Headlines

ಡೊನಾಲ್ಡ್​ ಟ್ರಂಪ್ ಇರುವಾಗಲೇ ಶ್ವೇತಭವನದ ಸಮೀಪ ಗುಂಡಿನ ದಾಳಿ

ವಾಷಿಂಗ್ಟನ್, ಏಪ್ರಿಲ್ 06: ಅಮೆರಿಕದ ರಾಜಧಾನಿ ವಾಷಿಂಗ್ಟನ್ ಡಿಸಿಯಲ್ಲಿರುವ ಶ್ವೇತಭವನ(White House)ದ ಬಳಿ ಗುಂಡಿನ ಚಕಮಕಿ ನಡೆದಿದೆ. ಆ ಸಮಯದಲ್ಲಿ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ಶ್ವೇತಭವನದೊಳಗೆ ಇದ್ದರು ಎನ್ನುವ ಮಾಹಿತಿ ಲಭ್ಯವಾಗಿದೆ. ಈ ಘಟನೆಯ ಬಳಿಕ ಭದ್ರತಾ ಸಂಸ್ಥೆಗಳನ್ನು ಹೆಚ್ಚಿನ ಎಚ್ಚರಿಕೆ ನೀಡಲಾಗಿದೆ. ಭಾನುವಾರ ಮುಂಜಾನೆ ಶ್ವೇತಭವನದ ಎದುರಿನ ಲಫಯೆಟ್ಟೆ ಪಾರ್ಕ್ ಬಳಿ ಗುಂಡಿನ ದಾಳಿ ನಡೆದಿದೆ. ಗುಂಡಿನ ದಾಳಿಯಲ್ಲಿ ಯಾರೂ ಗಾಯಗೊಂಡಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಬಂದೂಕುಧಾರಿ ತಲೆಮರೆಸಿಕೊಂಡಿದ್ದಾನೆ ಮತ್ತು ಪ್ರಸ್ತುತ ಆತನಿಗಾಗಿ ಹುಡುಕಾಟ…

Read More

RCB vs CSK: ಸಂಜು ಬಗ್ಗೆ ಒಂದೂ ಮಾತನಾಡದ ರುತುರಾಜ್: ಆರ್​​ಸಿಬಿ ವಿರುದ್ಧದ ಸೋಲಿಗೆ ದೂರಿದ್ದು ಯಾರನ್ನು?

ಬೆಂಗಳೂರು (ಏ. 06): ಇಂಡಿಯನ್ ಪ್ರೀಮಿಯರ್ ಲೀಗ್ 2026ರ ಭಾನುವಾರದ ಪಂದ್ಯ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದಿದ್ದು, ಇದರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bengaluru) ತಂಡ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು 43 ರನ್‌ಗಳಿಂದ ಸೋಲಿಸಿತು. ಈ ಮೂಲಕ ಆರ್​​ಸಿಬಿ ಟೂರ್ನಿಯಲ್ಲಿ ಸತತ ಎರಡನೇ ಜಯ ಕಂಡು ಪಾಯಿಂಟ್ಸ್ ಟೇಬಲ್​ನಲ್ಲಿ ಅಗ್ರಸ್ಥಾನಕ್ಕೇರಿದೆ. ಅತ್ತ ಸಿಎಸ್​​ಕೆ ಈ ಋತುವಿನಲ್ಲಿ ಸತತ ಮೂರನೇ ಸೋಲನ್ನು ಅನುಭವಿಸಿತು. 251 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಚೆನ್ನೈ 19.4 ಓವರ್‌ಗಳಲ್ಲಿ 207…

Read More

18 ವರ್ಷಗಳ ಇತಿಹಾಸವನ್ನೇ ಬದಲಿಸಿದ RCB ದಾಂಡಿಗರು

IPL 2026: ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ದಾಂಡಿಗರು ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ಹೊಸ ಇತಿಹಾಸ ಬರೆದಿದೆ. ಅದು ಕೂಡ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡದ ವಿರುದ್ಧ ಪ್ರಚಂಡ ಬ್ಯಾಟಿಂಗ್ ಪ್ರದರ್ಶಿಸುವ ಮೂಲಕ.  ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಐಪಿಎಲ್​ನ 11ನೇ ಪಂದ್ಯದಲ್ಲಿ ಟಾಸ್ ಗೆದ್ದ ಸಿಎಸ್​ಕೆ ತಂಡವು ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ್ದರು. ಈ ಸಿಡಿಲಬ್ಬರದ ಬ್ಯಾಟಿಂಗ್​ನೊಂದಿಗೆ ಆರ್​ಸಿಬಿ ದಾಂಡಿಗರು…

Read More

Horoscope Today: ಇಂದು ಈ ರಾಶಿಯವರು ಇನ್ನೊಬ್ಬರಿಗೆ ಸಾಲ ಕೊಡುವಾಗ ಎಚ್ಚರ!

ಟಿವಿ9​​ ಡಿಜಿಟಲ್ ವಾಹಿನಿಯಲ್ಲಿ ಪ್ರಸಾರವಾದ ದಿನಭವಿಷ್ಯ ಕಾರ್ಯಕ್ರಮದಲ್ಲಿ ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಅವರು ಏಪ್ರಿಲ್ 6, ಸೋಮವಾರದ ದ್ವಾದಶ ರಾಶಿಗಳ ಫಲಾಫಲಗಳನ್ನು ವಿವರಿಸಿದ್ದಾರೆ. ಈ ದಿನ ಪರಾಭವ ನಾಮ ಸಂವತ್ಸರ, ಉತ್ತರಾಯಣ, ಚೈತ್ರ ಮಾಸ, ವಸಂತ ಋತು, ಶುಕ್ಲ ಪಕ್ಷ, ಚೌತಿ ತಿಥಿಯಾಗಿದೆ. ಇಂದು ಡಾ. ಬಸವರಾಜ ಗುರೂಜಿಯವರು ಪ್ರತಿ ರಾಶಿಯವರಿಗೂ ಆರೋಗ್ಯ, ಆರ್ಥಿಕ ಸ್ಥಿತಿ, ಉದ್ಯೋಗ, ವ್ಯಾಪಾರ, ಕುಟುಂಬ ಮತ್ತು ವೈಯಕ್ತಿಕ ಸಂಬಂಧಗಳ ಕುರಿತು ವಿವರವಾದ ಸಲಹೆಗಳನ್ನು ನೀಡಿದ್ದಾರೆ.      …

Read More

Daily Devotional: ಯಾವ ಹುತ್ತಕ್ಕೆ ಹಾಲೆರೆಯಬೇಕು, ಯಾವ ಹುತ್ತಕ್ಕೆ ಪೂಜೆ ಮಾಡಬೇಕು?

ಟಿವಿ9​​ ನಿತ್ಯ ಭಕ್ತಿ ಕಾರ್ಯಕ್ರಮದಲ್ಲಿ ಯಾವ ಹುತ್ತಕ್ಕೆ ಹಾಲೆರೆಯಬೇಕು, ಯಾವ ಹುತ್ತಕ್ಕೆ ಪೂಜೆ ಮಾಡಬೇಕು ಎಂದು ಡಾ.ಬಸವರಾಜ ಗುರೂಜಿ ವಿವರಿಸಿದ್ದಾರೆ.ಹುತ್ತಕ್ಕೆ ಹಾಲೆರೆಯುವುದು, ನೈವೇದ್ಯ ಅರ್ಪಿಸುವುದು ಸಾಮಾನ್ಯ ಆಚರಣೆಗಳು. ಹುತ್ತಗಳಲ್ಲಿ ಎರಡು ಮುಖ್ಯ ವಿಧಗಳಿವೆ: ದೊಡ್ಡ ಕಿಂಡಿಗಳನ್ನು ಹೊಂದಿರುವ ಹುತ್ತಗಳನ್ನು ಹೆಣ್ಣು ಹುತ್ತ ಎಂದೂ, ಗೋಪುರದ ಆಕಾರದಲ್ಲಿ ಬೆಳೆಯುವ ಹುತ್ತಗಳನ್ನು ಗಂಡು ಹುತ್ತ ಎಂದೂ ಪರಿಗಣಿಸಲಾಗುತ್ತದೆ. ವಾಲ್ಮೀಕಿ ಮಹರ್ಷಿಗಳು ಹುತ್ತದಲ್ಲಿ ತಪಸ್ಸು ಮಾಡಿದ ಕಾರಣ ಅವರಿಗೆ ವಾಲ್ಮೀಕಿ ಎಂಬ ಹೆಸರು ಬಂತು ಎಂಬ ನಂಬಿಕೆಯಿದೆ. ನಾಗದೋಷ ನಿವಾರಣೆ, ಸಂತಾನ…

Read More

ರಿಷಿಕೇಷದ ಗಂಗಾ ತಟದಲ್ಲಿ ವಿವಾಹ ಆದ ‘ಮನದ ಕಡಲು’ ಹೀರೋ; ಇಲ್ಲಿವೆ ಸುಂದರ ಫೋಟೋಗಳು

ಕನ್ನಡದ ಯುವ ನಟ ಸುಮುಖ್ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಆರ್ಕಿಟೆಕ್ಟ್ ಮೈತ್ರಿ ಉಕಾ ಎಂಬುವವರ ಜೊತೆ ಸುಮುಖ್ ವಿವಾಹ ನಡೆದಿದೆ ಎಂಬುದು ವಿಶೇಷ. ಸೆಲೆಬ್ರಿಟಿಗಳು, ಉದ್ಯಮಿಗಳು ಸಾಮಾನ್ಯವಾಗಿ ಡೆಸ್ಟಿನೇಷನ್ ವಿವಾಹ ಆಗೋಕೆ ಇಷ್ಟಪಡುತ್ತಾರೆ. ಇದಕ್ಕೆ ಸುಮುಖ್ ಕೂಡ ಹೊರತಾಗಿಲ್ಲ. ಅವರು ತಮ್ಮ ಕನಸಿನಂತೆ ಮದುವೆ ಆಗಿದ್ದಾರೆ. ಸಾಮಾನ್ಯವಾಗಿ ಸೆಲೆಬ್ರಿಟಿ ವಿವಾಹ ಎಂದಾಗ ನೆನಪಾಗೋದು ರಾಜಸ್ಥಾನ. ಉದಯಪುರದಲ್ಲಿ ಸೆಲೆಬ್ರಿಟಿಗಳು ಮದುವೆ ಆಗುತ್ತಾರೆ. ಆದರೆ, ಇವರು ಮದುವೆ ಆಗಿದ್ದು ರಿಷಿಕೇಷದಲ್ಲಿ ಎಂಬುದು ವಿಶೇಷ. ರಿಷಿಕೇಷದಲ್ಲಿ ಗಂಗಾ ನದಿ ಹರಿದು…

Read More

ಕಿಲೋಮೀಟರ್‌ಗೆ ಕೇವಲ 50 ಪೈಸೆ ಖರ್ಚು! ಎಲ್‌ಪಿಜಿ ಬೆಲೆ ಏರಿಕೆ ನಡುವೆ ಗಮನ ಸೆಳೆಯುತ್ತಿದೆ ಎಲೆಕ್ಟ್ರಿಕ್ ಆಟೋಗಳ ಮ್ಯಾಜಿಕ್

ಬೆಂಗಳೂರು, ಏ.6: ದೇಶದಲ್ಲಿ ಗ್ಯಾಸ್​​ ಕೊರತೆಗಳು ಹೆಚ್ಚಾಗಿದೆ. ಇರಾನ್, ಇಸ್ರೇಲ್​​​, ಅಮೆರಿಕ ಯುದ್ದದಿಂದ ಜಗತ್ತು ಸಂಕಷ್ಟಕ್ಕೆ ಸಿಲುಕಿದೆ. ಇದರ ಪರಿಣಾಮ ಭಾರತದಲ್ಲೂ ಕಂಡು ಬಂದಿದೆ. ಇನ್ನು ಬೆಂಗಳೂರಿನಲ್ಲಿ ಈ ಸಮಸ್ಯೆಯ ಬಗ್ಗೆ ಕೇಳುವುದೇ ಬೇಡ. ಅದರಲ್ಲೂ ಆಟೋ ಚಾಲಕರು ಇದರಿಂದ ಭಾರೀ ಸಂಕಷ್ಟಕ್ಕೆ ಒಳಗಾಗಿದ್ದಾರೆ. ದಿನ ಪೂರ್ತಿ, ಆಟೋಗೆ ಗ್ಯಾಸ್​​ ಹಾಕಲು ಕ್ಯೂ ನಿಲ್ಲಬೇಕು. ಅದು ಕೂಡ ಸಿಗುತ್ತದೆ ಎಂಬ ಗ್ಯಾರಂಟಿ ಇಲ್ಲ. ಬೆಂಗಳೂರಿನ ಜೀವನನಾಡಿ ಎನಿಸಿರುವ ಆಟೋ ರಿಕ್ಷಾ ಚಾಲಕರು ಇದೀಗ ಭೀಕರ ಎಲ್‌ಪಿಜಿ ಅಭಾವದಿಂದ…

Read More

ಹುಬ್ಬಳ್ಳಿಯಲ್ಲಿ ಲವ್​​​ ಜಿಹಾದ್​ ಪ್ರಕರಣ: ಸಮೀರ್ ಲೀಲೆಗಳು ಒಂದೊಂದಾಗಿ ಬಯಲು: ಮತ್ತೊಂದು ವಿಡಿಯೋ ವೈರಲ್

ಹುಬ್ಬಳ್ಳಿ, ಏ.6: ಹುಬ್ಬಳ್ಳಿ ಲವ್​​​ ಜಿಹಾದ್​ ಪ್ರಕರಣಕ್ಕೆ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಸಮೀರ್ ಲೀಲೆಗಳು ಒಂದೊಂದಾಗಿ ಬಯಲು ಆಗುತ್ತಿದೆ. ಜಿಮ್​​​​ ಟ್ರೈನರ್​ ಮಾಡಿದ ಒಂದೊಂದು ಕಹಾನಿಯ ಬಗ್ಗೆ ದಿನಕ್ಕೊಂದು ಹುಡುಗಿಯರು ಬಂದು ದೂರು ನೀಡುತ್ತಿದ್ದಾರೆ. ಇದೀಗ ಮತ್ತೊಂದು ಹುಡುಗಿ ಬಂದು ದೂರು ನೀಡಿದ್ದಾರೆ. ಈ ಬಗ್ಗೆ ಸಂಪೂರ್ಣ ವರದಿ ಇಲ್ಲಿದೆ ನೋಡಿ. ಇದರ ಜತೆಗೆ ಈಗಾಗಲೇ ದೂರು ನೀಡಿರುವ ಸಂತ್ರಸ್ತ ಯುವತಿಯನ್ನು ತನ್ನ ಐಷಾರಾಮಿ ಜೀವನಕ್ಕಾಗಿ ‘ಎಟಿಎಂ’ ತರಹ ಬಳಸಿಕೊಂಡಿರುವ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ. ಆರೋಪಿ…

Read More

ಭವಿಷ್ಯದ ಕನಸು ಕಂಡಿದ್ದ 71 ಜನ ಸಮುದ್ರಪಾಲು: 32 ಜನರ ರಕ್ಷ ಣೆ

ರೋಮ್, ಏ.6: ಭವಿಷ್ಯದ ಕನಸು ಹೊತ್ತು ಸಮುದ್ರ ಮಾರ್ಗದ ಮೂಲಕ ಯುರೋಪ್ ತಲುಪಲು ಯತ್ನಿಸುತ್ತಿದ್ದ ವಲಸಿಗರಿಗೆ ಮಹಾಮೃತ್ಯು ಎದುರಾಗಿದೆ. ಇಟಲಿ ಕರಾವಳಿಯಲ್ಲಿ ಸಂಭವಿಸಿದ ಭೀಕರ ಬೋಟ್ ದುರಂತದಲ್ಲಿ 71 ವಲಸಿಗರು ನಾಪತ್ತೆಯಾಗಿದ್ದು, ಸಾವಿನ ಸಂಖ್ಯೆ ಭಾರಿ ಪ್ರಮಾಣದಲ್ಲಿ ಏರಿಕೆಯಾಗುವ ಆತಂಕ ಎದುರಾಗಿದೆ. ಲಿಬಿಯಾದಿಂದ ಯುರೋಪ್‌ಗೆ ಹೊರಟಿದ್ದ ಈ ಬೋಟ್‌ನಲ್ಲಿ ಒಟ್ಟು 105 ಜನರಿದ್ದರು ಎಂದು ಬದುಕುಳಿದವರು ತಿಳಿಸಿದ್ದಾರೆ. ಈಸ್ಟರ್ ರಜಾದಿನಗಳ ಸಂದರ್ಭದಲ್ಲಿ ಈ ಪ್ರಯಾಣವನ್ನು ಮಾಡಲಾತ್ತು. ಸಂತೋಷದಿಂದ ರಜೆ ದಿನವನ್ನು ಕಳೆಯುವ ಎಂದವರಿಗೆ ದೊಡ್ಡ ಅಘಾತವೇ ಕಾಯುತ್ತಿತ್ತು.ಆದರೆ,…

Read More

ದಿನ ಭವಿಷ್ಯ: ಇಂದು ಈ ರಾಶಿಯವರ ಜೊತೆ ಹೇಳಿಕೊಳ್ಳಬೇಕಾದುದನ್ನು ಮುಚ್ಚಿಡುವರು

ಮೇಷ ರಾಶಿ: ಕೆಲಸದಲ್ಲಿರುವ ಅಧಿಕಾರಿಗಳಿಗೆ ನಿಮ್ಮ ಸಲಹೆಯನ್ನು ಕೊಡಲು ಹೋಗಬೇಡಿ. ನೀವು ಸುಲಭವಾಗಿ ಜನರ ವಿಶ್ವಾಸವನ್ನು ಗಳಿಸುವಿರಿ. ನಿಮ್ಮ ಪ್ರಗತಿಗೆ ಹೊಸ ಮಾರ್ಗಗಳು ತೆರೆದುಕೊಳ್ಳುತ್ತವೆ. ನೀವು ವಹಿಸಿಕೊಂಡ ಕಾಮಗಾರಿಯ ವೇಗ ಹೆಚ್ಚಳ. ಆದರೆ ಅದರ ಬಗ್ಗೆ ಸಾಕಷ್ಟು ಯೋಚಿಸಿ ಮುಂದುವರಿಯಿರಿ. ಸ್ವಭಾವವು ಬಹಳ ತೀವ್ರವಾಗಿ ಇರಲಿದೆ. ಯಾರ ಮಾತನ್ನೂ ಕೇಳವ ಸಹನೆ ಇರದು.‌ ಪ್ರತಿಸ್ಪರ್ಧಿಗಳಿಗೆ ಸರಿಯಾದ ಸ್ಪರ್ಧೆಯನ್ನು ಕೊಡುವಿರಿ. ನಿಮ್ಮ ನಿರ್ಧಾರಗಳೇ ಅಂತಿಮವಾಗಬೇಕು ಎನ್ನುವ ಮನಃಸ್ಥಿತಿ ಇರುವುದು. ವೃಷಭ ರಾಶಿ: ಕಛೇರಿಯಲ್ಲಿ ನಿಮ್ಮ ಕೆಲಸಗಳನ್ನು ಕಂಡು ನಿಮ್ಮನ್ನು…

Read More