Headlines

ಕನ್ನಡದ ಹೀರೋಗಳು ರಾಮನ ಪಾತ್ರ ಮಾಡಿದ್ರೆ ಹೀಗೆ ಕಾಣಿಸ್ತಾರೆ; ಯಾರಿಗೆ ಹೆಚ್ಚು ಸೂಕ್ತ?

ಕಿಚ್ಚ ಸುದೀಪ್ ಅವರು ಕನ್ನಡ ಮಾತ್ರವಲ್ಲದೆ, ಪರಭಾಷೆಯಲ್ಲೂ ಗಮನ ಸೆಳೆದವರು. ಅವರಿಗೆ ರಾಮನ ಪಾತ್ರ ಹೀಗೆ ಕಾಣಿಸುತ್ತದೆ. ಅವರಿಗೆ ಕೃಷ್ಣನ ಪಾತ್ರ ಹೆಚ್ಚು ಸೂಕ್ತವಾಗುತ್ತಿತ್ತು ಎಂದು ಅನೇಕರು ಹೇಳಿದ್ದಾರೆ. ಪುನೀತ್ ರಾಜ್​​ಕುಮಾರ್ ಅವರು ಇಂದು ನಮ್ಮ ಜೊತೆ ಇಲ್ಲ. ಅವರು ಇದ್ದಿದ್ದರೆ ಹಲವು ಸಿನಿಮಾಗಳು ಅವರ ಬತ್ತಳಿಕೆಯಿಂದ ಬರುತ್ತಿದ್ದವು. ಅವರು ಎಐ ಇಮೇಜ್​​ ಅಲ್ಲಿ ರಾಮನಾಗಿ ಕಾಣಿಸಿದ್ದು ಹೀಗೆ. ವಿಷ್ಣುವರ್ಧನ್ ರಾಮನಾಗಿ ಕಾಣಿಸಿದ್ದರೆ ಅವರ ಪಾತ್ರ ಹೀಗೆ ಇರುತ್ತಿತ್ತು. ಈ ಫೋಟೋಗಳು ಗಮನ ಸೆಳೆದಿವೆ. ಆದರೆ, ಇವರು…

Read More

ಚಿಕ್ಕಬಳ್ಳಾಪುರ: ಆಲೂಗಡ್ಡೆ ದರ ಪಾತಾಳಕ್ಕೆ ಕುಸಿತ, ಬೇಡಿಕೆಯೂ ಇಲ್ಲ! ರೈತರ ಗೋಳು ಕೇಳೋರಿಲ್ಲ

ಚಿಕ್ಕಬಳ್ಳಾಪುರ, ಏಪ್ರಿಲ್ 4: ಗಲ್ಫ್ ರಾಷ್ಟ್ರಗಳಲ್ಲಿನ ಯುದ್ಧದ ಕಾರಣದಿಂದ ವಾಣಿಜ್ಯ ಗ್ಯಾಸ್ ಸಿಲಿಂಡರ್‌ಗಳ ಅಭಾವ ಉಂಟಾಗಿ, ಬಹುತೇಕ ದೊಡ್ಡ ಹೋಟೆಲ್‌ಗಳು ಕಾರ್ಯನಿರ್ವಹಿಸುತ್ತಿಲ್ಲ. ಈ ಪರಿಸ್ಥಿತಿಯು ಚಿಕ್ಕಬಳ್ಳಾಪುರ ಜಿಲ್ಲೆಯ ಆಲೂಗಡ್ಡೆ ಬೆಳೆಗಾರರಿಗೆ ತೀವ್ರ ಸಂಕಷ್ಟ ತಂದೊಡ್ಡಿದೆ. ರೈತರು ಮಗುವಿನಂತೆ ಆರೈಕೆ ಮಾಡಿ ಬೆಳೆದ ಆಲೂಗಡ್ಡೆಗೆ ಉತ್ತಮ ಬೆಲೆ ಸಿಗದೆ ಪರದಾಡುತ್ತಿದ್ದಾರೆ. ಕಳೆದ ಹದಿನೈದು ದಿನಗಳಿಂದ ಕೊಯ್ಲು ಮಾಡಿದ ಆಲೂಗಡ್ಡೆಯನ್ನು ಸಂಗ್ರಹಿಸಿಟ್ಟರೂ, ಮಾರುಕಟ್ಟೆಯಲ್ಲಿ ಬೇಡಿಕೆ ಇಲ್ಲದೆ ಮತ್ತು ಹೋಟೆಲ್‌ಗಳು ತೆರೆಯದ ಕಾರಣ ಮಾರಾಟವಾಗುತ್ತಿಲ್ಲ. ಚಿಕ್ಕಬಳ್ಳಾಪುರದ ಎಪಿಎಂಸಿ ಮಾರುಕಟ್ಟೆಯಲ್ಲಿ, ಅತ್ಯುತ್ತಮ ಗುಣಮಟ್ಟದ…

Read More

ಡೆಪ್ಯುಟಿ ಸ್ಪೀಕರ್ ರುದ್ರಪ್ಪ ಲಮಾಣಿ ಎಸ್ಕಾರ್ಟ್ ವಾಹ‌ನ ಅಪಘಾತ!

ಹಾವೇರಿ, ಏಪ್ರಿಲ್ 04: ನಗರದ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಡೆಪ್ಯುಟಿ ಸ್ಪೀಕರ್ ರುದ್ರಪ್ಪ ಲಮಾಣಿ ಅವರ ಎಸ್ಕಾರ್ಟ್ ವಾಹನ ಅಪಘಾತಕ್ಕೀಡಾಗಿದೆ. ಅತಿವೇಗದಲ್ಲಿ ಸಂಚರಿಸುತ್ತಿದ್ದ ವಾಹನ ಬಸ್‌ಗೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಚಾಲಕ ಚನ್ನಬಸಪ್ಪ ವಿರುದ್ಧ ದೂರು ದಾಖಲಾಗಿದ್ದು, ಹಾವೇರಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಲಾಗಿದೆ. ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. Source link

Read More

ಮಾವಿನ ಹಣ್ಣಿನಲ್ಲಿ ಬರ್ತಿದೆ ಕೆಮಿಕಲ್ ವಿಷ; ಹೈದರಾಬಾದ್ ಪೊಲೀಸರಂತೆ ಬೆಂಗಳೂರು ಪೊಲೀಸರೂ ಜಾಗೃತಿ ಮೂಡಿಸುವರೇ?

ಹೈದರಾಬಾದ್, ಏ.4 : ಬೇಸಿಗೆ ಆರಂಭವಾಗುತ್ತಿದ್ದಂತೆ ಮಾರುಕಟ್ಟೆಗೆ ಹಣ್ಣುಗಳ ರಾಜ ಮಾವಿನ ಹಣ್ಣಿನ ಲಗ್ಗೆ ಇಟ್ಟಿದೆ. ಬೆಂಗಳೂರು ಸೇರಿದಂತೆ ದೇಶದ ಬೇರೆ ಬೇರೆ ರಾಜ್ಯಗಳಲ್ಲಿ ಮಾವಿನ ಹಣ್ಣಿನ ಮಾರಾಟ ಜೋರಾಗಿ ನಡೆಯುತ್ತಿದೆ. ಆದರೆ, ಮಾವಿನ ಹಣ್ಣು ಸವಿಯೋ ಅಥವಾ ವಿಷವೋ ಎಂಬ ಬಗ್ಗೆ ಈಗಲೇ ಎಚ್ಚೆತ್ತುಕೊಳ್ಳಿ. ಕೇವಲ ಲಾಭದ ಆಸೆಗೆ ಬಿದ್ದ ಕೆಲವು ವ್ಯಾಪಾರಿಗಳು ಕ್ಯಾಲ್ಸಿಯಂ ಕಾರ್ಬೈಡ್ (Calcium Carbide) ನಂತಹ ಮಾರಕ ರಾಸಾಯನಿಕಗಳನ್ನು ಬಳಸಿ ಹಣ್ಣುಗಳನ್ನು ಮಾಗಿಸುತ್ತಿದ್ದಾರೆ. ಈ ಕುರಿತು ಹೈದರಾಬಾದ್ ಪೊಲೀಸ್ ಕಮಿಷನರ್ ವಿ.ಸಿ….

Read More

ಕೇವಲ 5 ನಿಮಿಷ ಹಸಿ ಹಾಲಿನಿಂದ ನಿಮ್ಮ ಮುಖಕ್ಕೆ ಮಸಾಜ್ ಮಾಡಿದ್ರೆ ಏನೆಲ್ಲ ಪ್ರಯೋಜನ ಇದೆ ನೋಡಿ

ಬೆಂಗಳೂರು (ಏ. 04): ಹಾಲು ಆರೋಗ್ಯಕ್ಕೆ ಮಾತ್ರವಲ್ಲದೆ ಚರ್ಮಕ್ಕೂ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಹಾಲಿನಿಂದ (Milk) ಸ್ನಾನ ಮಾಡುವ ಸಂಪ್ರದಾಯ ಸಾವಿರಾರು ವರ್ಷಗಳಷ್ಟು ಹಳೆಯದು. ದೇವತೆಗಳು ಸಹ ಹಾಲಿನಿಂದ ಸ್ನಾನ ಮಾಡುತ್ತಾರೆ ಎಂಬುದನ್ನು ನೀವು ಕೇಳಿರಬಹುದು. ಇದಕ್ಕೆ ಕಾರಣವೆಂದರೆ ಹಾಲಿನಲ್ಲಿ ಚರ್ಮಕ್ಕೆ ಪ್ರಯೋಜನಕಾರಿ ಎಂದು ಸಾಬೀತುಪಡಿಸುವ ಅನೇಕ ಔಷಧೀಯ ಗುಣಗಳಿವೆ. ಹಿಂದಿನವರು ಚರ್ಮವನ್ನು ಸ್ವಚ್ಛಗೊಳಿಸಲು ಹಾಲನ್ನು ಬಳಸುತ್ತಿದ್ದರು. ಮಾರುಕಟ್ಟೆಯಲ್ಲಿ ಲಭ್ಯವಿರುವ ಅನೇಕ ಸೋಪ್‌ಗಳು ಮತ್ತು ಫೇಸ್ ವಾಶ್‌ಗಳಲ್ಲಿ ಸಹ ಹಾಲನ್ನು ಬಳಸಲಾಗುತ್ತದೆ. ಹೀಗಿರುವಾಗ ನೀವು ನಿಮ್ಮ ಆರೈಕೆಯ…

Read More

Sandhya Kala: ಸೂರ್ಯಾಸ್ತದ ಸಮಯದಲ್ಲಿ ತಪ್ಪಿಯೂ ಈ ಕೆಲಸ ಮಾಡಬೇಡಿ; ಜ್ಯೋತಿಷ್ಯ ಸಲಹೆ ಇಲ್ಲಿದೆ

ಹಿಂದೂ ಸಂಪ್ರದಾಯದ ಪ್ರಕಾರ, ಸೂರ್ಯಾಸ್ತದ ಸಮಯವನ್ನು ಅತ್ಯಂತ ಪವಿತ್ರವಾದ ‘ಸಂಧ್ಯಾ ಕಾಲ’ ಎಂದು ಪರಿಗಣಿಸಲಾಗುತ್ತದೆ. ಈ ಸಮಯದಲ್ಲಿ ಮಹಾಲಕ್ಷ್ಮಿ ದೇವಿಯು ಭೂಲೋಕಕ್ಕೆ ಭೇಟಿ ನೀಡುತ್ತಾಳೆ ಮತ್ತು ಭಕ್ತರ ಮನೆಗಳನ್ನು ಪ್ರವೇಶಿಸುತ್ತಾಳೆ ಎಂಬ ಗಾಢವಾದ ನಂಬಿಕೆಯಿದೆ. ಆದ್ದರಿಂದ, ಮನೆಯಲ್ಲಿ ಸುಖ, ಶಾಂತಿ ಮತ್ತು ಸಮೃದ್ಧಿ ನೆಲೆಸಬೇಕೆಂದರೆ ಈ ಸಂಧ್ಯಾಕಾಲದಲ್ಲಿ ಕೆಲವು ಕೆಲಸಗಳನ್ನು ಮಾಡಬಾರದು ಎಂದು ಜ್ಯೋತಿಷ್ಯ ತಜ್ಞರು ಎಚ್ಚರಿಸುತ್ತಾರೆ. ಮುಸ್ಸಂಜೆ ನಿದ್ರೆ: ಸೂರ್ಯಾಸ್ತದ ಸಮಯದಲ್ಲಿ ಮಲಗುವುದು ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಅಶುಭ. ಈ ಸಮಯದಲ್ಲಿ ನಿದ್ರಿಸುವ ವ್ಯಕ್ತಿಯು ಸೋಮಾರಿಯಾಗುವುದಲ್ಲದೆ,…

Read More

ಪ್ರತಿ ಓವರ್​ಗೆ 14.23 ರನ್: ಪಿಎಸ್​ಎಲ್​ನಲ್ಲಿ ಹೊಸ ಇತಿಹಾಸ

ಲಾಹೋರ್​ನ ಗದ್ದಾಫಿ ಕ್ರೀಡಾಂಗಣದಲ್ಲಿ ನಡೆದ ಪಾಕಿಸ್ತಾನ್ ಸೂಪರ್ ಲೀಗ್​ನ 11ನೇ ಪಂದ್ಯದಲ್ಲಿ ಲಾಹೋರ್ ಖಲಂದರ್ಸ್ ತಂಡ ಮುಲ್ತಾನ್ ಸುಲ್ತಾನ್ಸ್ ವಿರುದ್ಧ 20 ರನ್‌ಗಳ ಭರ್ಜರಿ ಜಯ ದಾಖಲಿಸಿದೆ. ಮಳೆಯಿಂದಾಗಿ 13 ಓವರ್‌ಗಳಿಗೆ ಸೀಮಿತಗೊಂಡಿದ್ದ ಈ ಪಂದ್ಯದಲ್ಲಿ ಲಾಹೋರ್ ತಂಡ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಅದ್ಭುತ ಪ್ರದರ್ಶನ ನೀಡಿತು. ಮೊದಲು ಬ್ಯಾಟಿಂಗ್ ಮಾಡಿದ ಲಾಹೋರ್ ಖಲಂದರ್ಸ್ ಕೇವಲ 13 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 185 ರನ್ ಪೇರಿಸಿತು. ಇದು ಪಿಎಸ್‌ಎಲ್ ಇತಿಹಾಸದಲ್ಲೇ ಅತ್ಯಧಿಕ ರನ್ ರೇಟ್…

Read More

ಅಪರೂಪದ ಅಂತಾರಾಷ್ಟ್ರೀಯ ಸಾಧನೆ ಮಾಡಿದ ರಶ್ಮಿಕಾ ಮಂದಣ್ಣ

ರಾಷ್ಟ್ರೀಯ ಕ್ರಶ್ ರಶ್ಮಿಕಾ ಮಂದಣ್ಣ (Rashmika Mandanna) ಅಪಾರ ಜನಪ್ರಿಯತೆ ಪಡೆದಿದ್ದಾರೆ. ಯಾವುದೇ ಹಿನ್ನೆಲೆ ಇಲ್ಲದೆ ಬಂದು ಈಗ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಗಮನ ಸೆಳೆದಿದ್ದಾರೆ. ಅವರು ತೆಲುಗು, ತಮಿಳು ಮತ್ತು ಹಿಂದಿ ಭಾಷೆಗಳಲ್ಲಿ ಸರಣಿ ಚಿತ್ರಗಳ ಮೂಲಕ ಮನರಂಜನೆ ನೀಡುತ್ತಾರೆ. ಈಗ, ಈ ನಟಿಯ ಖಾತೆಗೆ ಅಪರೂಪದ ಸಾಧನೆ ಸೇರ್ಪಡೆಯಾಗಿದೆ. ರಶ್ಮಿಕಾ ಮಂದಣ್ಣ ಪ್ಯಾನ್ ಇಂಡಿಯಾದಲ್ಲಿ ಪ್ರಮುಖ ನಾಯಕಿಯಾಗಿ ತಮಗಾಗಿ ವಿಶೇಷ ಇಮೇಜ್ ಸೃಷ್ಟಿಸಿಕೊಂಡಿದ್ದಾರೆ. ಅಭಿಮಾನಿಗಳಿಂದ ಪ್ರೀತಿಯಿಂದ ನ್ಯಾಷನಲ್ ಕ್ರಶ್ ಎಂದು ಕರೆಯಲ್ಪಡುವ ಈ ನಟಿ…

Read More

ಬಂದಿದ್ದು ಜಾರ್ಖಂಡ್​ನಿಂದ, ಧರಿಸಿದ್ದು ಆರ್​ಸಿಬಿ ಜೆರ್ಸಿ, ಮಾಡಬಾರದ ಕೆಲಸ ಮಾಡಿ ಪೊಲೀಸ್ ಬಲೆಗೆ ಬಿದ್ದ ಖದೀಮರು!

ಬೆಂಗಳೂರು, ಏಪ್ರಿಲ್ 4: ಐಪಿಎಲ್ (IPL) ಪಂದ್ಯದ ವೇಳೆ ಕ್ರಿಕೆಟ್ ಪ್ರೇಮಿಗಳ ಸಂಭ್ರಮವನ್ನೇ ಬಂಡವಾಳ ಮಾಡಿಕೊಂಡಿದ್ದ ಅಂತರರಾಜ್ಯ ಕಳ್ಳರ ಜಾಲವನ್ನು ಕಬ್ಬನ್ ಪಾರ್ಕ್ ಪೊಲೀಸರು ಕೊನೆಗೂ ಪತ್ತೆಹಚ್ಚಿದ್ದಾರೆ. ಇದರೊಂದಿಗೆ, ಆರ್‌ಸಿಬಿ ಹಾಗೂ ಎಸ್‌ಆರ್‌ಎಚ್ (RCB vs SRH) ಪಂದ್ಯದ ವೇಳೆ ನಡೆದಿದ್ದ ಮೊಬೈಲ್ ಕಳ್ಳತನ ಪ್ರಕರಣದಲ್ಲಿ ಪೊಲೀಸರಿಗೆ ಮಹತ್ವದ ಯಶಸ್ಸು ದೊರೆತಂತಾಗಿದೆ. ಸದ್ಯ ಪೊಲೀಸರು 51 ಮೊಬೈಲ್ ಫೋನ್‌ಗಳನ್ನು ಜಪ್ತಿ ಮಾಡಿದ್ದಾರೆ. ಆರ್‌ಸಿಬಿ ಟೀ ಶರ್ಟ್ ಧರಿಸಿ ಎಂಟ್ರಿ! ಈ ಕಳ್ಳತನ ಜಾಲದಲ್ಲಿ ಭಾಗಿಯಾಗಿದ್ದ 18 ಅಪ್ರಾಪ್ತರು…

Read More

ಕೊಳ್ಳೇಗಾಲ ರೆಸಾರ್ಟ್​ನಲ್ಲಿ ನಡೀತು ಡ್ರಗ್ಸ್ ಪಾರ್ಟಿ; ಗಾಂಜಾ, ಚರಸ್ ಸೇವಿಸಿ ಮೋಜುಮಸ್ತಿಯಲ್ಲಿದ್ದವರು ಪೊಲೀಸ್ ಬಲೆಗೆ!

ಚಾಮರಾಜನಗರ, ಏಪ್ರಿಲ್ 04: ಜಿಲ್ಲೆಯ ಕೊಳ್ಳೇಗಾಲ ಹೊರವಲಯದಲ್ಲಿ ನಡೆದ ಡ್ರಗ್ಸ್ ಪಾರ್ಟಿ (Drugs Party) ಪ್ರಕರಣ ಸಂಚಲನ ಮೂಡಿಸಿದೆ. ಬೆಂಗಳೂರು ಮೂಲದ ರೌಡಿಶೀಟರ್ ಜಹೀರ್ ನೇತೃತ್ವದಲ್ಲಿ ಸುಮಾರು 50ಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದ ಪಾರ್ಟಿ ಪೊಲೀಸರ ದಾಳಿ ವೇಳೆ ಬಯಲಾಗಿದೆ. ಜಹೀರ್ ಜನ್ಮದಿನದ ಅಂಗವಾಗಿ ವಿಶೇಷವಾಗಿ ಈ ಪಾರ್ಟಿ ಆಯೋಜಿಸಲಾಗಿತ್ತು ಎಂದು ತಿಳಿದುಬಂದಿದೆ. 15 ಮಂದಿ ಡ್ರಗ್ಸ್ ಸೇವಿಸಿರುವುದು ದೃಢ ಪಾರ್ಟಿಯಲ್ಲಿ ಭಾಗಿಯಾದವರು ಗಾಂಜಾ ಹಾಗೂ ಚರಸ್ ಸೇವಿಸಿ ಮೋಜುಮಸ್ತಿಯಲ್ಲಿ ತೊಡಗಿದ್ದರು. ಬಳಿಕ ಪೊಲೀಸರು ನಡೆಸಿದ ವೈದ್ಯಕೀಯ…

Read More