ಇದೇ ಮೊದಲ ಬಾರಿಗೆ ಜೈಲಿನಲ್ಲಿ ಹೊಸ ರೂಲ್ಸ್: ದರ್ಶನ್ ಸೇರಿದಂತೆ ಇತರೆ ಕೈದಿಗಳಿಗೆ ವಿಶೇಷ ಸೌಲಭ್ಯಕ್ಕೆ ಬ್ರೇಕ್ – Kannada News | First time regulations framed regarding providing food, bedding clothes to the Under Trial And Civil prisoners In Karnataka Jails
ಬೆಂಗಳೂರು, (ಜನವರಿ 24): ಜೈಲಿನಲ್ಲಿರುವ ವಿಚಾರಣಾಧೀನ ಆರೋಪಿಗಳಿಗೆ ಒದಗಿಸುವ ಸೌಕರ್ಯಗಳ ಕುರಿತು ಕಾರಾಗೃಹ ಮತ್ತು ಸುಧಾರಣಾ ಸೇವೆಯ ಡಿಜಿಪಿ ಅಲೋಕ್ ಕುಮಾರ್ (Alok Kumar) ಮಹತ್ವದ ಸುತ್ತೋಲೆ ಹೊರಡಿಸಿದ್ದು, ಕೈದಿಗಳಿಗೆ ಆಹಾರ, ಬಟ್ಟೆ, ಹಾಸಿಗೆ ಸರಬರಾಜು ನಿಯಂತ್ರಣಕ್ಕೆ ಕ್ರಮವಹಿಸುವಂತೆ ರಾಜ್ಯ ಎಲ್ಲಾ ಜೈಲಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಕಾರಾಗೃಹ ಡಿಜಿಪಿ ಅವರ ಹೊಸ ಆದೇಶದಿಂದಾಗಿ ಕೊಲೆ ಆರೋಪದಲ್ಲಿ ಜೈಲಲ್ಲಿರುವ ದರ್ಶನ್ (Darshan) ಹೆಚ್ಚುವರಿ ಬ್ಲಾಂಕೆಟ್ ಸೌಲಭ್ಯಕ್ಕೆ ಕುತ್ತು ಎದುರಾಗಿದೆ. ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ಪವಿತ್ರಾ ಗೌಡ ಮತ್ತು…