Headlines

ಪ್ರವಾಹದಂತೆ ಉಕ್ಕುತ್ತಿದೆ ಇಲಾನ್ ಮಸ್ಕ್ ಶ್ರೀಮಂತಿಕೆ; 800 ಬಿಲಿಯನ್ ಡಾಲರ್ ಆಸ್ತಿವಂತನೆನಿಸಿದ ಮೊದಲ ಮನುಷ್ಯ – Kannada News | Elon Musk becomes first person in the world to have assets valued 800 billion USD

ನವದೆಹಲಿ, ಫೆಬ್ರುವರಿ 5: ಟೆಸ್ಲಾ, ಸ್ಪೇಸ್​ಎಕ್ಸ್, ನ್ಯೂರಾಲಿಂಕ್ ಇತ್ಯಾದಿ ಸಂಸ್ಥೆಗಳ ಒಡೆಯರಾದ ಇಲಾನ್ ಮಸ್ಕ್ (Elon Musk) ಅವರ ವಿಶ್ವದ ನಂಬರ್ ಒನ್ ಶ್ರೀಮಂತನೆಂಬ ಬಿರುದು ಅಬಾಧಿತವಾಗಿ ಮುಂದುವರಿಯುವುದು ಖಚಿತವಾಗಿದೆ. ಅವರ ಆಸ್ತಿ ಮೌಲ್ಯ 800 ಬಿಲಿಯನ್ ಡಾಲರ್ ದಾಟಿದೆ. 800 ಬಿಲಿಯನ್ ಎಂದರೆ 72 ಲಕ್ಷ ಕೋಟಿ ರೂ. ಈ 800 ಬಿಲಿಯನ್ ಡಾಲರ್ ಮೈಲಿಗಲ್ಲು ಮುಟ್ಟಿದ ಜಗತ್ತಿನ ಮೊದಲ ವ್ಯಕ್ತಿ ಇಲಾನ್ ಮಸ್ಕ್. ಅವರದ್ದೇ ಮಾಲಕತ್ವದ ಸಂಸ್ಥೆಗಳಾದ ಸ್ಪೇಸ್ ಎಕ್ಸ್ ಮತ್ತು ಎಕ್ಸ್​ಎಐ ವಿಲೀನ…

Read More

BCCI Awards: ಕನ್ನಡಿಗ ರಾಹುಲ್ ದ್ರಾವಿಡ್​ಗೆ ಜೀವಮಾನ ಸಾಧನೆ ಪ್ರಶಸ್ತಿ

ಟೀಂ ಇಂಡಿಯಾದ ಮಾಜಿ ನಾಯಕ, ಕೋಚ್ ಹಾಗೂ ಕನ್ನಡಿಗ ರಾಹುಲ್ ದ್ರಾವಿಡ್ ಕರ್ನಲ್ ಸಿ.ಕೆ. ನಾಯುಡು ಜೀವಮಾನ ಸಾಧನೆ ಪ್ರಶಸ್ತಿ ಲಭಿಸಿದೆ. ಆಟಗಾರನಾಗಿ ಆ ಬಳಿಕ ತಂಡದ ನಾಯಕನಾಗಿ ತಂಡವನ್ನು ಅನೇಕ ಸ್ಮರಣೀಯ ಗೆಲುವುಗಳತ್ತ ಮುನ್ನಡೆಸಿದ್ದ ರಾಹುಲ್ ದ್ರಾವಿಡ್, ನಿವೃತ್ತಿಯ ಬಳಿಕ ತಂಡದ ಮುಖ್ಯ ಕೋಚ್ ಆಗಿಯೂ ಸೇವೆ ಸಲ್ಲಿಸಿದ್ದರು. ದ್ರಾವಿಡ್ ಅವರ ಕೋಚಿಂಗ್​ನಡಿಯಲ್ಲಿ ಟೀಂ ಇಂಡಿಯಾ 2024 ರ ಟಿ20 ವಿಶ್ವಕಪ್ ಗೆದ್ದಿತ್ತು. ಹಾಗೆಯೇ ಅವರ ಕೋಚಿಂಗ್​ನಲ್ಲಿ ಸಾಕಷ್ಟು ಪ್ರತಿಭಾವಂತ ಆಟಗಾರರು ಟೀಂ ಇಂಡಿಯಾಕ್ಕೆ ಎಂಟ್ರಿಕೊಟ್ಟಿದ್ದು,…

Read More

ಇನ್ಮುಂದೆ ಹೋಟೆಲ್‌ಗಳಲ್ಲಿ ಟೀ, ಕಾಫಿ ಹೀರುತ್ತಾ ಟೈಮ್ ಪಾಸ್ ಮಾಡಿದ್ರೆ ಬೀಳುತ್ತೆ ದಂಡ – Kannada News | Bengaluru Hotel Association to Plan table charge to customers who Sitting for Long Hours

ಬೆಂಗಳೂರು, (ಫೆಬ್ರವರಿ 10): ಸಿಲಿಕಾನ್ ಟಿಸಿ ಬೆಂಗಳೂರಿನಲ್ಲಿ (Bengaluru) ದಿನೇ ದಿನೇ ಹೆಚ್ಚುತ್ತಿರುವ ಸಣ್ಣ ಹಾಗೂ ಮಧ್ಯಮ ವರ್ಗದ ಹೋಟೆಲ್‌ಗಳಲ್ಲಿ (hotel) ಗ್ರಾಹಕರು ತಾಸುಗಟ್ಟಲೆ ಕೂತು ಕಾಲಹರಣ ಮಾಡುವ ಪ್ರವೃತ್ತಿ ಹೋಟೆಲ್ ಮಾಲೀಕರಿಗೆ ತೀವ್ರ ತೊಂದರೆಯಾಗುತ್ತಿದೆ. ಹೌದು…ಮಾತುಕತೆಗಾಗಿ ನೆಪಕ್ಕೆ ಎರಡು ಟೀ, ಕಾಫಿ ತಗೊಂಡು ಗಂಟೆ ಗಟ್ಟಲೇ ಕುಳಿತು ಟೈಮ್ ಪಾಸ್ ಮಾಡುತ್ತಾರೆ. ಇದಕ್ಕೆ ಪರಿಹಾರವಾಗಿ, ಹೋಟೆಲ್‌ಗಳಲ್ಲಿ ದೀರ್ಘಕಾಲ ಕೂತರೆ ‘ಟೇಬಲ್ ಚಾರ್ಜ್’ ಅಥವಾ ದಂಡ ವಿಧಿಸುವ ಕುರಿತು ಹೋಟೆಲ್ ಮಾಲೀಕರ ಸಂಘ ಹೊಸ ಚಿಂತನೆ ನಡೆಸಿದ್ದು,…

Read More

ಬಲಮುರಿ-ಎಡಮುರಿಗೆ ಪ್ರವಾಸಿಗರಿಗೆ ನಿರ್ಬಂಧ ಹೇರಿದ ಮಂಡ್ಯ ಜಿಲ್ಲಾಡಳಿತ: ಕಾರಣ ಇಲ್ಲಿದೆ – Kannada News | Balamuri Edamuri: Mandya District Administration Restricts Tourist Entry Due to Drowning Incidents

ಮಂಡ್ಯ, ಏಪ್ರಿಲ್​​ 19: ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನಲ್ಲಿರುವ ಬಲಮುರಿ ಮತ್ತು ಎಡಮುರಿ ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರ ಪ್ರವೇಶವನ್ನು ಸಂಪೂರ್ಣವಾಗಿ ನಿಷೇಧಿಸಿ ಮಂಡ್ಯ ಜಿಲ್ಲಾಡಳಿತ ಆದೇಶ ಹೊರಡಿಸಿದೆ. ಈ ಪ್ರದೇಶಗಳು ಮೃತ್ಯುಕೂಪವಾಗಿ ಮಾರ್ಪಟ್ಟಿದ್ದು, ನೀರಿನಲ್ಲಿ ಈಜಾಡಲು ಹೋಗಿ ಹಲವರು ಜೀವ ಕಳೆದುಕೊಳ್ಳುತ್ತಿದ್ದಾರೆ. ಕಳೆದ ಎರಡು ತಿಂಗಳ ಅವಧಿಯಲ್ಲಿ ನಾಲ್ವರು ಪ್ರವಾಸಿಗರು ಮೃತಪಟ್ಟಿದ್ದಾರೆ. ಕಳೆದ ಏಳೆಂಟು ವರ್ಷಗಳಲ್ಲಿ 80ಕ್ಕೂ ಹೆಚ್ಚು ಜನರು ಇಲ್ಲಿ ಜೀವ ಕಳೆದುಕೊಂಡಿದ್ದಾರೆ. ಈಗ ಬೇಸಿಗೆ ರಜೆ ಇರುವ ಕಾರಣ ಮಕ್ಕಳು ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು…

Read More

ಬರೋಬ್ಬರಿ 94 ವರ್ಷಗಳ ಬಳಿಕ ಬಾಕ್ಸಿಂಗ್ ಡೇನಲ್ಲಿ 20 ವಿಕೆಟ್..!

ಮೆಲ್ಬೋರ್ನ್​ನಲ್ಲಿ ನಡೆಯುತ್ತಿರುವ ಆ್ಯಶಸ್ ಸರಣಿಯ ನಾಲ್ಕನೇ ಪಂದ್ಯದ ಮೊದಲ ದಿನವೇ 20 ವಿಕೆಟ್​ಗಳು ಉರುಳಿವೆ. ಅಂದರೆ ಒಂದೇ ದಿನವೇ ಎರಡೂ ತಂಡಗಳು ಆಲೌಟ್ ಆಗಿವೆ. ಆಸ್ಟ್ರೇಲಿಯಾದಲ್ಲಿ ನಡೆದ ಬಾಕ್ಸಿಂಗ್ ಡೇ ಟೆಸ್ಟ್​ನ ಮೊದಲ ದಿನ 20 ವಿಕೆಟ್​ಗಳು ಉರುಳಿರುವುದು 94 ವರ್ಷಗಳ ಬಳಿಕ ಎಂಬುದು ವಿಶೇಷ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ತಂಡವು ಕೇವಲ 152 ರನ್​ಗಳಿಗೆ ಆಲೌಟ್ ಆಗಿತ್ತು. ಇದಕ್ಕುತ್ತರವಾಗಿ ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ 110 ರನ್​ಗಳಿಗೆ ಸರ್ವಪತನ ಕಂಡಿದೆ. ಅಂದರೆ ಉಭಯ…

Read More

ಗಾಂಜಾ ಅಮಲಿನಲ್ಲಿ ಸಿಕ್ಕಸಿಕ್ಕ ವಾಹನಗಳಿಗೆ ಡಿಕ್ಕಿ ಹೊಡೆದ ಯುವಕರಿಗೆ ಹಿಗ್ಗಾಮುಗ್ಗಾ ಥಳಿಸಿದ ಜನ

ಹಾಸನ, ಮಾ.14: ನಗರದ ರಸ್ತೆಗಳಲ್ಲಿ ಅಮಲಿನಲ್ಲಿ ಆಟೋ ಚಲಾಯಿಸಿ ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಸಿದ್ದ ಪುಂಡ ಯುವಕರಿಗೆ  ಸಾರ್ವಜನಿಕರು ಸರಿಯಾಗಿಯೇ ಪಾಠ ಕಲಿಸಿದ್ದಾರೆ. ಸಿಕ್ಕಸಿಕ್ಕ ವಾಹನಗಳಿಗೆ ಡಿಕ್ಕಿ ಹೊಡೆದು ಅಟ್ಟಹಾಸ ಮೆರೆದ ಯುವಕರನ್ನು ಹಿಡಿದು ಸಾರ್ವಜನಿಕರು ಹಿಗ್ಗಾಮುಗ್ಗಾ ಥಳಿಸಿದ ಘಟನೆ ನಿನ್ನೆ ಸಂಜೆ ನಡೆದಿದೆ. ಹಾಸನ ನಗರದಲ್ಲಿ ನಿನ್ನೆ ಸಂಜೆ ಆಟೋವೊಂದನ್ನು ಅತೀ ವೇಗವಾಗಿ ಮತ್ತು ಅಜಾಗರೂಕತೆಯಿಂದ ಚಲಾಯಿಸಿದ ಯುವಕರ ತಂಡ, ರಸ್ತೆಯಲ್ಲಿ ಹೋಗುತ್ತಿದ್ದವರ ಮೇಲೆ ಆತಂಕ ಮೂಡಿಸಿದ್ದಾರೆ. ಈ ಪುಂಡರ ಹುಚ್ಚಾಟದಿಂದಾಗಿ ಮೂರು ಬೈಕ್‌ಗಳು ಜಖಂಗೊಂಡಿದ್ದು, ನಾಲ್ವರು…

Read More

Ajinkya Rahane: ಜಸ್ಟ್ 37 ಅಷ್ಟೇ… ನಾನು ಇನ್ನೂ ಸಹ ಯಂಗ್..!

ಇಂಡಿಯನ್ ಪ್ರೀಮಿಯರ್ ಲೀಗ್​ನ 2ನೇ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ ಜಯ ಸಾಧಿಸಿದೆ. ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಕೆಕೆರ್ ತಂಡವು 20 ಓವರ್​ಗಳಲ್ಲಿ 220 ರನ್ ಕಲೆಹಾಕಿತು. ಈ ಗುರಿಯನ್ನು ಮುಂಬೈ ಇಂಡಿಯನ್ಸ್ ತಂಡವು 19.1 ಓವರ್​ಗಳಲ್ಲಿ ಚೇಸ್ ಮಾಡಿದೆ. ಪರಿಣಾಮ ಮೊದಲ ಮ್ಯಾಚ್​ನಲ್ಲಿ ಬೃಹತ್ ಮೊತ್ತ ಪೇರಿಸಿದರೂ ಕೆಕೆಆರ್ ಸೋಲಿನೊಂದಿಗೆ ಐಪಿಎಲ್ ಅಭಿಯಾನ ಆರಂಭಿಸಿದೆ. ಈ ಸೋಲಿನ ಬಳಿಕ ಮಾತನಾಡಿದ ಕೊಲ್ಕತ್ತಾ ನೈಟ್…

Read More

ಪುಣೆ ವಿಮಾನ ನಿಲ್ದಾಣದಲ್ಲಿ ಯುದ್ಧ ವಿಮಾನ ತುರ್ತು ಭೂಸ್ಪರ್ಶ: ರನ್‌ವೇ ಸ್ಥಗಿತ, ನೂರಾರು ವಿಮಾನಗಳ ಸಂಚಾರ ವ್ಯತ್ಯಯ! – Kannada News | Pune Airport Runway Closed: Fighter Jet Emergency Landing Causes Flight Chaos

ಪುಣೆ ವಿಮಾನ ನಿಲ್ದಾಣದಲ್ಲಿ ಯುದ್ಧ ವಿಮಾನ ತುರ್ತು ಭೂಸ್ಪರ್ಶ ಪುಣೆ, ಏಪ್ರಿಲ್ 18: ಮಹಾರಾಷ್ಟ್ರದ ಪುಣೆ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (Pune) ಶುಕ್ರವಾರ ತಡರಾತ್ರಿ ಭಾರತೀಯ ವಾಯುಪಡೆಯ ಯುದ್ಧ ವಿಮಾನವೊಂದು ತಾಂತ್ರಿಕ ದೋಷದಿಂದಾಗಿ ರನ್‌ವೇ ಮೇಲೆ ಅನಿರೀಕ್ಷಿತವಾಗಿ ಸ್ಥಗಿತಗೊಂಡ ಪರಿಣಾಮ ದೇಶೀಯ ವಿಮಾನ ಸಂಚಾರದಲ್ಲಿ ಭಾರೀ ವ್ಯತ್ಯಯ ಉಂಟಾಯಿತು. ಏನಿದು ಘಟನೆ? ಶುಕ್ರವಾರ ರಾತ್ರಿ ಸುಮಾರು 10:25ರ ಸುಮಾರಿಗೆ ವಾಯುಪಡೆಯ ಯುದ್ಧ ವಿಮಾನವೊಂದು ವಾಡಿಕೆಯ ತರಬೇತಿ ಹಾರಾಟದ ನಂತರ ಭೂಸ್ಪರ್ಶ ಮಾಡುವಾಗ ಈ ಘಟನೆ ಸಂಭವಿಸಿದೆ. ಪ್ರಾಥಮಿಕ…

Read More

1 ರೂಪಾಯಿಯ ನೋಟು ನೀಡಿದ್ರೆ ಬ್ರಾಂಡೆಡ್ ಶೂ: ಮಳಿಗೆ ಮುಂದೆ ಜನಜಂಗುಳಿ, ನಂತರ ಆಗಿದ್ದೇನು?

ಕೋಯಿಕ್ಕೋಡ್, ಮಾ.8: ಕೇವಲ ಒಂದು ರೂಪಾಯಿಯ ನೋಟು ನೀಡಿದರೆ ಬ್ರಾಂಡೆಡ್ ಶೂಗಳನ್ನು ನೀಡುವುದಾಗಿ ಘೋಷಿಸಿದ್ದ ಮಳಿಗೆಯೊಂದರ ಮುಂದೆ ಸಾವಿರಾರು ಜನ ಜಮಾಯಿಸಿದ್ದು, ಪರಿಸ್ಥಿತಿ ಕೈಮೀರಿದ ಕಾರಣ ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದಾರೆ. ಕೋಯಿಕ್ಕೋಡ್‌ನ ಮಾನಂಚಿರ ಪ್ರದೇಶದಲ್ಲಿರುವ ‘ಟ್ರೆಂಡ್ ಫ್ಯಾಕ್ಟರಿ’ (Trend Factory) ಎಂಬ ಪಾದರಕ್ಷೆ ಮಳಿಗೆಯು ತನ್ನ ಪುನರಾರಂಭದ ಪ್ರಯುಕ್ತ ಈ ವಿಚಿತ್ರ ಆಫರ್ ಘೋಷಿಸಿತ್ತು. ಇನ್‌ಸ್ಟಾಗ್ರಾಮ್ ಮತ್ತು ಇತರ ಸಾಮಾಜಿಕ ಜಾಲತಾಣಗಳಲ್ಲಿ ವ್ಲಾಗರ್‌ಗಳ ಮೂಲಕ ಈ ಸುದ್ದಿ ಭಾರಿ ವೈರಲ್ ಆಗಿತ್ತು. ಇದನ್ನು ನೋಡಿ ಮಲಪ್ಪುರಂ,…

Read More

ತೀವ್ರ ಗತಿಯಲ್ಲಿ ಕುಸಿದ ‘ಧುರಂಧರ್ 2’ ಗಳಿಕೆ; ಆ ದಾಖಲೆ ಮುರಿಯೋದು ಕಷ್ಟ?

‘ಧುರಂಧರ್ 2’ ಸಿನಿಮಾ ಒಳ್ಳೆಯ ರೀತಿಯಲ್ಲಿ ಪ್ರದರ್ಶನ ನೀಡುತ್ತಿದೆ. ಡಿಸೆಂಬರ್‌ನಲ್ಲಿ ತಮ್ಮ ಮೊದಲ ಚಿತ್ರದೊಂದಿಗೆ ಆದಿತ್ಯ ಧರ್ 1,300 ಕೋಟಿಗೂ ಹೆಚ್ಚು ಗಳಿಕೆ ಮಾಡಿದ್ದರು. ಕೆಲವೇ ತಿಂಗಳುಗಳ ನಂತರ, 1,000 ಕೋಟಿ ಕ್ಲಬ್‌ಗೆ ಪ್ರವೇಶಿಸುವ ಮೂಲಕ ಅವರು ಮತ್ತೊಮ್ಮೆ ಸುದ್ದಿ ಆಗಿದ್ದಾರೆ. ‘ಧುರಂಧರ್ 2’ ಚಿತ್ರವು ಕೇವಲ 12 ದಿನಗಳಲ್ಲಿ ಇಡೀ ಬಾಕ್ಸ್ ಆಫೀಸ್ ಅನ್ನು ಅಲುಗಾಡಿಸಿದೆ. ಎರಡನೇ ಶನಿವಾರ ಮತ್ತು ಭಾನುವಾರದಂದು ನಡೆದ ಕಲೆಕ್ಷನ್​​ಗೆ ಹೋಲಿಸಿದರೆ ಎರಡನೇ ಸೋಮವಾರ ಚಿತ್ರದ ಗಳಿಕೆ ಗಮನಾರ್ಹವಾಗಿ ಕುಸಿದಿದೆ. ‘ಧುರಂಧರ್…

Read More