Headlines

RCB vs CSK: ಗೆಲ್ಲೋರು ಯಾರು? ಹೀಗಿದೆ ಲೆಕ್ಕಾಚಾರ

IPL 2026: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-19ರ ಹೈವೋಲ್ಟೇಜ್ ಪಂದ್ಯಕ್ಕೆ ವೇದಿಕೆ ಸಿದ್ಧವಾಗಿದೆ. ಇಂದು (ಏ.5) ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿರುವ ಐಪಿಎಲ್​ನ 11ನೇ ಪಂದ್ಯದಲ್ಲಿ ಬದ್ಧವೈರಿಗಳಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಚೆನ್ನೈ ಸೂಪರ್ ಕಿಂಗ್ಸ್ (CSK) ಮುಖಾಮುಖಿಯಾಗಲಿದೆ. ಸೌತ್ ಡರ್ಬಿ ಪಂದ್ಯ ಎಂದೇ ಬಿಂಬಿತವಾಗಿರುವ ಈ ಮ್ಯಾಚ್​ನಲ್ಲಿ ಗೆಲ್ಲೋರು ಯಾರು ಎಂಬುದೇ ಈಗ ಕುತೂಹಲ. ಈ ಕುತೂಹಲವನ್ನು ತಣ್ಣಿಸುವಂತಹ ಲೆಕ್ಕಾಚಾರ ಇಲ್ಲಿದೆ… ಗೆಲುವಿನ ಮುನ್ಸೂಚನೆ: ಯಾರ ಕೈ ಮೇಲು? ಪ್ರಸ್ತುತ ಫಾರ್ಮ್ ಮತ್ತು…

Read More

ಹುಬ್ಬಳ್ಳಿಯಲ್ಲಿ ಮತ್ತೊಂದು ಲವ್ ಜಿಹಾದ್ ಕೇಸ್​​: ಪ್ರೀತಿ ಹೆಸರಲ್ಲಿ ಯುವತಿ ಮೇಲೆ ಅತ್ಯಾಚಾರ ಆರೋಪ; ದೂರು ದಾಖಲು

ಹುಬ್ಬಳ್ಳಿ, ಏಪ್ರಿಲ್​​ 05: ಜಿಮ್​​ಗೆ ಬರುವ ಯುವತಿಯ ಮೇಲೆ ಅತ್ಯಾಚಾರ ನಡೆಸಿ, ಅದನ್ನು ವಿಡಿಯೋ ಮಾಡಿಟ್ಟುಕೊಂಡು ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ಆರೋಪ ಸಂಬಂಧ ಹುಬ್ಬಳ್ಳಿಯ ಜಿಮ್​ ಟ್ರೈನರ್ ಸಮೀರ್​ ವಿರುದ್ಧ ಪ್ರಕರಣ ದಾಖಲಾಗಿರೋದು ಈಗಾಗಲೇ ದೇಶಾದ್ಯಂತ ಸುದ್ದಿಯಾಗಿದೆ. ಘಟನೆ ಬಗ್ಗೆ ಹಿಂದೂಪರ ಸಂಘಟನೆಗಳಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಈ ನಡುವೆ ಹುಬ್ಬಳ್ಳಿಯಲ್ಲಿಯೇ ಮತ್ತೊಂದು ಲವ್ ಜಿಹಾದ್ ಆರೋಪ ಪ್ರಕರಣ ಬಯಲಾಗಿದೆ. ಪ್ರೀತಿಸುವ ನಾಟಕವಾಡಿ ಹಿಂದೂ ಯುವತಿಯ ಮೇಲೆ ಮುಫೀಸ್ ಮಿಯಾನ್ನವರ್ ಎಂಬಾತನಿಂದ ಅತ್ಯಾಚಾರ ನಡೆದಿದೆ, ಬ್ಲ್ಯಾಕ್​​ಮೇಲ್​​‌ ಮಾಡಿ…

Read More

ಇರಾನ್​ನಲ್ಲಿ ನಾಪತ್ತೆಯಾಗಿದ್ದ ಅಮೆರಿಕ ಯುದ್ಧ ವಿಮಾನದ ಪೈಲಟ್ ಸಿಕ್ಕಿದ್ದಾರೆ: ಡೊನಾಲ್ಡ್​ ಟ್ರಂಪ್

ಟೆಹ್ರಾನ್, ಮಾರ್ಚ್​ 05: ಅಮೆರಿಕ ಮತ್ತು ಇರಾನ್ ನಡುವೆ ನಡೆಯುತ್ತಿರುವ ಯುದ್ಧವು ಹೆಚ್ಚು ಗಂಭೀರವಾಗುತ್ತಿದೆ. ಇತ್ತೀಚೆಗೆ, ಎರಡು ಯುಎಸ್ ಮಿಲಿಟರಿ ವಿಮಾನಗಳು ಇರಾನ್​ನಲ್ಲಿ ಪ್ರತ್ಯೇಕ ಘಟನೆಗಳಲ್ಲಿ ಅಪಘಾತಕ್ಕೀಡಾಗಿದ್ದು, ಆ ಸಂದರ್ಭದಲ್ಲಿ ನಾಪತ್ತೆಯಾಗಿದ್ದ ಪೈಲಟ್ ಸಿಕ್ಕಿರುವುದಾಗಿ ಡೊನಾಲ್ಡ್​ ಟ್ರಂಪ್(Donald Trump) ಹೇಳಿದ್ದಾರೆ. ಟ್ರೂತ್‌ಸೋಶಿಯಲ್‌ನಲ್ಲಿನ ಪೋಸ್ಟ್‌ನಲ್ಲಿ, ಟ್ರಂಪ್ ಮಾಹಿತಿ ನೀಡಿದ್ದು, ಈ ಕಾರ್ಯಾಚರಣೆಯನ್ನು ಅಮೆರಿಕದ ಇತಿಹಾಸದಲ್ಲಿ ಅತ್ಯಂತ ಧೈರ್ಯಶಾಲಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗಳಲ್ಲಿ ಒಂದೆಂದು ಬಣ್ಣಿಸಿದ್ದಾರೆ. ಪೈಲಟ್ ಇರಾನ್‌ನ ಪರ್ವತಗಳ ಹಿಂದೆ ಇದ್ದರು, ಅವರನ್ನು ಇಸ್ರೇಲಿ ಪಡೆಗಳು ಹಿಂಬಾಲಿಸುತ್ತಿದ್ದವು….

Read More

ತಂದೆ-ಮಗನನ್ನು ಔಟ್ ಮಾಡಿ ವಿಶ್ವ ದಾಖಲೆ ಬರೆದ ಜೇಮ್ಸ್ ಅ್ಯಂಡರ್ಸನ್

ವಯಸ್ಸು ಜಸ್ಟ್ ನಂಬರ್  ಎಂಬುದನ್ನು ಇಂಗ್ಲೆಂಡ್‌ನ ದಿಗ್ಗಜ ವೇಗಿ ಜೇಮ್ಸ್ ಅ್ಯಂಡರ್ಸನ್ (James Anderson) ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. 43ನೇ ವಯಸ್ಸಿನಲ್ಲೂ ತಮ್ಮ ಸ್ವಿಂಗ್ ಬೌಲಿಂಗ್ ಮೂಲಕ ಎದುರಾಳಿ ಬ್ಯಾಟರ್‌ಗಳನ್ನು ಬೆಚ್ಚಿಬೀಳಿಸುತ್ತಿರುವ ಅ್ಯಂಡರ್ಸನ್, 2026ರ ಕೌಂಟಿ ಚಾಂಪಿಯನ್‌ಶಿಪ್‌ನಲ್ಲಿ ಒಂದು ಅದ್ಭುತ ಮತ್ತು ಅಪರೂಪದ ಮೈಲಿಗಲ್ಲನ್ನು ಸ್ಥಾಪಿಸಿದ್ದಾರೆ. 21 ವರ್ಷಗಳಲ್ಲಿ ವಿಶೇಷ ದಾಖಲೆ: ಲಂಕಾಶೈರ್ ಪರ ಆಡುತ್ತಿರುವ ಅ್ಯಂಡರ್ಸನ್, ನಾರ್ಥಾಂಪ್ಟನ್‌ಶೈರ್ ತಂಡದ ಯುವ ಬ್ಯಾಟರ್ ಜೇಮ್ಸ್ ಸೇಲ್ಸ್ (James Sales) ಅವರನ್ನು ಔಟ್ ಮಾಡುವ ಮೂಲಕ ಇತಿಹಾಸ ಬರೆದಿದ್ದಾರೆ. ವಿಶೇಷವೆಂದರೆ,…

Read More

ಕೈದಿಗಳ ಕಳ್ಳಾಟಕ್ಕಿಲ್ಲ ಬ್ರೇಕ್​: ಪರಪ್ಪನ ಅಗ್ರಹಾರದ ಬಳಿಕ ಹುಬ್ಬಳ್ಳಿಯ ಉಪ ಕಾರಾಗೃಹದಲ್ಲಿಯೂ ಮೊಬೈಲ್​​ಗಳು ಪತ್ತೆ

ಹುಬ್ಬಳ್ಳಿ, ಏಪ್ರಿಲ್​​ 05: ರಾಜ್ಯದ ಜೈಲುಗಳಲ್ಲಿ ಕೈದಿಗಳಿಗೆ ರಾಜಾತಿಥ್ಯ ಪ್ರಕರಣ ಭಾರಿ ಸದ್ದು ಮಾಡಿದ್ದ ಹಿನ್ನೆಲೆ ಕಟಿಣ ಕ್ರಮಗಳನ್ನ ಕೈಗೊಳ್ಳಲಾಗಿತ್ತು. ಹೀಗಿದ್ದರೂ ಕಳ್ಳಾಟಕ್ಕೆ ಮಾತ್ರ ಸಂಪೂರ್ಣವಾಗಿ ಬ್ರೇಕ್​​ ಬಿದ್ದಿಲ್ಲ. ಇದಕ್ಕೆ ಪೂರಕವೆಂಬಂತೆ ಧಾರವಾಡ ಜಿಲ್ಲೆಯ ಜೈಲುಗಳಲ್ಲಿ ಒಂದೊಂದೇ ಕರ್ಮಕಾಂಡ ಬಯಲಾಗುತ್ತಿದೆ. ಹುಬ್ಬಳ್ಳಿಯ ಉಪ ಕಾರಾಗೃಹದಲ್ಲಿ ಜೈಲಿನ ಬ್ಯಾರಕ್ ತಪಾಸಣೆ ವೇಳೆ ಸ್ಮಾರ್ಟ್​ ಫೋನ್​ಗಳು ಪತ್ತೆಯಾಗಿವೆ. ಬ್ಯಾರಕ್ ಸಂಖ್ಯೆ 8ರಲ್ಲಿ ಸಿಬ್ಬಂದಿ ಪರೀಕ್ಷೆ ವೇಳೆ ಮೊಬೈಲ್​ಗಳು, ಚಾರ್ಜರ್​, ಕನೆಕ್ಟರ್​ಗಳು ಸಿಕ್ಕಿವೆ. ಇನ್ನು ಪತ್ತೆಯಾಗಿರುವ ಈ ಮೊಬೈಲ್​​ಗಳನ್ನು ಯಾರು ಬಳಸುತ್ತಿದ್ದರು…

Read More

RCB vs CSK IPL 2026: ಹೈವೋಲ್ಟೇಜ್ ಪಂದ್ಯದ ಹಿನ್ನೆಲೆ ಚಿನ್ನಸ್ವಾಮಿ ಸ್ಟೇಡಿಯಮ್​ನಲ್ಲಿ ಪೊಲೀಸ್ ಬಿಗಿ ಭದ್ರತೆ!

ಬೆಂಗಳೂರು, ಏಪ್ರಿಲ್ 05: ಎಂ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಇಂದು ನಡೆಯಲಿರುವ ಐಪಿಎಲ್ 2026 ರಾಯಲ್ ಚಾಲೆಂಜರ್ಸ್​ ಬೆಂಗಳೂರು (RCB) vs ಚೆನ್ನೈ ಸೂಪರ್ ಕಿಂಗ್ಸ್ (CSK) ಪಂದ್ಯದ ಹಿನ್ನೆಲೆಯಲ್ಲಿ ನಗರ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಭದ್ರತಾ ಕ್ರಮಗಳನ್ನು ಕೈಗೊಂಡಿದೆ. ವಿಶೇಷವಾಗಿ ಆರ್​ಸಿಬಿ ಮತ್ತು ಸಿಎಸ್​ಕೆ ನಡುವಿನದು ಹೈವೋಲ್ಟೇಜ್ ಪಂದ್ಯವಾಗಿರುವುದರಿಂದ ಅಭಿಮಾನಿಗಳು ಕಿಕ್ಕಿರಿದು ಸೇರಲಿದ್ದಾರೆ. ಇದನ್ನು ಗಮನದಲ್ಲಿಟ್ಟುಕೊಂಡು ಸುಮಾರು 2,300ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ. ಕಳೆದ ಬಾರಿ ಸ್ಟೇಡಿಯಂನಲ್ಲಿ 70ಕ್ಕೂ ಹೆಚ್ಚು ಮೊಬೈಲ್​ ಕಳ್ಳತನವಾದ ಹಿನ್ನೆಲೆ ಈ ಬಾರಿ…

Read More

RCB vs CSK Weather Report: ಆರ್​ಸಿಬಿ-ಸಿಎಸ್​ಕೆ ಹೈವೋಲ್ಟೇಕ್ ಕದನಕ್ಕೆ ಮಳೆ ಅಡ್ಡಿ?: ಇಲ್ಲಿದೆ ಬೆಂಗಳೂರು ಹವಾಮಾನ ವರದಿ

ಬೆಂಗಳೂರು (ಏ. 05): ಇಂಡಿಯನ್ ಪ್ರೀಮಿಯರ್ ಲೀಗ್ 2026ರಲ್ಲಿ ಇಂದು ಡಬಲ್ ಹೆಡ್ಡರ್ ಪಂದ್ಯ ನಡೆಯಲಿದೆ. ಮೊದಲ ಪಂದ್ಯದಲ್ಲಿ ಸನ್​ರೈಸರ್ಸ್ ಹಾಗೂ ಲಕ್ನೋ ಮುಖಾಮುಖಿ ಆಗುತ್ತಿದ್ದರೆ, ಎರಡನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bengaluru) ತಂಡವನ್ನು ಎದುರಿಸಲಿದೆ. ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರಿಕೆಟ್ ಕ್ರೀಡಾಂಗಣವು ಈ ಪಂದ್ಯವನ್ನು ಆಯೋಜಿಸಲಿದೆ. ಆರ್​ಸಿಬಿ ಗೆಲುವಿನೊಂದಿಗೆ ಪಂದ್ಯಾವಳಿಯನ್ನು ಆರಂಭಿಸಿದರೆ, ಸಿಎಸ್​​ಕೆ ತನ್ನ ಆರಂಭಿಕ ಎರಡೂ ಪಂದ್ಯಗಳಲ್ಲಿ ಸೋತಿದೆ. ಚೆನ್ನೈಗೆ ಗೆಲುವು ಅನಿವಾರ್ಯವಾದರೆ ಇತ್ತ…

Read More

ಹಲ್ಲಿಲ್ಲದ, ವಯಸ್ಸಾದ ನಾಯಿಗಳಿಗೇಕೆ ಸಂತಾನ ಹರಣ ಚಿಕಿತ್ಸೆ, ಶ್ವಾನ ಪ್ರಿಯರ ಆಕ್ರೋಶ

ನವದೆಹಲಿ, ಏಪ್ರಿಲ್ 05: ಹಲ್ಲಿಲ್ಲದ, ವಯಸ್ಸಾದ ನಾಯಿಗಳಿಗೂ ಸಂತಾನ ಹರಣ, ರೇಬಿಸ್ ಚುಚ್ಚುಮದ್ದು ನೀಡಿ ದೆಹಲಿ ವಿಮಾನ ನಿಲ್ದಾಣದ ಪ್ರದೇಶದಿಂದ ಬೇರೆ ಕಡೆ ಸ್ಥಳಾಂತರಿಸಿದ್ದಕ್ಕೆ ಪ್ರಾಣಿಪ್ರಿಯರು ಆಕ್ರೋಶಗೊಂಡಿದ್ದಾರೆ. ಕಳೆದ 13,14 ವರ್ಷಗಳಿಂದ ಆ ಕೆಲವು ನಾಯಿಗಳು ಅಲ್ಲೇ ಇವೆ. ಯಾರಿಗೂ ಏನೂ ತೊಂದರೆ ಮಾಡಿಲ್ಲ ಈಗಂತೂ ಅವುಗಳಿಗೂ ಹಲ್ಲುಗಳು ಕೂಡ ಇಲ್ಲ, ಶಕ್ತಿಯೂ ಇಲ್ಲ ಅಂಥಾ ನಾಯಿಗಳಿಂದ ಅಪಾಯವಾದರೂ ಏನಿದೆ, ಸಂತಾನ ಹರಣ ಚಿಕಿತ್ಸೆಯ ಅಗತ್ಯವಾದರೂ ಏನಿತ್ತು ಎಂದು ಪ್ರಶ್ನಿಸಿದ್ದಾರೆ. ವಿಮಾನ ನಿಲ್ದಾಣದ ಆವರಣದಲ್ಲಿ ವಾಸಿಸುವ ಹಲವಾರು…

Read More

Hindu Tradition: ಯಾರು ಬೇಕಾದರೂ ಸನ್ಯಾಸಿ ಆಗಬಹುದಾ? ಆಧ್ಯಾತ್ಮಿಕ ಜೀವನಕ್ಕೆ ಬೇಕಾದ ಗುಣಗಳು

ಯಾರು ಬೇಕಾದರೂ ಸನ್ಯಾಸಿ ಆಗಬಹುದಾ? ಎಂಬ ಪ್ರಶ್ನೆಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ಉತ್ತರವನ್ನು ನೀಡಿದ್ದಾರೆ. ಸನ್ಯಾಸಿಯಾಗಲು ಪ್ರಥಮ ಅರ್ಹತೆ ಅರಿಷಡ್ವರ್ಗಗಳನ್ನು ಜಯಿಸುವುದು. ಕಾಮ, ಕ್ರೋಧ, ಲೋಭ, ಮೋಹ, ಮದ ಮತ್ತು ಮತ್ಸರಗಳನ್ನು ಸಂಪೂರ್ಣವಾಗಿ ಗೆಲ್ಲುವವನು ಮಾತ್ರ ಈ ಪವಿತ್ರ ಮಾರ್ಗದಲ್ಲಿ ಮುನ್ನಡೆಯಲು ಅರ್ಹ. ಸನ್ಯಾಸಿಯು ಯಾವುದೇ ಸಂಬಂಧಗಳಿಗೆ ಅಂಟಿಕೊಳ್ಳದೆ ನಿರ್ಲಿಪ್ತನಾಗಿರಬೇಕು. ಅತಿಯಾದ ದುಃಖ ಅಥವಾ ಅತಿಯಾದ ಸಂತೋಷಕ್ಕೆ ಒಳಗಾಗದೆ, ಎರಡನ್ನೂ ಸಮತೋಲನದಲ್ಲಿ ಸ್ವೀಕರಿಸುವ ಸಮದೃಷ್ಟಿಯುಳ್ಳವನಾಗಿರಬೇಕು. ರುಚಿಗಳ…

Read More

‘ಫೌಜಿ’ ಸೆಟ್​ನಿಂದ ಪ್ರಭಾಸ್ ಫೋಟೋ ಲೀಕ್: ಅಭಿಮಾನಿಗಳಿಗೆ ಚಿತ್ರತಂಡದ ವಾರ್ನಿಂಗ್

ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ (Prabhas) ಹಾಗೂ ನಿರ್ದೇಶಕ ಹನು ರಾಘವಪುಡಿ ಕಾಂಬಿನೇಷನ್‌ನಲ್ಲಿ ಸಿದ್ಧವಾಗುತ್ತಿರುವ ‘ಫೌಜಿ’ (Fauzi) ಚಿತ್ರದ ಮೇಲೆ ಅಭಿಮಾನಿಗಳಿಗೆ ಭಾರಿ ನಿರೀಕ್ಷೆ ಇದೆ. ಇದು ಭರ್ಜರಿ ಆ್ಯಕ್ಷನ್ ಸಿನಿಮಾ ಆಗಿರಲಿದೆ. ಹಾಗಾಗಿ ಸಹಜವಾಗಿಯೇ ಹೈಪ್ ಹೆಚ್ಚಿದೆ. ಆದರೆ, ಇತ್ತೀಚೆಗೆ ಚಿತ್ರೀಕರಣದ ಸ್ಥಳದಿಂದ ಕೆಲವು ಫೋಟೋಗಳು ಲೀಕ್ ಆಗಿದ್ದು, ಚಿತ್ರತಂಡಕ್ಕೆ ತಲೆನೋವಾಗಿ ಪರಿಣಮಿಸಿದೆ. ಸೋಶಿಯಲ್ ಮೀಡಿಯಾದಲ್ಲಿ ಪ್ರಭಾಸ್ ಅವರ ಲುಕ್ ವೈರಲ್ ಆಗಿರುವುದರಿಂದ ‘ಫೌಜಿ’ ಚಿತ್ರತಂಡ ವಾರ್ನಿಂಗ್ ನೀಡಿದೆ. ಮೊದಲಿಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ಪ್ರಭಾಸ್…

Read More