Headlines

‘ಜನ ನಾಯಗನ್’ ಸಿನಿಮಾದಿಂದಾಗಿ 100 ಕೋಟಿ ನಷ್ಟ ಅನುಭವಿಸಿದ ಚಿತ್ರಮಂದಿರಗಳು – Kannada News | Due to Jana Nayagan movie release delay theaters loss more than 100 crore rs

ದಳಪತಿ ವಿಜಯ್ (Thalapathy Vijay) ನಟನೆಯ ‘ಜನ ನಾಯಗನ್’ ಸಿನಿಮಾ ಜನವರಿ 10ಕ್ಕೆ ತೆರೆ ಕಾಣಬೇಕಿತ್ತು. ಆದರೆ ಸಿಬಿಎಫ್​​ಸಿ, ಪ್ರಮಾಣ ಪತ್ರ ನೀಡಲು ವಿಳಂಬ ಮಾಡಿದ್ದು ಅದರ ನಂತರ ನಡೆದ ಬೆಳವಣಿಗೆಗಳ ಕಾರಣದಿಂದಾಗಿ ಸಿನಿಮಾ ಈ ವರೆಗೆ ಬಿಡುಗಡೆ ಆಗಿಲ್ಲ. ಪ್ರಕರಣ ನ್ಯಾಯಾಲಯದಲ್ಲಿದ್ದು, ಸಿನಿಮಾದ ಬಿಡುಗಡೆ ಇನ್ನಷ್ಟು ತಡ ಆಗುವ ಸಾಧ್ಯತೆ ದಟ್ಟವಾಗಿದೆ. ತಮಿಳುನಾಡು ವಿಧಾನಸಭೆ ಚುನಾವಣೆ ಮುಗಿಯುವವರೆಗೆ ಸಿನಿಮಾ ಬಿಡುಗಡೆ ಆಗುವುದಿಲ್ಲ ಎಂಬ ಅಭಿಪ್ರಾಯಗಳು ಸಹ ಅಲ್ಲಲ್ಲಿ ಹರಿದಾಡುತ್ತಿವೆ. ಸಿನಿಮಾ ಬಿಡುಗಡೆ ತಡವಾಗಿರುವುದರಿಂದ ನಿರ್ಮಾಪಕ ಕೆವಿಎನ್…

Read More

Video: ಹಸುವಿಗೆ ಮೇವು ಹಾಕಲು ಹೋದವನ ಮೇಲೆ ಸಿಂಹ ದಾಳಿ, ತಲೆ ಸವರಿದರೂ ಬಿಡಲಿಲ್ಲ ಕಾಡಿನ ರಾಜ – Kannada News | Gujarat Lion Attack: Viral Video Shows Man Mauled by Lion in Bhavnagar

ಭಾವನಗರ , ಜುಲೈ 07: ಗುಜರಾತ್‌ನ ಭಾವನಗರದಲ್ಲಿ ಸಿಂಹ(Lion)ವೊಂದು ವ್ಯಕ್ತಿಯ ಮೇಲೆ ಭೀಕರವಾಗಿ ದಾಳಿ ಮಾಡಿರುವ ಘಟನೆ ನಡೆದಿದೆ. ಸಿಂಹವು ಆ ವ್ಯಕ್ತಿಯನ್ನು ನೆಲಕ್ಕೆ ತಳ್ಳಿ, ಆತನ ಕಾಲು ಮತ್ತು ಕೈಯನ್ನು ತನ್ನ ದವಡೆ ಹಾಗೂ ಪಂಜಗಳ ನಡುವೆ ಬಿಗಿಯಾಗಿ ಕಚ್ಚಿ ಹಿಡಿದುಕೊಂಡಿರುವ ಭಯಾನಕ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಜನರನ್ನು ಬೆಚ್ಚಿಬೀಳಿಸಿದೆ. ವ್ಯಕ್ತಿ ಸಿಂಹದ ತಲೆ ಸವರುತ್ತರುವುದು ವಿಡಿಯೋದಲ್ಲಿ ಕಾಣಬಹುದು. ಘಟನೆ ನಡೆದಿದ್ದು ಹೇಗೆ? ಭಾವನಗರ ಜಿಲ್ಲೆಯ ಪಲಿತಾನ ತಾಲೂಕಿನ ಗರಾಜಿಯಾ ಗ್ರಾಮದಲ್ಲಿ…

Read More

ವಿಧಾನಸೌಧದಲ್ಲೇ ಅಧಿಕಾರಿ, ಸಿಬ್ಬಂದಿ ಕಳ್ಳಾಟ: ಸಮಯ ಪಾಲನೆ ಉಲ್ಲಂಘನೆ; ಸಿಎಂ ಆದೇಶಕ್ಕೂ ಡೋಂಟ್ ಕೇರ್ – Kannada News | Vidhana Soudha Punctuality Lapse: Officials Ignore CM DK Shivakumar’s Order

ಬೆಂಗಳೂರು, ಜೂನ್​​ 15: ರಾಜ್ಯದ ಆಡಳಿತದ ನಾಡಿಮಿಡಿತವೇ ವಿಧಾನಸೌಧ (Vidhana Soudha). ಸರ್ಕಾರದ ಅನೇಕ ನಿರ್ಧಾರಗಳು ರೂಪುಗೊಳ್ಳುವುದು ಈ ಶಕ್ತಿಕೇಂದ್ರದಲ್ಲಿ. ಆದರೆ ಇದೇ ವಿಧಾನಸೌಧದಲ್ಲಿ ಇದೀಗ ಅಧಿಕಾರಿಗಳು ಹಾಗೂ ಸಿಬ್ಬಂದಿ ಸಮಯಪಾಲನೆಯ ಕಳ್ಳಾಟ ಚರ್ಚೆಗೆ ಗ್ರಾಸವಾಗಿದೆ. ಸಿಎಂ ಡಿಕೆ ಶಿವಕುಮಾರ್ (DK Shivakumar) ಆದೇಶಕ್ಕೂ ಡೋಂಟ್ ಕೇರ್​​ ಇಲ್ಲದಂತಾಗಿದೆ. ಮುಖ್ಯಾಂಶಗಳು ಅಧಿಕಾರಿಗಳು ಮತ್ತು ಸಿಬ್ಬಂದಿ ಕಳ್ಳಾಟ ಬಯಲು ವಿಧಾನಸೌಧದಲ್ಲಿ ಸಮಯ ಪಾಲಿಸದೆ ನಿಯಮ ಉಲ್ಲಂಘನೆ ಸರ್ಕಾರದ ರೂಲ್ಸ್ ಜನಸಾಮಾನ್ಯರಿಗೆ ಮಾತ್ರನಾ, ಅಧಿಕಾರಿಗಳಿಗೆ ಇಲ್ವಾ? ಟಿವಿ9 ರಿಯಾಲಿಟಿ ಚೆಕ್​ನಲ್ಲಿ…

Read More

ದೇವರಿಗೆ ಕಣ್ಣಿಲ್ಲ ಎಂದು ದೂರುವ ಮುನ್ನ ಈ ಸ್ಟೋರಿ ನೋಡಿ ! ಭಗವಂತನ ಅನುಗ್ರಹ ಪಡೆಯಲು ಬೇಕಿಲ್ಲ ವಿಶೇಷ ಯೋಗ್ಯತೆ – Kannada News | Divine Intervention: Understanding the Power of Heartfelt Pleas

ಬೆಂಗಳೂರು. ಏ.23: ನಮ್ಮ ದೈನಂದಿನ ಜೀವನದಲ್ಲಿ ಕೇಳುವ ನುಡಿಗಳ ಹಿಂದಿರುವ ಆಳವಾದ ತತ್ವಗಳನ್ನು ಅನಾವರಣಗೊಳಿಸುತ್ತದೆ. “ದೇವರಿಗೆ ಕಣ್ಣಿಲ್ಲವಾ” ಎಂಬ ಲೋಕರೂಢಿ ಮಾತು ಇಂತಹ ಒಂದು ವಿಶೇಷ ಮಹತ್ವವನ್ನು ಹೊಂದಿದೆ. ಈ ಮಾತನ್ನು ನಾವು ಯಾವಾಗಲು ನೋವು, ಅಸಹಾಯಕತೆ, ಅಥವಾ ಅನ್ಯಾಯಕ್ಕೆ ಒಳಗಾದಾಗ, ಮನದಾಳದಿಂದ ಹೊರಡುವ ಭಾವನಾತ್ಮಕ ಅಭಿವ್ಯಕ್ತಿಯಾಗಿ ಬಳಸುತ್ತೇವೆ. ಇದು ಕೇವಲ ಒಂದು ವಾಕ್ಯವಲ್ಲ, ಬದಲಿಗೆ ಯಾವ ಜಪ, ತಪ, ಪೂಜೆ ಇಲ್ಲದೆ, ಹೃದಯದಿಂದ ಹೊರಹೊಮ್ಮುವ ತೀವ್ರವಾದ ಭಾವನೆಯನ್ನು ಪ್ರತಿನಿಧಿಸುತ್ತದೆ. ಸಂಕಷ್ಟದ ಸಮಯದಲ್ಲಿ, ನಾವು ಎಲ್ಲ ರೀತಿಯಿಂದಲೂ…

Read More

ಶಾಲಾ ಶೈಕ್ಷಣಿಕ ವೇಳಾಪಟ್ಟಿ ಪ್ರಕಟ; ಮೇ.29ರಿಂದ ಶಾಲೆ ಆರಂಭ, ಈ ಬಾರಿ ದಸರಾ ರಜೆ ಎಷ್ಟು ಗೊತ್ತಾ? – Kannada News | Karnataka Government Released 2026 27 School Academic year schedule, here Is working days And Holidays details

ಬೆಂಗಳೂರು, (ಏಪ್ರಿಲ್ 14) : 2026-27ನೇ ಸಾಲಿನ ಶಾಲಾ ಶೈಕ್ಷಣಿಕ ವೇಳಾಪಟ್ಟಿ  ( School Academic year schedule) ಪ್ರಕಟವಾಗಿದೆ. ರಾಜ್ಯದಲ್ಲಿ ರಾಜ್ಯ ಪಠ್ಯಕ್ರಮದ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಪ್ರಾಥಮಿಕ, ಪ್ರೌಢ ಶಾಲೆಗಳಿಗೆ 2026-27ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಶೈಕ್ಷಣಿಕ ಅವಧಿ ಮತ್ತು ರಜಾ ಅವಧಿಯನ್ನು ನಿಗದಿಪಡಿಸಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಆಯುಕ್ತರು ವಾರ್ಷಿಕ ಶೈಕ್ಷಣಿಕ ಕ್ರಿಯಾಯೋಜನೆಯ ವೇಳಾಪಟ್ಟಿಯನ್ನು ಪ್ರಕಟಿಸಿದ್ದಾರೆ. ಮೇ 29ರಿಂದ ರಾಜ್ಯ ಪಠ್ಯಕ್ರಮ ಅನುಸರಿಸುತ್ತಿರುವ ಸರಕಾರಿ, ಅನುದಾನಿತ ಮತ್ತು…

Read More

ಇದು ವಿದ್ಯುತ್ ಕ್ರಾಂತಿ..! ವೈಫೈ ಇಂಟರ್ನೆಟ್ ರೀತಿ ವೈರ್ಲೆಸ್ ಎಲೆಕ್ಟ್ರಿಸಿಟಿ ರವಾನಿಸಿದ ಫಿನ್​ಲ್ಯಾಂಡ್ ವಿಜ್ಞಾನಿಗಳು – Kannada News | Finland scientists successfully transmit electric power through the air without using physical wires

ಹೆಲ್ಸಿಂಕಿ, ಜನವರಿ 19: ಡಾಟಾ ಸೆಂಟರ್​ಗಳ ಸಿಸ್ಟಂಗಳಿಂದ ಸೃಷ್ಟಿಯಾಗುವ ಶಾಖ ಬಳಸಿ ವಿದ್ಯುತ್ ಉತ್ಪಾದಿಸುವ ಆವಿಷ್ಕಾರ ಮಾಡಿರುವ ಫಿನ್​ಲ್ಯಾಂಡ್ ಸಂಶೋಧಕರು ಇದೀಗ ಕೇಬಲ್ ವೈರ್ ಇಲ್ಲದೆಯೇ ವಿದ್ಯುತ್ ಹರಿಯಿಸುವ ಪ್ರಯೋಗ ನಡೆಸುತ್ತಿದ್ದಾರೆ. ಈ ನಿಟ್ಟಿನಲ್ಲಿ ತಂತ್ರಜ್ಞಾನ ಅಭಿವೃದ್ದಿ ಆಗುತ್ತಿದ್ದು ಇತ್ತೀಚಿನ ಆರಂಭಿಕ ಪ್ರಯೋಗಗಳು ಯಶಸ್ವಿಯಾಗಿವೆ. ಮುಂಬರುವ ದಿನಗಳಲ್ಲಿ ಇಂಟರ್ನೆಟ್ ಬಳಸುವ ರೀತಿಯಲ್ಲಿ ವಿದ್ಯುತ್ ಬಳಸುವ ಒಂದು ಟೆಕ್ನಾಲಜಿ ಬರುವ ಸಾಧ್ಯತೆ ದಟ್ಟವಾಗಿದೆ. ವೈರ್ಲೆಸ್ ವಿದ್ಯುತ್ ಹೇಗೆ ಸಾಧ್ಯ? ವೈಫೈ ಮೂಲಕ ಡಾಟಾ ವರ್ಗಾವಣೆ ಸಾಧ್ಯವಾಗುವಂತೆ, ಎಲೆಕ್ಟ್ರೋಮ್ಯಾಗ್ನೆಟಿಕ್ ಫೀಲ್ಡ್…

Read More

ಚಾಮರಾಜನಗರ: ತನಗೆ ತಾನೇ ಬೆಂಕಿ ಹಚ್ಚಿಕೊಂಡ ಕುಡುಕ! ಮುಂದೇನಾಯ್ತು ನೋಡಿ – Kannada News | Kollegala Incident: Drunk Man Sets Self on Fire in Chamarajanagar, Rushed to Hospital

ಚಾಮರಾಜನಗರ, ಫೆ.17: ಕುಡುಕನೊಬ್ಬ ತನಗೆ ತಾನೇ ಬೆಂಕಿ ಹಚ್ಚಿಕೊಂಡ ಘಟನೆಯೊಂದು ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲೂಕಿನ ಬಸ್ತಿಪುರದಲ್ಲಿ ನಡೆದಿದೆ. ಆನಂದ್ (45) ಎಂಬ ವ್ಯಕ್ತಿ ಬೆಂಕಿ ಹಚ್ಚಿಕೊಂಡು ಹುಚ್ಚಾಟ ಮೆರೆದಿದ್ದಾನೆ. ಬಸ್ತಿಪುರ ಗ್ರಾಮದ ಕಾಲುವೆ ಬಳಿ ಕಂಠಪೂರ್ತಿ ಕುಡಿದು ರಂಪಾಟ ಮಾಡಿದ್ದಾನೆ. ಮದ್ಯದ ಅಮಲಿನಲ್ಲಿ ರಂಪಾಟ ಶುರು ಮಾಡಿದ್ದಾರೆ. ಅದೇನಾಯಿತೋ ತಿಳಿಯದು, ಇದ್ದಕ್ಕಿದ್ದಂತೆ ತನ್ನ ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾನೆ. ಮೈಗೆ ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆ ಗಾಬರಿಗೊಂಡ ಆತ ತಕ್ಷಣ ಪಕ್ಕದಲ್ಲಿದ್ದ ಕಾಲುವೆಗೆ ಹಾರಿದ್ದಾನೆ. ಇದರಿಂದ ಗಂಭೀರವಾಗಿ…

Read More

ಆರೆಸ್ಸೆಸ್, ಬಿಜೆಪಿಯ ಸಂಘಟನಾ ಶಕ್ತಿ ಶ್ಲಾಘಿಸಿದ ಮಾಜಿ ಸಿಎಂ ದಿಗ್ವಿಜಯ ಸಿಂಗ್; ಕಾಂಗ್ರೆಸ್ಸನ್ನು ಕಿಚಾಯಿಸಿದ ಬಿಜೆಪಿ – Kannada News | Digvijaya Singh shares Narendra Modi’s old photo, praises organizational power of RSS

ಆರೆಸ್ಸೆಸ್ ಬಗ್ಗೆ ದಿಗ್ವಿಜಯ ಸಿಂಗ್ ಅವರ ಪೋಸ್ಟ್ ನವದೆಹಲಿ, ಡಿಸೆಂಬರ್ 27: ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ, ಹಾಲಿ ರಾಜ್ಯಸಭಾ ಸಂಸದ ಹಾಗೂ ಹಿರಿಯ ಕಾಂಗ್ರೆಸ್ ಮುಖಂಡರಾದ ದಿಗ್ವಿಜಯ ಸಿಂಗ್ (Digvijaya Singh) ಬಹಳ ಅಪರೂಪಕ್ಕೆ ಬಿಜೆಪಿ ಮತ್ತು ಆರೆಸ್ಸೆಸ್ ಅನ್ನು ಹೊಗಳುವ ಕೆಲಸ ಮಾಡಿದ್ದಾರೆ. ಹೆಚ್ಚಿನ ಸಂದರ್ಭಗಳಲ್ಲಿ ಆರೆಸ್ಸೆಸ್ ಮತ್ತು ಬಿಜೆಪಿಯನ್ನು ಹೀಗಳೆಯುವ ದಿಗ್ವಿಜಯ ಸಿಂಗ್, ಈಗ ವರಸೆ ಬದಲಿಸಿದ್ದು ಬಿಜೆಪಿಗೂ ಅಚ್ಚರಿಯ ಶಾಕ್ ಕೊಟ್ಟಿದೆ. ಸ್ವಲ್ಪವೂ ತಡ ಮಾಡದ ಬಿಜೆಪಿ ಈಗ ದಿಗ್ವಿಜಯರ ಅಸ್ತ್ರ ಬಳಸಿ…

Read More

ವೈದ್ಯರ ಎಡವಟ್ಟು ಬಾಣಂತಿ ಸಾವು ಆರೋಪ; ಚಿಂತಾಮಣಿ ಸರ್ಕಾರಿ ಆಸ್ಪತ್ರೆ ಮುಂದೆ ಶವವಿಟ್ಟು ಪ್ರತಿಭಟನೆ! – Kannada News | Chintamani Hospital Tragedy: Woman Dies Post Sterilization, Medical Negligence Alleged

ಚಿಕ್ಕಬಳ್ಳಾಪುರ ಮೇ.11: ವೈದ್ಯರು ಮಾಡುವ ಎಡವಟ್ಟು ಒಂದೆರಡಲ್ಲ, ಇವರು ಮಾಡುವ ಸಮಸ್ಯೆಗಳಿಗೆ ಸಾಮಾನ್ಯ ಜನ ಬಲಿಯಾಗುತ್ತಿದ್ದಾರೆ. ಇಂತಹದೇ ಅದೆಷ್ಟೋ ಪ್ರಕರಣಗಳು ಈಗ ಬೆಳಕಿದೆ ಬಂದಿದೆ. ಇದೀಗ ಚಿಕ್ಕಬಳ್ಳಾರಪುರದಲ್ಲಿ ಇಂತಹದೇ ಘಟನೆಯೊಂದು ನಡೆದಿದೆ. ಸಂತಾನಹರಣ ಶಸ್ತ್ರಚಿಕಿತ್ಸೆ ವೇಳೆ ವೈದ್ಯರು ಮಾಡಿದ ಎಡವಟ್ಟಿನಿಂದ ಬಾಣಂತಿಯೊಬ್ಬರು ಮೃತಪಟ್ಟಿರುವ ಘಟನೆ ಚಿಂತಾಮಣಿ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ. ಘಟನೆಯಿಂದ ಆಕ್ರೋಶಗೊಂಡ ಸಂಬಂಧಿಕರು ಆಸ್ಪತ್ರೆಯ ಮುಂದೆ ಮೃತದೇಹವನ್ನಿಟ್ಟು ಧರಣಿ ನಡೆಸುತ್ತಿದ್ದಾರೆ. ಬಟ್ಲಹಳ್ಳಿ ಗ್ರಾಮದ ನಿವಾಸಿ ನರ್ಮದಾ ಜಿ.ಎನ್ (24) ಮೃತಪಟ್ಟ ದುರ್ದೈವಿ. ಇವರಿಗೆ ಇಬ್ಬರು…

Read More

ಪುದುಚೆರಿಯ ಕಾಲೇಜುಗಳಲ್ಲಿ ಇಂದೇ ಸಂಕ್ರಾಂತಿ ಸಂಭ್ರಮ; ಹಾಡು, ನೃತ್ಯದ ವಿಡಿಯೋ ಇಲ್ಲಿದೆ – Kannada News | Pongal Festival celebrated in Puducherry Colleges watch video

ಪುದುಚೆರಿ, ಜನವರಿ 13: ಪುದುಚೇರಿಯ ವಿವಿಧ ಕಾಲೇಜುಗಳಲ್ಲಿ ಇಂದೇ ಪೊಂಗಲ್ (Pongal) ಹಬ್ಬವನ್ನು ಆಚರಿಸಲಾಯಿತು. ಮದರ್ ತೆರೇಸಾ ಕಾಲೇಜಿನ 500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಹಿಂದೂ ಹಬ್ಬದಲ್ಲಿ ಭಾಗವಹಿಸಿ ಎಂಜಾಯ್ ಮಾಡಿದರು. ರಂಗೋಲಿ ಬಿಡಿಸಿ, ಡ್ಯಾನ್ಸ್ ಮಾಡಿ, ಕಬ್ಬು ತಿಂದು ಕುಣಿದು ಕುಪ್ಪಳಿಸಿದರು. ಸಚಿವ ಪಿ.ಆರ್.ಎನ್. ತಿರುಮುರುಗನ್ ಈ ಉತ್ಸವದಲ್ಲಿ ಭಾಗವಹಿಸಿದ್ದರು.   ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ Source link

Read More