‘ಇದು ಬೆಂಗಳೂರಿನಲ್ಲಿ ಸಹಿಸಲಾಗದ ಕ್ಷಣ’: ಟ್ರಾಫಿಕ್‌ನಲ್ಲಿ ಕಸದ ಲಾರಿಯ ಪಕ್ಕದಲ್ಲಿ ಸಿಲುಕಿಕೊಂಡ ಆಟೋದಲ್ಲಿದ್ದ ಮಹಿಳೆ – Kannada News | Pavitra Kulkarni’s Viral Video: Bangalore Traffic, Garbage Woes and Citizen Frustration
ಬೆಂಗಳೂರು, ಡಿ.23: ಕೆಲವರು ಬೆಂಗಳೂರನ್ನು (Bangalore traffic) ಮೆಚ್ಚಿಕೊಂಡರೆ, ಇನ್ನು ಕೆಲವರು ಇಲ್ಲಿನ ವ್ಯವಸ್ಥೆಯನ್ನು ದೂರುತ್ತಾರೆ. ರಾಜ್ಯ ರಾಜಧಾನಿ ಎಲ್ಲರಿಗೂ ಆಸರೆಯಾಗಿದೆ. ಆದರೆ ಇಲ್ಲಿನ ರಸ್ತೆ, ಟ್ರಾಫಿಕ್, ವಾತಾವರಣದ ಬಗ್ಗೆ ಅನೇಕರಿಗೆ ಅಸಮಾಧಾನ ಇದೆ. ಇದೀಗ ಇಲ್ಲೊಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಪವಿತ್ರಾ ಕುಲಕರ್ಣಿ ಎಂಬುವವರು, ಹಂಚಿಕೊಂಡಿರುವ ವಿಡಿಯೋದಲ್ಲಿ ಬೆಂಗಳೂರಿನಲ್ಲಿ ತಾವು ಅನುಭವಿಸಿದ ಸಂಕಷ್ಟದ ಬಗ್ಗೆ ಹಂಚಿಕೊಂಡಿದ್ದಾರೆ. ಆಟೋದಲ್ಲಿ ಹೋಗುತ್ತಿದ್ದ ವೇಳೆ ನಡೆದ ಘಟನೆಯನ್ನು ಈ ವಿಡಿಯೋ ಮೂಲಕ ವಿವರಿಸಿದ್ದಾರೆ. ನಗರದ ಜನದಟ್ಟಣೆಯ…