Headlines

ಒಂದೇ ಬೈಕ್‌ನಲ್ಲಿ 5 ಜನ ಸವಾರಿ! 31 ಸಾವಿರ ರೂ. ದಂಡ ಹಾಕಿದ ಪೊಲೀಸರು – Kannada News | UP Bike Stunt: 5 Youths on Single Bike Goes Viral, Police Impose 31,000 Fine

ಉತ್ತರ ಪ್ರದೇಶ, ಡಿ.26: ಉತ್ತರ ಪ್ರದೇಶದ (UP bike stunt) ರಾಷ್ಟ್ರೀಯ ಹೆದ್ದಾರಿಯಲ್ಲಿ ಒಂದೇ ಬೈಕ್​​ನಲ್ಲಿ 5 ಜನ ಹೋಗಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​​ ಆಗಿದೆ. ರಸ್ತೆ ಸಂಚಾರ ನಿಯಮವನ್ನು ಉಲ್ಲಂಘಿಸಿ, ಐದು ಹುಡುಗರು ಒಂದೇ ಬೈಕ್​​ನಲ್ಲಿ ಹೋಗಿದ್ದಾರೆ. ಇದೀಗ ಈ ರೀತಿಯ ಸಂಚಾರ ಸಾರ್ವಜನಿಕರಲ್ಲಿ ಹಾಗೂ ವಾಹನ ಸವಾರರಲ್ಲಿ ಭೀತಿ ಹುಟ್ಟಿಸಿದೆ. ಹಾಪುರದ ರಾಷ್ಟ್ರೀಯ ಹೆದ್ದಾರಿ 9 ರಲ್ಲಿ ಈ ಘಟನೆ ನಡೆದಿದೆ. ಈ ವಿಡಿಯೋದಲ್ಲಿ 5 ಜನ ಯುವಕರು ಅಪಾಯಕಾರಿ ಸವಾರಿ…

Read More

Karnataka CM News Live: ದೆಹಲಿಯಲ್ಲಿ ಸಿದ್ದರಾಮಯ್ಯ, ಡಿಕೆ ಶಿವಕುಮಾರ್

ಬೆಂಗಳೂರು, ಮೇ 29: ರಾಜ್ಯ ರಾಜಕಾರಣದಲ್ಲಿ ಭಾರಿ ಸಂಚಲನ ಮೂಡಿಸಿರುವ ಸಿಎಂ ಸ್ಥಾನದ ಬದಲಾವಣೆಯ ಪ್ರಕ್ರಿಯೆ ಕೊನೆಯ ಹಂತಕ್ಕೆ ತಲುಪಿದೆ. ನಿನ್ನೆ (ಮೇ 28) ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ಘೋಷಿಸಿದ್ದು, ಇಂದು ರಾಜ್ಯಪಾಲರು ರಾಜೀನಾಮೆ ಅಂಗೀಕರಿಸಿದ್ದಾರೆ. ಈ ಬೆನ್ನಲ್ಲೇ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಇಬ್ಬರೂ ದೆಹಲಿಗೆ ತೆರಳಿದ್ದು, ಅಲ್ಲಿಂದ ವಾಪಸಾದ ನಂತರ ಸಿಎಲ್​​ಪಿ ಸಭೆ ನಡೆಯಲಿದೆ. ಇನ್ನು ಎರಡು ದಿನಗಳೊಳಗೆ ಮುಂದಿನ ಮುಖ್ಯಮಂತ್ರಿ ಹೆಸರು ಘೋಷಣೆಯಾಗಲಿದೆ. ಡಿಕೆ ಶಿವಕುಮಾರ್ ಮುಂದಿನ ಸಿಎಂ ಆಗಲಿರುವುದು ಬಹುತೇಕ…

Read More

ಪೆನ್ನಾರ್​ ನದಿ ನೀರು ಹಂಚಿಕೆ ವಿವಾದ: ಸುಪ್ರೀಂಕೋರ್ಟ್​​ನಲ್ಲಿ ಕರ್ನಾಟಕಕ್ಕೆ ಹಿನ್ನಡೆ – Kannada News | Pennar River Water Dispute Between Karnataka and Tamil Nadu: Supreme Court Orders Tribunal

ನವದೆಹಲಿ, ಫೆಬ್ರವರಿ 02: ಕರ್ನಾಟಕ-ತಮಿಳುನಾಡು ನಡುವಿನ ಪೆನ್ನಾರ್​ ನದಿ ನೀರು ಹಂಚಿಕೆ ವಿವಾದ ಸಂಬಂಧ ಸುಪ್ರೀಂಕೋರ್ಟ್​​ ಮಹತ್ವದ ಆದೇಶ ನೀಡಿದ್ದು, ನ್ಯಾಯಾಧೀಕರಣ ರಚನೆಗೆ ಸೂಚಿಸಿದೆ. ಈ ಬಗ್ಗೆ ತೀರ್ಪು ನೀಡಿರುವ ನ್ಯಾ. ವಿಕ್ರಮ್ ನಾಥ್ ಮತ್ತು ನ್ಯಾ.ಎನ್.ವಿ. ಅಂಜಾರಿಯಾ ಪೀಠ, 1 ತಿಂಗಳ ಒಳಗೆ ನ್ಯಾಯಾಧೀಕರಣ ರಚನೆ ಮಾಡುವಂತೆ ಕೇಂದ್ರಕ್ಕೆ ತಿಳಿಸಿದೆ. ಕಳೆದ ಡಿಸೆಂಬರ್​​ನಲ್ಲಿ ಈ ಬಗ್ಗೆ ವಿಚಾರಣೆ ನಡೆಸಿದ್ದ ಕೋರ್ಟ್​​ ತೀರ್ಪನ್ನು ಕಾಯ್ದಿರಿಸಿತ್ತು. ಕರ್ನಾಟಕದ ವಾದ ಪುರಸ್ಕರಿಸದ ಕೋರ್ಟ್ #BREAKING| Supreme Court Directs Centre…

Read More

NCRTC Recruitment 2026: ಕೇಂದ್ರ ಸರ್ಕಾರಿ ಉದ್ಯೋಗದ ಕನಸು ಕಾಣುತ್ತಿರುವವರಿಗೆ ಸುವರ್ಣಾವಕಾಶ; ತಿಂಗಳಿಗೆ 2ಲಕ್ಷ ರೂ. ಸಂಬಳ, ಇಂದೇ ಅರ್ಜಿ ಸಲ್ಲಿಸಿ! – Kannada News | NCRTC Recruitment 2026: Manager and Engineer Posts with Attractive Salary

ಪ್ರತಿಷ್ಠಿತ ರಾಷ್ಟ್ರೀಯ ರಾಜಧಾನಿ ಪ್ರದೇಶ ಸಾರಿಗೆ ನಿಗಮದಲ್ಲಿ (NCRTC) ವೃತ್ತಿಜೀವನ ಆರಂಭಿಸಲು ಬಯಸುವವರಿಗೆ ಒಂದು ಸಿಹಿಸುದ್ದಿ ಇಲ್ಲಿದೆ. ನಿಗಮವು ವಿವಿಧ ತಾಂತ್ರಿಕ ಮತ್ತು ಆಡಳಿತಾತ್ಮಕ ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆ ಹೊರಡಿಸಿದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಆಕರ್ಷಕ ವೇತನ ಹಾಗೂ ಕೇಂದ್ರ ಸರ್ಕಾರದ ಸೌಲಭ್ಯಗಳನ್ನು ಬಯಸುವ ಅಭ್ಯರ್ಥಿಗಳಿಗೆ ಇದು ಉತ್ತಮ ವೇದಿಕೆಯಾಗಿದೆ. ಆದರೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ನಾಳೆಯೇ (ಮೇ 9) ಆಗಿರುವುದರಿಂದ, ಆಸ್ತರು ತಡಮಾಡದೇ ಅರ್ಜಿ ಸಲ್ಲಿಸಿ, ನಿಮ್ಮ ಕನಸಿನ ಉದ್ಯೋಗ ಪಡೆಯಿರಿ. ಖಾಲಿ…

Read More

ತುಮಕೂರು: ಭೀಕರ ಅಪಘಾತ, ಶಬರಿಮಲೆಗೆ ಹೋಗಿ ಬರುತ್ತಿದ್ದ ಯಲಬುರ್ಗಾ ಮೂಲದ ನಾಲ್ವರು ಸ್ಥಳದಲ್ಲೇ ಸಾವು – Kannada News | Four Sabarimala Pilgrims from Yelburga Killed in Horrific Road Accident Near Tumakuru

ತುಮಕೂರು, ಜನವರಿ 9: ತುಮಕೂರು (Tumkur) ಜಿಲ್ಲೆಯ ಕೋರಾ ಸಮೀಪದ ವಸಂತನರಸಾಪುರ ಕೈಗಾರಿಕಾ ಪ್ರದೇಶದ ಬಳಿ ಭೀಕರ ಅಪಘಾತ (Accident) ಸಂಭವಿಸಿ ನಾಲ್ವರು ಅಯ್ಯಪ್ಪ ಭಕ್ತರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ನಿಂತಿದ್ದ ಲಾರಿಗೆ ಕ್ರೂಸರ್ ವಾಹನ ಡಿಕ್ಕಿ ಹೊಡೆದ ಪರಿಣಾಮ ಈ ದುರಂತ ಸಂಭವಿಸಿದೆ. ಕ್ರೂಸರ್‌ನಲ್ಲಿ ಪ್ರಯಾಣಿಸುತ್ತಿದ್ದ ನಾಲ್ವರು ಅಯ್ಯಪ್ಪ ಭಕ್ತರು ಮೃತಪಟ್ಟಿದ್ದು, ಇವರಲ್ಲಿ ಒಬ್ಬ ಬಾಲಕಿ ಕೂಡ ಸೇರಿದ್ದಾಳೆ. ಅಪಘಾತದಲ್ಲಿ ಇನ್ನೂ ಏಳು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಮೃತರನ್ನು ಕೊಪ್ಪಳ ಜಿಲ್ಲೆ ಯಲಬುರ್ಗಾ ಮೂಲದ ನಿವಾಸಿಗಳು ಎಂದು…

Read More

ಮಾದಪ್ಪನ ಬೆಟ್ಟದ ತಪ್ಪಲಿನ ರಸ್ತೆಗೆ ಬಂದ ಭಾರಿ ಗಾತ್ರದ ಒಂಟಿ ಸಲಗ: ನೋಡುತ್ತಾ ನಿಂತ ವಾಹನ ಸವಾರರು! – Kannada News | Massive Lone Elephant Walks Onto Road Near Male Mahadeshwara Hills, Motorists Stop to Watch

ಚಾಮರಾಜನಗರ, ಜನವರಿ 13: ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಮಲೆ ಮಹದೇಶ್ವರ ಬೆಟ್ಟದ ರಾಮಾಪುರ ರಸ್ತೆಯಲ್ಲಿ ಬೃಹತ್ ಗಾತ್ರದ ಒಂಟಿ ಸಲಗ ರಸ್ತೆ ದಾಟುತ್ತಿರುವ ದೃಶ್ಯ ಕಂಡು ಬಂದಿದೆ. ಏಕಾಏಕಿ ಬಂದ ಒಂಟಿ ಸಲಗವನ್ನು ನೋಡಲು ಕೆಲಕಾಲ ವಾಹನ ಸವಾರರು ಮತ್ತು ಮಾದಪ್ಪನ ಭಕ್ತರು ರಸ್ತೆಯಲ್ಲೇ ನಿಂತಿದ್ದಾರೆ. ಹನೂರಿನಿಂದ ರಾಮಾಪುರಕ್ಕೆ ತೆರಳುವ ಮಾರ್ಗದಲ್ಲಿ ಪ್ರತಿದಿನವೂ ಒಂಟಿ ಸಲಗ ಸೇರಿದಂತೆ ಕೆಲ ಕಾಡಾನೆಗಳ ಹಿಂಡು ರಸ್ತೆ ದಾಟುತ್ತಿರುವುದು ಸಾಮಾನ್ಯವಾಗಿದೆ. ಕಾಡಾನೆಗಳು ಪ್ರತಿದಿನ ನೀರು ಕುಡಿಯಲು ಈ ಭಾಗಕ್ಕೆ ಆಗಮಿಸುತ್ತಿವೆ…

Read More

ವಿರೋಧದ ಬೆನ್ನಲ್ಲೇ ‘ಸರ್ಸೆ ನಿನ್ನ ಸೆರಗ ಸರ್ಸೆ’ ಹಾಡನ್ನು ತೆಗೆದುಹಾಕಿದ್ದು ನಿಜವೇ?

ಜೋಗಿ ಪ್ರೇಮ್ (Prem) ನಿರ್ದೇಶನದ ‘ಕೆಡಿ’ ಸಿನಿಮಾ ಈಗ ಸುದ್ದಿ ಆಗಿದೆ. ಇದಕ್ಕೆ ಕಾರಣ ‘ಸರ್ಸೆ ನಿನ್ನ ಸೆರಗ ಸರ್ಸೆ’ ಹಾಡು. ಈ ಹಾಡಿನಲ್ಲಿ ನೋರಾ ಫತೇಹಿ ಹಾಗೂ ಸಂಜಯ್ ದತ್ ನಟಿಸಿದ್ದರು. ಈ ಹಾಡಿಗೆ ಸಾಕಷ್ಟು ವಿರೋಧ ವ್ಯಕ್ತವಾಯಿತು. ಅನೇಕ ಸೆಲೆಬ್ರಿಟಿಗಳು ಈ ಹಾಡಿನ ಸಾಹಿತ್ಯವನ್ನು ಟೀಕಿಸಿದರು. ಈ ಬೆನ್ನಲ್ಲೇ ‘ಸರ್ಸೆ ನಿನ್ನ ಸೆರಗ ಸರ್ಸೆ’ ಹಾಡನ್ನು ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್ ಮೂಲಕ ತೆಗೆದುಹಾಕಲಾಗಿದೆ ಎನ್ನಲಾಗಿತ್ತು. ಆದರೆ, ಇದು ನಿಜವಲ್ಲ. ಪ್ರೇಮ್ ಅವರು ‘ಕೆಡಿ’…

Read More

Bengaluru Air Quality: ಅಂತೂ ಇಂತೂ ಸುಧಾರಿಸಿತು ಬೆಂಗಳೂರಿನ ಏರ್ ಕ್ವಾಲಿಟಿ!

ಬೆಂಗಳೂರು, ಏಪ್ರಿಲ್ 07: ಕಳೆದ ಹಲವು ದಿನಗಳಿಂದ ಬೆಂಗಳೂರು ಸೆರಿದಂತೆ ರಾಜ್ಯದ ವಿವಿಧೆಡೆ ವಾಯು ಗುಣಮಟ್ಟ (Bengaluru Air Quality) ಸುಧಾರಿಸುತ್ತಿದೆ. ಇಷ್ಟು ದಿನ ಉಸಿರಾಟಕ್ಕೂ ಮಾರಕವಾಗಿದ್ದ ಗಾಳಿಯು ಇಂದು ಒಳ್ಳೆಯ ಗುಣಮಟ್ಟದಲ್ಲಿರುವುದು ಸ್ವಲ್ಪಮಟ್ಟಿಗೆ ಆತಂಕವನ್ನು ಕಡಿಮೆಯಾಗಿಸಿದೆ. ಆದರೂ ವಾಯು ಗುಣಮಟ್ಟ ಎಲ್​ಲೆಡೆಯೂ ಅನಾರೋಗ್ಯಕರ ಮಟ್ಟದಲ್ಲಿಯೆ ಇದೆ ಎಂದು ತಜ್ಞರು ತಿಳಿಸಿದ್ದಾರೆ. ಉಡುಪಿ, ಮಂಗಳೂರು ಸೇರಿದಂತೆ ಇಂದು ಹಲವೆಡೆ ವಾಯು ಗುಣಮಟ್ಟ ಸುಧಾರಿಸಿದೆ. ಕೆಲ ದಿನಗಳ ಹಿಂದೆಯಷ್ಟೇ ತೀವ್ರ ಕಳಪೆ ಮಟ್ಟಕ್ಕೆ ಇಳಿದಿದ್ದ ಬೆಂಗಳೂರಿನ ಏರ್ ಕ್ವಾಲಿಟಿ…

Read More

ಬಾರ್​​, ರೆಸ್ಟೋರೆಂಟ್​ಗಳಿಗೂ ತಟ್ಟಿದ್ದ ಗ್ಯಾಸ್ ಅಭಾವದ ಎಫೆಕ್ಟ್: ನೋವಿನ ಕಥೆ ಬಿಚ್ಚಿಟ್ಟ ಮಾಲೀಕ

ಬೆಂಗಳೂರು, ಮಾರ್ಚ್​ 24: ಬೆಂಗಳೂರಿನ ಬಾರ್​ ಮತ್ತು ರೆಸ್ಟೋರೆಂಟ್‌ಗಳು ವಾಣಿಜ್ಯ ಗ್ಯಾಸ್ ಸಿಲಿಂಡರ್​ಗಳ ಕೊರತೆಯಿಂದಾಗಿ ತೀವ್ರ ಸಂಕಷ್ಟಕ್ಕೆ ಸಿಲುಕಿವೆ. ಗ್ಯಾಸ್ ಸಿಲಿಂಡರ್ ಅಭಾವದ ಎಫೆಕ್ಟ್​​ಗೆ ಮಾಂಸಾಹಾರ ಪದಾರ್ಥಗಳನ್ನು ತಯಾರಿಸಲು ಸಾಧ್ಯವಾಗುತ್ತಿಲ್ಲ, ಇದರಿಂದ ಗ್ರಾಹಕರು ಇಷ್ಟಪಡುವ ಚಿಕನ್, ಮಟನ್ ಮತ್ತು ಫಿಶ್ ಐಟಂಗಳನ್ನು ನೀಡಲು ಮಾಲೀಕರಿಗೆ ಕಷ್ಟವಾಗಿದೆ. ಸದ್ಯ ಸಲಾಡ್ ಮತ್ತು ಕೆಲವು ಸರಳ ಐಟಂಗಳನ್ನು ಮಾತ್ರ ನೀಡಲಾಗುತ್ತಿದೆ. ವ್ಯಾಪಾರದಲ್ಲಿ ಶೇ.40ರಷ್ಟು ಕುಸಿತ ಕಂಡುಬಂದಿದೆ. ಗ್ರಾಹಕರು ನಾನ್-ವೆಜ್‌ಗಾಗಿ ಬರುತ್ತಿದ್ದರೂ, ಗ್ಯಾಸ್ ಇಲ್ಲದ ಕಾರಣ ಅವರಿಗೆ ಬೇಕಾದ ಆಹಾರವನ್ನು ಪೂರೈಸಲು…

Read More

ಭಾರತೀಯರಿಗೆ ಬಾಂಗ್ಲಾದೇಶದ ವೀಸಾ ಸೇವೆ ಮತ್ತೆ ಆರಂಭ; ಪ್ರಧಾನಿ ತಾರಿಕ್ ರೆಹಮಾನ್ ನಿರ್ಧಾರ – Kannada News | Bangladesh Restores visa services for Indians Days After Tarique Rahman Takes oath

ಢಾಕಾ, ಫೆಬ್ರವರಿ 20: ಬಾಂಗ್ಲಾದೇಶ ರಾಷ್ಟ್ರೀಯತಾವಾದಿ ಪಕ್ಷ (ಬಿಎನ್‌ಪಿ) ಈ ಬಾರಿಯ ಚುನಾವಣೆಯಲ್ಲಿ ಗೆಲುವು ಕಂಡ ನಂತರ ಫೆಬ್ರವರಿ 17ರಂದು ಬಾಂಗ್ಲಾದೇಶದ ಹೊಸ ಪ್ರಧಾನಿಯಾಗಿ ತಾರಿಕ್ ರೆಹಮಾನ್ (Tarique Rahman) ಅಧಿಕಾರ ವಹಿಸಿಕೊಂಡಿದ್ದರು. ಅದಾದ ಮೂರೇ ದಿನದಲ್ಲಿ ನವದೆಹಲಿಯಲ್ಲಿರುವ ಬಾಂಗ್ಲಾದೇಶ ಹೈಕಮಿಷನ್‌ನಲ್ಲಿ ಭಾರತೀಯ ನಾಗರಿಕರಿಗೆ ವೀಸಾ ಸೇವೆಗಳನ್ನು ಮರು ಸ್ಥಾಪಿಸುವ ಮೂಲಕ ಭಾರತದೊಂದಿಗೆ ಸಂಬಂಧವನ್ನು ಸರಿಪಡಿಸಲು ಅವರು ಕ್ರಮ ಕೈಗೊಂಡಿದ್ದಾರೆ. ಇಂದಿನಿಂದಲೇ ಈ ನಿರ್ಧಾರ ಜಾರಿಗೆ ಬರಲಿದೆ. ಮಹಮ್ಮದ್ ಯೂನಸ್ ಸರ್ಕಾರ 2025ರಿಂದ ಭಾರತಕ್ಕೆ ವೀಸಾ ಸೇವೆಯನ್ನು…

Read More