ಕಾಣುತ್ತಿದೆ. ಕೆಲ ದಿನಗಳ ಹಿಂದೆ ದೀಪು ಚಂದ್ರದಾಸ್ ಎನ್ನುವ ಹಿಂದೂ ವ್ಯಕ್ತಿಯನ್ನು ಬಲಿಪಡೆದಿದ್ದ ದುರುಳರು ಇದೀಗ ಮತ್ತೊಬ್ಬ ಹಿಂದೂ ಧರ್ಮೀಯನನ್ನು ಕೊಂದಿದ್ದಾರೆ. ರಾಜ್​ಬಾರಿ ಜಿಲ್ಲೆಯಲ್ಲಿ 29 ವರ್ಷದ ಅಮೃತ್ ಮಂಡಲ್ ಎಂಬ ವ್ಯಕ್ತಿಯ ಮೇಲೆ ಹಲ್ಲೆ ಮಾಡಿ ಸಾಯಿಸಿದ್ದಾರೆ. ಈ ಘಟನೆ ನಿನ್ನೆ ಬುಧವಾರ ರಾತ್ರಿ 11 ಗಂಟೆಗೆ ಸಂಭವಿಸಿರುವುದು ಬೆಳಕಿಗೆ ಬಂದಿದೆ….

Read More

ಆಲಿಗಡ್ ಮುಸ್ಲಿಂ ಯೂನಿವರ್ಸಿಟಿ ಕ್ಯಾಂಪಸ್​ನಲ್ಲೇ ಬೋಧಕ ರಾವ್ ದಾನಿಶ್ ಅಲಿ ಹತ್ಯೆ – Kannada News | Aligarh Muslim University teacher Rao Danish Ali shot dead at campus area

ಘಟನೆ ನಡೆದ ಯೂನಿವರ್ಸಿಟಿ ಕ್ಯಾಂಟೀನ್ ಸ್ಥಳ ಕಾನಪುರ್, ಡಿಸೆಂಬರ್ 9: ಆಲಿಗಡ್ ಮುಸ್ಲಿಂ ಯೂನಿವರ್ಸಿಟಿಯ (Aligarh Muslim University) ಬೋಧಕರೊಬ್ಬರನ್ನು ಕ್ಯಾಂಪಸ್​ನಲ್ಲೇ ಹತ್ಯೆ ಮಾಡಿದ ಘಟನೆ ನಡೆದಿದೆ. ವಿಶ್ವವಿದ್ಯಾಲಯದ ಎಬಿಕೆ ಸ್ಕೂಲ್​ನಲ್ಲಿ ಬೋಧಕರಾಗಿರುವ ರಾವ್ ದಾನಿಸ್ ಅಲಿಯನ್ನು ಗುಂಡಿಟ್ಟು ಸಾಯಿಸಲಾಗಿದೆ. ಆಲಿಗಡ್​ನಲ್ಲಿರುವ ಯೂನಿವರ್ಸಿಟಿ ಕ್ಯಾಂಪಸ್​ನ ಮೌಲಾನ ಆಜಾದ್ ಲೈಬ್ರರಿ ಪ್ರದೇಶದಲ್ಲಿ ಬುಧವಾರ ರಾತ್ರಿ 9 ಗಂಟೆಗೆ ಈ ಘಟನೆ ನಡೆದಿದೆ. ಈ ಹತ್ಯೆಗೈದ ಹಂತಕರು ಯಾರೆಂದು ಗೊತ್ತಾಗಿಲ್ಲ. ದಾನಿಶ್ ಅಲಿ ಅವರು ತಮ್ಮ ಇಬ್ಬರು ಸಹೋದ್ಯೋಗಿಗಳೊಂದಿಗೆ ಮೌಲಾನ…

Read More

ದೆಹಲಿಯ ಕ್ಯಾಥೆಡ್ರಲ್ ಚರ್ಚ್​ನಲ್ಲಿ ಕ್ರಿಸ್ಮಸ್ ಪ್ರಾರ್ಥನೆಯಲ್ಲಿ ಭಾಗವಹಿಸಿದ ಪ್ರಧಾನಿ ಮೋದಿ – Kannada News | PM Narendra Modi Attends Christmas Prayer at Cathedral Church of the Redemption in Delhi

ನವದೆಹಲಿ, ಡಿಸೆಂಬರ್ 25: ಕ್ರಿಸ್‌ಮಸ್ ಹಬ್ಬದ ಸಂದರ್ಭದಲ್ಲಿ ದೆಹಲಿಯ ‘ಕ್ಯಾಥೆಡ್ರಲ್ ಚರ್ಚ್ ಆಫ್ ದಿ ರಿಡೆಂಪ್ಶನ್‌’ನಲ್ಲಿ ನಡೆದ ಸಾಮೂಹಿಕ ಪ್ರಾರ್ಥನೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಿದರು. ಈ ಕಾರ್ಯಕ್ರಮದಲ್ಲಿ ಪ್ರಾರ್ಥನೆ, ಸ್ತುತಿಗೀತೆಗಳು ಮೊಳಗಿದವು. ದೆಹಲಿಯ ಬಿಷಪ್ ಡಾ. ಪಾಲ್ ಸ್ವರೂಪ್ ಪ್ರಧಾನ ಮಂತ್ರಿಯವರಿಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಕ್ರಿಸ್‌ಮಸ್ ಹೊಸ ಭರವಸೆ ಹಾಗೂ ಎಲ್ಲರಲ್ಲಿ ದಯಾಪರತೆ ಮೂಡಿಸಲಿ. ದಯೆಗೆ ಹಂಚಿಕೆಯ ಬದ್ಧತೆಯನ್ನು ತರಲಿ. ‘ಕ್ಯಾಥೆಡ್ರಲ್ ಚರ್ಚ್ ಆಫ್ ದಿ ರಿಡೆಂಪ್ಶನ್‌’ನಲ್ಲಿ ಭಾಗವಹಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ…

Read More