Headlines

ಟಿಮ್ ಡೇವಿಡ್ ತೂಫಾನ್​ಗೆ ಕನ್ನಡಿಗನ ದಾಖಲೆ ಧೂಳೀಪಟ!

IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ ಇತಿಹಾಸದಲ್ಲೇ ಡೆತ್ ಓವರ್​ಗಳಲ್ಲಿ ಅತ್ಯಧಿಕ ರನ್ ಚಚ್ಚಿದ ಭರ್ಜರಿ ದಾಖಲೆ ಟಿಮ್ ಡೇವಿಡ್ (Tim David) ಹೆಸರಿಗೆ ಸೇರ್ಪಡೆಯಾಗಿದೆ. ಐದು ವರ್ಷಗಳ ಹಿಂದೆ ಕನ್ನಡಿಗ ಕೆಎಲ್ ರಾಹುಲ್ ಬರೆದಿಟ್ಟಿದ್ದ ದಾಖಲೆಯನ್ನು ಅಳಿಸಿ ಹಾಕುವ ಮೂಲಕ ಟಿಮ್ ಡೇವಿಡ್ ಈ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಐಪಿಎಲ್​ನ 11ನೇ ಪಂದ್ಯದಲ್ಲಿ 5ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಟಿಮ್ ಡೇವಿಡ್ ತೂಫಾನ್ ಬ್ಯಾಟಿಂಗ್ ಪ್ರದರ್ಶಿಸಿದ್ದರು. ಕೇವಲ 25 ಎಸೆತಗಳನ್ನು ಎದುರಿಸಿದ…

Read More

ಏಪ್ರಿಲ್ 22ರ ವರೆಗೆ ಈ ರಾಶಿಯಲ್ಲಿ ಶುಕ್ರನ ಸಂಚಾರ: ನೀವು ಮಾಡುವ ಒಂದು ಕೆಲಸಕ್ಕೆ ಹತ್ತು ಫಲ

ಮಾರ್ಚ್ 25ರಿಂದ ಏಪ್ರಿಲ್ 22 ರ ವರೆಗೆ ಶುಕ್ರನು ಮೇಷ ರಾಶಿಯಲ್ಲಿ ಸಂಚರಿಸುವನು. ಈ ಸಮಯದಲ್ಲಿ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಗ್ರಹಗಳು ತಾವು ನಿಂತಿರುವ ರಾಶಿ, ತಮ್ಮ ಸ್ವಕ್ಷೇತ್ರಗಳು ಮತ್ತು ತಮ್ಮ ದೃಷ್ಟಿ ಬೀರುವ ರಾಶಿಗಳ ಮೇಲೆ ವಿಶಿಷ್ಟ ಪ್ರಭಾವ ಬೀರುತ್ತವೆ. ಮೇಷ ರಾಶಿಯ ರವಿ ದ್ರೇಕ್ಕಾಣದಲ್ಲಿ ಶುಕ್ರನು ಸ್ಥಿತನಾಗಿದ್ದರೆ, ಆತ ದೃಢತೆ ಮತ್ತು ಕ್ರಿಯಾಶೀಲತೆಯನ್ನು ಹೊಂದಿರುತ್ತಾನೆ. ​ಈ ಸ್ಥಿತಿಯಲ್ಲಿ ಶುಕ್ರನು ನೀಡುವ ವಿಶೇಷವಾದುದು. ಮೇಷದಲ್ಲಿರುವ ಶುಕ್ರ: ಈ ರಾಶಿ ಮಂಗಳನ ಮನೆ. ಇಲ್ಲಿ ಶುಕ್ರನು ರವಿ…

Read More

CSK ಹೆಸರಿಗೆ ವಿಶ್ವ ದಾಖಲೆ… RCB ಪಾಲಿಗೆ ಹೀನಾಯ ದಾಖಲೆ

IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ನ 11ನೇ ಪಂದ್ಯದಲ್ಲಿ ಬರೋಬ್ಬರಿ 30 ಸಿಕ್ಸರ್​ಗಳು ಮೂಡಿಬಂದಿವೆ. ಈ ಮೂವತ್ತು ಸಿಕ್ಸರ್​ಗಳಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ 19 ಸಿಕ್ಸ್ ಬಾರಿಸಿದರೆ, ಚೆನ್ನೈ ಸೂಪರ್ ಕಿಂಗ್ಸ್ (CSK) ಕೇವಲ 11 ಸಿಕ್ಸ್ ಸಿಡಿಸಿದ್ದರು. ಇದಾಗ್ಯೂ ಸಿಎಸ್​ಕೆ ತಂಡದ ಹೆಸರಿಗೆ ವಿಶೇಷ ವಿಶ್ವ ದಾಖಲೆ ಸೇರ್ಪಡೆಯಾಗಿದೆ. ಹೌದು, ಟಿ20 ಕ್ರಿಕೆಟ್ ಇತಿಹಾಸದಲ್ಲೇ ಇನಿಂಗ್ಸ್​ವೊಂದರಲ್ಲಿ 9 ಬ್ಯಾಟರ್​ಗಳು ಸಿಕ್ಸ್​ ಸಿಡಿಸಿದ ವಿಶ್ವ ದಾಖಲೆಯೊಂದನ್ನು ಚೆನ್ನೈ ಸೂಪರ್ ಕಿಂಗ್ಸ್ ತನ್ನದಾಗಿಸಿಕೊಂಡಿದೆ. ಅಂದರೆ ಆರ್​ಸಿಬಿ…

Read More

ಸಾವಿನಲ್ಲೂ ಒಂದಾದ ಯುವ ದಂಪತಿ! ಪತ್ನಿಯ ಸಾವಿನ ದಿನವೇ ರಸ್ತೆ ಅಪಘಾತದಲ್ಲಿ ಪ್ರಾಣಬಿಟ್ಟ ಪತಿ

ಬೆಳಗಾವಿ, ಏಪ್ರಿಲ್ 06: ಜಿಲ್ಲೆಯಲ್ಲಿ ಒಂದೇ ದಿನ ಪತಿ-ಪತ್ನಿ (Husband and wife death) ಸಾವನ್ನಪ್ಪಿರುವ ಘಟನೆ ನಡೆದಿದ್ದು, ದಂಪತಿಯ ಮೂವರು ಮಕ್ಕಳು ಅನಾಥರಾಗಿದ್ದಾರೆ. ಪತ್ನಿ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ವಿಷಯ ತಿಳಿದ ಪತಿ, ಬೈಕ್​ನಲ್ಲಿ ಬರುವಾಗ ಅಪಘಾತಕ್ಕೀಡಾಗಿದ್ದು, ದಾರುಣವಾಗಿ ಸಾವನ್ನಪ್ಪಿದ್ದಾನೆ. ಹೊಟ್ಟೆನೋವಿನಿಂದ ಬಳಲುತ್ತಿದ್ದ ಪತ್ನಿ ಬೈಲಹೊಂಗಲ ತಾಲೂಕಿನ ಅರವಳ್ಳಿ ಗ್ರಾಮದ ಕರೆಪ್ಪ (36) ಹಾಗೂ ಅವರ ಪತ್ನಿ ಮಧುರಾ (30) ಮೃತ ದಂಪತಿ. ಹಲವು ವರ್ಷಗಳಿಂದ ಹೊಟ್ಟೆನೋವಿನಿಂದ ಬಳಲುತ್ತಿದ್ದ ಮಧುರಾ, ನೋವು ತಾಳಲಾರದೆ ಕ್ರಿಮಿನಾಶಕ…

Read More

ಬಣ್ಣದ ಮಾತಿಗೆ ಮರುಳಾದ ಯುವತಿ ಬದುಕು ಬರಡು: ಅಶ್ಲೀಲ ವಿಡಿಯೋ ಇಟ್ಟುಕೊಂಡು 19 ಲಕ್ಷ ರೂ. ಲೂಟಿ

ಬೆಳಗಾವಿ, ಏ.6 : ಬೆಳಗಾವಿಯ ಶಹಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅತ್ಯಂತ ಅಮಾನವೀಯ ವಂಚನೆ ಪ್ರಕರಣವೊಂದು ಬೆಳಕಿಗೆ ಬಂದಿದೆ. ಪ್ರೀತಿ ಹಾಗೂ ಮದುವೆಯ ಹೆಸರಿನಲ್ಲಿ ಯುವತಿಯನ್ನು ನಂಬಿಸಿ, ಅಶ್ಲೀಲ ವಿಡಿಯೋ ಚಿತ್ರೀಕರಿಸಿ ಲಕ್ಷಾಂತರ ರೂಪಾಯಿ ಹಣ ಹಾಗೂ ಚಿನ್ನಾಭರಣ ಲೂಟಿ ಮಾಡಿದ ಆರೋಪ ಕೇಳಿಬಂದಿದೆ. ಬೆಳಗಾವಿಯ ಮಾಧವಾ ಕಾಲೋನಿ ನಿವಾಸಿ ಈಶ್ವರಸಿಂಗ್ ಪ್ರೇಮಸಿಂಗ್ ಬಡಗೂಜರ್ ಎಂಬಾತನೇ ಈ ವಂಚನೆಯ ಸೂತ್ರಧಾರ ಎನ್ನಲಾಗಿದೆ. ಫೇಸ್‌ಬುಕ್ ಮೂಲಕ ಯುವತಿಯ ಪರಿಚಯ ಮಾಡಿಕೊಂಡಿದ್ದ ಈತ, ಬಳಿಕ ಅದನ್ನು ಪ್ರೀತಿಗೆ ತಿರುಗಿಸಿದ್ದಾನೆ. ಮದುವೆಯಾಗುವುದಾಗಿ…

Read More

ಬೆಂಕಿ ಬೌಲಿಂಗ್: ಒಂದೇ ಒಂದು ಬೌಂಡರಿ ಹೊಡೆಸಿಕೊಳ್ಳದ ಶಮಿ!

ಇಂಡಿಯನ್ ಪ್ರೀಮಿಯರ್ ಲೀಗ್​ನ 10ನೇ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ವೇಗಿ ಮೊಹಮ್ಮದ್ ಶಮಿ ಮಾರಕ ದಾಳಿ ಸಂಘಟಿಸಿದ್ದಾರೆ. ಬಲಿಷ್ಠ ಬ್ಯಾಟಿಂಗ್ ಲೈನಲ್ ಹೊಂದಿರುವ ಸನ್​ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ 4 ಓವರ್ ಎಸೆದ ಶಮಿ ನೀಡಿದ್ದು ಕೇವಲ 9 ರನ್​ಗಳು ಮಾತ್ರ. ಇದರ ನಡುವೆ 2 ವಿಕೆಟ್​ಗಳನ್ನು ಸಹ ಕಬಳಿಸಿದ್ದಾರೆ. ವಿಶೇಷ ಎಂದರೆ ಮೊಹಮ್ಮದ್ ಶಮಿ ತಮ್ಮ 24 ಎಸೆತಗಳಲ್ಲಿ ಒಂದೇ ಒಂದು ಬೌಂಡರಿ ಹೊಡೆಸಿಕೊಂಡಿಲ್ಲ. ಅಂದರೆ ಶಮಿ ಓವರ್​ನಲ್ಲಿ ಫೋರ್ ಅಥವಾ ಸಿಕ್ಸ್…

Read More

‘ಜೈ ಹನುಮಾನ್’ ಸಿನಿಮಾ ಶೂಟ್ ಆರಂಭಕ್ಕೂ ಮೊದಲೇ ಮಹತ್ವದ ಬದಲಾವಣೆ

ರಿಷಬ್ ಶೆಟ್ಟಿ ಅವರು ‘ಕಾಂತಾರ’ ಸಿನಿಮಾ ಬಳಿಕ, ‘ಕಾಂತಾರ: ಚಾಪ್ಟರ್ 1’ ಮಾಡಿದರು. ಈ ಎರಡೂ ಸಿನಿಮಾಗಳು ಅವರನ್ನು ಪ್ಯಾನ್ ಇಂಡಿಯಾ ಮಟ್ಟಕ್ಕೆ ಕರೆದುಕೊಂಡು ಹೋಗಿದೆ. ಈ ಸಿನಿಮಾಗಳಲ್ಲಿ ನಟಿಸೋದು ಮಾತ್ರವಲ್ಲ, ನಿರ್ದೇಶನ ಕೂಡ ಅವರದ್ದೇ. ಸದ್ಯ ರಿಷಬ್ ಅವರು ನಿರ್ದೇಶನದಿಂದ ಬ್ರೇಕ್ ಪಡೆದಿದ್ದು, ‘ಜೈ ಹನುಮಾನ್’ (Jai Hanuman) ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಈ ಚಿತ್ರ ಸೆಟ್ಟೇರಿ ಹಲವು ದಿನ ಕಳೆದ ಬಳಿಕ ಸಿನಿಮಾದಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದೆ. ‘ಜೈ ಹನುಮಾನ್’ ಚಿತ್ರಕ್ಕೆ ಫೆಬ್ರವರಿಯಲ್ಲಿ ಮುಹೂರ್ತ ನೆರವೇರಿದೆ….

Read More

ಮದುವೆ ಮುಗಿದ ಮೇಲೆ ಮಗಳನ್ನು ಗಂಡನ ಮನೆಗೆ ಕಳಿಸಲ್ಲ ಎಂದು ಮದುವೆ ಮುರಿದ ತಂದೆ, ಅಂಥದ್ದೇನಾಯ್ತು?

ಮೊರಾದಾಬಾದ್, ಏಪ್ರಿಲ್ 06: ಅಂದು ಮನೆಯಲ್ಲಿ ಎರಡೆರಡು ಮದುವೆ(Marriage), ಮನೆಯ ತುಂಬಾ ನೆಂಟರಿಷ್ಟರು ತುಂಬಿದ್ದರು. ಎಲ್ಲಾ ವಿಧಿ ವಿಧಾನಗಳು ಚೆನ್ನಾಗಿಯೇ ನಡೆಯುತ್ತಿತ್ತು. ಆದರೆ ಮದುವೆಯಲ್ಲಾ ಮುಗಿದ ಬಳಿಕ ತಂದೆ ಮಗಳನ್ನು ವರನ ಜತೆ ಕಳುಹಿಸಲು ನಿರಾಕರಿಸಿದ್ದಷ್ಟೇ ಅಲ್ಲದೆ ಈ ಮದುವೆ ಮುರಿದಿದ್ದಾರೆ. ಈ ಘಟನೆ ಉತ್ತರ ಪ್ರದೇಶದ ಮೊರಾದಾಬಾದ್​ನಲ್ಲಿ ನಡೆದಿದೆ. ಅಂದು ಎರಡು ವಿವಾಹಗಳು ನೆರವೇರಿದ್ದವು. ಮದುವೆಯ ವಿಧಿ ವಿಧಾನಗಳು ಮುಗಿದಿದ್ದವು. ಆದರೆ ತಂದೆ ವಧುವನ್ನು ಬೀಳ್ಕೊಡಲು ನಿರಾಕರಿಸಿದ್ದಾರೆ. ವರನ ತಪ್ಪಿನಿಂದಾಗಿ ಮದುವೆ ಮೆರವಣಿಗೆ ವಧು ಇಲ್ಲದೆ…

Read More

Video: ಚಿಂತೆಯಿಲ್ಲದ ಬಾಲ್ಯ; ಅಡುಗೆಯಾಟ ಆಡಿ ಸಂಭ್ರಮಿಸಿದ ಪುಟಾಣಿಗಳು

ಈಗಿನ ಮಕ್ಕಳಿಗೆ (children) ಮೊಬೈಲ್ ಬಿಟ್ಟರೆ ಬೇರೆ ಪ್ರಪಂಚವೇ ಇಲ್ಲ ಎನ್ನುವಂತಾಗಿದೆ. ಆದರೆ ನಾವು ಸಣ್ಣವರು ಇದ್ದಾಗ ಆಡುತ್ತಿದ್ದ ಅದೆಷ್ಟೋ ಆಟಗಳ ಬಗ್ಗೆ ಈಗಿನ ಮಕ್ಕಳಿಗೆ ತಿಳಿದೇ ಇಲ್ಲ. ಅಂದು ಶಾಲೆ ಬಿಟ್ಟ ಕೂಡಲೇ ಮನೆಗೆ ಬಂದು ನಾನಾ ರೀತಿಯ ಆಟವನ್ನು ಆಡುತ್ತಿದ್ದ ಕಾಲವೊಂದಿತ್ತು. ಸೊಪ್ಪಾಟ, ಚೊಂಕಾಟ, ಕೆರೆದಡ, ಹುಲಿದನ ಹಾಗೂ ಅಡುಗೆಯಾಟ ಹೀಗೆ ನಾನಾ ರೀತಿಯ ಆಟವಾಡಿ ಖುಷಿ ಪಡುತ್ತಿದ್ದೆವು. ಹೆಣ್ಣು ಮಕ್ಕಳಿಗೆ ಅಡುಗೆಯಾಟವೇ ಮೆಚ್ಚಿನ ಆಟವಾಗಿತ್ತು. ಎಲೆ, ಸೊಪ್ಪು, ಮಣ್ಣು ಹೀಗೆ ಸಿಕ್ಕ ಸಿಕ್ಕ…

Read More

Karnataka 2nd PUC Result 2026: ದ್ವಿತೀಯ ಪಿಯುಸಿ ಫಲಿತಾಂಶ ಘೋಷಣೆಗೆ ಮುಹೂರ್ತ ಫಿಕ್ಸ್? ಇಲ್ಲಿದೆ ಫಲಿತಾಂಶ ನೋಡುವ ಸುಲಭ ವಿಧಾನ

ಬೆಂಗಳೂರು, ಏ.6: ಭಾರೀ ಕಾತುರದಿಂದ ಕಾಯುತ್ತಿದ್ದ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗುವ ದಿನ ಬಂದಿದೆ, ನಾಳೆ ದ್ವಿತೀಯ ಪಿಯುಸಿ ಫಲಿತಾಂಶ ಘೋಷಣೆ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಈ ಬಗ್ಗೆ ಅಧಿಕೃತ ಮಾಹಿತಿ ಬಂದಿಲ್ಲ. ಫೆಬ್ರವರಿ 28 ರಿಂದ ಮಾರ್ಚ್ 17 ರವರೆಗೆ ದ್ವಿತೀಯ ಪಿಯುಸಿ ಪರೀಕ್ಷೆಯನ್ನು ನಡೆಸಲಾಗಿತ್ತು. ಏಪ್ರಿಲ್ 7, 2026 ರಂದು ಅಂದರೆ ನಾಳೆ ಫಲಿತಾಂಶಗಳನ್ನು ಪ್ರಕಟಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿದೆ. ಇನ್ನು ಪ್ರಕಟ ಆಗುವ ಫಲಿತಾಂಶವನ್ನು ನೋಡುವುದು ಹೇಗೆ ಎಂಬ…

Read More